Jasprit Bumrah: 4 ವಾರ ಟೈಮ್…ಬುಮ್ರಾ ಟಿ20 ವಿಶ್ವಕಪ್ ಆಡಲಿದ್ದಾರಾ..?

Jasprit Bumrah: ಜಸ್​​ಪ್ರೀತ್ ಬುಮ್ರಾ ಸ್ಥಾನದಲ್ಲಿ ಬದಲಿ ಆಟಗಾರ ಆಯ್ಕೆಯಾಗಲಿದ್ದಾರಾ ಎಂಬುದು ಅಕ್ಟೋಬರ್ 15 ರೊಳಗೆ ಸ್ಪಷ್ಟವಾಗಲಿದೆ.

Jasprit Bumrah: 4 ವಾರ ಟೈಮ್...ಬುಮ್ರಾ ಟಿ20 ವಿಶ್ವಕಪ್ ಆಡಲಿದ್ದಾರಾ..?
Jasprit bumrah
Edited By:

Updated on: Oct 02, 2022 | 12:55 PM

ಟೀಮ್ ಇಂಡಿಯಾ (Team India) ವೇಗಿ ಜಸ್​ಪ್ರೀತ್ ಬುಮ್ರಾ (Jasprit Bumrah) ಟಿ20 ವಿಶ್ವಕಪ್ (T20 World Cup 2022) ಆಡುತ್ತಾರಾ ಇಲ್ಲವಾ ಎಂಬ ಪ್ರಶ್ನೆಗೆ ಕೆಲವೇ ದಿನಗಳಲ್ಲಿ ಸ್ಪಷ್ಟ ಉತ್ತರ ಸಿಗಲಿದೆ. ಏಕೆಂದರೆ ಬುಮ್ರಾ ಅವರ ಬೆನ್ನು ಮೂಳೆಗೆ ಯಾವುದೇ ಸಮಸ್ಯೆಯಾಗಿಲ್ಲ, ಬದಲಾಗಿ ಅವರು ಬೆನ್ನು ನೋವಿನ ಒತ್ತಡದಿಂದ ಬಳಲುತ್ತಿದ್ದಾರೆ ಎಂದು ಎನ್​ಸಿಎ ವೈದ್ಯರು ತಿಳಿಸಿದ್ದಾರೆ.  ಆದರೆ ಬೆನ್ನು ನೋವಿನ ಒತ್ತಡ ಸಮಸ್ಯೆಗೆ ಪರಿಹಾರ ಕಾಣಲು ಅವರು ಕನಿಷ್ಠ ನಾಲ್ಕು ವಾರಗಳ ಕಾಲ ವಿಶ್ರಾಂತಿಯಲ್ಲಿರಬೇಕಾಗುತ್ತದೆ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ. ಜಸ್​ಪ್ರೀತ್ ಬುಮ್ರಾ ಇತ್ತೀಚೆಗೆ ಬೆನ್ನುನೋವಿನ ಕಾರಣ ಸೌತ್ ಆಫ್ರಿಕಾ ವಿರುದ್ದದ ಟಿ20 ಸರಣಿಯಿಂದ ಹೊರಗುಳಿದಿದ್ದರು. ಅಲ್ಲದೆ ಈ ಬಗ್ಗೆ ಹೆಚ್ಚಿನ ಚಿಕಿತ್ಸೆಗಾಗಿ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಗೆ (NCA) ತೆರಳಿದ್ದರು. ಇದರ ಬೆನ್ನಲ್ಲೇ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ (T20 World Cup 2022) ಆಡುವುದು ಅನುಮಾನ ಎಂಬ ಸುದ್ದಿಗಳು ಹರಿದಾಡಿದ್ದವು.  ಇದಾಗ್ಯೂ ವಿಶ್ವಕಪ್​ ಪಟ್ಟಿಯಿಂದ ಬುಮ್ರಾ ಇನ್ನೂ ಹೊರಬಿದ್ದಿಲ್ಲ. ಅವರ ಬಗ್ಗೆ ವೈದ್ಯರು ಹೆಚ್ಚಿನ ನಿಗಾವಹಿಸಿದ್ದಾರೆ. ಹೀಗಾಗಿ ಟಿ20 ವಿಶ್ವಕಪ್​ವರೆಗೂ ಕಾದು ನೋಡಲಿದ್ದೇವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದರು.

