AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KKR vs LSG Highlights IPL 2023: ರಿಂಕು ಏಕಾಂಗಿ ಹೋರಾಟ ವ್ಯರ್ಥ; 1 ರನ್​ನಿಂದ ಗೆದ್ದ ಲಕ್ನೋ

Kolkata Knight Riders vs Lucknow Super Giants IPL 2023 Live Score in Kannada: ಕೋಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ನಡೆಯುತ್ತಿರುವ ದ್ವಿತೀಯ ಪಂದ್ಯದಲ್ಲಿ ನಿತೀಶ್ ರಾಣ ಅವರ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಕೃನಾಲ್ ಪಾಂಡ್ಯ ಅವರ ಲಖನೌ ಸೂಪರ್ ಜೇಂಟ್ಸ್ ಮುಖಾಮುಖಿ ಆಗಿದೆ.

KKR vs LSG Highlights IPL 2023: ರಿಂಕು ಏಕಾಂಗಿ ಹೋರಾಟ ವ್ಯರ್ಥ; 1 ರನ್​ನಿಂದ ಗೆದ್ದ ಲಕ್ನೋ
ಕೋಲ್ಕತ್ತಾ- ಲಕ್ನೋ ಮುಖಾಮುಖಿ
ಪೃಥ್ವಿಶಂಕರ
|

Updated on:May 20, 2023 | 11:33 PM

Share

ಕೋಲ್ಕತ್ತಾ ನೈಟ್ ರೈಡರ್ಸ್ ಈ ಬಾರಿ ಐಪಿಎಲ್‌ನಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಕೊನೆಯ ಎಸೆತದವರೆಗೂ ರೋಚಕತೆ ಸೃಷ್ಟಿಸಿದ ಈ ಪಂದ್ಯದಲ್ಲಿ ಕೊನೆಗೂ ಲಕ್ನೋ ತಂಡ 1 ರನ್​ಗಳಿಂದ ರೋಚಕ ಗೆಲುವು ಸಾಧಿಸಿ ಪ್ಲೇ ಆಫ್​ಗೆ ಟಿಕೆಟ್ ಖಚಿತಪಡಿಸಿಕೊಂಡಿತು. ಕೆಕೆಆರ್ ಪರ ಏಕಾಂಗಿ ಹೋರಾಟ ನಡೆಸಿದ ರಿಂಕು ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಪೂರನ್ ಅವರ ಅರ್ಧಶತಕದ ನೆರವಿನಿಂದ 176 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್ ಪರ ರಿಂಕು ಅರ್ಧಶತಕದ ಏಕಾಂಗಿ ಹೋರಾಟ ನಡೆಸಿತ್ತಾದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಇದೀಗ ಕೊನೆಯ ಪಂದ್ಯ ಗೆದ್ದ ಲಕ್ನೋ ಪಾಯಿಂಟ್​ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.

LIVE NEWS & UPDATES

The liveblog has ended.
  • 20 May 2023 11:28 PM (IST)

    ರಿಂಕು ಏಕಾಂಗಿ ಹೋರಾಟ ವ್ಯರ್ಥ

    20ನೇ ಓವರ್​ನಲ್ಲಿ 19 ರನ್ ಬಂದವು

    ಈ ಓವರ್​ನಲ್ಲಿ ರಿಂಕು 2 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರಾದರೂ ಕೆಕೆಆರ್​ಗೆ ಗೆಲುವು ಸಿಗಲಿಲ್ಲ

    ಇನ್ನು 1 ರನ್​ಗಳಿಂದ ಗೆದ್ದ ಲಕ್ನೋ ಪ್ಲೇ ಆಫ್​ಗೆ ಟಿಕೆಟ್ ಖಚಿತ ಪಡಿಸಿಕೊಂಡಿದೆ.

  • 20 May 2023 11:20 PM (IST)

    ರಿಂಕು ಅರ್ಧಶತಕ

    19ನೇ ಓವರ್​ನ ಐದನೇ ಎಸೆತದಲ್ಲಿ ರಿಂಕು ಸಿಂಗ್ ಸಿಕ್ಸರ್ ಬಾರಿಸಿ ಅರ್ಧಶತಕ ಪೂರೈಸಿದರು.

  • 20 May 2023 11:20 PM (IST)

    ನರೈನ್ ಔಟ್

    18ನೇ ಓವರ್‌ನ ಕೊನೆಯ ಎಸೆತದಲ್ಲಿ ಕೋಲ್ಕತ್ತಾಗೆ ಏಳನೇ ಹೊಡೆತ ಬಿದ್ದಿತು. ಸುನಿಲ್ ನರೈನ್ ರನೌಟ್ ಆದರು.

