Jasprit Bumrah: ದೇವರು ಯಾರನ್ನೂ ಕೈ ಬಿಡಲ್ಲ… ಇದಕ್ಕೆ ಸಾಕ್ಷಿ ಜಸ್​ಪ್ರೀತ್ ಬುಮ್ರಾ

ನನ್ನ ಕ್ರಿಕೆಟ್ ಜ್ಞಾನ ಶೂನ್ಯ. ನನಗೆ ವಿರಾಟ್ ಕೊಹ್ಲಿ ಅನುಷ್ಕಾ ಪತಿ ಅಂತ ಗೊತ್ತು. ಇದಾಗ್ಯೂ ವಿರಾಟ್ ಕೊಹ್ಲಿಯ ಡ್ಯಾನ್ಸ್​ಗಳನ್ನು ನಾನು ಇಷ್ಟಪಡುತ್ತೇನೆ. ಆದರೆ ಈ ದೀರ್ಘ ಪೋಸ್ಟ್ ಬರೆಯುತ್ತಿರುವುದು ನನ್ನ ನಾಯಕನ ಬಗ್ಗೆ...

Jasprit Bumrah: ದೇವರು ಯಾರನ್ನೂ ಕೈ ಬಿಡಲ್ಲ... ಇದಕ್ಕೆ ಸಾಕ್ಷಿ ಜಸ್​ಪ್ರೀತ್ ಬುಮ್ರಾ
Jasprit Bumrah
Follow us
|

Updated on: Jul 01, 2024 | 10:11 AM

ಅದು ಡಿಸೆಂಬರ್ 1993… ಆ ಸಮಯದಲ್ಲಿ ನನ್ನ ತಿಂಗಳ ವೇತನ 800 ರೂ.ಗಿಂತ ಕಡಿಮೆ. ನನ್ನ ಗೆಳತಿ ಗರ್ಭಿಣಿಯಾಗಿದ್ದ ಕಾರಣ, ನನ್ನ ಆತ್ಮೀಯ ಸ್ನೇಹಿತ ಮತ್ತು ಪಕ್ಕದ ಮನೆಯವರು ನನ್ನನ್ನು ರಜೆ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಈ ವೇಳೆ ನನಗೂ 22-23 ವರ್ಷ ವಯಸ್ಸಾಗಿರಬಹುದು ಅಷ್ಟೇ. ಅದರಂತೆ ಅಂದು ನಾನು ರಜೆ ತೆಗೆದುಕೊಂಡೆ ಆಸ್ಪತ್ರೆಗೆ ಹೋದೆ.

ಆ ದಿನದ ನನ್ನ ಹೆಚ್ಚಿನ ಸಮಯವನ್ನು ಅಹಮದಾಬಾದ್‌ನಲ್ಲಿ ಪಾಲ್ಡಿ ಪ್ರದೇಶದ ಆಸ್ಪತ್ರೆಯಲ್ಲಿ ಕಳೆದಿದ್ದೇನೆ. ನಾವು ಆಸ್ಪತ್ರೆಯ ವಾರ್ಡ್ ಹೊರಗೆ ಕಾಯುತ್ತಾ ಕೂತಿದ್ದೆವು. ಈ ವೇಳೆ ನರ್ಸ್ ಒಬ್ಬರು ನಮ್ಮ ಹೆಸರನ್ನು ಕೂಗಿದ್ದಾರೆ. ತಕ್ಷಣವೇ ಹೋದ ನನ್ನ ಸ್ನೇಹಿತೆ ದಲ್ಜಿತ್ ಅವರ ಪತಿ ಜಸ್ಬೀರ್ ಕೆಲ ನಿಮಿಷಗಳ ಬಳಿಕ ಹೊರಬಂದರು.

