AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PSL: ಸಂಬಳ ಕೊಡದೆ ವಂಚನೆ; ಬ್ಯಾಟ್, ಹೆಲ್ಮೆಟ್ ಬಿಸಾಡಿ ಪಾಕಿಸ್ತಾನ ಲೀಗ್ ಅರ್ಧಕ್ಕೆ ತೊರೆದ ಆಸೀಸ್ ಆಟಗಾರ

James Faulkner: ಆಸ್ಟ್ರೇಲಿಯಾದ ಆಲ್‌ರೌಂಡರ್ ಜೇಮ್ಸ್ ಫಾಕ್ನರ್ ಪಾಕಿಸ್ತಾನ ಸೂಪರ್ ಲೀಗ್‌ನಿಂದ ಮಧ್ಯದಲ್ಲಿ ಹಿಂದೆ ಸರಿದಿದ್ದಾರೆ. ಹಣದ ವಿವಾದದಿಂದಾಗಿ ಫಾಕ್ನರ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

PSL: ಸಂಬಳ ಕೊಡದೆ ವಂಚನೆ; ಬ್ಯಾಟ್, ಹೆಲ್ಮೆಟ್ ಬಿಸಾಡಿ ಪಾಕಿಸ್ತಾನ ಲೀಗ್ ಅರ್ಧಕ್ಕೆ ತೊರೆದ ಆಸೀಸ್ ಆಟಗಾರ
ಜೇಮ್ಸ್ ಫಾಕ್ನರ್
TV9 Web
| Updated By: Vinay Bhat|

Updated on: Feb 21, 2022 | 8:45 AM

Share

ಆಸ್ಟ್ರೇಲಿಯಾದ ಆಲ್‌ರೌಂಡರ್ ಜೇಮ್ಸ್ ಫಾಕ್ನರ್ (James Faulkner)ಪಾಕಿಸ್ತಾನ ಸೂಪರ್ ಲೀಗ್‌ (Pakistan Super League)ನಿಂದ ಮಧ್ಯದಲ್ಲಿ ಹಿಂದೆ ಸರಿದಿದ್ದಾರೆ. ಹಣದ ವಿವಾದದಿಂದಾಗಿ ಫಾಕ್ನರ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಫಾಕ್ನರ್, ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಮ್ಮ ಒಪ್ಪಂದವನ್ನು ಗೌರವಿಸಲಿಲ್ಲ. ಇದಕ್ಕೆ ತದ್ವಿರುದ್ಧವಾಗಿ ನನಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮತ್ತೊಂದೆಡೆ, PCB ಫಾಕ್ನರ್ ಅವರ ನಡವಳಿಕೆಯತ್ತ ಬೆರಳು ತೋರಿಸಿದೆ. ಫಾಕ್ನರ್ ತುಂಬಾ ದೊಡ್ಡ ತಪ್ಪು ಮಾಡಿದ್ದಾರೆ. ಹೀಗಾಗಿ ಭವಿಷ್ಯದಲ್ಲಿ ನಾವು ಅವರಿಗಾಗಿ ಪಿಎಸ್‌ಎಲ್‌ನ ಬಾಗಿಲು ಮುಚ್ಚುತ್ತೇವೆ ಎಂದು ಪಿಸಿಬಿ ಹೇಳಿದೆ. ಫಾಕ್ನರ್ ವಲಸೆ ಅಧಿಕಾರಿಗಳನ್ನು ನಿಂದಿಸಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆರೋಪಿಸಿದೆ. ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಕಳೆದ ಮೂರು ಪಂದ್ಯಗಳಲ್ಲಿ ಜೇಮ್ಸ್ ಫಾಕ್ನರ್ ಆಡಿರಲಿಲ್ಲ. ಹಣದ ವಿಚಾರವಾಗಿ ಪಿಸಿಬಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರು. ಫಾಕ್ನರ್ ಮತ್ತು ಪಿಸಿಬಿ ನಡುವಿನ ಹಣ ವರ್ಗಾವಣೆ ಹಗರಣ ಶುಕ್ರವಾರ ಉಲ್ಬಣಗೊಂಡಿದೆ.

ಕೋಪದ ಭರದಲ್ಲಿ, ಫಾಕ್ನರ್ ತನ್ನ ಬ್ಯಾಟ್ ಮತ್ತು ಹೆಲ್ಮೆಟ್ ಅನ್ನು ಲಾಬಿಯ ಬಾಲ್ಕನಿಯಿಂದ ಕೆಳಗೆ ಬೀಸಾಡಿದ್ದಾರೆ. ನಂತರ ವಿಮಾನ ನಿಲ್ದಾಣಕ್ಕೆ ಹೋಗಲು ಕೊಠಡಿಯಿಂದ ಹೊರಡುವ ಮೊದಲು ಅವರು ಹೋಟೆಲ್ ಬಿಲ್ ಅನ್ನು ಸ್ವತಃ ಪಾವತಿಸಿ ತೆರಳಿದ್ದಾರೆ.

