Karnataka Ranji Team: ರಣಜಿ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ

| Updated By: ಝಾಹಿರ್ ಯೂಸುಫ್

Updated on: Jun 01, 2022 | 3:53 PM

Karnataka Ranji squad: ಬ್ಯಾಟಿಂಗ್​ನಲ್ಲಿ ಅನುಭವಿ ಮಯಾಂಕ್ ಅಗರ್ವಾಲ್, ನಾಯಕ ಮನೀಶ್ ಪಾಂಡೆ , ರವಿಕುಮಾರ್ ಸಮರ್ಥ್, ಕರುಣ್ ನಾಯರ್ ಮತ್ತು ದೇವದತ್ ಪಡಿಕ್ಕಲ್ ಅವರಂತಹ ಅತ್ಯುತ್ತಮ ಆಟಗಾರರಿದ್ದಾರೆ.

Karnataka Ranji Team: ರಣಜಿ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ
Karnataka Ranji Team
Follow us on

ಆಲೂರಿನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಕ್ರಿಕೆಟ್ ಮೈದಾನದಲ್ಲಿ ಜೂನ್ 6 ರಿಂದ ಪ್ರಾರಂಭವಾಗುವ ರಣಜಿ ಟೂರ್ನಿಯ 2ನೇ ಹಂತಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಈ ಬಾರಿ ಕೂಡ ತಂಡವನ್ನು ಮನೀಶ್ ಪಾಂಡೆ ಮುನ್ನಡೆಸಲಿದ್ದಾರೆ. ಇದಾಗ್ಯೂ ಕೆಎಲ್ ರಾಹುಲ್ ಹಾಗೂ ಪ್ರಸಿದ್ಧ್ ಕೃಷ್ಣ ತಂಡದಿಂದ ಹೊರಗುಳಿದಿದ್ದಾರೆ. ಈ ಒಬ್ಬರು ಆಟಗಾರರು ದಕ್ಷಿಣ ಆಫ್ರಿಕಾ ವಿರುದ್ದದ ಟಿ20 ಸರಣಿಯಲ್ಲಿ ಭಾಗವಹಿಸಲಿದ್ದು, ಹೀಗಾಗಿ ಇವರನ್ನು ಕೈ ಬಿಡಲಾಗಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ. ಇನ್ನು ಕ್ವಾರ್ಟರ್​ ಫೈನಲ್​ನಲ್ಲಿ ಕರ್ನಾಟಕ ತಂಡವು ಉತ್ತರ ಪ್ರದೇಶ ವಿರುದ್ದ ಆಡಲಿದೆ.

ಈ ಬಾರಿ ತಂಡಕ್ಕೆ ವೇಗಿ ವಿ. ಕೌಶಿಕ್ ಕಂಬ್ಯಾಕ್ ಮಾಡಿದ್ದು, ಹೀಗಾಗಿ ಬೌಲಿಂಗ್ ವಿಭಾಗ ಮತ್ತಷ್ಟು ಬಲಗೊಂಡಿದೆ ಎನ್ನಬಹುದು. ಏಕೆಂದರೆ ತಂಡದಲ್ಲಿ ವೇಗಿಯಾಗಿ ವಿಜಯಕುಮಾರ್, ಸ್ಪಿನ್ನರ್​ಗಳಾಗಿ ಕೃಷ್ಣಪ್ಪ ಗೌತಮ್ , ಶ್ರೇಯಸ್ ಗೋಪಾಲ್ , ಜೆ ಸುಚಿತ್ ಮತ್ತು ಕೆಸಿ ಕಾರಿಯಪ್ಪ ಇದ್ದಾರೆ. ಹೀಗಾಗಿ ಕರ್ನಾಟಕ ತಂಡವು ಬಲಿಷ್ಠ ಬೌಲಿಂಗ್ ಲೈನಪ್​ನೊಂದಿಗೆ ಕಣಕ್ಕಿಳಿಯಲಿದೆ.

