ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2021ನ (IPL 2021) 54ನೇ ಪಂದ್ಯದಲ್ಲಿ ಇಯಾನ್ ಮೊರ್ಗನ್ (Eion Morgan) ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸಂಜು ಸ್ಯಾಮ್ಸನ್ (Sanju Samson) ನಾಯಕತ್ವದ ರಾಜಸ್ಥಾನ್ ರಾಯಲ್ಸ್ (KKR vs RR) ತಂಡದ ವಿರುದ್ದ 86 ರನ್ಗಳ ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ನಿಗದಿತ 20 ಓವರ್ನಲ್ಲಿ 4 ವಿಕೆಟ್ ಕಳೆದುಕೊಂಡು 171 ರನ್ ಕಲೆಹಾಕಿತು. ಈ ಕಠಿಣ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಆರಂಭದಲ್ಲೇ ಮುಗ್ಗರಿಸಿತು. ತಂಡದ ಮೊತ್ತ 50 ಆಗುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ 16.1 ಓವರ್ನಲ್ಲಿ 85 ರನ್ಗಳಿಗೆ ರಾಜಸ್ಥಾನ್ ತಂಡವನ್ನು ಆಲೌಟ್ ಮಾಡುವ ಮೂಲಕ ಕೆಕೆಆರ್ 86 ರನ್ಗಳ ಭರ್ಜರಿ ಜಯ ತನ್ನದಾಗಿಸಿಕೊಂಡಿತು. ಈ ಗೆಲುವಿನೊಂದಿಗೆ ಕೆಕೆಆರ್ ಪ್ಲೇಆಫ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಇದಾಗ್ಯೂ ಮುಂಬೈ ಇಂಡಿಯನ್ಸ್ ಎಸ್ಆರ್ಹೆಚ್ ವಿರುದ್ದ ಭರ್ಜರಿ ನೆಟ್ ರನ್ ರೇಟ್ನೊಂದಿಗೆ ಗೆದ್ದರೆ ಮಾತ್ರ ಕೆಕೆಆರ್ ಪ್ಲೇಆಫ್ ಅವಕಾಶ ಕೈತಪ್ಪಲಿದೆ.
ಉಭಯ ತಂಡಗಳು ಇದುವರೆಗೆ ಐಪಿಎಲ್ನಲ್ಲಿ 24 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 13 ಪಂದ್ಯಗಳನ್ನು ಗೆದ್ದುಕೊಂಡಿದೆ. ಹಾಗೆಯೇ ರಾಜಸ್ಥಾನ್ ರಾಯಲ್ಸ್ 11 ಪಂದ್ಯಗಳಲ್ಲಿ ಜಯ ಸಾಧಿಸಿದೆ.
ಕೋಲ್ಕತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯೋನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್, ಶಕೀಬ್ ಅಲ್ ಹಸನ್, ಸುನಿಲ್ ನರೈನ್, ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ
ರಾಜಸ್ಥಾನ ರಾಯಲ್ಸ್ (ಪ್ಲೇಯಿಂಗ್ ಇಲೆವೆನ್): ಯಶಸ್ವಿ ಜೈಸ್ವಾಲ್, ಲಿಯಾಮ್ ಲಿವಿಂಗ್ಸ್ಟೋನ್, ಸಂಜು ಸ್ಯಾಮ್ಸನ್ (ನಾಯಕ), ಗ್ಲೆನ್ ಫಿಲಿಪ್ಸ್, ಅನುಜ್ ರಾವತ್, ಶಿವಂ ದುಬೆ, ಕ್ರಿಸ್ ಮೋರಿಸ್, ರಾಹುಲ್ ತಿವಾಟಿಯಾ, ಜಯದೇವ್ ಉನದ್ಕಟ್, ಚೇತನ್ ಸಕಾರಿಯಾ, ಮುಸ್ತಫಿಜುರ್ ರಹಮಾನ್
THAT. WINNING. FEELING! 👏 👏
The @Eoin16-led @KKRiders put up a clinical performance & seal a 86-run win over #RR. 💪 💪 #VIVOIPL #KKRvRR