  • 20 May 2023 11:20 PM (IST)

    ಠಾಕೂರ್ ಔಟ್

    18ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಶಾರ್ದೂಲ್ ಠಾಕೂರ್ ಅವರನ್ನು ಔಟ್ ಮಾಡುವ ಮೂಲಕ ಯಶ್ ಠಾಕೂರ್ ಕೋಲ್ಕತ್ತಾಗೆ ಆರನೇ ಹೊಡೆತ ನೀಡಿದರು. ಶಾರ್ದೂಲ್ ಠಾಕೂರ್ ಡೀಪ್ ಸ್ಕ್ವೇರ್ ಲೆಗ್​ನಲ್ಲಿ ಪ್ರೇರಕ್ ಮಂಕಡ್​ಗೆ ಕ್ಯಾಚ್ ನೀಡಿದರು.

    ಶಾರ್ದೂಲ್ ಠಾಕೂರ್ – 3 ರನ್, 7 ಎಸೆತಗಳು

  • 20 May 2023 10:56 PM (IST)

    ರಸೆಲ್ ಔಟ್

    16ನೇ ಓವರ್​ನ 3ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ರಸೆಲ್, ಮುಂದಿನ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.

    ಇದರೊಂದಿಗೆ ಕೆಕೆಆರ್ 5ನೇ ವಿಕೆಟ್ ಕಳೆದುಕೊಂಡಿತು.

    16 ಓವರ್ ಅಂತ್ಯಕ್ಕೆ 120/5

  • 20 May 2023 10:54 PM (IST)

    15 ಓವರ್ ಅಂತ್ಯ

    15ನೇ ಓವರ್​ನಲ್ಲಿ 6 ರನ್ ಬಂದವು

    ಓವರ್​ನ 6ನೇ ಎಸೆತದಲ್ಲಿ ರಿಂಕು ಡೀಪ್ ಪಾಯಿಂಟ್​ನಲ್ಲಿ ಬೌಂಡರಿ ಬಾರಿಸಿದರು.

    15 ಓವರ್ ಅಂತ್ಯಕ್ಕೆ 114/4

  • 20 May 2023 10:40 PM (IST)

    4ನೇ ವಿಕೆಟ್ ಪತನ

    ಕೆಕೆಆರ್ 4ನೇ ವಿಕೆಟ್ ಕಳೆದುಕೊಂಡಿದೆ.

    14ನೇ ಓವರ್​ನ 4ನೇ ಎಸೆತದಲ್ಲಿ ಗುರ್ಬಾಜ್ ಕ್ಯಾಚಿತ್ತು ಔಟಾದರು.

    ಗುರ್ಬಾಜ್ 10 (15)

    ಕೆಕೆಆರ್ 108/4

  • 20 May 2023 10:39 PM (IST)

    ರಿಂಕು ಬೌಂಡರಿ

    12ನೇ ಓವರ್​ನ 2ನೇ ಎಸೆತವನ್ನು ರಿಂಕು ಲಾಂಗ್​ ಆಫ್​ನಲ್ಲಿ ಬೌಂಡರಿಗಟ್ಟಿದರು.

    ಇದರೊಂದಿಗೆ ಕೆಕೆಆರ್ ಶತಕ ಕೂಡ ಪೂರೈಸಿತು.

    12 ಓವರ್ ಅಂತ್ಯಕ್ಕೆ ಕೆಕೆಆರ್ 103/3

  • 20 May 2023 10:25 PM (IST)

    ರಾಯ್ ಔಟ್

    ಕೆಕೆಆರ್ 3ನೇ ವಿಕೆಟ್ ಪತನವಾಗಿದೆ

    ಕೃನಾಲ್ ಬೌಲ್ ಮಾಡಿದ 10ನೇ ಓವರ್​ನ ಕೊನೆಯ ಎಸೆತದಲ್ಲಿ ರಾಯ್ ಕ್ಲೀನ್ ಬೌಲ್ಡ್ ಆದರು.

    ರಾಯ್ 45 (28)

  • 20 May 2023 10:17 PM (IST)

    ರಾಣಾ ಔಟ್

    ಕೆಕೆಆರ್ 2ನೇ ವಿಕೆಟ್ ಪತನವಾಗಿದೆ.

