AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SMAT 2024: ಹರಾಜಿನಲ್ಲಿ ಕಡೆಗಣಿಸಿದ ಆರ್​ಸಿಬಿ; 5 ವಿಕೆಟ್ ಉರುಳಿಸಿ ಟಕ್ಕರ್ ನೀಡಿದ ಕನ್ನಡಿಗ

SMAT 2024: ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿಕರ್ನಾಟಕ ತಂಡ ಸಿಕ್ಕಿಂ ವಿರುದ್ಧ ಅದ್ಭುತ ಗೆಲುವು ಸಾಧಿಸಿದೆ. ಕೇವಲ 6 ಓವರ್‌ಗಳಲ್ಲಿ ಪಂದ್ಯ ಗೆದ್ದ ಕರ್ನಾಟಕ ಪರ ಬೌಲಿಂಗ್​ನಲ್ಲಿ ಮ್ಯಾಜಿಕ್ ಮಾಡಿದ ಶ್ರೇಯಸ್ ಗೋಪಾಲ್ 5 ವಿಕೆಟ್​ಗಳ ಗೊಂಚಲು ಪಡೆದರು. ಐಪಿಎಲ್‌ ಹರಾಜಿನಲ್ಲಿ ಕಡೆಗಣಿಸಿದ ಆರ್‌ಸಿಬಿಗೆ ಶ್ರೇಯಸ್ ಗೋಪಾಲ್ ತಕ್ಕ ಉತ್ತರ ನೀಡಿದ್ದಾರೆ.

SMAT 2024: ಹರಾಜಿನಲ್ಲಿ ಕಡೆಗಣಿಸಿದ ಆರ್​ಸಿಬಿ; 5 ವಿಕೆಟ್ ಉರುಳಿಸಿ ಟಕ್ಕರ್ ನೀಡಿದ ಕನ್ನಡಿಗ
ಶ್ರೇಯಸ್ ಗೋಪಾಲ್
ಪೃಥ್ವಿಶಂಕರ
|

Updated on:Nov 29, 2024 | 10:01 PM

Share

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಇಂದು ಕರ್ನಾಟಕ ಹಾಗೂ ಸಿಕ್ಕಿಂ ನಡುವೆ ಪಂದ್ಯ ನಡೆಯಿತು. ಈ ಪಂದ್ಯವನ್ನು ಕರ್ನಾಟಕ ತಂಡ ಕೇವಲ 6 ಓವರ್​ಗಳಲ್ಲಿ ಗೆದ್ದುಕೊಳ್ಳುವ ಮೂಲಕ ಟೂರ್ನಿಯಲ್ಲಿ ಅಮೋಘ ಜಯ ಸಾಧಿಸಿದೆ. ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಕ್ಕಿಂ ತಂಡ ಪೂರ್ಣ 20 ಓವರ್​ಗಳನ್ನು ಆಡಲು ಸಾಧ್ಯವಾಗದೆ ಕೇವಲ 18.2 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 82 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 2 ವಿಕೆಟ್ ಕಳೆದುಕೊಂಡು 5.4 ಓವರ್​ಗಳಲ್ಲಿ ಗೆಲುವಿನ ದಡ ಮುಟ್ಟಿತು.

5 ವಿಕೆಟ್ ಪಡೆದ ಶ್ರೇಯಸ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸಿಕ್ಕಿಂ ತಂಡ ಶ್ರೇಯಸ್ ಗೋಪಾಲ್ ಸ್ಪಿನ್ ದಾಳಿಯ ಮುಂದೆ ಸಂಪೂರ್ಣವಾಗಿ ಶರಣಾಯಿತು. ಸಿಕ್ಕಿಂ ತಂಡದ ಆಶೀಸ್ ತಾಪ ಗರಿಷ್ಠ 18 ರನ್​ಗಳ ಇನ್ನಿಂಗ್ಸ್ ಆಡಿದರೆ, ಪ್ರಾಣೇಶ್ ಲಲಿತ್ ಚೆಟ್ರಿ 17 ರನ್​ಗಳ ಕಾಣಿಕೆ ನೀಡಿದರು. ತಂಡದ ಮೂವರು ಬ್ಯಾಟರ್ಸ್​ಗಳು ಶೂನ್ಯ ಸಾಧನೆ ಮಾಡಿದರೆ, ಮೂವರು ಆಟಗಾರರಿ ಕೇವಲ 1 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರು. ಇತ್ತ ಕರ್ನಾಟಕದ ಪರ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಗರಿಷ್ಠ 5 ವಿಕೆಟ್ ಪಡೆದರೆ, ವಿದ್ಯಾಧರ ಪಾಟೀಲ 3ಹಾಗೂ ವೈಶಾಕ್ ವಿಜಯ್​ಕುಮಾರ್ 2 ವಿಕೆಟ್ ಪಡೆದರು.

