AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs WI: ಬುಮ್ರಾ ಡೆಡ್ಲಿ ಯಾರ್ಕರ್​ಗಳಿಗೆ ಕಕ್ಕಾಬಿಕ್ಕಿಯಾದ ಕೆರಿಬಿಯನ್ನರು; ವಿಡಿಯೋ ನೋಡಿ

IND vs WI: ಬುಮ್ರಾ ಡೆಡ್ಲಿ ಯಾರ್ಕರ್​ಗಳಿಗೆ ಕಕ್ಕಾಬಿಕ್ಕಿಯಾದ ಕೆರಿಬಿಯನ್ನರು; ವಿಡಿಯೋ ನೋಡಿ

ಪೃಥ್ವಿಶಂಕರ
|

Updated on: Oct 02, 2025 | 4:42 PM

Share

Jasprit Bumrah Creates History: ಭಾರತ-ವೆಸ್ಟ್ ಇಂಡೀಸ್ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ವಿಂಡೀಸ್ ಕೇವಲ 162 ರನ್‌ಗಳಿಗೆ ಆಲೌಟ್ ಆಯಿತು. ಜಸ್ಪ್ರೀತ್ ಬುಮ್ರಾ 42 ರನ್‌ಗಳಿಗೆ 3 ವಿಕೆಟ್ ಕಬಳಿಸಿ ಮಿಂಚಿದರು. ಅವರ ಎರಡು ಯಾರ್ಕರ್ ಎಸೆತಗಳ ವೀಡಿಯೊ ವೈರಲ್ ಆಗಿದ್ದು, ಬುಮ್ರಾ ಯಾರ್ಕರ್ ಮೂಲಕ 12 ವಿಕೆಟ್ ಪಡೆದಿದ್ದಾರೆ. ಜೊತೆಗೆ, ಭಾರತದ ನೆಲದಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 50 ಟೆಸ್ಟ್ ವಿಕೆಟ್ ಪಡೆದ ದಾಖಲೆಯನ್ನು ಕೂಡ ಬುಮ್ರಾ ನಿರ್ಮಿಸಿದ್ದಾರೆ.

ಇಂದಿನಿಂದ ಆರಂಭವಾಗಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ವಿಂಡೀಸ್ ತಂಡ ಕೇವಲ 162 ರನ್​ಗಳಿಗೆ ಆಲೌಟ್ ಆಗಿದೆ. ಬುಮ್ರಾ ಹಾಗೂ ಸಿರಾಜ್ ದಾಳಿಗೆ ತತ್ತರಿಸಿದ ಕೆರಿಬಿಯನ್ನರ ಬಳಗದಿಂದ ಒಂದೇ ಒಂದು ಅರ್ಧಶತಕದ ಇನ್ನಿಂಗ್ಸ್ ಮೂಡಿಬರಲಿಲ್ಲ. ಆರಂಭದಿಂದಲೂ ವಿಂಡೀಸ್ ತಂಡವನ್ನು ಕಾಡಿದ ಬುಮ್ರಾ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 42 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಬಳಿಸಿದರು. ಅದರಲ್ಲೂ ಬುಮ್ರಾ ತಮ್ಮ ಯಾರ್ಕರ್‌ ಎಸೆತಗಳಿಂದ ಎರಡು ವಿಕೆಟ್‌ಗಳನ್ನು ಕಬಳಿಸಿದ ವೀಡಿಯೊ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಜಸ್ಪ್ರೀತ್ ಬುಮ್ರಾ ಎಸೆದ ಯಾರ್ಕರ್ ಎಸೆತವನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವಿದ ಜಸ್ಟಿನ್ ಗ್ರೀವ್ಸ್ ಮತ್ತು ಜೋಹಾನ್ ಲಿಯಾನ್ ಕ್ಲೀನ್ ಬೌಲ್ಡ್ ಆದರು. ಈ ಮೂಲಕ ಬುಮ್ರಾ ಯಾರ್ಕರ್​ ಎಸೆತದಿಂದ 12ನೇ ವಿಕೆಟ್ ಉರುಳಿಸಿದ ಸಾಧನೆಯನ್ನು ಮಾಡಿದರು. ಬುಮ್ರಾ ಇದುವರೆಗೆ 198 ಬಾರಿ ಯಾರ್ಕರ್ ಎಸೆತವನ್ನು ಎಸೆದಿದ್ದು, ಇದರಲ್ಲಿ 77 ರನ್‌ಗಳನ್ನು ಬಿಟ್ಟುಕೊಟ್ಟು ಕೇವಲ 7 ಸರಾಸರಿಯಲ್ಲಿ 12 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದು ಮಾತ್ರವಲ್ಲದೆ ವೆಸ್ಟ್ ಇಂಡೀಸ್ ವಿರುದ್ಧ ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ಭಾರತದ ನೆಲದಲ್ಲಿ 50 ಟೆಸ್ಟ್ ವಿಕೆಟ್​ಗಳನ್ನು ಪೂರೈಸಿದರು. ಈ ಮೂಲಕ ಬುಮ್ರಾ ಭಾರತದಲ್ಲಿ ಅತಿ ಕಡಿಮೆ ಎಸೆತಗಳಲ್ಲಿ ಐವತ್ತು ಟೆಸ್ಟ್ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.