ಹೀಗೆ ಹೊರಬಂದ ಜಸ್ಬೀರ್, ನನ್ನ ನಡುಗುವ ಕೈಯಲ್ಲಿ ಮಗುವನ್ನು ನೀಡಿದರು. ನನ್ನ ಜೀವಮಾನದಲ್ಲಿ ನಾನು ನವಜಾತ ಶಿಶುವನ್ನು ಮುಟ್ಟಿದ್ದು ಅದೇ ಮೊದಲ ಬಾರಿಗೆ. ನನಗೆ ನೆನಪಿರುವಂತೆ ಮಗು ತುಂಬಾ ತೆಳ್ಳಗಿತ್ತು. ಆದರೆ ಆ ಪುಟ್ಟ ಪಾಪು ನನ್ನ ನೋಡಿ ನಗಲು ಪ್ರಯತ್ನಿಸುತ್ತಿದ್ದನು. ಆದರೆ ನಗಲು ಸಾಧ್ಯವಾಗಿರಲಿಲ್ಲ.

ಈ ವೇಳೆ ಮತ್ತೆ ಆಗಮಿಸಿದ ವೇಳೆ ನರ್ಸ್​ ಗಂಡು ಮಗು ಎಂದೇಳಿ, ಪುಟ್ಟ ಪಾಪುವನ್ನು ವೈದ್ಯರಲ್ಲಿಗೆ ತೆಗೆದುಕೊಂಡು ಹೋದರು. ಏಕೆಂದರೆ ಮಗು ತುಂಬಾ ತೆಳ್ಳಗಿತ್ತು. ಹೀಗಾಗಿ ಹೆಚ್ಚಿನ ಪರೀಕ್ಷೆಗಾಗಿ ಕರೆದೊಯ್ಯಲಾಗಿತ್ತು.

ಮತ್ತೊಂದೆಡೆ ನನ್ನ ಸ್ನೇಹಿತೆ ದಲ್ಜಿತ್ ತುಂಬಾ ಸಂತೋಷವಾಗಿದ್ದಳು. ಅವರ ಮೊದಲ ಮಗಳು ಜೂಹಿಕಾಗೂ ಪುಟ್ಟ ತಮ್ಮ ಆಗಮನದಿಂದ ಖುಷಿಯಲ್ಲಿ ತೇಲಾಡುತ್ತಿದ್ದಳು.

ಇದೊಂತರ ಬಾಲಿವುಡ್ ಸಿನಿಮಾ ಕಥೆಯಂತಿದೆ. ಏಕೆಂದರೆ ಮತ್ತೊಂದೆಡೆ ಗುಜರಾತ್ ಮುಖ್ಯಮಂತ್ರಿ ಚಿಮನ್‌ಲಾಲ್ ಪಟೇಲ್ ನಿಧನರಾಗಿದ್ದರು. ಇನ್ನೆರಡು ತಿಂಗಳಲ್ಲಿ ನಾನು ರಾಜಕೀಯ ವರದಿಗಾರ್ತಿಯಾದೆ. ನನ್ನ ವೇತನದಲ್ಲೂ ಸ್ವಲ್ಪ ಏರಿಕೆಯಾಯಿತು.

ಇದೇ ಖುಷಿಯಲ್ಲಿ ನಾನು ಐಸ್ ಕ್ರೀಸ್ ಖರೀದಿಸಿದೆ. ನನ್ನ ಗೆಳತಿ ಮತ್ತು ನನ್ನ ಪಕ್ಕದ ಮನೆಯವರೊಂದಿಗೆ ಹಂಚಿಕೊಂಡೆವು. ಅಂದು ನನ್ನ ಬಳಿ ಫೋನ್ ಆಗಲಿ, ಫ್ರಿಜ್ ಅಥವಾ ಹಾಸಿಗೆ ಕೂಡ ಇರಲಿಲ್ಲ..! ನನ್ನ ಹಾಗೂ ಗೆಳತಿಯ ನಡುವೆ ಇದ್ದದ್ದು ಗೋಡೆ ಮಾತ್ರ. ನನಗೆ ಅವಳ ಮನೆಯೇ ಸ್ವರ್ಗ ಎಂದರೆ ತಪ್ಪಾಗಲಾರದು.

