KL Rahul: ಬರ್ತ್ಡೇ ದಿನ ಕೇಕ್ನಲ್ಲಿ ಮಿಂದೆದ್ದ ಕನ್ನಡಿಗ ಕೆಎಲ್ ರಾಹುಲ್
ಕೆಎಲ್ ರಾಹುಲ್ ಮುಖಕ್ಕೆ ಕೇಕ್ ಹಚ್ಚೋಕೆ ಆರಂಭಿಸಿದರು ತಂಡದವರು. ಆ ಬಳಿಕ ರಾಹುಲ್ ಶರ್ಟ್ ತೆಗೆಯುತ್ತಿದ್ದಂತೆ ಅವರ ಮೈಗೆಲ್ಲ ಕೇಕ್ ಮೆತ್ತಲಾಯಿತು. ರಾಹುಲ್ಗೆ ಈಗ 32 ವರ್ಷ ತುಂಬಿದೆ. ಅವರಿಗೆ ಎಲ್ಲರೂ ಶುಭಾಶಯ ತಿಳಿಸಿದ್ದಾರೆ. ಬರ್ತ್ಡೇ ಸಂದರ್ಭದ ಫೋಟೋ ವೈರಲ್ ಆಗಿದೆ.
ಟೀಂ ಇಂಡಿಯಾ ಕ್ರಿಕೆಟರ್, ಕನ್ನಡಿಗ ಕೆಎಲ್ ರಾಹುಲ್ ಅವರು ಏಪ್ರಿಲ್ 18ರಂದು ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಸದ್ಯ ಅವರು ಐಪಿಎಲ್ನಲ್ಲಿ ಲಖ್ನೋ ಸೂಪರ್ ಜೈಂಟ್ಸ್ (LSG) ತಂಡವನ್ನು ಮುನ್ನಡೆಸುತ್ತಿದ್ದಾರೆ. ತಂಡದ ಜೊತೆ ಅವರು ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಈ ವೇಳೆ ಅವರು ಕೇಕ್ನಲ್ಲೇ ಮಿಂದೆದ್ದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫ್ಯಾನ್ಸ್ ಇದಕ್ಕೆ ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಲಖ್ನೋ ಸೂಪರ್ ಜೈಂಟ್ಸ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದೆ. ರಾಹುಲ್ಗಾಗಿ ನಾನಾ ರೀತಿಯ ಕೇಕ್ಗಳನ್ನು ಇಡಲಾಗಿತ್ತು. ಸಿಂಪಲ್ ಆಗಿ ಆಗಮಿಸಿದ ಅವರು ಇತರ ಆಟಗಾರರ ಜೊತೆ ಕೇಕ್ ಕತ್ತರಿಸಿದರು. ಈ ವೇಳೆ ಎಲ್ಲರೂ ರಾಹುಲ್ ಮುಖಕ್ಕೆ ಕೇಕ್ ಹಚ್ಚೋಕೆ ಆರಂಭಿಸಿದರು. ಆ ಬಳಿಕ ರಾಹುಲ್ ಶರ್ಟ್ ತೆಗೆಯುತ್ತಿದ್ದಂತೆ ಅವರ ಮೈಗೆಲ್ಲ ಕೇಕ್ ಮೆತ್ತಲಾಯಿತು. ರಾಹುಲ್ಗೆ ಈಗ 32 ವರ್ಷ ತುಂಬಿದೆ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.
Someone asked for the full video? 😂💙 https://t.co/nyKJGTpSBR pic.twitter.com/GwcanzVWAf
— Lucknow Super Giants (@LucknowIPL) April 18, 2024
ರಾಹುಲ್ ಅವರು ಬರ್ತ್ಡೇ ದಿನವೂ ಪ್ರ್ಯಾಕ್ಟಿಸ್ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಇಂದು (ಏಪ್ರಿಲ್ 19) ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅವರು ಎದುರಿಸಲಿದ್ದಾರೆ. ಆಡಿದ ಆರು ಪಂದ್ಯಗಳಲ್ಲಿ ನಾಲ್ಕು ಮ್ಯಾಚ್ಗಳನ್ನು ಚೆನ್ನೈ ಗೆದ್ದಿದೆ. ಲಖನೌ ಆಡಿದ ಆರು ಪಂದ್ಯಗಳಲ್ಲಿ ಮೂರನ್ನು ಮಾತ್ರ ಗೆದ್ದಿದೆ. ಹೀಗಾಗಿ, ಚೆನ್ನೈ ವಿರುದ್ಧ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ಅವರಿಗೆ ಇದೆ.
ಇದನ್ನೂ ಓದಿ: ‘ಮದುವೆ ಬಳಿಕ ಕೆಎಲ್ ರಾಹುಲ್, ಅಥಿಯಾ ಶೆಟ್ಟಿ ಪೋಸ್ ಕೊಡ್ತಾರೆ’; ಪಾಪರಾಜಿಗಳಿಗೆ ಸುನೀಲ್ ಶೆಟ್ಟಿ ಭರವಸೆ
ದೆಹಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಎಲ್ಎಸ್ಜಿ ಸೋಲು ಕಂಡಿದೆ. ಇದು ರಾಹುಲ್ ತಂಡದ ಸ್ಫೂರ್ತಿಯನ್ನು ಕುಗ್ಗಿಸಿದೆ. ಮತ್ತ ಚೈತನ್ಯ ಪಡೆಯಬೇಕು ಎಂದಾದರೆ ಬಲಿಷ್ಠ ಚೆನ್ನೈ ವಿರುದ್ಧ ಗೆಲುವು ಸಾಧಿಸಲೇಬೇಕಾದ ಅನಿವಾರ್ಯತೆ ಅವರಿಗೆ ಇದೆ. ರಾಹುಲ್ ಅವರು ತಮ್ಮ ಕನ್ಸಿಸ್ಟನ್ಸಿ ಬಗ್ಗೆ ಗಮನಹರಿಸಬೇಕಿದೆ. ಅವರು ಈ ಬಾರಿ ಆರು ಮ್ಯಾಚ್ಗಳಲ್ಲಿ 204 ರನ್ ಬಾರಿಸಿದ್ದು, 138 ಸ್ಟ್ರೈಕ್ರೇಟ್ ಹೊಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