ಸೌತ್ ಆಫ್ರಿಕಾ ಟಿ20 ಲೀಗ್ನಲ್ಲಿನ (SA20) 23ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಕೇಪ್ಟೌನ್ ನ್ಯೂಲಾಂಡ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಎಂಐ ಕೇಪ್ಟೌನ್ ಹಾಗೂ ಜೋಬರ್ಗ್ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಜೋಬರ್ಗ್ ಸೂಪರ್ ಕಿಂಗ್ಸ್ ತಂಡದ ನಾಯಕ ಫಾಫ್ ಡುಪ್ಲೆಸಿಸ್ (Faf Du plessis) ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಎಂಐ ಕೇಪ್ಟೌನ್ ತಂಡವು 6 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು 43 ರನ್ ಕಲೆಹಾಕಿತ್ತು. ಈ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದಾದ ಬಳಿಕ ಓವರ್ಗಳ ಕಡಿತದೊಂದಿಗೆ ಮ್ಯಾಚ್ ಮುಂದುವರೆಸಲಾಗಿತ್ತು.
8 ಓವರ್ಗಳಿಗೆ ಸೀಮಿತಗೊಳಿಸಲಾಗಿದ್ದ ಈ ಪಂದ್ಯದ ಕೊನೆಯ ಎರಡು ಓವರ್ಗಳಲ್ಲಿ ನಾಯಕ ಕೀರನ್ ಪೊಲಾರ್ಡ್ ಅಬ್ಬರಿಸಿದರು. ಕೇವಲ 10 ಎಸೆತಗಳಲ್ಲಿ 33 ರನ್ ಬಾರಿಸುವ ಮೂಲಕ ಪೊಲಾರ್ಡ್ ಎಂಐ ಕೇಪ್ಟೌನ್ ತಂಡದ ಸ್ಕೋರ್ ಅನ್ನು 80 ಕ್ಕೆ ತಂದು ನಿಲ್ಲಿಸಿದರು.
ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ 8 ಓವರ್ಗಳಲ್ಲಿ 98 ರನ್ಗಳ ಟಾರ್ಗೆಟ್ ಪಡೆದ ಜೋಬರ್ಗ್ ಸೂಪರ್ ಕಿಂಗ್ಸ್ ತಂಡಕ್ಕೆ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಲೆಯುಸ್ ಡು ಪ್ಲೂಯ್ ಸಿಡಿಲಬ್ಬರದ ಆರಂಭ ಒದಗಿಸಿದರು. ಮೊದಲ ಓವರ್ನಿಂದಲೇ ಅಬ್ಬರಿಸಲಾರಂಭಿಸಿದ ಈ ಜೋಡಿ ಸಿಕ್ಸ್-ಫೋರ್ಗಳ ಸುರಿಮಳೆಗೈದರು.
ಅಲ್ಲದೆ ಕೇವಲ 5.4 ಓವರ್ಗಳಲ್ಲಿ 98 ರನ್ಗಳನ್ನು ಬಾರಿಸಿ ಜೋಬರ್ಗ್ ಸೂಪರ್ ಕಿಂಗ್ಸ್ ತಂಡವು 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಜೆಎಸ್ಕೆ ಪರ ಲೆಯುಸ್ ಡು ಪ್ಲೂಯ್ 14 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 41 ರನ್ ಬಾರಿಸಿದರೆ, ಫಾಫ್ ಡುಪ್ಲೆಸಿಸ್ 20 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಅಜೇಯ ಅರ್ಧಶತಕ ಸಿಡಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.
Joburg Super Kings power duo, du Plessis and du Plooy, making it rain sixes! 💥#Betway #SA20 #WelcomeToIncredible #MICTvJSK pic.twitter.com/5VlpEhJn7g
— Betway SA20 (@SA20_League) January 29, 2024
ಎಂಐ ಕೇಪ್ಟೌನ್ ಪ್ಲೇಯಿಂಗ್ 11: ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ , ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್) , ಲಿಯಾಮ್ ಲಿವಿಂಗ್ಸ್ಟೋನ್ , ಸ್ಯಾಮ್ ಕರನ್ , ಕೀರನ್ ಪೊಲಾರ್ಡ್ (ನಾಯಕ) , ಡೆವಾಲ್ಡ್ ಬ್ರೆವಿಸ್ , ಡೆಲಾನೋ ಪೊಟ್ಗೀಟರ್ , ಜಾರ್ಜ್ ಲಿಂಡೆ , ಥಾಮಸ್ ಕಬರ್ , ಕಗಿಸೊ ರಬಾಡ , ನುವಾನ್ ತುಷಾರಾ.
ಇದನ್ನೂ ಓದಿ: IND vs ENG 2nd Test: ಟೀಮ್ ಇಂಡಿಯಾದ ನಾಲ್ವರು ಸ್ಟಾರ್ ಆಟಗಾರರು ಅಲಭ್ಯ
ಜೋಬರ್ಗ್ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11: ಫಾಫ್ ಡು ಪ್ಲೆಸಿಸ್ (ನಾಯಕ) , ರೀಝ ಹೆಂಡ್ರಿಕ್ಸ್ , ಲೆಯುಸ್ ಡು ಪ್ಲೂಯ್ , ವೇಯ್ನ್ ಮ್ಯಾಡ್ಸೆನ್ , ಮೊಯಿನ್ ಅಲಿ , ಡೊನೊವನ್ ಫೆರೀರಾ (ವಿಕೆಟ್ ಕೀಪರ್ ) , ಡೇವಿಡ್ ವೀಝ , ಲಿಝಾಡ್ ವಿಲಿಯಮ್ಸ್ , ನಾಂಡ್ರೆ ಬರ್ಗರ್ , ಇಮ್ರಾನ್ ತಾಹಿರ್ , ಕೈಲ್ ಸಿಮಂಡ್ಸ್.