ಹಾಗೆಯೇ ಬ್ಯಾಟಿಂಗ್​ನಲ್ಲಿ ಅನುಭವಿ ಮಯಾಂಕ್ ಅಗರ್ವಾಲ್, ನಾಯಕ ಮನೀಶ್ ಪಾಂಡೆ , ರವಿಕುಮಾರ್ ಸಮರ್ಥ್, ಕರುಣ್ ನಾಯರ್ ಮತ್ತು ದೇವದತ್ ಪಡಿಕ್ಕಲ್ ಅವರಂತಹ ಅತ್ಯುತ್ತಮ ಆಟಗಾರರಿದ್ದಾರೆ. ಹೀಗಾಗಿ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಕರ್ನಾಟಕ ಕೂಡ ಮುಂಚೂಣಿಯಲ್ಲಿದೆ.

ಇದನ್ನೂ ಓದಿ
India vs South Africa T20: ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ ವೇಳಾಪಟ್ಟಿ ಪ್ರಕಟ
Ashish Nehra: ಎಳನೀರು, ಪೆನ್ನು ಪೇಪರ್​ನಲ್ಲೇ 9 ತಂಡಗಳನ್ನ ಮುಗಿಸಿಬಿಟ್ರು..!
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

ಕರ್ನಾಟಕ ತಂಡ ಹೀಗಿದೆ: ಮನೀಶ್ ಪಾಂಡೆ (ನಾಯಕ), ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಕರುಣ್ ನಾಯರ್,ಸಿದ್ಧಾರ್ಥ್ ಕೆವಿ, ನಿಶ್ಚಲ್ ಡಿ, ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್), ಶರತ್ ಬಿಆರ್, ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ಶುಭಾಂಗ್ ಹೆಗ್ಡೆ , ಜಗದೀಶ್ ಸುಚಿತ್, ಕೆಸಿ ಕಾರ್ಯಪ್ಪ , ರೋನಿತ್ ಮೋರೆ, ಕೌಶಿಕ್ ವಿ, ವೈಶಾಕ್ ವಿಜಯಕುಮಾರ್, ವೆಂಕಟೇಶ್ ಎಂ, ವಿದ್ವತ್ ಕಾವೇರಪ್ಪ, ಕಿಶನ್ ಎಸ್ ಬೇಡರೆ.

ರಣಜಿ ಟ್ರೋಫಿ ಕ್ವಾರ್ಟರ್​ ಫೈನಲ್ ವೇಳಾಪಟ್ಟಿ ಹೀಗಿದೆ:

  1. ಜೂನ್ 6-10: ಮೊದಲ ಕ್ವಾರ್ಟರ್ ಫೈನಲ್- ಬಂಗಾಳ vs ಜಾರ್ಖಂಡ್ (ಜಸ್ಟ್ ಕ್ರಿಕೆಟ್ ಅಕಾಡೆಮಿ ಮೈದಾನ, ಬೆಂಗಳೂರು)
  2. ಜೂನ್ 6-10: ಎರಡನೇ ಕ್ವಾರ್ಟರ್ ಫೈನಲ್- ಮುಂಬೈ vs ಉತ್ತರಾಖಂಡ (KSCA ಕ್ರಿಕೆಟ್ ಮೈದಾನ-2, ಆಲೂರು)
  3. ಜೂನ್ 6-10: ಮೂರನೇ ಕ್ವಾರ್ಟರ್ ಫೈನಲ್- ಕರ್ನಾಟಕ vs ಉತ್ತರ ಪ್ರದೇಶ (KSCA ಕ್ರಿಕೆಟ್ ಮೈದಾನ-1, ಆಲೂರು)
  4. ಜೂನ್ 6-10: ನಾಲ್ಕನೇ ಕ್ವಾರ್ಟರ್ ಫೈನಲ್- ಪಂಜಾಬ್ vs ಮಧ್ಯಪ್ರದೇಶ (KSCA ಕ್ರಿಕೆಟ್ ಮೈದಾನ-3), ಆಲೂರು)

 

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.