ಭಾರತದ ವಿರುದ್ಧ 23 ರನ್‌ಗಳಿಗೆ 5 ವಿಕೆಟ್ ಪಡೆದಿದ್ದ ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟರ್ ಡೇವಿಡ್ ಹೋಲ್ಫೋರ್ಡ್ ನಿಧನ
David Holford: ಹೋಲ್ಫೋರ್ಡ್ ಅವರು 1975 ರಲ್ಲಿ ಬಾರ್ಬಡೋಸ್ ಟೆಸ್ಟ್ನಲ್ಲಿ ಭಾರತದ ವಿರುದ್ಧ 23 ರನ್ ನೀಡಿ 5 ವಿಕೆಟ್ ಪಡೆದಿದ್ದರು, ಇದು ಅವರ ಜೀವನದ ಅತ್ಯುತ್ತಮ ಪ್ರದರ್ಶನವಾಗಿದೆ.
ವೆಸ್ಟ್ ಇಂಡೀಸ್ ಕ್ರಿಕೆಟ್‌ನ ದಿಗ್ಗಜ ಆಲ್ರೌಂಡರ್ ಡೇವಿಡ್ ಹೋಲ್ಫೋರ್ಡ್ (David Holford), ತಮ್ಮ 82 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಹಾಲ್ಫೋರ್ಡ್ರವರು ಬಾರ್ಬಡೋಸ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ. ಹೋಲ್ಫೋರ್ಡ್ ಸ್ಪಿನ್ ಆಲ್ ರೌಂಡರ್ ಆಗಿದ್ದು, ಲೆಗ್ ಸ್ಪಿನ್ ಮಾಡುವುದಲ್ಲದೆ ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಹೋಲ್ಫೋರ್ಡ್ ವೆಸ್ಟ್ ಇಂಡೀಸ್ ಪರ 1966 ರಿಂದ 1977 ರವರೆಗೆ 24 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 51 ವಿಕೆಟ್‌ಗಳನ್ನು ಗಳಿಸುವುದರ ಜೊತೆಗೆ 768 ರನ್ ಗಳಿಸಿದ್ದಾರೆ. 1975 ರಲ್ಲಿ ಭಾರತದ ವಿರುದ್ಧ ಆಡಿದ ಬಾರ್ಬಡೋಸ್ ಟೆಸ್ಟ್ನಲ್ಲಿ ಹೋಲ್ಫೋರ್ಡ್ರವರು ತಮ್ಮ ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು.
ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸುವುದರ ಹೊರತಾಗಿ, ಅವರು 1970 ರ ದಶಕದಲ್ಲಿ ಬಾರ್ಬಡೋಸ್ ತಂಡಕ್ಕೆ ನಾಯಕತ್ವ ವಹಿಸಿದ್ದರು ಮತ್ತು 5 ಶೆಲ್ ಶೀಲ್ಡ್ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇದಲ್ಲದೆ, ಅವರು ಟ್ರಿನಿಡಾಡ್ ಮತ್ತು ಟೊಬಾಗೋ ತಂಡಗಳ ನಾಯಕತ್ವವನ್ನು ಸಹ ವಹಿಸಿಕೊಂಡಿದ್ದರು. ಶೀಲ್ಡ್ ಪಂದ್ಯಾವಳಿಯಲ್ಲಿ 1000 ರನ್ ಮತ್ತು 100 ವಿಕೆಟ್ ಪಡೆದ ಮೊದಲ ಕ್ರಿಕೆಟಿಗ ಹೋಲ್ಫೋರ್ಡ್.