ಮೊದಲೇ ಹೇಳಿದಂತೆ ಇದೊಂದು ಬಾಲಿವುಡ್ ಸಿನಿಮಾದಂತೆ… ಏಕೆಂದರೆ ಕೆಲವೇ ದಿನಗಳಲ್ಲಿ ಸ್ನೇಹಿತೆಯ ಪತಿ ನಿಧನರಾದರು. ಜೀವನ ಬದಲಾಯಿತು. ನಾವು ಹತಾಶರಾದೆವು. ಆ ಇಡೀ ತಿಂಗಳು, ನಾನು ಮಕ್ಕಳನ್ನು ನಿಭಾಯಿಸಿದೆ. ಆ ಪುಟ್ಟ ಹುಡುಗನಿಗೆ ಪಾಠ ಹೇಳಿಕೊಡುತ್ತಿದ್ದೆ. ಆದರೆ ಆತನಿಗೆ ಓದು ಬರಹ ಎಂದಿಗೂ ಆಸಕ್ತಿಕ ವಿಷಯವಾಗಿರಲಿಲ್ಲ.

ಕೆಲವೊಮ್ಮೆ ಆತನ ಬಿಸ್ಕಟ್​ಗಳನ್ನು ನಾನು ತಿನ್ನುತ್ತಿದ್ದೆ. ಏಕೆಂದರೆ ಶಿಶುಪಾಲನಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವಂತಿದ್ದ ನನಗೆ ಹಸಿವಾಗುತ್ತಿತ್ತು. ಹೀಗಾಗಿ ಗೆಳತಿಯ ಮಗನ ಬಿಸ್ಕಟ್​ಗಳನ್ನು ನಾನು ತಿನ್ನುತ್ತಿದ್ದೆ. ಇದರ ನಡುವೆ ಆ ಹುಡುಗ ಪ್ಲಾಸ್ಟಿಕ್ ಚೆಂಡಿನೊಂದಿಗೆ ಆಟವಾಡಲು ಪ್ರಾರಂಭಿಸಿದ್ದ. ಆದರೆ ಅಂದು ಆತ ಯಾಕಾಗಿ ಚೆಂಡಿನ ಗೀಳು ಹೊಂದಿದ್ದಾನೆ ಎಂಬುದು ನಮಗೆ ತಿಳಿದಿರಲಿಲ್ಲ.

ಜೂಹಿಕಾ ನಮ್ಮಲ್ಲಿ ಹೊಸ ಭರವಸೆ ಮೂಡಿಸಿದ್ದಳು. ಅವಳ ನಗು ಮತ್ತು ಬಿಗಿಯಾದ ಅಪ್ಪುಗೆ ಜೀವನ ಉತ್ಸಾಹವನ್ನು ಹೆಚ್ಚಿಸುತ್ತಿತ್ತು. ಆದರೆ ಹುಡುಗನ ನಡೆ ಮಾತ್ರ ತುಂಬಾ ಕೆಟ್ಟದಾಗಿತ್ತು. ನಾವು ಅವನನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯವಾಗದಿರುವುದು ಇದಕ್ಕೆ ಕಾರಣವಿರಬಹುದು. ಏಕೆಂದರೆ ನಮಗೆ ಆತನಿಗಾಗಿ ಹಾಲು ಖರೀದಿಸಲು ಅಥವಾ ಇತರೆ ಅಗತ್ಯ ವಸ್ತುಗಳನ್ನು ಕೊಂಡು ನೀಡಲು ಸಾಧ್ಯವಾಗಿರಲಿಲ್ಲ.

ಅವನು ಬೆಳೆದಂತೆ ನಾವೆಲ್ಲರೂ ಅವನ ಅಗತ್ಯತೆಗಳನ್ನು ಪೂರೈಸಲು ಹೆಣಗಾಡುವುದರಲ್ಲಿ ನಿರತರಾಗಿದ್ದೆವು. ನನ್ನ ಗೆಳತಿ ದಲ್ಜಿತ್ ದಿನಕ್ಕೆ ಕನಿಷ್ಠ 16-18 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಳು. ಇದರ ನಡುವೆ ನನ್ನ ವೇತನದಲ್ಲೂ ಸ್ವಲ್ಪ ಏರಿಕೆಯಾಯಿತು. ನಾನು ವೆಸ್ಟ್‌ಸೈಡ್‌ ಡ್ರೆಸ್ ಶಾಪಿಂಗ್​ಗೆ ಹೋಗಿದ್ದೆವು. ಅಂದು ಈ ಪುಟ್ಟ ಹುಡುಗ ತಾಯಿಯೊಂದಿಗೆ ಅಲ್ಲಿದ್ದ. 8 ವರ್ಷಗಳಾಗಿರಬಹುದು. ನನ್ನ ನೋಡಿ ಆತ ತಾಯಿಯ ದುಪಟ್ಟಾ ಹಿಂದೆ ಅಡಗಿಕೊಂಡಿದ್ದ. ಅವನಿಗೆ ವಿಂಡ್‌ಚೀಟರ್ (ಜಾಕೆಟ್) ಬೇಕಿತ್ತು. ನಾನದನ್ನು ಕೊಡಿಸಿದೆ.

ನಾನು ಹೊಸ ಕುರ್ತಾ ಇಲ್ಲದೆ ದೀಪಾವಳಿ, ಕ್ರಿಸ್ಮಸ್ ಮತ್ತು ನನ್ನ ಹುಟ್ಟುಹಬ್ಬವನ್ನು ಕಳೆದಿದ್ದೇನೆ. ಆದರೆ ಆ ಪುಟ್ಟ ಹುಡುಗ ಧರಿಸಿದ ವಿಂಡ್‌ಚೀಟರ್ ನೋಡಿ ನನಗೆ ರಾಜ್‌ದೀಪ್ ರಾನಾವತ್ ಅಥವಾ ಮನೀಷ್ ಮಲ್ಹೋತ್ರಾ ಜಾಕೆಟ್ ಧರಿಸಿದ ತೃಪ್ತಿಯನ್ನು ನೀಡಿತು.

ಅಷ್ಟರಲ್ಲಾಗಲೇ ಅವನು ಸಹೋದರಿ ಜೂಹಿಕಾಳಂತೆ ಅಲ್ಲ. ತುಂಬಾ ನಾಚಿಕೆ ಸ್ವಭಾವದವನು ಎಂಬುದು ನನಗೆ ಗೊತ್ತಾಗಿತ್ತು. ಆ ನಾಚಿಕೆ ಸ್ವಭಾದ ಹುಡುಗ ಈಗ ದಂತಕಥೆಯಾಗಿದ್ದೇನೆ. ಕಳೆದ ರಾತ್ರಿ ನಡೆದ ಕ್ರಿಕೆಟ್ ವಿಶ್ವಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಪ್ರತಿಯೊಬ್ಬ ಭಾರತೀಯನೂ ಅವನ ಬಗ್ಗೆ ಹೆಮ್ಮೆಪಡಬೇಕು ಮತ್ತು ಅವನಿಂದ ಕಲಿಯಬೇಕು. ಏಕೆಂದರೆ ಇಂದಿಗೂ ಆತ ತನ್ನ ನಮ್ರತೆ-ವಿನಯತೆಯನ್ನು ಉಳಿಸಿಕೊಂಡಿದ್ದಾನೆ.

ಹೌದು, ನಾನು ಹೇಳುತ್ತಿರುವುದು ಮತ್ಯಾರ ಬಗ್ಗೆ ಅಲ್ಲ. ಜಸ್​ಪ್ರೀತ್ ಬುಮ್ರಾ ಬಗ್ಗೆ. ಅಂದು ನಾನು ಮುದ್ದಾಡಿಸಿದ ಈ ಪುಟ್ಟ ಹುಡುಗನೇ ಇಂದು ಟೀಮ್ ಇಂಡಿಯಾ ವೇಗಿಯಾಗಿ ಭಾರತ ತಂಡಕ್ಕೆ ವಿಶ್ವಕಪ್ ತಂದುಕೊಟ್ಟಿದ್ದಾನೆ.