    ಬಿಷ್ಣೋಯಿ ಬೌಲ್ ಮಾಡಿದ 8ನೇ ಓವರ್​ನ 2ನೇ ಎಸೆತದಲ್ಲಿ ರಾಣಾ ಕ್ಯಾಚಿತ್ತು ಔಟಾದರು.

    ಕೆಕೆಆರ್ 78/2

  • 20 May 2023 10:11 PM (IST)

    ರಾಣಾ ಫೋರ್

    ಕೃನಾಲ್ ಬೌಲ್ ಮಾಡಿದ 7ನೇ ಓವರ್​ನ 5ನೇ ಎಸೆತವನ್ನು ರಾಣಾ ಫೈನ್​ ಲೆಗ್​ ಮೇಲೆ ಬೌಂಡರಿ ಬಾರಿಸಿದರು.

    7 ಓವರ್ ಅಂತ್ಯಕ್ಕೆ 69/1

  • 20 May 2023 10:04 PM (IST)

    ವೆಂಕಿ ಔಟ್, ಪವರ್ ಪ್ಲೇ ಅಂತ್ಯ

    ಕೆಕೆಆರ್ ಮೊದಲ ವಿಕೆಟ್ ಪತನವಾಗಿದೆ.

    6ನೇ ಓವರ್​ನ 5ನೇ ಎಸೆತದಲ್ಲಿ ವೆಂಕಿ ರವಿಗೆ ಕ್ಯಾಚಿತ್ತು ಔಟಾದರು.

    ಇದರೊಂದಿಗೆ ಕೆಕೆಆರ್​ನ ಪವರ್​ ಪ್ಲೇ ಕೂಡ ಮುಗಿದಿದೆ.

  • 20 May 2023 10:03 PM (IST)

    5ನೇ ಓವರ್​ನಲ್ಲಿ 3 ಬೌಂಡರಿ

    ಕೃನಾಲ್ ಬೌಲ್ ಮಾಡಿದ 5ನೇ ಓವರ್​ನಲ್ಲಿ 3 ಬೌಂಡರಿ ಬಂದವು

    ಈ ಮೂರು ಬೌಂಡರಿಗಳನ್ನು ರಾಯ್ ಬಾರಿಸಿದರು

    5 ಓವರ್ ಅಂತ್ಯಕ್ಕೆ 59/0

  • 20 May 2023 09:45 PM (IST)

    ರಾಯ್ ಅಬ್ಬರ

    2ನೇ ಓವರ್​ನಲ್ಲೂ ಬೌಂಡರಿ ಮಳೆಗರೆಯಿತು

    ಓವರ್​ನ 2,3,4 ನೇ ಎಸೆತದಲ್ಲಿ ರಾಯ್ 1 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿದರು.

    ಕೆಕೆಆರ್ 30/0

  • 20 May 2023 09:39 PM (IST)

    ವೆಂಕಿ ಸಿಕ್ಸ್

    ಮೊದಲ ಓವರ್​ನಲ್ಲೇ ವೆಂಕಿ ಅಬ್ಬರ ಶುರುವಾಗಿದೆ.

    ಮೌಹ್ಸಿನ್ ಎಸೆದ ಮೊದಲ ಓವರ್​ನಲ್ಲಿ 2 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ ಬಂತು

    ಕೆಕೆಆರ್ 15/0

  • 20 May 2023 09:20 PM (IST)

    ಕೆಕೆಆರ್​ಗೆ 177 ರನ್ ಟಾರ್ಗೆಟ್

    ರಸೆಲ್ ಬೌಲ್ ಮಾಡಿದ 20ನೇ ಓವರ್​ನಲ್ಲಿ 13 ರನ್ ಬಂದವು

    ಈ ಓವರ್​ನ ಕೊನೆಯ ಎರಡು ಎಸೆತಗಳಲ್ಲಿ ಗೌತಮ್ 1 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರು.

    ಇದರೊಂದಿಗೆ ಲಕ್ನೋ 176 ರನ್ ಟಾರ್ಗೆಟ್ ಸೆಟ್ ಮಾಡಿದೆ.

  • 20 May 2023 09:13 PM (IST)

    8ನೇ ವಿಕೆಟ್ ಪತನ

    ಪೂರನ್ ವಿಕೆಟ್ ಬಳಿಕ ಬಂದಿದ್ದ ಬಿಷ್ಣೋಯಿ ಕೂಡ 19ನೇ ಓವರ್​ನ 5ನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.