Scorecard 👉 https://t.co/oqG5Yj3afs pic.twitter.com/p5gz03uMbJ
— IndianPremierLeague (@IPL) October 7, 2021
ಶಕೀಬ್ ಅಲ್ ಹಸನ್ ಉತ್ತಮ ಫೀಲ್ಡಿಂಗ್...ಚೇತನ್ ಸಕರಿಯಾ ರನೌಟ್
ಕ್ರೀಸ್ನಲ್ಲಿ ರಾಹುಲ್ ತಿವಾಠಿಯಾ-ಚೇತನ್ ಸಕರಿಯಾ ಬ್ಯಾಟಿಂಗ್
ವರುಣ್ ಚಕ್ರವರ್ತಿಗೆ ಎಸೆತಕ್ಕೆ ಬೌಂಡರಿ ಉತ್ತರ... ರಾಹುಲ್ ತಿವಾಠಿಯಾ ಬ್ಯಾಟ್ನಿಂದ ಭರ್ಜರಿ ಫೋರ್
ವರುಣ್ ಚಕ್ರವರ್ತಿ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದ ಜಯದೇವ್ ಉನದ್ಕಟ್
ವರುಣ್ ಚಕ್ರವರ್ತಿ ಎಸೆತಕ್ಕೆ ಬಿಗ್ ಸಿಕ್ಸ್ ಸಿಡಿಸಿದ ರಾಹುಲ್ ತಿವಾಠಿಯಾ
ಕ್ರೀಸ್ನಲ್ಲಿ ರಾಹುಲ್ ತಿವಾಠಿಯಾ-ಜಯದೇವ್ ಬ್ಯಾಟಿಂಗ್
ಶಿವಂ ಮಾವಿ ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ರಾಹುಲ್ ತಿವಾಠಿಯಾ
ವರುಣ್ ಚಕ್ರವರ್ತಿ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ಕ್ರಿಸ್ ಮೊರಿಸ್ (0)
ಶಿವಂ ಮಾವಿ ಎಸೆತಕ್ಕೆ ಶಿವಂ ದುಬೆ (18) ಬೌಲ್ಡ್
ಶಿವಂ ಮಾವಿ ಎಸೆತದಲ್ಲಿ ಗ್ಲೆನ್ ಫಿಲಿಪ್ಸ್ (8) ಕ್ಲೀನ್ ಬೌಲ್ಡ್
ಕ್ರೀಸ್ನಲ್ಲಿ ಗ್ಲೆನ್ ಫಿಲಿಪ್ಸ್-ಶಿವಂ ದುಬೆ ಬ್ಯಾಟಿಂಗ್
ಸುನಿಲ್ ನರೈನ್ ಎಸೆತದಲ್ಲಿ ಬಿಗ್ ಸಿಕ್ಸ್ ಸಿಡಿಸಿದ ಶಿವಂ ದುಬೆ
ಲಾಕಿ ಫರ್ಗುಸನ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದ ಅನುಜ್ ರಾವತ್ (0)
ಲಾಕಿ ಫರ್ಗುಸನ್ ಎಸೆತದಲ್ಲಿ ಲಿವಿಂಗ್ಸ್ಟೋನ್ ಬಿಗ್ ಹಿಟ್ಗೆ ಯತ್ನ...ಬೌಂಡರಿ ಲೈನ್ನಿಂದ ಓಡಿ ಬಂದು ಡೈವಿಂಗ್ ಕ್ಯಾಚ್ ಹಿಡಿದ ರಾಹುಲ್ ತ್ರಿಪಾಠಿ
ಕ್ರೀಸ್ನಲ್ಲಿ ಲಿವಿಂಗ್ಸ್ಟೋನ್-ಶಿವಂ ದುಬೆ ಬ್ಯಾಟಿಂಗ್
ಸುನಿಲ್ ನರೈನ್ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಲಿವಿಂಗ್ಸ್ಟೋನ್
ಶಿವಂ ಮಾವಿ ಎಸೆತದಲ್ಲಿ ಮೊರ್ಗನ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ ಸಂಜು ಸ್ಯಾಮ್ಸನ್
ಮೊದಲ ಓವರ್ನಲ್ಲಿ ಶಕೀಬ್ ಅಲ್ ಹಸನ್ ಎಸೆತಕ್ಕೆ ಜೈಸ್ವಾಲ್ ಕ್ಲೀನ್ ಬೌಲ್ಡ್
ಮೊರಿಸ್ ಎಸೆತದಲ್ಲಿ ಇಯಾನ್ ಮೊರ್ಗನ್ ಲೆಗ್ಸೈಡ್ನತ್ತ ಸೂಪರ್ ಶಾಟ್...ಸಿಕ್ಸ್
ಚೇತನ್ ಸಕರಿಯಾ ಎಸೆತಕ್ಕೆ ಇಯಾನ್ ಮೊರ್ಗನ್ ಸೂಪರ್ ಪ್ಲೇಸ್ಮೆಂಟ್...ಚೆಂಡು ಬೌಂಡರಿಗೆ..ಫೋರ್
ಚೇತನ್ ಸಕರಿಯಾ ಎಸೆತಕ್ಕೆ ರಾಹುಲ್ ತ್ರಿಪಾಠಿ (21) ಕ್ಲೀನ್ ಬೌಲ್ಡ್
ಮುಸ್ತಫಿಜುರ್ ಎಸೆತದಲ್ಲಿ ದಿನೇಶ್ ಕಾರ್ತಿಕ್ ಬಿಗ್ ಹಿಟ್...ಸಿಕ್ಸ್