ಆರ್​ಸಿಬಿಗೆ ಸುಲಭ ಜಯ

ಈ ಅಲ್ಪ ರನ್​ಗಳ ಗುರಿ ಬೆನ್ನಟ್ಟಿದ ಕರ್ನಾಟಕದ ಪರ ಆರಂಭಿಕ ಮನೀಶ್ ಪಾಂಡೆ ಕೇವಲ 13 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್​ಗಳ ಸಹಿತ ಅಜೇಯ 30 ರನ್ ಬಾರಿಸಿದರೆ, ಶ್ರೀಜಿತ್ 13 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್​ಗಳ ಸಹಿತ 37 ರನ್ ಬಾರಿಸಿದರು. 4ನೇ ಕ್ರಮಾಂಕದಲ್ಲಿ ಬಂದ ಸ್ಮರಣ್ 7 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 19 ರನ್ ಸಿಡಿಸಿ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.

ಆರ್​​ಸಿಬಿಗೆ ತಕ್ಕ ಉತ್ತರ ನೀಡಿದ ಶ್ರೇಯಸ್

ದೇಶಿಯ ಕ್ರಿಕೆಟ್‌ನಿಂದ ಐಪಿಎಲ್‌ವರೆಗೆ ಹಲವು ಬಾರಿ ತಮ್ಮ ಲೆಗ್ ಬ್ರೇಕ್ ಮತ್ತು ಗೂಗ್ಲಿ ಕೌಶಲ್ಯವನ್ನು ತೋರಿಸಿರುವ ಗೋಪಾಲ್ ಈ ಬಾರಿಯೂ ನಿರಾಸೆಗೊಳಿಸಲಿಲ್ಲ. ಅರ್ಧ ಸಿಕ್ಕಿಂ ತಂಡವನ್ನು ಪೆವಿಲಿಯನ್​ಗಟ್ಟಿದ ಗೋಪಾಲ್ 4 ಓವರ್​ಗಳಲ್ಲಿ ಕೇವಲ 13 ರನ್ ನೀಡಿ 5 ವಿಕೆಟ್ ಪಡೆದರು. ಇಲ್ಲಿ ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ಶ್ರೇಯಸ್ ಬೌಲ್ ಮಾಡಿದ 24 ಎಸೆತಗಳಲ್ಲಿ 13 ಎಸೆತಗಳಲ್ಲಿ ಯಾವುದೇ ರನ್ ನೀಡಲಿಲ್ಲ. ಈ ಅದ್ಭುತ ಪ್ರದರ್ಶನದ ಮೂಲಕ ಶ್ರೇಯಸ್, ಐಪಿಎಲ್ ಹರಾಜಿನಲ್ಲಿ ತನ್ನನ್ನು ಕಡೆಗಣಿಸಿದ ಆರ್​ಸಿಬಿಗೆ ತಕ್ಕ ಉತ್ತರ ನೀಡಿದ್ದಾರೆ.

ವಾಸ್ತವವಾಗಿ ಐಪಿಎಲ್ ಹರಾಜಿನಲ್ಲಿ ಆರ್​ಸಿಬಿ ಫ್ರಾಂಚೈಸಿ ಕರ್ನಾಟಕದ ಹಲವು ಆಟಗಾರರನ್ನು ಖರೀದಿಸುವ ಮನಸು ಮಾಡಲಿಲ್ಲ. ಅದರಲ್ಲಿ ಶ್ರೇಯಸ್ ಕೂಡ ಒಬ್ಬರು. ಅಂತಿಮವಾಗಿ ಶ್ರೇಯಸ್​ರನ್ನು ಚೆನ್ನೈ ಸೂಪರ್​ಕಿಂಗ್ಸ್ ಫ್ರಾಂಚೈಸಿ 30 ಲಕ್ಷ ಮೂಲ ಬೆಲೆಗೆ ಖರೀದಿಸಿತು. ಇದೀಗ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಶ್ರೇಯಸ್​ಗೆ ಸಿಎಸ್​ಕೆ ಪ್ಲೇಯಿಂಗ್​ 11 ನಲ್ಲಿ ಆಡುವ ಅವಕಾಶ ಸಿಗಲಿ ಎಂಬುದು ಕನ್ನಡಿಗರ ಆಶಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:00 pm, Fri, 29 November 24

ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?