    ಲಕ್ನೋ 162/8

  • 20 May 2023 09:10 PM (IST)

    7ನೇ ವಿಕೆಟ್ ಪತನ

    19ನೇ ಓವರ್​ನ ಮೊದಲ ಎರಡು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ ಪೂರನ್ 3ನೇ ಎಸೆತವನ್ನು ಸಿಕ್ಸರ್​ಗಟ್ಟುವ ಯತ್ನದಲ್ಲಿ ಕ್ಯಾಚಿತ್ತು ಔಟಾದರು.

    ಲಕ್ನೋ 159/7

  • 20 May 2023 09:09 PM (IST)

    ಪೂರನ್ ಅರ್ಧಶತಕ

    19ನೇ ಓವರ್​ನ ಮೊದಲ ಎಸೆತವನ್ನು ಸಿಕ್ಸರ್​ಗಟ್ಟಿದ ಪೂರನ್ ತಮ್ಮ ಅರ್ಧಶತಕ ಪೂರೈಸಿದರು.

  • 20 May 2023 09:07 PM (IST)

    ಬದೋನಿ ಔಟ್

    18ನೇ ಓವರ್​ನ 4 ಮತ್ತು 5ನೇ ಎಸೆತವನ್ನು ಬೌಂಡರಿಗಟ್ಟಿದ ಬದೋನಿ, ಕೊನೆಯ ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿ ಕ್ಯಾಚಿತ್ತು ಔಟಾದರು.

    ಲಕ್ನೋ 147/6

  • 20 May 2023 09:06 PM (IST)

    ಬದೋನಿ ಸಿಕ್ಸ್

    18ನೇ ಓವರ್​ನ 4ನೇ ಎಸೆತವನ್ನು ಬೌಂಡರಿಗಟ್ಟಿದ ಬದೋನಿ 5ನೇ ಎಸೆತವನ್ನು ಸಿಕ್ಸರ್​ಗಟ್ಟಿದರು.

  • 20 May 2023 09:02 PM (IST)

    ಪೂರನ್ ಫೋರ್

    17ನೇ ಓವರ್​ನಲ್ಲಿ 11 ರನ್ ಬಂದವು

    ಈ ಓವರ್​ನ 5ನೇ ಎಸೆತವನ್ನು ಪೂರನ್ ಬೌಂಡರಿಗಟ್ಟಿದರು.

    17 ಓವರ್ ಅಂತ್ಯಕ್ಕೆ ಲಕ್ನೋ 133/5

  • 20 May 2023 08:53 PM (IST)

    15 ಓವರ್ ಅಂತ್ಯ

    15ನೇ ಓವರ್​ನಲ್ಲಿ 12 ರನ್ ಬಂದವು

    ಈ ಓವರ್​ನ ಮೊದಲ ಮತ್ತು ಕೊನೆಯ ಎಸೆತದಲ್ಲಿ ಪೂರನ್ ಬೌಂಡರಿ ಬಾರಿಸಿದರು.

    15 ಓವರ್ ಅಂತ್ಯಕ್ಕೆ 119/5

  • 20 May 2023 08:40 PM (IST)

    13 ಓವರ್ ಅಂತ್ಯ

    ವರುಣ್ ಬೌಲ್ ಮಾಡಿದ 13ನೇ ಓವರ್​ನ ಮೊದಲ ಎಸೆತವನ್ನು ಪೂರನ್ ಸಿಕ್ಸರ್​ಗಟ್ಟಿದರು.

    ಅಲ್ಲದೆ ಇದೇ ಓವರ್​ನಲ್ಲಿ ಲಕ್ನೋ ಶತಕ ಕೂಡ ಪೂರೈಸಿತು.

    13 ಓವರ್ ಅಂತ್ಯಕ್ಕೆ ಲಕ್ನೋ 100/5

  • 20 May 2023 08:38 PM (IST)

    ಪೂರನ್ ಅಬ್ಬರ

    ಡಿ ಕಾಕ್ ವಿಕೆಟ್ ಬಳಿಕ ಬಂದ ಪೂರನ್ 11ನೇ ಓವರ್​ನಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು.

  • 20 May 2023 08:36 PM (IST)

    ಡಿ ಕಾಕ್ ಔಟ್

    ಲಕ್ನೋದ ಸ್ಥಿತಿ ಹದಗೆಟ್ಟಿದೆ. ಕ್ವಿಂಟನ್ ಡಿಕಾಕ್ ರೂಪದಲ್ಲಿ ಐದನೇ ವಿಕೆಟ್ ಕಳೆದುಕೊಂಡಿದೆ.