ಎರಡು ಟ್ವೀಟ್‌ ಮಾಡಿ ಕ್ಷಮೆಯಾಚನೆ

ಫಾಕ್ನರ್ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳಲ್ಲಿ ಕ್ಷಮೆಯಾಚಿಸುತ್ತಾ ಎರಡು ಟ್ವೀಟ್ ಮಾಡಿದ್ದಾರೆ. “ನಾನು ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳಲ್ಲಿ ಕ್ಷಮೆಯಾಚಿಸುತ್ತೇನೆ. ದುರದೃಷ್ಟವಶಾತ್ ನಾನು ಎರಡು ಪಂದ್ಯಗಳಿಂದ ಹಿಂದೆ ಸರಿಯಬೇಕಾಯಿತು. ನಾನು ಪಿಸಿಎಲ್ ಟಿ 20 ಲೀಗ್ ಅನ್ನು ಮಧ್ಯದಲ್ಲಿ ತೊರೆಯುತ್ತಿದ್ದೇನೆ. ಹಣದ ಒಪ್ಪಂದವನ್ನು ಪಿಸಿಬಿ ಗೌರವಿಸಲಿಲ್ಲ, ನಾನು ಪೂರ್ಣ ಸಮಯ ಇಲ್ಲಿದ್ದೇನೆ. ಆದರೆ ಪಿಸಿಬಿ ಅಧಿಕಾರಿಗಳು ನನಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಫಾಕ್ನರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಸ್ಪರ್ಧೆಯನ್ನು ಮಧ್ಯದಲ್ಲಿ ಬಿಡಲು ದುಃಖವಾಗಿದೆ. ನಾನು ಪಾಕಿಸ್ತಾನಕ್ಕೆ ಅಂತರಾಷ್ಟ್ರೀಯ ಕ್ರಿಕೆಟ್ ತರಲು ಸಹಾಯ ಮಾಡಲು ಬಯಸಿದ್ದೆ. ಇಲ್ಲಿ ಸಾಕಷ್ಟು ಯುವ ಪ್ರತಿಭೆಗಳಿವೆ. ಆದರೆ PCB ಮತ್ತು PSL ನಲ್ಲಿ ನನಗೆ ನಿಂದನೀಯ ಆತಿಥ್ಯ ಸಿಕ್ಕಿತು. ನೀವು ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ ಎಂದು ಫಾಕ್ನರ್ ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಆರೋಪಗಳು ಆಧಾರರಹಿತವಾಗಿವೆ

ಫಾಕ್ನರ್ ಆರೋಪಗಳು ಆಧಾರರಹಿತ ಎಂದು ಪಿಸಿಬಿ ಹೇಳಿದೆ. ಇದಕ್ಕೆ ವ್ಯತಿರಿಕ್ತವಾಗಿ, ಅವರ ನಡವಳಿಕೆಯು ದೋಷಪೂರಿತವಾಗಿದೆ ಎಂದು ಪಿಸಿಬಿ ಆರೋಪಿಸಿದೆ. ಪಾಕಿಸ್ತಾನಿ ಕ್ರಿಕೆಟಿಗರು ಕೆಲವೊಮ್ಮೆ PSL ಅನ್ನು IPL ನೊಂದಿಗೆ ಸಮೀಕರಿಸುತ್ತಾರೆ. ಆದರೆ ಐಪಿಎಲ್ ಕ್ರಿಕೆಟ್ ಜಗತ್ತಿನ ಅತ್ಯಂತ ದುಬಾರಿ ಟಿ20 ಲೀಗ್ ಸ್ಪರ್ಧೆಗಳಲ್ಲಿ ಒಂದಾಗಿದೆ. ಐಪಿಎಲ್‌ನಲ್ಲಿ ಗಳಿಸಿದ ಹಣವು ಪಿಎಸ್‌ಎಲ್‌ನಲ್ಲಿ ಗಳಿಸಿದ ಹಣಕ್ಕೆ ಸಮನಾಗಿರುವುದಿಲ್ಲ.

ಇದನ್ನೂ ಓದಿ:Shikhar Dhawan: ವಿಚ್ಛೇದನದ ಎರಡು ವರ್ಷಗಳ ಬಳಿಕ ಮಗನನ್ನು ಭೇಟಿಯಾದ ಧವನ್! ಭಾವನಾತ್ಮಕ ವಿಡಿಯೋ ವೈರಲ್