ಮೊರಿಸ್ ಎಸೆತದಲ್ಲಿ ಬಿಗ್ ಹಿಟ್ಗೆ ಯತ್ನ...ಬೌಂಡರಿ ಲೈನ್ನಲ್ಲಿದ್ದ ಜೈಸ್ವಾಲ್ಗೆ ಕ್ಯಾಚ್...ಶುಭ್ಮನ್ ಗಿಲ್ (56) ಔಟ್
ಮೊರಿಸ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಶುಭ್ಮನ್ ಗಿಲ್ ಸೂಪರ್ ಶಾಟ್...ಒನ್ ಬೌನ್ಸ್ ಫೋರ್
40 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಶುಭ್ಮನ್ ಗಿಲ್
ಶಿವಂ ದುಬೆ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ರಾಹುಲ್ ತ್ರಿಪಾಠಿ
ಗ್ಲೆನ್ ಫಿಲಿಪ್ಸ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ನಿತೀಶ್ ರಾಣಾ (12)
38 ರನ್ ಬಾರಿಸಿ ರಾಹುಲ್ ತಿವಾಠಿಯಾ ಎಸೆತದಲ್ಲಿ ಬೌಲ್ಡ್ ಆದ ವೆಂಕಟೇಶ್ ಅಯ್ಯರ್
ಕ್ರೀಸ್ನಲ್ಲಿ ಶುಭ್ಮನ್ ಗಿಲ್-ವೆಂಟಕೇಶ್ ಅಯ್ಯರ್ ಬ್ಯಾಟಿಂಗ್
ಜಯದೇವ್ ಉನದ್ಕಟ್ ಎಸೆತದಲ್ಲಿ ವೆಂಕಟೇಶ್ ಅಯ್ಯರ್ ಬಿಗ್ ಹಿಟ್....ಸಿಕ್ಸ್
ಒಂದೇ ಓವರ್ನಲ್ಲಿ ಎರಡು ಸಿಕ್ಸ್ ಸಿಡಿಸಿದ ಅಯ್ಯರ್
ಕ್ರೀಸ್ನಲ್ಲಿ ಶುಭ್ಮನ್ ಗಿಲ್-ವೆಂಟಕೇಶ್ ಅಯ್ಯರ್ ಬ್ಯಾಟಿಂಗ್
ಜಯದೇವ್ ಎಸೆತದಲ್ಲಿ ಅಯ್ಯರ್ ಸೂಪರ್ ಶಾಟ್...ಫೋರ್
ಕ್ರೀಸ್ನಲ್ಲಿ ಶುಭ್ಮನ್ ಗಿಲ್-ವೆಂಟಕೇಶ್ ಅಯ್ಯರ್ ಬ್ಯಾಟಿಂಗ್
ಚೇತನ್ ಸಕರಿಯಾ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಶುಭ್ಮನ್ ಗಿಲ್
ಕ್ರೀಸ್ನಲ್ಲಿ ಶುಭ್ಮನ್ ಗಿಲ್-ವೆಂಟಕೇಶ್ ಅಯ್ಯರ್ ಬ್ಯಾಟಿಂಗ್
ಕ್ರೀಸ್ನಲ್ಲಿ ಶುಭ್ಮನ್ ಗಿಲ್-ವೆಂಟಕೇಶ್ ಅಯ್ಯರ್ ಬ್ಯಾಟಿಂಗ್
ಜಯದೇವ್ ಉನದ್ಕಟ್ ಓವರ್ನಲ್ಲಿ ಬೌಂಡರಿ ಬಾರಿಸಿ ಶುಭಾರಂಭ ಮಾಡಿದ ಗಿಲ್
ರಾಜಸ್ಥಾನ ರಾಯಲ್ಸ್ (ಪ್ಲೇಯಿಂಗ್ ಇಲೆವೆನ್): ಯಶಸ್ವಿ ಜೈಸ್ವಾಲ್, ಲಿಯಾಮ್ ಲಿವಿಂಗ್ಸ್ಟೋನ್, ಸಂಜು ಸ್ಯಾಮ್ಸನ್ (ನಾಯಕ), ಗ್ಲೆನ್ ಫಿಲಿಪ್ಸ್, ಅನುಜ್ ರಾವತ್, ಶಿವಂ ದುಬೆ, ಕ್ರಿಸ್ ಮೋರಿಸ್, ರಾಹುಲ್ ತಿವಾಟಿಯಾ, ಜಯದೇವ್ ಉನದ್ಕಟ್, ಚೇತನ್ ಸಕಾರಿಯಾ, ಮುಸ್ತಫಿಜುರ್ ರಹಮಾನ್
ಕೋಲ್ಕತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯೋನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್, ಶಕೀಬ್ ಅಲ್ ಹಸನ್, ಸುನಿಲ್ ನರೈನ್, ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ
ಟಾಸ್ ಗೆದ್ದಿರುವ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
Published On - Oct 07,2021 7:00 PM