Ashes 4th Test: ತನ್ನನ್ನು ನಿಂದಿಸಿದ ಅಭಿಮಾನಿಗೆ ಎದುರು ನಿಂತು ಸ್ಟೋಕ್ಸ್- ಬೈರ್ಸ್ಟೋ ಹೇಳಿದ್ದೇನು ನೋಡಿ
Jonny Bairstow and Ben Stokes: ಆ್ಯಶಸ್ ಸರಣಿ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್ಗಳಾದ ಬೆನ್ ಸ್ಟೋಕ್ಸ್ ಮತ್ತು ಜಾನಿ ಬೈರ್ಸ್ಟೋ ಟೀ ವಿರಾಮದ ವೇಳೆ ಡ್ರೆಸ್ಸಿಂಗ್ ರೂಮ್ಗೆ ತೆರಳುವಾಗ ಅಭಿಮಾನಿಯೋರ್ವ ಇವರನ್ನು ನಿಂದಿಸಿದ ಘಟನೆ ನಡೆದಿದೆ. ಇದಕ್ಕೆ ಇವರಿಬ್ಬರೂ ಅಲ್ಲೇ ಎದುರು ನಿಂತು ಖಡಕ್ ಆಗಿ ಉತ್ತರ ಕೂಡ ಕೊಟ್ಟಿದ್ದಾರೆ.
ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ (Sydney Cricket Ground) ನಡೆಯುತ್ತಿರುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ (Australia vs England) ನಡುವಣ ಆ್ಯಶಸ್ ಸರಣಿಯ ನಾಲ್ಕನೇ ಟೆಸ್ಟ್ (Ashes 4th Test) ಪಂದ್ಯ ರೋಚಕತೆ ಪಡೆದುಕೊಂಡಿದೆ. ಕಾಂಗರೂ ಪಡೆ ಆಂಗ್ಲರಿಗೆ ಗೆಲ್ಲಲು 388 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ. ಇನ್ನೂ ಒಂದು ದಿನಗಳ ಆಟ ಬಾಕಿ ಉಳಿದಿರುವ ಕಾರಣ ಈ ಟೆಸ್ಟ್ ಪಂದ್ಯ ಕುತೂಹಲ ಕೆರಳಿಸಿದೆ. ಇಂಗ್ಲೆಂಡ್ ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಸಿದೆ. ಇದರ ನಡುವೆ ಈ ಟೆಸ್ಟ್ ಪಂದ್ಯದ ಮೂರನೇ ದಿನ ವಿಶೇಷ ಘಟನೆಯೊಂದು ನಡೆಯಿತು. ಇಂಗ್ಲೆಂಡ್ ಬ್ಯಾಟರ್ಗಳಾದ ಬೆನ್ ಸ್ಟೋಕ್ಸ್ (Ben Stokes) ಮತ್ತು ಜಾನಿ ಬೈರ್ಸ್ಟೋ (Jonny Bairstow) ಟೀ ವಿರಾಮದ ವೇಳೆ ಡ್ರೆಸ್ಸಿಂಗ್ ರೂಮ್ಗೆ ತೆರಳುವಾಗ ಅಭಿಮಾನಿಯೋರ್ವ ಇವರನ್ನು ನಿಂದಿಸಿದ (Abusive) ಘಟನೆ ನಡೆದಿದೆ. ಇದಕ್ಕೆ ಇವರಿಬ್ಬರೂ ಅಲ್ಲೇ ಎದುರು ನಿಂತು ಖಡಕ್ ಆಗಿ ಉತ್ತರ ಕೂಡ ಕೊಟ್ಟಿದ್ದಾರೆ. ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಪಡೆ ಮೊದಲ ಇನ್ನಿಂಗ್ಸ್ನಲ್ಲಿ ಬರೋಬ್ಬರಿ 416 ರನ್ ಮಾಡಿ ಡಿಕ್ಲೇರ್ ಘೋಷಿಸಿತು. ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಮತ್ತದೆ ಕಳಪೆ ಬ್ಯಾಟಿಂಗ್ ಮುಂದುವರೆಸಿತು. 36 ರನ್ಗೆ 4 ವಿಕೆಟ್ ಪತನಗೊಂಡವು. ಈ ಸಂದರ್ಭ ಕ್ರೀಸ್ಗೆ ಬಂದ ಜಾನಿ ಬೈರ್ಸ್ಟೋ ಹಾಗೂ ಬೆನ್ ಸ್ಟೋಕ್ಸ್ ಎಚ್ಚರಿಕೆಯ ಆಟವಾಡದರು. ಕುಸಿದು ಆಲೌಟ್ ಆಗುವ ಭೀತಿಯಲ್ಲಿದ್ದ ತಂಡಕ್ಕೆ ಆಧಾರವಾಗಿ ನಿಂತರು. ಸ್ಟೋಕ್ಸ್ 66 ರನ್ ಗಳಿಸಿದರೆ, ಬೈರ್ಸ್ಟೋ ಅಮೂಲ್ಯ 113 ರನ್ಗಳ ಕೊಡುಗೆ ನೀಡಿದರು.
ಇದರ ನಡುವೆ ಟೀ ವಿರಾಮಕ್ಕೆಂದು ಡ್ರೆಸ್ಸಿಂಗ್ ರೂಮ್ ಕಡೆ ಸ್ಟೋಕ್ಸ್- ಬೈರ್ಸ್ಟೋ ತೆರಳುವಾಗ ಅಭಿಮಾನಿಯೋರ್ವ ನಿಂದಿಸಿದ್ದಾರೆ. “ಹೇ ಸ್ಟೋಕ್ಸ್ ನೀನು ತುಂಬಾ ದಪ್ಪ ಇದ್ದೀಯ. ಬೈರ್ಸ್ಟೋ ನೀನು ನಿನ್ನ ಬಟ್ಟೆ ತೆಗೆದು ನೋಡು, ಸ್ವಲ್ಪ ತೂಕ ಕಡಿಮೆ ಮಾಡಿಕೊಳ್ಳು” ಎಂದು ಅಭಿಮಾನಿ ಹೇಳಿದ್ದಾನೆ. ಇದಕ್ಕೆ ಅಲ್ಲೇ ಎದುರು ನಿಂತು ಖಡಕ್ ಆಗಿ ಉತ್ತರಿಸಿರುವ ಬೈರ್ಸ್ಟೋ, “ಅದು ಸರಿ ನೀನು ಇಲ್ಲಿಂದ ತಿರುಗಿ ಮೊದಲು ಹೊರನಡೆ” ಎಂದು ಕೋಪದಲ್ಲಿ ಹೇಳಿದ್ದಾರೆ. ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.
ಈಗಾಗಲೇ ಐದು ಪಂದ್ಯಗಳ ಆ್ಯಶಸ್ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ 3-0 ಮುನ್ನಡೆ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ. ಈ ಸರಣಿಯಲ್ಲಿ ಇಂಗ್ಲೆಂಡ್ ತೀರಾ ಕಳಪೆ ಪ್ರದರ್ಶನ ತೋರುತ್ತಾ ಬಂದಿದ್ದು ನಾಲ್ಕನೇ ಟೆಸ್ಟ್ನಲ್ಲೂ ಮುಂದುವರೆದಿದೆ. ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಉಸ್ಮಾನ್ ಖ್ವಾಜಾ ಅವರ 137 ಹಾಗೂ ಸ್ಟೀವ್ ಸ್ಮಿತ್ ಅವರ 67 ರನ್ಗಳ ನೆರವಿನಿಂದ 416 ರನ್ಗೆ 8 ವಿಕೆಟ್ ಕಳೆದುಕೊಂಡು ಡಿಕ್ಲೇರ್ ಘೋಷಿಸಿತು.
ಬಳಿಕ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ಬೈರ್ಸ್ಟೋ ಅವರ ಶತಕ ಹಾಗೂ ಸ್ಟೋಕ್ಸ್ ಅವರ ಅರ್ಧಶತಕದ ನೆರವಿನಿಂದ 294 ರನ್ಗೆ ಆಲೌಟ್ ಆಯಿತು. ಬೃಹತ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 265 ರನ್ಗಳಿಗೆ ಡಿಕ್ಲೇರ್ ಘೋಷಿಸಿತು. ಎರಡನೇ ಇನ್ನಿಂಗ್ಸ್ನಲ್ಲಿ ಖ್ವಾಜಾ ಭರ್ಜರಿ ಶತಕ ಸಿಡಿಸಿದರು. ಸದ್ಯ 388 ರನ್ಗಳ ಟಾರ್ಗೆಟ್ ಬೆನ್ನಟ್ಟಿರುವ ಇಂಗ್ಲೆಂಡ್ ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 30 ರನ್ ಬಾರಿಸಿದೆ. ಗೆಲುವಿಗೆ ಒಂದು ದಿನದಲ್ಲಿ 358 ರನ್ ಬೇಕಾಗಿದೆ.
KSCA Recruitment 2022: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ 5 ಹುದ್ದೆಗಳು ಖಾಲಿ: ಇಂದೇ ಅರ್ಜಿ ಸಲ್ಲಿಸಿ
BCCI: ಬಿಸಿಸಿಐ ಆಫೀಸ್ಗೆ ಬೀಗ: ಮೂವರು ಅಧಿಕಾರಿಗಳಿಗೆ ಕೊರೊನಾ ಪಾಸಿಟಿವ್