Jos Buttler: RCB ಬೌಲರ್​ಗಳ ಬೆಂಡೆತ್ತಿ ವಿಶೇಷ ದಾಖಲೆ ಬರೆದ ಜೋಸ್ ಬಟ್ಲರ್

| Updated By: ಝಾಹಿರ್ ಯೂಸುಫ್

Updated on: May 28, 2022 | 12:36 PM

IPL 2022: ಒಂದೇ ಸೀಸನ್​ನಲ್ಲಿ ಅತೀ ಹೆಚ್ಚು ಸೆಂಚುರಿ ಸಿಡಿಸಿದ ದಾಖಲೆ ಪಟ್ಟಿಯಲ್ಲೂ ಬಟ್ಲರ್ ಕಾಣಿಸಿಕೊಂಡಿದ್ದಾರೆ. 2016 ರಲ್ಲಿ 4 ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ವಿಶೇಷ ದಾಖಲೆ ಬರೆದಿದ್ದರು.

Jos Buttler: RCB ಬೌಲರ್​ಗಳ ಬೆಂಡೆತ್ತಿ ವಿಶೇಷ ದಾಖಲೆ ಬರೆದ ಜೋಸ್ ಬಟ್ಲರ್
Joss Buttler
Follow us on

IPL 2022: ಐಪಿಎಲ್​ ಸೀಸನ್​ 15 ರ ಪ್ಲೇಆಫ್​ ಪಂದ್ಯಗಳಲ್ಲಿ ಎರಡು ಶತಕಗಳು ಮೂಡಿಬಂದಿವೆ. ಮೊದಲ ಶತಕ ಆರ್​ಸಿಬಿ ಆಟಗಾರ ರಜತ್ ಪಾಟಿದಾರ್ (Rajat Patidar) ಬ್ಯಾಟ್​ನಿಂದ ಬಂದರೆ, 2ನೇ ಶತಕವನ್ನು ರಾಜಸ್ಥಾನ್ ರಾಯಲ್ಸ್ ಆರಂಭಿಕ ಜೋಸ್ ಬಟ್ಲರ್ (Jos Buttler) ಸಿಡಿಸಿದ್ದಾರೆ. ವಿಶೇಷ ಎಂದರೆ ಐಪಿಎಲ್​ ಇತಿಹಾಸದಲ್ಲೇ ಪ್ಲೇಆಫ್​ನಲ್ಲಿ 2 ಶತಕ ಮೂಡಿಬಂದಿದ್ದು ಇದು 2ನೇ ಬಾರಿ. ಅದರಲ್ಲೂ ಪ್ಲೇಆಫ್​ನಲ್ಲಿ ಶತಕ ಬಾರಿಸಿದ ಮೊದಲ ಇಂಗ್ಲೆಂಡ್ ಆಟಗಾರ ಎಂಬ ದಾಖಲೆ ಇದೀಗ ಜೋಸ್ ಬಟ್ಲರ್ ಪಾಲಾಗಿದೆ. ಇನ್ನು ಈ ಸಾಧನೆ ಮಾಡಿದ 2ನೇ ವಿದೇಶಿ ಆಟಗಾರನಾಗಿ ಬಟ್ಲರ್ ಗುರುತಿಸಿಕೊಂಡಿದ್ದಾರೆ. ಹಾಗಿದ್ರೆ ಪ್ಲೇಆಫ್​ನಲ್ಲಿ ಶತಕ ಬಾರಿಸಿದ ಆಟಗಾರರು ಯಾರೆಲ್ಲಾ ನೋಡೋಣ…

  1. ವೀರೇಂದ್ರ ಸೆಹ್ವಾಗ್: ಪಂಜಾಬ್ ಕಿಂಗ್ಸ್ ಪರ ಆಡಿದ್ದ ಸೆಹ್ವಾಗ್ 2014 ರಲ್ಲಿ ಸಿಎಸ್​ಕೆ ವಿರುದ್ದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ 122 ರನ್​ ಬಾರಿಸಿ ದಾಖಲೆ ಬರೆದಿದ್ದರು.
  2. ಶೇನ್ ವಾಟ್ಸನ್: ಆಸ್ಟ್ರೇಲಿಯಾ ಆಟಗಾರ ಶೇನ್ ವಾಟ್ಸನ್​ 2018 ರಲ್ಲಿ ಸಿಎಸ್​ಕೆ ಪರ ಬ್ಯಾಟ್ ಬೀಸಿ ಎಸ್​ಆರ್​ಹೆಚ್​ ವಿರುದ್ದದ ಫೈನಲ್​ ಪಂದ್ಯದಲ್ಲಿ ಅಜೇಯ 117 ರನ್​ ಬಾರಿಸಿ ಮಿಂಚಿದ್ದರು.
  3. ವೃದ್ದಿಮಾನ್ ಸಾಹ: 2014 ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ವೃದ್ಧಿಮಾನ್ ಕೆಕೆಆರ್ ವಿರುದ್ದದ ಫೈನಲ್ ಪಂದ್ಯದಲ್ಲಿ ಅಜೇಯ 115 ರನ್ ಸಿಡಿಸಿದ್ದರು.
  4. ಮುರಳಿ ವಿಜಯ್: 2012 ರಲ್ಲಿ ಸಿಎಸ್​ಕೆ ಪರ ಕಣಕ್ಕಿಳಿದಿದ್ದ ಮುರಳಿ ವಿಜಯ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಕ್ವಾಲಿಫೈಯರ್ 2 ಪಂದ್ಯದಲ್ಲಿ 113 ರನ್​ ಬಾರಿಸಿದ್ದರು.
  5. ಇದನ್ನೂ ಓದಿ
    Rajat Patidar: ಸೆಂಚುರಿ ಸಿಡಿಸಿ ಭರ್ಜರಿ ದಾಖಲೆ ಬರೆದ ರಜತ್ ಪಾಟಿದಾರ್
    IPL 2022: ಕೊನೆಯ ಓವರ್​ನಲ್ಲಿ ಚೇಸ್ ಮಾಡಿಯೇ ದಾಖಲೆ ಬರೆದ ಗುಜರಾತ್ ಟೈಟಾನ್ಸ್
    IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
    IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು
  6. ರಜತ್ ಪಾಟಿದಾರ್: ಐಪಿಎಲ್ 2022 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ವಿರುದ್ದ ಎಲಿಮಿನೇಟರ್ ಪಂದ್ಯದಲ್ಲಿ ಅಜೇಯ 112 ರನ್​ ಬಾರಿಸುವ ಮೂಲಕ ರಜತ್ ಪಾಟಿದಾರ್ ಆರ್​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
  7. ಜೋಸ್ ಬಟ್ಲರ್: 2022 ರಲ್ಲಿ ನಡೆದ ಐಪಿಎಲ್​ನ 2ನೇ ಕ್ವಾಲಿಫೈಯರ್​ ಪಂದ್ಯದಲ್ಲಿ ಆರ್​ಸಿಬಿ ವಿರುದ್ದ ಬಿರುಸಿನ ಬ್ಯಾಟಿಂಗ್ ಮೂಲಕ ಅಜೇಯ 106 ರನ್​ ಬಾರಿಸುವ ಮೂಲಕ ಜೋಸ್ ಬಟ್ಲರ್ ಅಬ್ಬರಿಸಿದ್ದರು.