ಇದೀಗ ಎನ್​ಸಿಎಯಲ್ಲಿ ವೈದ್ಯಕೀಯ ಶುಶ್ರೂಷೆಯಲ್ಲಿರುವ ಬುಮ್ರಾ ಬೆನ್ನು ನೋವಿನ ಒತ್ತಡದಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಇದರಿಂದ ಚೇತರಿಸಿಕೊಳ್ಳಲು 4 ರಿಂದ 6 ವಾರಗಳು ಬೇಕಾಗಬಹುದು ಎಂದು ತಿಳಿಸಿದ್ದಾರೆ. ಅಂದರೆ ಟಿ20 ವಿಶ್ವಕಪ್ ಶುರುವಾಗುವುದು ಅಕ್ಟೋಬರ್ 16 ರಿಂದ, ಆದರೆ ಟೀಮ್ ಇಂಡಿಯಾ ಮೊದಲ ಪಂದ್ಯವಾಡುವುದು ಅಕ್ಟೋಬರ್ 23 ರಂದು. ಹೀಗಾಗಿ ಅಕ್ಟೋಬರ್ ಅಂತ್ಯದ ವೇಳೆಗೆ ಜಸ್​ಪ್ರೀತ್ ಬುಮ್ರಾ ಸಂಪೂರ್ಣ ಚೇತರಿಸಿಕೊಳ್ಳುವ ಸಾಧ್ಯತೆಯಿದೆ.

ಇನ್ನು 6 ವಾರಗಳ ಕಾಲ ವಿಶ್ರಾಂತಿ ಪಡೆದರೆ ಟಿ20 ವಿಶ್ವಕಪ್​ನ ಮೊದಲ ಸುತ್ತಿನ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಅಂದರೆ ಸೆಮಿ ಫೈನಲ್ ವೇಳೆ ತಂಡವನ್ನು ಕೂಡಿಕೊಳ್ಳಬಹುದು. ಆದರೆ ನಾಕೌಟ್​ಗೂ ಮುನ್ನ ಟೀಮ್ ಇಂಡಿಯಾ 5 ಪಂದ್ಯಗಳನ್ನು ಆಡಬೇಕಿದೆ. ಹೀಗಾಗಿ ಜಸ್​ಪ್ರೀತ್ ಬುಮ್ರಾ ಅವರ ಸ್ಥಾನದಲ್ಲಿ ಯಾವುದೇ ಆಟಗಾರನನ್ನು ಆಯ್ಕೆ ಮಾಡದೇ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪಾಲ್ಗೊಳ್ಳಲಿದೆಯಾ ಎಂಬುದೇ ದೊಡ್ಡ ಪ್ರಶ್ನೆ.

ಇದನ್ನೂ ಓದಿ
2007ರ ಟಿ20 ವಿಶ್ವಕಪ್ ಫೈನಲ್‌ ಪಂದ್ಯದ ಹೀರೋಗಳು ಈಗ ಏನ್ಮಾಡ್ತಿದ್ದಾರೆ ಗೊತ್ತಾ?
Team India New Jersey: 25 ಕ್ಕೂ ಹೆಚ್ಚು ಬಾರಿ ಜೆರ್ಸಿ ಬದಲಿಸಿದ ಟೀಮ್ ಇಂಡಿಯಾ: ಇಲ್ಲಿದೆ ಫೋಟೋಸ್
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಏಕೆಂದರೆ ಮೊದಲ ಸುತ್ತಿನಲ್ಲಿ ಗೆದ್ದರೆ ಮಾತ್ರ ನಾಕೌಟ್ ಹಂತಕ್ಕೇರಲಿದೆ. ಆದರೆ ತಂಡದಲ್ಲಿ ವೇಗಿಗಳಾಗಿ ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್ ಹಾಗೂ ಭುವನೇಶ್ವರ್ ಕುಮಾರ್ ಮಾತ್ರ ಇದ್ದಾರೆ. ಇತ್ತ ತಂಡದಲ್ಲಿ ಬದಲಾವಣೆ ತರಲು ಅಕ್ಟೋಬರ್ 15 ಕೊನೆಯ ದಿನಾಂಕ. ಅಂದರೆ ಅಕ್ಟೋಬರ್ 15ರ ಮೊದಲು ಯಾವುದೇ ತಾಂತ್ರಿಕ ಸಮಿತಿಯಿಲ್ಲದೆ ಮತ್ತೊಬ್ಬ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು.

ಹೀಗಾಗಿ ಜಸ್​​ಪ್ರೀತ್ ಬುಮ್ರಾ ಸ್ಥಾನದಲ್ಲಿ ಬದಲಿ ಆಟಗಾರನನ್ನು ಬಿಸಿಸಿಐ ಆಯ್ಕೆ ಮಾಡಲಿದೆಯಾ  ಎಂಬುದು ಅಕ್ಟೋಬರ್ 15 ರೊಳಗೆ ಸ್ಪಷ್ಟವಾಗಲಿದೆ. ಒಂದು ವೇಳೆ ಯಾರನ್ನೂ ಕೂಡ ಆಯ್ಕೆ ಮಾಡದಿದ್ದರೆ 4 ವಾರಗಳ ಬಳಿಕ ಜಸ್​ಪ್ರೀತ್ ಬುಮ್ರಾ ಟೀಮ್ ಇಂಡಿಯಾವನ್ನು ಕೂಡಿಕೊಳ್ಳಬಹುದು.

ಟಿ20 ವಿಶ್ವಕಪ್‌ಗೆ ಟೀಮ್ ಇಂಡಿಯಾ ಹೀಗಿದೆ:

 ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ , ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹರ್