ಭಾರತ-ಇಂಗ್ಲೆಂಡ್ (India vs England) ನಡುವಣ ಐದನೇ ಟೆಸ್ಟ್ ಪಂದ್ಯದ ರದ್ದತಿ ಚರ್ಚೆಗಳು ಮುಂದುವರೆದಿದೆ. ಅತ್ತ ಪಂದ್ಯದ ರದ್ದಾದ ಬಳಿಕ ಬಿಸಿಸಿಐ (BCCI) ಐಪಿಎಲ್ನತ್ತ (IPL 2021) ಗಮನ ಕೇಂದ್ರೀಕರಿಸಿದರೆ, ಇತ್ತ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ECB) ನಷ್ಟದ ಲೆಕ್ಕಚಾರದಲ್ಲಿ ತೊಡಗಿಸಿಕೊಂಡಿದೆ. ಅದರಂತೆ ಐದನೇ ಟೆಸ್ಟ್ ಪಂದ್ಯದ ರದ್ದಿನಿಂದ ಇಸಿಬಿಗೆ ಸುಮಾರು 400 ಕೋಟಿ ನಷ್ಟವಾಗಿದೆ ಎಂದು ತಿಳಿಸಿದೆ. ನೇರ ಪ್ರಸಾರದ ಹಕ್ಕಿನಿಂದ 300 ಕೋಟಿ ಮತ್ತು ಟಿಕೆಟ್ ಮಾರಾಟದಿಂದ 100 ಕೋಟಿ ನಷ್ಟವಾಗಿದೆ ಎಂದು ಇಸಿಬಿ ವಾದ ಮುಂದಿಟ್ಟಿದೆ. ಅಷ್ಟೇ ಅಲ್ಲದೆ ಈ ಬಗ್ಗೆ ಐಸಿಸಿಗೂ (ICC) ದೂರು ನೀಡಿದೆ. ಆದರೆ ಇತ್ತ ಬಿಸಿಸಿಐ ಪಂದ್ಯವನ್ನು ಮರು ಆಯೋಜಿಸುವ ಬಗ್ಗೆ ಖಾತರಿ ನೀಡಿದೆ. ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಮುಂದಿನ ವರ್ಷದ ಇಂಗ್ಲೆಂಡ್ ಪ್ರವಾಸದಲ್ಲಿ ರದ್ದಾಗಿರುವ ಪಂದ್ಯವನ್ನು ಆಡುವುದಾಗಿ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಬಿಸಿಸಿಐಗೆ ಎರಡು ಆಯ್ಕೆಗಳನ್ನು ಮುಂದಿಟ್ಟಿರುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬಹಿರಂಗಪಡಿಸಿದ್ದಾರೆ. ಮುಂದಿನ ವರ್ಷ ಪ್ರವಾಸದಲ್ಲಿ ಎರಡು ಹೆಚ್ಚುವರಿ ಟಿ20 ಪಂದ್ಯಗಳನ್ನು ಆಡಲು ಭಾರತೀಯ ಮಂಡಳಿ ಇಂಗ್ಲೆಂಡಿಗೆ ಆಫರ್ ನೀಡಿದೆ. ಅದರಂತೆ ಮುಂದಿನ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡ ಒಟ್ಟು 5 ಟಿ20 ಪಂದ್ಯಗಳನ್ನಾಡಲಿದೆ ಎಂದು ತಿಳಿಸಿದ್ದಾರೆ.
‘ನಾವು ಮುಂದಿನ ಜುಲೈನಲ್ಲಿ ಇಂಗ್ಲೆಂಡ್ ಸರಣಿಗಾಗಿ ತೆರಳಿದಾಗ, ಎರಡು ಹೆಚ್ಚುವರಿ ಟಿ20 ಪಂದ್ಯಗಳನ್ನು ಆಡುವುದಾಗಿ ಇಸಿಬಿಗೆ ಆಫರ್ ನೀಡಿದ್ದೇವೆ. ನಮ್ಮ ತಂಡವು ಮೂರು ಟಿ20 ಪಂದ್ಯಗಳ ಬದಲಿಗೆ ಐದು ಟಿ20 ಪಂದ್ಯಗಳನ್ನು ಆಡಲಿದೆ. ಹಾಗೆಯೇ 5ನೇ ಟೆಸ್ಟ್ ಪಂದ್ಯವನ್ನು ಆಡುವ ಪ್ರಸ್ತಾಪವೂ ಇದೆ. ಈ ಪ್ರಸ್ತಾಪಗಳಲ್ಲಿ ಒಂದನ್ನು ಆಯ್ಕೆ ಮಾಡುವುದು ಸಂಪೂರ್ಣವಾಗಿ ಅವರಿಗೆ (ಇಸಿಬಿ) ಬಿಟ್ಟದ್ದು. ಅಂದರೆ 1 ಟೆಸ್ಟ್ ಬದಲಿಗೆ 2 ಟಿ20 ಪಂದ್ಯ ಆಡಬಹುದು, ಇಲ್ಲ ಐದನೇ ಟೆಸ್ಟ್ ಪಂದ್ಯವನ್ನೇ ಮರು ಆಯೋಜಿಸಬಹುದು ಎಂದು ಜಯ್ ಶಾ ತಿಳಿಸಿದ್ದಾರೆ.
ಭಾರತ-ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇದರ ಬೆನ್ನಲ್ಲೇ ಬೌಲಿಂಗ್ ತರಬೇತುದಾರ ಭರತ್ ಅರುಣ್ ಮತ್ತು ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಸೇರಿದಂತೆ ಸಹಾಯಕ ಸಿಬ್ಬಂದಿಯಲ್ಲೂ ಕೊರೋನಾ ಸೋಂಕು ಕಾಣಿಸಿಕೊಂಡಿತು. ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಟೀಮ್ ಇಂಡಿಯಾ ಆಟಗಾರರು ಐದನೇ ಟೆಸ್ಟ್ ಪಂದ್ಯದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದರು. ಅದರಂತೆ 2-1 ಅಂತರದೊಂದಿಗೆ ಸರಣಿಯ ಅಂತಿಮ ಪಂದ್ಯವನ್ನು ರದ್ದುಗೊಳಿಸಲಾಯಿತು. ಇದಾಗ್ಯೂ ಪಂದ್ಯದ ಫಲಿತಾಂಶವನ್ನು ಘೋಷಿಸಲಾಗಿರಲಿಲ್ಲ. ಹೀಗಾಗಿ ಅಂತಿಮ ಟೆಸ್ಟ್ ಪಂದ್ಯವನ್ನು ಮುಂದಿನ ಸರಣಿಯಲ್ಲಿ ಆಯೋಜಿಸಲು ಬಿಸಿಸಿಐ ಇಂಗ್ಲೆಂಡ್ ಬೋರ್ಡ್ಗೆ ಆಫರ್ ನೀಡಿದೆ.
ಒಂದು ವೇಳೆ ಟೆಸ್ಟ್ ಆಯೋಜಿಸದಿದ್ದರೆ ಅದರ ಬದಲಿಗೆ 2 ಟಿ20 ಪಂದ್ಯಗಳನ್ನು ಆಡಲು ಟೀಮ್ ಇಂಡಿಯಾ ರೆಡಿಯಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಉಂಟಾಗಿರುವ ನಷ್ಟವನ್ನು ಸರಿದೂಗಿಸಬಹುದು ಎಂಬುದು ಬಿಸಿಸಿಐ ಲೆಕ್ಕಚಾರ.
2022ರಲ್ಲಿ ಇಂಗ್ಲೆಂಡ್-ಭಾರತ ನಡುವಣ ಸರಣಿ ವೇಳಾಪಟ್ಟಿ ಹೀಗಿದೆ:
ಮೊದಲ ಏಕದಿನ: ಓಲ್ಡ್ ಟ್ರಾಫರ್ಡ್ (ಜುಲೈ 1)
ಎರಡನೇ ಏಕದಿನ: ಟ್ರೆಂಟ್ ಬ್ರಿಡ್ಜ್ (ಜುಲೈ 3)
ಮೂರನೇ ಏಕದಿನ: ಏಜಸ್ ಬೌಲಲ್ (ಜುಲೈ 6)
ಮೊದಲ ಟಿ20: ಎಡ್ಜ್‌ಬಾಸ್ಟನ್ (ಜುಲೈ 9)
ಎರಡನೇ ಟಿ20: ದಿ ಓವಲ್ (ಜುಲೈ 12)
ಮೂರನೇ ಟಿ20: ಲಾರ್ಡ್ಸ್ (ಜುಲೈ 14)
ಇದನ್ನೂ ಓದಿ: 16 ಸಿಕ್ಸರ್, 4 ಫೋರ್: ಒಂದೇ ಓವರ್ನಲ್ಲಿ 6 ಸಿಕ್ಸ್ ಸಿಡಿಸಿ ವಿಶ್ವ ದಾಖಲೆ ಬರೆದ ಜಸ್ಕರನ್
ಇದನ್ನೂ ಓದಿ: Rashid Khan: ಟಿ20 ವಿಶ್ವಕಪ್ಗೆ ಅಫ್ಘಾನ್ ತಂಡ ಪ್ರಕಟ: ನಾಯಕತ್ವಕ್ಕೆ ರಶೀದ್ ಖಾನ್ ರಾಜೀನಾಮೆ
ಇದನ್ನೂ ಓದಿ: Crime News: ಯುವತಿಗೆ ಡ್ರಾಪ್ ಕೊಡಲು ಬೈಕ್ ನಿಲ್ಲಿಸಿದ ಯುವಕ: ಆಮೇಲೆ ಆಗಿದ್ದೇ ಬೇರೆ!
ಇದನ್ನೂ ಓದಿ: Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು
(Jay Shah Confirms BCCI offered England to play 5 t20 matches)