ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಆಟಗಾರರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇದಕ್ಕೂ ಮುನ್ನ ಪಂತ್ ಮತ್ತು ಜಡೇಜಾ (Ravindra Jadeja) ಶತಕ ಬಾರಿಸಿದ್ದರು. ಆ ನಂತರ ಜಸ್ಪ್ರೀತ್ ಬುಮ್ರಾ (Jasprit Bumrah) ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾವನ್ನು ಟೆಸ್ಟ್‌ನಲ್ಲಿ ಬಲಿಷ್ಠ ಸ್ಥಾನದಲ್ಲಿ ನಿಲ್ಲಿಸಿದರು. ಇಂಗ್ಲೆಂಡ್ ವಿರುದ್ಧದ ಎರಡನೇ ದಿನ (IND vs ENG) ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 416 ರನ್‌ಗಳಿಗೆ ಆಲೌಟ್ ಆಗಿತ್ತು. ಬುಮ್ರಾ 16 ಎಸೆತಗಳಲ್ಲಿ 31 ರನ್ ಗಳಿಸಿದರು. 4 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿದರು. ಈ ಮಧ್ಯೆ, ಅವರು ಸ್ಟುವರ್ಟ್ ಬ್ರಾಡ್ ಅವರ ಒಂದು ಓವರ್‌ನಲ್ಲಿ 35 ರನ್ ಗಳಿಸಿದರು. ಇದು ವಿಶ್ವ ದಾಖಲೆಯಾಯಿತು.
ಟೆಸ್ಟ್ ಕ್ರಿಕೆಟ್‌ನ 145 ವರ್ಷಗಳ ಇತಿಹಾಸದಲ್ಲಿ ಇದು ಅತ್ಯಂತ ದುಬಾರಿ ಓವರ್ ಎಂದು ಹೇಳಲಾಗುತ್ತದೆ. ಬುಮ್ರಾ 4 ಬೌಂಡರಿ ಹಾಗೂ 2 ಸಿಕ್ಸರ್ ಬಾರಿಸಿದರು. ಇದಾದ ಬಳಿಕ ಬೌಲಿಂಗ್ ಮಾಡುವಾಗ ನಾಯಕ ಬುಮ್ರಾ ಲೀಸ್ ಮತ್ತು ಜಾಕ್ ಕ್ರೌಲಿ ಹಾಗೂ ಪೋಪ್ ಅವರ ವಿಕೆಟ್ ಕಬಳಿಸಿ ತಂಡಕ್ಕೆ ಅಮೋಘ ಯಶಸ್ಸು ತಂದುಕೊಟ್ಟರು. ಮಳೆ ನಿಲ್ಲುವವರೆಗೂ ಇಂಗ್ಲೆಂಡ್ 3 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿದೆ. ಏತನ್ಮಧ್ಯೆ, ಸಚಿನ್ ತೆಂಡೂಲ್ಕರ್ ಮತ್ತು ರವಿಶಾಸ್ತ್ರಿ ಬುಮ್ರಾ ಅವರ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. ಜೊತೆಗೆ ಬುಮ್ರಾ ಆಟ ನೋಡುತ್ತಿದ್ದ ಮಾಜಿ ನಾಯಕ ಕೊಹ್ಲಿ ಹಾಗೂ ದ್ರಾವಿಡ್, ಬುಮ್ರಾ ಅಬ್ಬರಕ್ಕೆ ಡಗ್ಔಟ್ನಲ್ಲಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು.
35 Runs in a over in Test cricket@StuartBroad8 still the same ?@Jaspritbumrah93 hitting like Mini Yuvraj paaji @YUVSTRONG12 #ENGvIND #INDvsENG #bumrah #Kohli pic.twitter.com/qVfrFoX9Yl
— Sports_Talk (@Bhoopen40943500) July 2, 2022
ಸ್ಟುವರ್ಟ್ ಬ್ರಾಡ್ ಅವರ ಓವರ್‌ನ 5 ನೇ ಎಸೆತದಲ್ಲಿ ಜಸ್ಪ್ರೀತ್ ಬುಮ್ರಾ ಸಿಕ್ಸರ್ ಬಾರಿಸಿದರು. ಈ ಮೂಲಕ ಅತಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆ ನಿರ್ಮಿಸಿದರು. ಡ್ರೆಸ್ಸಿಂಗ್ ರೂಂನಲ್ಲಿ ಕುಳಿತು ಕೋಚ್ ರಾಹುಲ್ ದ್ರಾವಿಡ್ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಅದೇ ಸಮಯದಲ್ಲಿ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಒಳಗೆ ಓಡಿ ನಗುತ್ತಾ ಚಪ್ಪಾಳೆ ತಟ್ಟಿದರು. ಇದೇ ವೇಳೆ ಬುಮ್ರಾ ಜತೆ ಬ್ಯಾಟಿಂಗ್ ಮಾಡುತ್ತಿದ್ದ ಸಿರಾಜ್ ಅವರನ್ನು ಅಪ್ಪಿಕೊಂಡರು. ಟೆಸ್ಟ್ ಇತಿಹಾಸದಲ್ಲಿ ಹಿಂದೆಂದೂ ಒಂದು ಓವರ್‌ನಲ್ಲಿ 30 ರನ್ ಗಳಿಸಿಲ್ಲ.
— Guess Karo (@KuchNahiUkhada) July 2, 2022
ಇತಿಹಾಸದಲ್ಲಿ ಮೊದಲ ಬಾರಿಗೆ
ಇಂದು, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ, ಒಂದು ಓವರ್‌ನಲ್ಲಿ 30 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಲಾಯಿತು. 84ನೇ ಓವರ್‌ನ ಮೊದಲ ಎಸೆತದಲ್ಲಿ ಜಸ್ಪ್ರೀತ್ ಬುಮ್ರಾ 4 ರನ್ ಗಳಿಸಿದರು. ಎರಡನೇ ಬಾಲ್ ವೈಡ್ ಆಗಿದ್ದು ಅದರಲ್ಲಿ 4 ರನ್ ಬಂತು. ಎರಡನೇ ಎಸೆತದಲ್ಲಿ ಬುಮ್ರಾ ಮತ್ತೊಮ್ಮೆ ಸಿಕ್ಸರ್ ಬಾರಿಸಲು ಯತ್ನಿಸಿದರಾದರೂ ಬಾಲ್ ನೋಬಾಲ್ ಆಗಿತ್ತು. ಮುಂದಿನ 3 ಎಸೆತಗಳಲ್ಲಿ ಬುಮ್ರಾ ಬ್ರಾಡ್ ಮೇಲೆ ಸತತ 3 ಬೌಂಡರಿ ಬಾರಿಸಿದರು. ಅವರು ಐದನೇ ಎಸೆತದಲ್ಲಿ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ನಲ್ಲಿ ಸಿಕ್ಸರ್ ಬಾರಿಸಿದರು. ಕೊನೆಯ ಎಸೆತದಲ್ಲಿ 1 ರನ್ ಬಂತು. ಹೀಗಾಗಿ ಆ ಓವರ್‌ನಲ್ಲಿ ಒಟ್ಟು 35 ರನ್‌ಗಳು ಬಂದವು. ಬ್ರಾಡ್ ಈ ಓವರ್‌ನಲ್ಲಿ ಒಟ್ಟು 8 ಎಸೆತಗಳನ್ನು ಎಸೆದರು.