IPL 2021: RCB ಗೆ ಶಾಕ್ ನೀಡಿದ ಹ್ಯಾಕರುಗಳು
IPL 2021 Rcb: ಐಪಿಎಲ್ 14 ರ ದ್ವಿತಿಯಾರ್ಧದ ಪಂದ್ಯವು ಸೆಪ್ಟೆಂಬರ್ 19 ರಂದು ಆರಂಭವಾಗಲಿದ್ದು, ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ದ್ವಿತಿಯಾರ್ಧಕ್ಕಾಗಿ ದಿನಗಣನೆ ಶುರುವಾಗಿದೆ. ಈಗಾಗಲೇ ಎಲ್ಲಾ ತಂಡಗಳು ಯುಎಇಗೆ (UAE) ಬಂದಿಳಿದೆ. ಈ ಬಗ್ಗೆ ಪ್ರತಿ ತಂಡಗಳು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳ ಮೂಲಕ ಅಭಿಮಾನಿಗಳಿಗೆ ಅಪ್ಡೇಟ್ಗಳನ್ನು ನೀಡುತ್ತಿದ್ದು, ಇದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಟ್ವಿಟರ್ ಅಕೌಂಟ್ನಲ್ಲಿ ಕಾಣಿಸಿಕೊಂಡ ಕೆಲ ಪೋಸ್ಟ್ಗಳು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ಕ್ರಿಕೆಟ್ಗೆ ಸಂಬಂಧಿಸಿದ ಕೆಲ ವಿಷಯಗಳ ಟ್ವೀಟ್ಗಳು ಏಕಾಏಕಿ ಕಾಣಿಸಿಕೊಂಡಿದ್ದರಿಂದ ಆರ್‌ಸಿಬಿ ಫ್ಯಾನ್ಸ್ ಕೂಡ ಗೊಂದಲಕ್ಕೊಳಗಾಗಿದ್ದರು. ಇದೀಗ ಈ ಬಗ್ಗೆ ಖುದ್ದು ಆರ್‌ಸಿಬಿ ಸ್ಪಷ್ಟನೆ ನೀಡಿದೆ. ತಮ್ಮ ಅಧಿಕೃತ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ಇದೀಗ ಮರು ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದೆ.
ಸೋಮವಾರ ಹ್ಯಾಕರುಗಳು ಆರ್‌ಸಿಬಿ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿದ್ದು, ಕೆಲ ಗಂಟೆಗಳ ಕಾಲ ಖಾತೆಯ ಮೇಲೆ ಹಿಡಿತ ಸಾಧಿಸಿತ್ತು. ಅಷ್ಟೇ ಅಲ್ಲದೆ ಅಮೆರಿಕದ ಕಾರು ತಯಾರಿಕಾ ಕಂಪೆನಿ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರನ್ನು ಟೀಕಿಸಿ ಟ್ವೀಟ್ಗಳನ್ನು ಹರಿಬಿಡಲಾಗಿತ್ತು. ಇದನ್ನು ನೋಡಿ ಅನೇಕ ಆರ್‌ಸಿಬಿ ಅಭಿಮಾನಿಗಳು ಪ್ರಶ್ನಿಸಿದ್ದರು.
ಆರ್‌ಸಿಬಿಯ ಟ್ವಿಟರ್ ಹ್ಯಾಕ್ ಮಾಡಿದ ಬಳಿಕ, “ಟೆಸ್ಲಾ 2020 ರಲ್ಲಿ $ 1.5 ಬಿಲಿಯನ್ ಪರಿಸರ ಸಬ್ಸಿಡಿಗಳನ್ನು ತೆರಿಗೆದಾರರಿಂದ ಧನಸಹಾಯ ಪಡೆಯಿತು. ಇದನ್ನು $ 1.5 ಬಿಲಿಯನ್ ಬಿಟ್‌ಕಾಯಿನ್‌ಗೆ ಖರ್ಚು ಮಾಡಿದೆ. ಹಾಗೆಯೇ ಈ ಮೊತ್ತವನ್ನು ಕಲ್ಲಿದ್ದಲಿನಿಂದ ವಿದ್ಯುತ್ ಗಣಿಗಾರಿಕೆಗೆ ಬಳಸಲಾಗುತ್ತಿದೆ ಎಂದು ಟೀಕಿಸಿ ಟ್ವೀಟ್ ಮಾಡಿದ್ದರು.
ಈ ಬಗ್ಗೆ ಎಚ್ಚೆತ್ತುಕೊಂಡ ಆರ್‌ಸಿಬಿ ಇದೀಗ ತಮ್ಮ ಹ್ಯಾಂಡಲ್‌ನಿಂದ ಹ್ಯಾಕರುಗಳು ಮಾಡಿದ ಅನಗತ್ಯ ಪೋಸ್ಟ್‌ಗಾಗಿ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದೆ. ಅಲ್ಲದೆ ಮತ್ತೆ ಟ್ವಿಟರ್ ಖಾತೆಯನ್ನು ಮರುಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದೆ.
ಏತನ್ಮಧ್ಯೆ, ಐಪಿಎಲ್‌ನ ಎರಡನೇ ಹಂತಕ್ಕೆ ಆರ್‌ಸಿಬಿಯ ಸಿದ್ಧತೆ ಭರದಿಂದ ಸಾಗುತ್ತಿದೆ. ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ಕೂಡ ಕ್ವಾರಂಟೈನ್ನಲ್ಲಿದ್ದು, ಸೆಪ್ಟೆಂಬರ್ 17 ರಂದು ಅಭ್ಯಾಸಕ್ಕೆ ಹಾಜರಾಗುವ ಸಾಧ್ಯತೆಯಿದೆ.
ಐಪಿಎಲ್ 14 ರ ದ್ವಿತಿಯಾರ್ಧದ ಪಂದ್ಯವು ಸೆಪ್ಟೆಂಬರ್ 19 ರಂದು ಆರಂಭವಾಗಲಿದ್ದು, ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಆರ್‌ಸಿಬಿ ದ್ವಿತಿಯಾರ್ಧದ ಅಭಿಯಾನವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಪ್ಟೆಂಬರ್ 20 ರಂದು ಪುನರಾರಂಭಿಸಲಿದೆ.
ಇದನ್ನೂ ಓದಿ: 16 ಸಿಕ್ಸರ್, 4 ಫೋರ್: ಒಂದೇ ಓವರ್ನಲ್ಲಿ 6 ಸಿಕ್ಸ್ ಸಿಡಿಸಿ ವಿಶ್ವ ದಾಖಲೆ ಬರೆದ ಜಸ್ಕರನ್
ಇದನ್ನೂ ಓದಿ: Rashid Khan: ಟಿ20 ವಿಶ್ವಕಪ್ಗೆ ಅಫ್ಘಾನ್ ತಂಡ ಪ್ರಕಟ: ನಾಯಕತ್ವಕ್ಕೆ ರಶೀದ್ ಖಾನ್ ರಾಜೀನಾಮೆ
ಇದನ್ನೂ ಓದಿ: Crime News: ಯುವತಿಗೆ ಡ್ರಾಪ್ ಕೊಡಲು ಬೈಕ್ ನಿಲ್ಲಿಸಿದ ಯುವಕ: ಆಮೇಲೆ ಆಗಿದ್ದೇ ಬೇರೆ!
ಇದನ್ನೂ ಓದಿ: Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು
(IPL 2021: RCB Twitter Account Getting Hacked)