ನಾನು ಅವನ ತಾಯಿಯ ಒತ್ತಾಯದ ಮೇರೆಗೆ ಅವನ ಒಂದು ಪಂದ್ಯವನ್ನು ವೀಕ್ಷಿಸಲು ಪ್ರಯತ್ನಿಸಿದೆ. ಆದರೆ ನಾನು ಅರ್ಧದಾರಿಯಲ್ಲೇ ಹೊರಟೆ, ಏಕೆಂದರೆ ನನಗೆ ಕ್ರಿಕೆಟ್ ಅರ್ಥವಾಗುತ್ತಿರಲಿಲ್ಲ. ಒಂದು ವೇಳೆ ಅಂಗದ್ (ಬುಮ್ರಾ ಮಗ) ಫುಟ್ಬಾಲ್ ಆಡಿದ್ರೆ ನಾನು ನೋಡುತ್ತೇನೆ!

ಅಂದಹಾಗೆ ನಾನು ಈ ಸುದೀರ್ಘ ಪೋಸ್ಟ್ ಬರೆಯಲು ಕಾರಣ ದೇವರು ನಮ್ಮನ್ನು ಎಂದಿಗೂ ಕೈ ಬಿಡುವುದಿಲ್ಲ ಎಂದು ತಿಳಿಸಲು. ಎಲ್ಲಾ ಕಷ್ಟಕಾರ್ಪಣ್ಯಗಳನ್ನು ದಾಟಿ ಇಂದು ಜಸ್​ಪ್ರೀತ್ ಬುಮ್ರಾ ದಂತಕಥೆಯಾಗಿ ನಿಂತಿದ್ದಾರೆ.

ಇದೇ ಜಸ್​ಪ್ರೀತ್​ನನ್ನು ಮೊದಲು ನನ್ನ ಕೈಯಲ್ಲಿ ಹಿಡಿದಿದ್ದಕ್ಕೆ ನಾನು ತುಂಬಾ ಅದೃಷ್ಟಶಾಲಿ. ಕಷ್ಟಕರವಾದ ಸಂದರ್ಭಗಳನ್ನು ಎದುರಿಸಿದಾಗ ನಾನು ಬುಮ್ರಾ ಅವರನ್ನು ಎತ್ತಿ ಹಿಡಿದ ಆ ಕ್ಷಣಗಳನ್ನು ನೆನೆಯುತ್ತೇನೆ. ಆ ಕ್ಷಣಗಳು ನನ್ನ ಜೀವನದಲ್ಲಿ ಹೊಸ ಭರವಸೆಯನ್ನು ಮೂಡಿಸುತ್ತದೆ.

ಕೆಲವು ತಿಂಗಳ ಹಿಂದೆ, ಜಸ್​ಪ್ರೀತ್ ಅವರ ಸುಂದರ ಪತ್ನಿ ಸಂಜನಾ ನಮನ್ನು ಊಟಕ್ಕೆ ಕರೆದಿದ್ದರು. ಈ ವೇಳೆ ತೋರಿದ ವಿನಯತೆ, ನಮ್ಮನ್ನು ಉಪಚರಿಸಿದ ರೀತಿ ಆಹ್ಲಾದಕರವಾಗಿತ್ತು. ಇದನ್ನೆಲ್ಲಾ ವರ್ಣಿಸಲು ಸಾಧ್ಯವಿಲ್ಲ ಎಂಬುದು ನನ್ನ ಭಾವನೆ.

ಬುಮ್ರಾ ಫ್ಯಾಮಿಲಿ ಜೊತೆ ದೀಪಲ್ ‏‎ತ್ರಿವೇದಿ

ಈಗ ನನ್ನ ಮಗು ಜಸ್​ಪ್ರೀತ್​ಗೆ ಸ್ವಂತ ಮಗು ಅಂಗದ್ ಇದ್ದಾನೆ. ಸಹಜವಾಗಿ, ಜಸ್ಪ್ರೀತ್ ಅವರಿಗಿಂತ ಅಂಗದ್ ಹೆಚ್ಚು ಸುಂದರವಾಗಿದ್ದಾನೆ! ನಾನು ವೈಯಕ್ತಿಕ ಪೋಸ್ಟ್‌ಗಳನ್ನು ಬರೆಯುವುದಿಲ್ಲ. ಆದರೆ ಇಷ್ಟೆಲ್ಲಾ ಬರೆಯಲು ಮುಖ್ಯ ಕಾರಣ ಜೀವನದಲ್ಲಿ ಯಾರೂ ಸಹ ಭರವಸೆ ಕಳೆದುಕೊಳ್ಳಬೇಡಿ ಎಂದು ತಿಳಿಸುವುದಕ್ಕಾಗಿ ಅಷ್ಟೇ.

ಜಸ್​ಪ್ರೀತ್ ಬುಮ್ರಾ ಬಗ್ಗೆ ಯೋಚಿಸಿ. ಅವನ ಹೋರಾಟಗಳು, ದೇವರು ಅವನಿಗೆ ಹೇಗೆ ಸಹಾಯ ಮಾಡಿದ್ದಾನೆ ಎಂಬುದು ತಿಳಿಯುತ್ತದೆ. ದೇವರು ನಮಗೆಲ್ಲರಿಗೂ ಅದೇ ರೀತಿ ಸಹಾಯ ಮಾಡುತ್ತಾನೆ. ಆದರೆ ಅದಕ್ಕೂ ಮೊದಲು ನಾವು ಬೇರೆಯವರಿಗೆ ಸಹಾಯ ಮಾಡಬೇಕು.

ಇದನ್ನೂ ಓದಿ: ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಐವರು ಆಟಗಾರರು..!

ಟಿ20 ವಿಶ್ವಕಪ್​ ಗೆಲ್ಲಲು ಕಾರಣರಾದ ನನ್ನ ಮಗು ಜಸ್​ಪ್ರೀತ್ ಬುಮ್ರಾ ಅವರನ್ನು ಅಭಿನಂದಿಸಲು ದಯವಿಟ್ಟು ನನ್ನೊಂದಿಗೆ ಸೇರಿಕೊಳ್ಳಿ. ಅವರನ್ನು ವಿಶ್ವ ಚಾಂಪಿಯನ್ ಆಗಿ ರೂಪಿಸಿದ ಅವರ ತಾಯಿ ದಲ್ಜಿತ್ ಮತ್ತು ಸಹೋದರಿ ಜೂಹಿಕಾ ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಪತ್ನಿ ಸಂಜನಾ ಈಗ ಬುಮ್ರಾ ಅವರ ಬೆನ್ನಲೆಬು. ಕ್ಷಮಿಸಿ ಜಸ್​ಪ್ರೀತ್, ನಾನು ಪಂದ್ಯವನ್ನು ವೀಕ್ಷಿಸಲಿಲ್ಲ, ಆದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ!- ದೀಪಲ್ ‏‎ತ್ರಿವೇದಿ.

(ಪತ್ರಕರ್ತೆ ದೀಪಲ್ ‏‎ತ್ರಿವೇದಿ ಅವರ ಎಕ್ಸ್​ ವಾಲ್​ನಿಂದ)

ತಾಜಾ ಸುದ್ದಿ
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
‘ರೇಣುಕಾ ಸ್ವಾಮಿ ಮಾಡಿದ್ದು ದೊಡ್ಡ ತಪ್ಪು, ಅದನ್ನು ಯಾರೂ ಗಮನಿಸ್ತಿಲ್ಲ’
‘ರೇಣುಕಾ ಸ್ವಾಮಿ ಮಾಡಿದ್ದು ದೊಡ್ಡ ತಪ್ಪು, ಅದನ್ನು ಯಾರೂ ಗಮನಿಸ್ತಿಲ್ಲ’
ಸಿದ್ದರಾಮಯ್ಯರೆಡೆ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
ಸಿದ್ದರಾಮಯ್ಯರೆಡೆ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಒಪ್ಪಿದರು
ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಒಪ್ಪಿದರು
ಚಿತ್ರೀಕರಣದ ಸಮಯದಲ್ಲಿ ಪವಿತ್ರಾ ಗೌಡರ ವರ್ತನೆ ಹೇಗಿರುತ್ತಿತ್ತು: ನಿರ್ದೇಶಕಿ
ಚಿತ್ರೀಕರಣದ ಸಮಯದಲ್ಲಿ ಪವಿತ್ರಾ ಗೌಡರ ವರ್ತನೆ ಹೇಗಿರುತ್ತಿತ್ತು: ನಿರ್ದೇಶಕಿ
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು