AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BCCI: ಬಿಸಿಸಿಐ ಆಫೀಸ್​ಗೆ ಬೀಗ: ಮೂವರು ಅಧಿಕಾರಿಗಳಿಗೆ ಕೊರೊನಾ ಪಾಸಿಟಿವ್

COVID-19 third wave: ಬಿಸಿಸಿಐನ ಮುಖ್ಯ ಕಚೇರಿ ಮುಂಬೈನಲ್ಲಿದ್ದು ಈ ಕಛೇರಿಯಲ್ಲಿರುವ ಸಿಬ್ಬಂದಿಗಳಲ್ಲಿಯೂ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ಒಟ್ಟು ಮೂವರಲ್ಲಿ ಕೊರೊನಾ ವೈರಸ್‌ನ ಪತ್ತೆಯಾಗಿದ್ದು ಮೂರು ದಿನಗಳ ಕಾಲ ಬಿಸಿಸಿಐನ ಕೇಂದ್ರ ಕಚೇರಿಗೆ ಬೀಗ ಜಡಿಯಲಾಗಿದೆ.

BCCI: ಬಿಸಿಸಿಐ ಆಫೀಸ್​ಗೆ ಬೀಗ: ಮೂವರು ಅಧಿಕಾರಿಗಳಿಗೆ ಕೊರೊನಾ ಪಾಸಿಟಿವ್
BCCI
TV9 Web
| Updated By: Vinay Bhat|

Updated on: Jan 08, 2022 | 9:31 AM

Share

ದೇಶದಲ್ಲಿ ಕೊರೊನಾ ವೈರಸ್ (Corona Virus) ಆರ್ಭಟ ಮತ್ತೆ ಶುರುವಾಗಿದೆ. ಕಳೆದ 24 ಗಂಟೆಯಲ್ಲಿ 1,17,100 ಮಂದಿಗೆ ಸೋಂಕು ತಗುಲಿದೆ. ಪಾಸಿಟಿವಿಟಿ ರೇಟ್ ಶೇ.7.74 ಇದೆ. ಕಳೆದ 24 ಗಂಟೆಯಲ್ಲಿ 302 ಮಂದಿ ಕೊರೊನಾದಿಂದ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 4,83,178ಕ್ಕೇರಿದೆ. ಸುಮಾರು 30,836 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಈ ಮೂಲಕ ದೇಶದಲ್ಲಿ ಇದುವರೆಗೂ ಒಟ್ಟು 3,43,71,845 ಮಂದಿ ಮಹಾಮಾರಿಯಿಂದ ಗುಣಮುಖರಾಗಿದ್ದಾರೆ. 27 ರಾಜ್ಯಗಳಲ್ಲಿ ಸುಮಾರು 3,007 ಓಮಿಕ್ರಾನ್ (Omicron) ಪ್ರಕರಣಗಳು ಕಂಡುಬಂದಿವೆ. ಮೊನ್ನೆ ಗುರುವಾರ ಮಹಾರಾಷ್ಟ್ರವೊಂದರಲ್ಲಿಯೇ ಹೊಸ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 36 ಸಾವಿರ ದಾಟಿದೆ. ಇದರ ಬಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ (BCCI) ಮೇಲೆ ಕೂಡ ಬಿದ್ದಿದೆ.

ಹೌದು, ಬಿಸಿಸಿಐನ ಮುಖ್ಯ ಕಚೇರಿ ಮುಂಬೈನಲ್ಲಿದ್ದು ಈ ಕಛೇರಿಯಲ್ಲಿರುವ ಸಿಬ್ಬಂದಿಗಳಲ್ಲಿಯೂ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ಒಟ್ಟು ಮೂವರಲ್ಲಿ ಕೊರೊನಾ ವೈರಸ್‌ನ ಪತ್ತೆಯಾಗಿದ್ದು ಮೂರು ದಿನಗಳ ಕಾಲ ಬಿಸಿಸಿಐನ ಕೇಂದ್ರ ಕಚೇರಿಗೆ ಬೀಗ ಜಡಿಯಲಾಗಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದ ಆವರಣದಲ್ಲಿರುವ ಬಿಸಿಸಿಐನ ಕೇಂದ್ರ ಕಚೇರಿಯನ್ನು ಮೂರು ದಿನಗಳ ಕಾಲ ಮುಚ್ಚಲಾಗಿದೆ. ಕೊರೊನಾ ವೈರಸ್‌ಗೆ ತುತ್ತಾಗಿರುವ ಸಿಬ್ಬಂದಿಗಳು ತಮ್ಮ ನಿವಾಸದಲ್ಲಿಯೇ ಹೋಮ್‌ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇನ್ನು ಈ ಕಟ್ಟಡ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್‌ನ ಕಚೇರಿಯೂ ಆಗಿದ್ದು ಇದಕ್ಕೆ ಸಂಬಂಧಿಸಿದ 15 ಸಿಬ್ಬಂದಿಗಳಿಗೆ ಕೊರೊನಾವೈರಸ್ ವರದಿ ಪಾಸಿಟಿವ್ ಬಂದಿದೆ.

ಗಂಗೂಲಿ ಮನೆಯಲ್ಲೇ ಕ್ವಾರಂಟೈನ್:

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆಕೂಡ ಇತ್ತೀಚೆಗಷ್ಟೆ ಪಾಸಿಟಿವ್ ಕಂಡುಬಂದಿತ್ತು. ಇವರೀಗ ಮನೆಯಲ್ಲೇ ಕ್ವಾರಂಟೈನ್​ನಲ್ಲಿದ್ದಾರೆ. ಗಂಗೂಲಿ ಅವರ ಪುತ್ರಿ ಸನಾಗೆ ಕೋವಿಡ್ ಸೋಂಕು ತಗುಲಿದೆ. ಸನಾಗೆ ಕೋವಿಡ್ ಸೋಂಕು ತಗುಲಿರುವುದರಿಂದ ತಮ್ಮ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ಸೌರವ್ ಪತ್ನಿ ಡೋನಾ ಕೂಡ ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ನೆಗೆಟಿವ್ ವರದಿ ಬಂದಿದೆ.

ರಣಜಿ ಟ್ರೋಫಿ ಮುಂದಕ್ಕೆ:

ದೇಶದಲ್ಲಿ ಕೋವಿಡ್‌ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಆಟಗಾರರು, ಸಿಬ್ಬಂದಿಯ ಆರೋಗ್ಯದ ಹಿತದೃಷ್ಟಿಯಿಂದ ಬಿಸಿಸಿಐ ರಣಜಿ ಟ್ರೋಫಿ ಸೇರಿದಂತೆ ಎಲ್ಲಾ ದೇಸಿ ಕ್ರಿಕೆಟ್‌ ಟೂರ್ನಿಗಳನ್ನು ಮುಂದೂಡಿದೆ. ರಣಜಿ ಟ್ರೋಫಿ ಜನವರಿ13ರಿಂದ ಬೆಂಗಳೂರು, ಕೋಲ್ಕತಾ ಸೇರಿ 6 ನಗರಗಳಲ್ಲಿ ನಡೆಯಬೇಕಿತ್ತು. ಸಿ.ಕೆ.ನಾಯ್ಡು ಟ್ರೋಫಿ, ಹಿರಿಯ ಮಹಿಳೆಯರ ಟಿ20 ಲೀಗ್‌, ಕೂಚ್‌ ಬಿಹಾರ್‌ ಅಂಡರ್‌-19 ಟೂರ್ನಿಯ ನಾಕೌಟ್‌ ಪಂದ್ಯಗಳನ್ನೂ ಮುಂದೂಡಿರುವುದಾಗಿ ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

South Africa vs India: ಭಾರತ- ದಕ್ಷಿಣ ಆಫ್ರಿಕಾ ಅಂತಿಮ ಮೂರನೇ ಟೆಸ್ಟ್ ಪಂದ್ಯ ಯಾವಾಗ?, ಎಲ್ಲಿ?: ಇಲ್ಲಿದೆ ಸಂಪೂರ್ಣ ಮಾಹಿತಿ

PKL 2021-22: ಮತ್ತೊಂದು ರೋಚಕ ಕದನಕ್ಕೆ ಸಾಕ್ಷಿಯಾದ ಪ್ರೊ ಕಬಡ್ಡಿ: ಶುಕ್ರವಾರದ ಪಂದ್ಯ ಹೇಗಿತ್ತು?, ಯಾರಿಗೆ ಜಯ?