ಹೋಲ್ಫೋರ್ಡ್ ಅನೇಕ ಸ್ಮರಣೀಯ ಇನ್ನಿಂಗ್ಸ್‌ಗಳು ಹೋಲ್ಫೋರ್ಡ್ ಅವರು 1966 ರಲ್ಲಿ ಇಂಗ್ಲೆಂಡ್‌ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಆಲ್ ರೌಂಡರ್ ಆಗಿ ಬ್ಯಾಟ್‌ನೊಂದಿಗೆ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದರು. ಅಲ್ಲಿ ಅವರು ಗ್ಯಾರಿ ಸೋಬರ್ಸ್ ಅವರೊಂದಿಗೆ 127 ರನ್ ಜೊತೆಯಾಟವನ್ನು ಹಂಚಿಕೊಂಡಿದ್ದರು. ಇದಾದ ಬಳಿಕ ಲಾರ್ಡ್ಸ್ನಲ್ಲಿ ನಡೆದ ಮುಂದಿನ ಟೆಸ್ಟ್ನಲ್ಲಿ 105 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಆ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್‌ನ 5 ವಿಕೆಟ್‌ಗಳು ಕೇವಲ 95 ರನ್‌ಗಳಿಗೆ ಪತನಗೊಂಡಿದ್ದವು. ಇದರ ನಂತರ, ಅವರ ಶತಕದ ಇನಿಂಗ್ಸ್ ಜೊತೆಗೆ ಸೋಬರ್ಸ್‌ನೊಂದಿಗೆ 260 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಆ ಸರಣಿಯನ್ನು ವೆಸ್ಟ್ ಇಂಡೀಸ್ 3-1 ಅಂತರದಲ್ಲಿ ಗೆದ್ದುಕೊಂಡಿತು.
ಭಾರತದ ವಿರುದ್ಧ 23 ರನ್‌ಗಳಿಗೆ 5 ವಿಕೆಟ್ ಹೋಲ್ಫೋರ್ಡ್ ಅವರು 1975 ರಲ್ಲಿ ಬಾರ್ಬಡೋಸ್ ಟೆಸ್ಟ್ನಲ್ಲಿ ಭಾರತದ ವಿರುದ್ಧ 23 ರನ್ ನೀಡಿ 5 ವಿಕೆಟ್ ಪಡೆದಿದ್ದರು, ಇದು ಅವರ ಜೀವನದ ಅತ್ಯುತ್ತಮ ಪ್ರದರ್ಶನವಾಗಿದೆ. ಅವರ ಅದ್ಭುತ ಪ್ರದರ್ಶನದ ಆಧಾರದ ಮೇಲೆ, ವೆಸ್ಟ್ ಇಂಡೀಸ್ ಭಾರತವನ್ನು ಇನ್ನಿಂಗ್ಸ್ ಮತ್ತು 97 ರನ್ಗಳಿಂದ ಸೋಲಿಸಿತು.
ಚಂದ್ರಪಾಲ್ ಪ್ರತಿಭೆ ಗುರುತಿಸಿದ್ದ ಹೋಲ್ಫೋರ್ಡ್ ವೆಸ್ಟ್ ಇಂಡೀಸ್‌ಗಾಗಿ ಕ್ರಿಕೆಟ್ ಆಡುವುದರ ಹೊರತಾಗಿ, ಅವರು ನಂತರ ಅದರ ಆಯ್ಕೆ ಸಮಿತಿಯ ಅಧ್ಯಕ್ಷರಾದರು. ವಿಂಡೀಸ್ ಕ್ರಿಕೆಟ್‌ನ ಅಧ್ಯಕ್ಷರಾಗಿ ಅವರ ದೊಡ್ಡ ಆವಿಷ್ಕಾರವೆಂದರೆ ಶಿವನಾರಾಯಣ್ ಚಂದ್ರಪಾಲ್. ಅವರು ಚಂದ್ರಪಾಲ್ ಅವರ ಪ್ರತಿಭೆಯನ್ನು ಗುರುತಿಸಿ ವಿಂಡೀಸ್ ತಂಡಕ್ಕೆ ಕರೆತಂದಿದ್ದರು. ಕ್ರಿಕೆಟ್ ವೆಸ್ಟ್ ಇಂಡೀಸ್ ಅಧ್ಯಕ್ಷ ರಿಕಿ ಸ್ಕರ್ಟ್, ಹೋಲ್ಫೋರ್ಡ್ ಅವರ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದು, ಕ್ರಿಕೆಟ್ ವೆಸ್ಟ್ ಇಂಡೀಸ್‌ಗೆ ಹಾಲ್ಫೋರ್ಡ್ ನೀಡಿದ ಕೊಡುಗೆಗಾಗಿ ಅವರು ಯಾವಾಗಲೂ ಸ್ಮರಣೀಯರಾಗಿದ್ದಾರೆ ಎಂದು ಹೇಳಿದ್ದಾರೆ.