    11ನೇ ಓವರ್‌ನ ಮೊದಲ ಎಸೆತದಲ್ಲಿ ವರುಣ್ ಚಕ್ರವರ್ತಿ ಬೌಲಿಂಗ್​​ನಲ್ಲಿ ಆಂಡ್ರೆ ರಸೆಲ್​ಗೆ ಕ್ಯಾಚಿತ್ತು ಡಿ ಕಾಕ್ ಔಟಾದರು.

    ಕ್ವಿಂಟನ್ ಡಿಕಾಕ್ – 28 ರನ್, 27 ಎಸೆತಗಳು 2×6

  • 20 May 2023 08:24 PM (IST)

    ನಾಯಕ ಕೃನಾಲ್ ಔಟ್

    ಲಕ್ನೋ 4ನೇ ವಿಕೆಟ್ ಪತನವಾಗಿದೆ.

    ನರೈನ್ ಬೌಲ್ ಮಾಡಿದ 10ನೇ ಓವರ್​ 4ನೇ ಎಸೆತದಲ್ಲಿ ಕೃನಾಲ್ ಕ್ಯಾಚಿತ್ತು ಔಟಾದರು.

    ಕೃನಾಲ್ 9 (8)

    ಕೆಕೆಆರ್ 74/4

  • 20 May 2023 08:20 PM (IST)

    9 ಓವರ್ ಅಂತ್ಯ

    ಪ್ರಮುಖ 3 ವಿಕೆಟ್ ಕಳೆದುಕೊಂಡಿರುವ ಲಕ್ನೋ 9 ಓವರ್ ಮುಕ್ತಾಯಕ್ಕೆ 69 ರನ್ ಗಳಿಸಿದೆ.

    ಶಾರ್ದೂಲ್ ಬೌಲ್ ಮಾಡಿದ ಈ ಓವರ್​ನಲ್ಲಿ 11 ರನ್ ಬಂದವು

    ಈ ಓವರ್​ನ 3ನೇ ಎಸೆತವನ್ನು ಕೃನಾಲ್ ಲಾಂಗ್​ ಆಫ್​ನಲ್ಲಿ ಸಿಕ್ಸರ್​ಗಟ್ಟಿದರು.

  • 20 May 2023 08:17 PM (IST)

    ಸ್ಟೊಯಿನಿಸ್ ಔಟ್

    ಲಕ್ನೋಗೆ ದೊಡ್ಡ ಹೊಡೆತ ಬಿದ್ದಿದೆ. ಮಾರ್ಕಸ್ ಸ್ಟೊಯಿನಿಸ್ ಔಟಾಗಿದ್ದಾರೆ.

    ಏಳನೇ ಓವರ್‌ನ ಐದನೇ ಎಸೆತದಲ್ಲಿ ಅರೋರಾ ಅವರಿಗೆ ಕ್ಯಾಚ್ ನೀಡಿದರು.

    ಸ್ಟೊಯಿನಿಸ್‌ಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ.

  • 20 May 2023 08:13 PM (IST)

    ಎರಡನೇ ವಿಕೆಟ್ ಪತನ

    ಏಳನೇ ಓವರ್‌ನ ಮೂರನೇ ಎಸೆತದಲ್ಲಿ ಪ್ರೇರಕ್ ಮಂಕಡ್ ಔಟಾದರು.

    ಇದರೊಂದಿಗೆ ಕೋಲ್ಕತ್ತಾ ಎರಡನೇ ವಿಕೆಟ್ ಕಳೆದುಕೊಂಡಿದೆ.

    ವೈಭವ್ ಅರೋರಾ ಎಸೆತದಲ್ಲಿ ಹರ್ಷಿತ್ ಕ್ಯಾಚ್ ಹಿಡಿದರು.

    ಪ್ರೇರಕ್ ಮಂಕಡ್: 26 ರನ್, 20 ಎಸೆತಗಳು 5×4

  • 20 May 2023 08:04 PM (IST)

    ಪವರ್ ಪ್ಲೇ ಅಂತ್ಯ

    ವರುಣ್ ಬೌಲ್ ಮಾಡಿದ 6ನೇ ಓವರ್​ನಲ್ಲೂ 2 ಬೌಂಡರಿ ಬಂದವು

    ಈ 2ಬೌಂಡರಿಗಳನ್ನು ಮಂಕಡ್ ಬಾರಿಸಿದರು.

    ಇದೇ ಓವರ್​ನಲ್ಲಿ ಲಕ್ನೋ ಅರ್ಧಶತಕ ಕೂಡ ಪೂರೈಸಿತು.

