Suyash Sharma: ಒಂದೂ ಪಂದ್ಯವನ್ನಾಡಿರದ ಸುಯಶ್ ಶರ್ಮಾ ಯಾರು ಗೊತ್ತೇ?: ನೀರಜ್ ಚೋಪ್ರಾ ಎನ್ನುತ್ತಿದ್ದಾರೆ ಫ್ಯಾನ್ಸ್

|

Updated on: Apr 07, 2023 | 11:39 AM

KKR vs RCB, IPL 2023: ಆರ್​ಸಿಬಿ ವಿರುದ್ಧ ಕಣಕ್ಕಿಳಿಯುವ ಮೂಲಕ ಐಪಿಎಲ್ ಇತಿಹಾಸದಲ್ಲಿ ತನ್ನ ತನ್ನ ಚೊಚ್ಚಲ ಪಂದ್ಯವನ್ನು ಆಡಿದ ಸುಯಶ್ ಶರ್ಮಾ 4 ಓವರ್ ಬೌಲಿಂಗ್ ಮಾಡಿ 30 ರನ್ ನೀಡಿ 3 ಪ್ರಮುಖ ವಿಕೆಟ್ ಕಿತ್ತರು.

Suyash Sharma: ಒಂದೂ ಪಂದ್ಯವನ್ನಾಡಿರದ ಸುಯಶ್ ಶರ್ಮಾ ಯಾರು ಗೊತ್ತೇ?: ನೀರಜ್ ಚೋಪ್ರಾ ಎನ್ನುತ್ತಿದ್ದಾರೆ ಫ್ಯಾನ್ಸ್
suyash sharma and neeraj chopra
Follow us on

ಇಂಡಿಯನ್ ಪ್ರೀಮಿಯರ್ ಲೀಗ್ 2023 ರ (IPL 2023) ಒಂಬತ್ತನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ (KKR vs RCB) ತಂಡ ನೀಡಿದ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ. ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯ ಆರಂಭದಿಂದ ಒಂದು ಹಂತದ ವರೆಗೆ ಸಂಪೂರ್ಣವಾಗಿ ಆರ್​ಸಿಬಿ ಕೈವಶದಲ್ಲಿತ್ತು. ಕೆಕೆಆರ್ 11.3 ಓವರ್ ಆಗುವಾಗ 89 ರನ್​ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ನಂತರ ಫಿನಿಕ್ಸ್​ನಂತೆ ಎಂದು ಬಂದ ಕೋಲ್ಕತ್ತಾ 204 ರನ್ ಸಿಡಿಸಿತು. ಬೌಲಿಂಗ್​ನಲ್ಲೂ ಅದ್ಭುತ ಪ್ರದರ್ಶನ ತೋರಿತು. ಸುನಿಲ್ ನರೈನ್, ವರುಣ್ ಚಕ್ರವರ್ತಿ ಜೊತೆ ಹೊಸ ಪ್ರತಿಭೆ ಸುಯಶ್ ಶರ್ಮಾ (Suyash Sharma) ಕೂಡ ಮಿಂಚು ಹರಿಸಿದರು.

ತನ್ನ ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡಿದ ಸುಯಶ್ ಶರ್ಮಾ 4 ಓವರ್ ಬೌಲಿಂಗ್ ಮಾಡಿ 30 ರನ್ ನೀಡಿ 3 ಪ್ರಮುಖ ವಿಕೆಟ್ ಕಿತ್ತರು. ದಿನೇಶ್ ಕಾರ್ತಿಕ್, ಅನುಜ್ ರಾವತ್ ಹಾಗೂ ಕರ್ಣ್ ಶರ್ಮಾ ಅವರನ್ನು ಪೆವಿಲಿಯನ್​ಗೆ ಅಟ್ಟಿದರು. ವಿಶೇಷ ಎಂದರೆ, ಸುಯಶ್ ಈ ಪಂದ್ಯದಲ್ಲಿ ಕೆಕೆಆರ್ ಪ್ಲೇಯಿಂಗ್ ಇಲೆವೆನ್​ನಲ್ಲೇ ಇರಲಿಲ್ಲ. ಇವರು ವೆಂಕಟೇಶ್ ಅಯ್ಯರ್ ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದವರು. ಇನ್ನೊಂದು ಅಚ್ಚರಿ ಎಂದರೆ ಸುಯಶ್ ಈವರೆಗೆ ಲಿಸ್ಟ್ ಎ, ಪ್ರಥಮ ದರ್ಜೆ ಕ್ರಿಕೆಟ್ ಅಥವಾ ಒಂದೇ ಒಂದು ಟಿ20 ಪಂದ್ಯವನ್ನು ಆಡಿದವರಲ್ಲ.

ಇದನ್ನೂ ಓದಿ
IPL 2023 Points Table: ಪಾಯಿಂಟ್ ಟೇಬಲ್ ಅನ್ನು ತಲೆಕೆಳಗಾಗಿಸಿದ ಆರ್​ಸಿಬಿ ಸೋಲು-ಕೆಕೆಆರ್ ಗೆಲುವು
Faf Duplessis: ಹೀನಾಯ ಸೋಲಿನ ಬಳಿಕ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ದೂರಿದ್ದು ಯಾರನ್ನು ಗೊತ್ತೇ?
KKR vs RCB: ಭರ್ಜರಿ ಗೆಲುವಿನ ಬಳಿಕ ಹೀನಾಯ ಸೋಲು: 123 ರನ್​ಗೆ ಆಲೌಟ್ ಆದ ಆರ್​ಸಿಬಿ
IPL 2023: RCB ಅಭಿಮಾನಿಗಳಿಗೆ ಗುಡ್​ ನ್ಯೂಸ್: ಇಬ್ಬರು ಆಟಗಾರರ ಎಂಟ್ರಿಗೆ ಡೇಟ್ ಫಿಕ್ಸ್

19 ವರ್ಷ ಪ್ರಾಯದ ನೀಳ ಕೇಶದ ಮಿಸ್ಟ್ರಿ ಸ್ಪಿನ್ನರ್ ಸುಯಶ್ ಶರ್ಮಾ ಹೊಸದಿಲ್ಲಿಯವರು. ದೆಹಲಿಯ U-25 ತಂಡಕ್ಕಾಗಿ ಆಡುವ ಇವರು ಆರ್​ಸಿಬಿ ವಿರುದ್ಧ ನೀಡಿದ ಬೌಲಿಂಗ್‌ ಪ್ರದರ್ಶನ ಕೇವಲ ಕೆಕೆಆರ್‌ಗೆ ಮಾತ್ರವಲ್ಲ ಇಡೀ ಐಪಿಎಲ್‌ ಟೂರ್ನಿಯ ಎಲ್ಲಾ ತಂಡಗಳಿಗೂ ಅಚ್ಚರಿಯಾಗಿದೆ. ಕಳೆದ ವರ್ಷ ಡಿಸೆಂಬರ್‌ ತಿಂಗಳಲ್ಲಿ ನಡೆದಿದ್ದ ಮಿನಿ ಹರಾಜಿನಲ್ಲಿ ಇವರನ್ನು ಕೋಲ್ಕತಾ ಫ್ರಾಂಚೈಸಿ 20 ಲಕ್ಷ ರೂ. ಮೂಲ ಬೆಲೆಗೆ ಖರೀದಿಸಿತ್ತು. ಟೂರ್ನಿಗೂ ಮುನ್ನ ಕೆಕೆಆರ್‌ ಅಭ್ಯಾಸದಲ್ಲಿ ಯುವ ಸ್ಪಿನ್ನರ್‌, ತಮ್ಮ ವಿಶಿಷ್ಠ ಶೈಲಿಯ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಆರ್‌ಸಿಬಿ ವಿರುದ್ಧ ಆಡಲು ಅವಕಾಶ ಪಡೆದುಕೊಂಡಿದ್ದರು.

IPL 2023: KKR vs RCB ಪಂದ್ಯದ ವೇಳೆ ಮಗಳೊಂದಿಗೆ ಶಾರೂಖ್ ಖಾನ್ ಮಿಂಚಿಂಗ್

”ನಾನು ಬ್ಯಾಟ್ಸ್‌ಮನ್‌ ಆಗಿ ಕ್ರಿಕೆಟ್‌ ಅನ್ನು ಆರಂಭಿಸಿದ್ದೆ. ಆದರೆ, ತಡವಾಗಿ ಲೆಗ್ ಸ್ಪಿನ್ನರ್‌ ಆಗಿ ಪರಿವರ್ತನೆಯಾಗಿದ್ದೇನೆ. ಇದರಲ್ಲೂ ಕೊಂಚ ವಿಭಿನ್ನವಾಗಿರುವ ನಾನು ಬಯಸುತ್ತೇನೆ,” ಎಂದು ಸುಯಶ್ ಹೇಳಿದ್ದಾರೆ. ಇನ್ನು ಕೆಕೆಆರ್ ನಾಯಕ ನಿತೀಶ್ ರಾಣಾ ಮಾತನಾಡಿ, ”ಸುಯಶ್ ಆತ್ಮವಿಶ್ವಾಸದ ಯುವಕ ಮತ್ತು ಅವರು ತಮ್ಮ ಮೇಲೆ ನಂಬಿಕೆ ಹೊಂದಿದ್ದಾರೆ. ಅವರು ತಮ್ಮ ಅವಕಾಶವನ್ನು ಚೆನ್ನಾಗಿ ಬಳಸಿದ್ದಾರೆ, ಅವರು ಆ ರೀತಿ ಬೌಲ್ ಮಾಡುವುದನ್ನು ನೋಡುವುದು ಅದ್ಭುತವಾಗಿದೆ,” ಎಂದು ಹೇಳಿದ್ದಾರೆ.

ಇನ್ನೊಂದು ಪ್ರಮುಖ ವಿಚಾರ ಎಂದರೆ, ಸುಯಶ್ ಶರ್ಮಾ ನೋಡಲು ಥೇಟ್ ಚಿನ್ನದ ಹುಡುಗ ನೀರಜ್ ಚೋಪ್ರಾ ರೀತಿಯಲ್ಲೇ ಇದ್ದಾರೆ. ಇವರಿಬ್ಬರನ್ನು ಹೋಲಿಕೆ ಮಾಡಿ ನೆಟ್ಟಿಗರು ಟ್ವಿಟ್ಟರ್​ನಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.

 

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 204 ರನ್ ಕಲೆಹಾಕಿತು. ರಹಮಾನುಲ್ಲಾ 57 ರನ್​, ರಿಂಕು ಸಿಂಗ್​ 46 ರನ್​ ಗಳಿಸಿ ತಂಡಕ್ಕೆ ಆಸರೆಯಾದರು. ಶಾರ್ದೂಲ್​ ಠಾಕೂರ್​ 234.48ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿ 29 ಎಸೆತಗಳಲ್ಲಿ 3 ಸಿಕ್ಸರ್, 9 ಬೌಂಡರಿ ಗಳಿಸುವ ಮೂಲಕ 68 ರನ್​ ಗಳಿಸಿದರು. ಗುರಿ ಬೆನ್ನಟ್ಟಿದ ಆರ್​ಸಿಬಿ ತಂಡಕ್ಕೆ ಕೊಹ್ಲಿ (21) ಮತ್ತು ಡುಪ್ಲೆಸಿಸ್ (23) ಸಾಧಾರಣ ಆರಂಭ ಒದಗಿಸಿ ಔಟಾದರು. ನಂತರ ತಂಡ ದಿಢೀರ್ ಕುಸಿತ ಕಂಡಿತು. ಮೈಕಲ್​ ಬ್ರೇಸ್​ವೆಲ್ 19 ಹಾಗೂ ಡೇವಿಡ್​ ವಿಲ್ಲೆ 20 ರನ್ ಗಳಿಸಿದ್ದೇ ಹೆಚ್ಚು. ಆರ್​ಸಿಬಿ 17.4 ಓವರ್​ಗಳಲ್ಲಿ 123 ರನ್​ಗಳಿಗೆ ಆಲೌಟ್ ಆಗಿ ಸೋಲು ಕಂಡಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:36 am, Fri, 7 April 23