ಈ ಮೂಲಕ ಪ್ಲೇಆಫ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಶತಕ ಸಿಡಿಸಿದ ಮೊದಲ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನು ಜೋಸ್ ಬಟ್ಲರ್ ತಮ್ಮದಾಗಿಸಿಕೊಂಡರು. ಅಷ್ಟೇ ಅಲ್ಲದೆ ಐಪಿಎಲ್​ನಲ್ಲಿ 5 ಶತಕ ಬಾರಿಸಿದ 2ನೇ ಬ್ಯಾಟ್ಸ್​ಮನ್ ಎಂಬ ವಿರಾಟ್ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದ್ದಾರೆ. ಹಾಗೆಯೇ ಒಂದೇ ಸೀಸನ್​ನಲ್ಲಿ ಅತೀ ಹೆಚ್ಚು ಸೆಂಚುರಿ ಸಿಡಿಸಿದ ದಾಖಲೆ ಪಟ್ಟಿಯಲ್ಲೂ ಬಟ್ಲರ್ ಕಾಣಿಸಿಕೊಂಡಿದ್ದಾರೆ. 2016 ರಲ್ಲಿ 4 ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ವಿಶೇಷ ದಾಖಲೆ ಬರೆದಿದ್ದರು. ಇದೀಗ ಈ ಸೀಸನ್​ನಲ್ಲಿ ಒಟ್ಟು 4 ಸೆಂಚುರಿ ಬಾರಿಸಿ ಜೋಸ್ ಬಟ್ಲರ್ ಈ ದಾಖಲೆಯನ್ನು ಸರಿಗಟ್ಟಿದ್ದಾರೆ.

ಇನ್ನು ಐಪಿಎಲ್​ನಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ದಾಖಲೆ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಗೇಲ್ ಐಪಿಎಲ್​ನಲ್ಲಿ ಒಟ್ಟು 6 ಶತಕ ಬಾರಿಸಿದ ದಾಖಲೆ ನಿರ್ಮಿಸಿಟ್ಟಿದ್ದಾರೆ. ಇದೀಗ ರಾಜಸ್ಥಾನ್ ರಾಯಲ್ಸ್ ಫೈನಲ್​ಗೆ ತಲುಪಿದ್ದು, ಅಂತಿಮ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಅನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಜೋಸ್ ಬಟ್ಲರ್ ಶತಕ ಸಿಡಿಸಿದ್ರೆ ಐಪಿಎಲ್​ನಲ್ಲಿ ಅತ್ಯಧಿಕ ಶತಕ ಬಾರಿಸಿದ ಕ್ರಿಸ್ ಗೇಲ್ ಅವರ ದಾಖಲೆಯನ್ನು ಸರಿಗಟ್ಟಬಹುದು. ಅಲ್ಲದೆ ಐಪಿಎಲ್​ ಸೀಸನ್​ವೊಂದರಲ್ಲಿ 900 ರನ್​ಗಳ ಗಡಿದಾಟಿದ 2ನೇ ಬ್ಯಾಟ್ಸ್​ಮನ್ ಎಂಬ ದಾಖಲೆ ಕೂಡ ಜೋಸ್ ಬಟ್ಲರ್ ಪಾಲಾಗಲಿದೆ.

ಸದ್ಯ ಐಪಿಎಲ್​ ಸೀಸನ್​ವೊಂದರಲ್ಲಿ ಅತೀ ಹೆಚ್ಚು ರನ್​ ಕಲೆಹಾಕಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ 2016 ರಲ್ಲಿ 973 ರನ್​ ಬಾರಿಸಿದ್ದರು. ಇದೀಗ ಭರ್ಜರಿ ಫಾರ್ಮ್​ನಲ್ಲಿರುವ ಜೋಸ್ ಬಟ್ಲರ್ 824 ರನ್​ ಬಾರಿಸಿದ್ದು, ಈ ಮೂಲಕ ಐಪಿಎಲ್​ನಲ್ಲಿ 900 ರನ್​ಗಳ ಗಡಿದಾಟುವ ಹೊಸ್ತಿಲಲ್ಲಿದ್ದಾರೆ.

 

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.