    6 ಓವರ್ ಅಂತ್ಯಕ್ಕೆ 54/1

  • 20 May 2023 08:02 PM (IST)

    ರಾಣಾ ದುಬಾರಿ

    5ನೇ ಓವರ್​ ಬೌಲ್ ಮಾಡಿದ ರಾಣಾ 12 ರನ್ ಬಿಟ್ಟುಕೊಟ್ಟರು.

    ಈ ಓವರ್​ನಲ್ಲಿ 3 ಬೌಂಡರಿ ಬಂದವು.

    ಲಕ್ನೋ 39/1

  • 20 May 2023 07:53 PM (IST)

    ಡಿ ಕಾಕ್ ಸಿಕ್ಸ್

    ಅರೋರಾ ಬೌಲ್ ಮಾಡಿದ 4ನೇ ಓವರ್​ನ ಕೊನೆಯ ಎಸೆತವನ್ನು ಡಿ ಕಾಕ್ ಫೈನ್​ ಲೆಗ್​ ಮೇಲೆ ಸಿಕ್ಸರ್​ಗಟ್ಟಿದರು.

    ಲಕ್ನೋ 27/1

  • 20 May 2023 07:45 PM (IST)

    ಮೊದಲ ವಿಕೆಟ್ ಪತನ

    ಲಕ್ನೋದ ಮೊದಲ ವಿಕೆಟ್ ಪತನ, ಕರಣ್ ಶರ್ಮಾ 3 ರನ್ ಗಳಿಸಿ ಔಟಾದರು.

    2.3 ಓವರ್‌ಗಳ ನಂತರ ಲಕ್ನೋ ಸ್ಕೋರ್ – 14/1.

    ಹರ್ಷಿತ್ ರಾಣಾ ಕೋಲ್ಕತ್ತಾಗೆ ಮೊದಲ ಯಶಸ್ಸನ್ನು ನೀಡಿದರು.

  • 20 May 2023 07:39 PM (IST)

    ಲಕ್ನೋ ಬ್ಯಾಟಿಂಗ್ ಆರಂಭ

    ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟಿಂಗ್ ಆರಂಭ, ಕರಣ್ ಶರ್ಮಾ ಮತ್ತು ಡಿ ಕಾಕ್ ಲಕ್ನೋ ಸೂಪರ್ ಜೈಂಟ್ಸ್‌ಗೆ ಓಪನಿಂಗ್ ಮಾಡಲು ಬಂದಿದ್ದಾರೆ. 1 ಓವರ್‌ನ ನಂತರ ಲಕ್ನೋ ಸ್ಕೋರ್ – 1/0

  • 20 May 2023 07:33 PM (IST)

    ಕೋಲ್ಕತ್ತಾ ನೈಟ್ ರೈಡರ್ಸ್

    ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಜೇಸನ್ ರಾಯ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ (ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ

  • 20 May 2023 07:32 PM (IST)

    ಲಕ್ನೋ ಸೂಪರ್ ಜೈಂಟ್ಸ್

    ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಕರಣ್ ಶರ್ಮಾ, ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಕೃನಾಲ್ ಪಾಂಡ್ಯ (ನಾಯಕ), ಆಯುಷ್ ಬದೋನಿ, ಕೃಷ್ಣಪ್ಪ ಗೌತಮ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಮೊಹ್ಸಿನ್ ಖಾನ್

  • 20 May 2023 07:15 PM (IST)

    ಪ್ಲೇ ಆಫ್​ಗೆ ಎಂಟ್ರಿಕೊಟ್ಟ ಚೆನ್ನೈ

    ಡೆಲ್ಲಿ ತಂಡವನ್ನು 78 ರನ್​ಗಳಿಂದ ಮಣಿಸಿದ ಚೆನ್ನೈ ಸುಲಭವಾಗಿ ಪ್ಲೇ ಆಫ್​ಗೆ ಎಂಟ್ರಿಕೊಟ್ಟಿದೆ. ಚೆನ್ನೈ ನೀಡಿದ 223 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ 20 ಓವರ್​ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 146 ರನ್​ಗಳಿಸಲಷ್ಟೇ ಶಕ್ತವಾಯಿತು.

  • 20 May 2023 07:02 PM (IST)

    ಲಕ್ನೋ ಮೊದಲು ಬ್ಯಾಟಿಂಗ್

    ಟಾಸ್ ಗೆದ್ದ ಕೆಕೆಆರ್ ನಾಯಕ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.

Published On - May 20,2023 7:01 PM