SRH vs DC: 6,6,6,6,6,6,6,6,6..! ಡೆಲ್ಲಿ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಅಭಿಷೇಕ್ ಶರ್ಮಾ

Abhishek Sharma's Blazing 47-Ball Century: ಐಪಿಎಲ್ 2026 ರ 31ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಅಭಿಷೇಕ್ ಶರ್ಮಾ ಕೇವಲ 47 ಎಸೆತಗಳಲ್ಲಿ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಬೌಲಿಂಗ್ ಸ್ನೇಹಿ ಪಿಚ್‌ನಲ್ಲಿ, ನಿಧಾನಗತಿಯ ಆರಂಭದ ನಂತರ ಗೇರ್ ಬದಲಾಯಿಸಿ, ಈ ಆವೃತ್ತಿಯ ಮೊದಲ ಶತಕವನ್ನು ದಾಖಲಿಸಿದರು. ಇದು ಅವರ 9ನೇ ಟಿ20 ಶತಕವಾಗಿದೆ.

SRH vs DC: 6,6,6,6,6,6,6,6,6..! ಡೆಲ್ಲಿ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಅಭಿಷೇಕ್ ಶರ್ಮಾ
Abhishek

Updated on: Apr 21, 2026 | 10:52 PM

ಐಪಿಎಲ್ 2026 (IPL 2026) ರ 31 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ದೆಹಲಿ ಕ್ಯಾಪಿಟಲ್ಸ್ (SRH vs DC) ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಪರ ಆರಂಭಿಕ ಅಭಿಷೇಕ್ ಶರ್ಮಾ (Abhishek Sharma) ಈ ಆವೃತ್ತಿಯಲ್ಲಿ ತಮ್ಮ ಮೊದಲ ಶತಕ ಬಾರಿಸಿ ಮಿಂಚಿದ್ದಾರೆ. ಬೌಲಿಂಗ್ ಸ್ನೇಹಿ ಪಿಚ್​ನಲ್ಲಿ ನಿಧಾನಗತಿಯ ಆರಂಭ ಪಡೆದುಕೊಂಡ ಅಭಿಷೇಕ್ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅದಾದ ಬಳಿಕ ತಮ್ಮ ಬ್ಯಾಟಿಂಗ್‌ ಗೇರ್ ಬದಲಿಸಿದ ಅಭಿಷೇಕ್ ಡೆಲ್ಲಿ ಬೌಲರ್​ಗಳ ವಿರುದ್ಧ ಬೌಂಡರಿಗಳ ಮಳೆಗರೆದು ಕೇವಲ 47 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಇದು ಟಿ20 ಕ್ರಿಕೆಟ್​ನಲ್ಲಿ ಅಭಿಷೇಕ್ ಶರ್ಮಾ ಅವರ 9ನೇ ಶತಕವಾಗಿದೆ. ಈ ಮೂಲಕ ಅಭಿಷೇಕ್ ಅತಿ ಹೆಚ್ಚು ಟಿ20 ಶತಕಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿಯಾಗಿ ಅಗ್ರಸ್ಥಾನದಕ್ಕೇರಿದ್ದಾರೆ.

ಅಭಿಷೇಕ್​ಗೆ 2 ಜೀವದಾನ

ಅಭಿಷೇಕ್ ಶರ್ಮಾ 9 ನೇ ಓವರ್‌ನ ಮೊದಲ ಎಸೆತದಲ್ಲಿ ಅರ್ಧಶತಕ ಪೂರೈಸಿದರು. ಅಕ್ಷರ್ ಪಟೇಲ್ ಅವರ ಮೊದಲ ಎಸೆತವನ್ನು ಮಿಡ್ ವಿಕೆಟ್ ಕಡೆಗೆ ಹೊಡೆಯುವ ಮೂಲಕ 2 ರನ್ ಕಲೆಹಾಕಿ ಅಭಿಷೇಕ್ ತಮ್ಮ ಮೂರನೇ ಅರ್ಧಶತಕ ಪೂರೈಸಿದರು. ವಾಸ್ತವವಾಗಿ ಇಲ್ಲಿ ಅಭಿಷೇಕ್ ರನೌಟ್​ಗೆ ಬಲಿಯಾಗಬೇಕಿತ್ತು. ಆದರೆ ವಿಕೆಟ್ ಕೀಪರ್ ಕೆಎಲ್ ರಾಹುಲ್ ಮಾಡಿದ ಎಡವಟ್ಟಿನಿಂದ ಅವರಿಗೆ ಜೀವದಾನ ಸಿಕ್ಕಿತು. 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅಭಿಷೇಕ್ ಇಲ್ಲಿಂದ ತಮ್ಮ ಸ್ಫೋಟಕ ಆಟ ಮುಂದುವರೆಸಿದರು. ಶತಕದಂಚಿನಲ್ಲೂ ಅಭಿಷೇಕ್, ನಿತೀಶ್ ರಾಣಾಗೆ ಕ್ಯಾಚ್ ನೀಡಿದ್ದರು. ಆದರೆ ರಾಣಾ ಆ ಕ್ಯಾಚ್ ಕೈಚೆಲ್ಲಿದರು. ಇದರಿಂದಾಗಿ ಅಭಿಷೇಕ್ ತಮ್ಮ ಎರಡನೇ ಐಪಿಎಲ್ ಶತಕವನ್ನು ಪೂರೈಸಿದರು.

SRH vs DC IPL 2026 Live Score: ಶತಕ ಸಿಡಿಸಿದ ಅಭಿಷೇಕ್

ಒಂದೇ ಮೈದಾನದಲ್ಲಿ 2ನೇ ಶತಕ

ಅಭಿಷೇಕ್ ಶರ್ಮಾ ಹೈದರಾಬಾದ್‌ನಲ್ಲಿ ಶತಕ ಗಳಿಸುವ ಮೂಲಕ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ. ಮೇಲೆ ಹೇಳಿದಂತೆ ಇದು ಅಭಿಷೇಕ್ ಅವರ ಒಂಬತ್ತನೇ ಟಿ20 ಶತಕ. ವಿರಾಟ್ ಕೊಹ್ಲಿ ಕೂಡ ಟಿ20 ಕ್ರಿಕೆಟ್‌ನಲ್ಲಿ ಒಂಬತ್ತು ಶತಕಗಳನ್ನು ಬಾರಿಸಿದ್ದಾರೆ. ಇದೀಗ ಇವರಿಬ್ಬರು ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಭಾರತೀಯರನ್ನಾಗಿ ಮಾಡಿದೆ. ಇದು ಹೈದರಾಬಾದ್ ಪರ ಅಭಿಷೇಕ್ ಅವರ ಎರಡನೇ ಶತಕವಾಗಿದ್ದು, ಈ ಎರಡೂ ಶತಕಗಳನ್ನು ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬಾರಿಸಿರುವುದು ಗಮನಿಸಬೇಕಾದ ಸಂಗತಿಯಾಗಿದೆ. ಇದಕ್ಕೂ ಮೊದಲು, ಕಳೆದ ವರ್ಷ, ಅಭಿಷೇಕ್ ಪಂಜಾಬ್ ವಿರುದ್ಧ ಕೇವಲ 40 ಎಸೆತಗಳಲ್ಲಿ ಶತಕ ಬಾರಿಸಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:47 pm, Tue, 21 April 26

Follow Us