AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ind A vs Aus A: ಆಸ್ಟ್ರೇಲಿಯಾ ಎ ವಿರುದ್ಧದ 2ನೇ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆ

India A vs Australia A: ಭಾರತ ಮತ್ತು ಆಸ್ಟ್ರೇಲಿಯಾ ಎ ತಂಡಗಳ ನಡುವೆ ಸೆಪ್ಟೆಂಬರ್ 16 ರಿಂದ ಅನಧಿಕೃತ ಟೆಸ್ಟ್ ಪಂದ್ಯ ಸರಣಿ ಆರಂಭವಾಗಲಿದೆ. ಶ್ರೇಯಸ್ ಅಯ್ಯರ್ ನಾಯಕತ್ವ ವಹಿಸಲಿದ್ದಾರೆ. ರಾಹುಲ್ ಮತ್ತು ಸಿರಾಜ್ ಎರಡನೇ ಪಂದ್ಯಕ್ಕೆ ತಂಡ ಸೇರಲಿದ್ದಾರೆ. ಎರಡು ಟೆಸ್ಟ್ ಪಂದ್ಯಗಳ ಜೊತೆಗೆ ಮೂರು ಏಕದಿನ ಪಂದ್ಯಗಳ ಸರಣಿಯೂ ನಡೆಯಲ್ಲಿದೆ.

Ind A vs Aus A: ಆಸ್ಟ್ರೇಲಿಯಾ ಎ ವಿರುದ್ಧದ 2ನೇ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಬದಲಾವಣೆ
Team India
ಪೃಥ್ವಿಶಂಕರ
|

Updated on: Sep 06, 2025 | 7:22 PM

Share

ಏಷ್ಯಾಕಪ್ (Asia Cup 2025) ನಡುವೆಯೇ ಸೆಪ್ಟೆಂಬರ್ 16 ರಿಂದ ಭಾರತ ಎ ಮತ್ತು ಆಸ್ಟ್ರೇಲಿಯಾ ಎ (India A vs Australia A) ನಡುವೆ ಅನಧಿಕೃತ ಟೆಸ್ಟ್ ಪಂದ್ಯ ಸರಣಿ ನಡೆಯಲಿದ್ದು, ಇದಕ್ಕಾಗಿ ಟೀಂ ಇಂಡಿಯಾವನ್ನು ಇಂದು ಘೋಷಿಸಲಾಗಿದೆ. ಈ ಸರಣಿಗೆ ಶ್ರೇಯಸ್ ಅಯ್ಯರ್ ಅವರನ್ನು ತಂಡದ ನಾಯಕರನ್ನಾಗಿ ಮಾಡಲಾಗಿದೆ. ಈ ಎರಡು ಪಂದ್ಯಗಳ ಸರಣಿಗೆ ತಂಡವನ್ನು ಘೋಷಿಸಲಾಗಿದೆ, ಆದರೆ ಸರಣಿಯ ಮಧ್ಯದಲ್ಲಿ ಭಾರತ ಎ ತಂಡದಲ್ಲಿ 2 ಬದಲಾವಣೆಗಳಾಗಲಿವೆ. ಮೊದಲ ಪಂದ್ಯದ ಬಳಿಕ ತಂಡಕ್ಕೆ ಇಬ್ಬರು ಅನುಭವಿ ಆಟಗಾರರು ಎಂಟ್ರಿಕೊಡಲಿದ್ದಾರೆ. ಈ ಇಬ್ಬರು ಆಟಗಾರರು ಕನ್ನಡಿಗ ಕೆ.ಎಲ್. ರಾಹುಲ್ (KL Rahul) ಮತ್ತು ಮೊಹಮ್ಮದ್ ಸಿರಾಜ್ (Mohammed Siraj).

ಉಭಯ ತಂಡಗಳ ನಡುವೆ 2 ಅನಧಿಕೃತ ಟೆಸ್ಟ್ ಸರಣಿ ಮಾತ್ರವಲ್ಲದೆ ಮೂರು ಪಂದ್ಯಗಳ ಏಕದಿನ ಸರಣಿ ಕೂಡ ನಡೆಯಲಿದೆ. ಆದರೆ ಏಕದಿನ ಸರಣಿಗೆ ತಂಡವನ್ನು ಪ್ರಕಟಿಸಲಾಗಿಲ್ಲ. ಆದಾಗ್ಯೂ ಆ ಸರಣಿಯಲ್ಲಿ ಟೀಂ ಇಂಡಿಯಾದ ಇಬ್ಬರು ದಿಗ್ಗಜ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಆಡುವುದನ್ನು ನಾವು ನಿರೀಕ್ಷಿಸಬಹುದಾಗಿದೆ. ಈ ಸರಣಿಯಲ್ಲಿ ರೋಹಿತ್ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

2ನೇ ಪಂದ್ಯದಲ್ಲಿ ರಾಹುಲ್, ಸಿರಾಜ್ ಕಣಕ್ಕೆ

ಮೇಲೆ ಹೇಳಿದಂತೆ ಅನಧಿಕೃತ ಟೆಸ್ಟ್ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಭಾರತ-ಎ ತಂಡದ ನಾಯಕತ್ವ ವಹಿಸಲಿದ್ದು, ಧ್ರುವ್ ಜುರೆಲ್ ಅವರನ್ನು ತಂಡದ ಉಪನಾಯಕರನ್ನಾಗಿ ಮಾಡಲಾಗಿದೆ. ಈ ಸರಣಿಗೆ ತಂಡದ ಘೋಷಣೆಯ ಜೊತೆಗೆ, ಟೆಸ್ಟ್ ತಂಡದ ಸ್ಟಾರ್ ಓಪನರ್ ಕೆಎಲ್ ರಾಹುಲ್ ಮತ್ತು ವೇಗಿ ಮೊಹಮ್ಮದ್ ಸಿರಾಜ್ ಕೂಡ ಎರಡನೇ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಈ ಇಬ್ಬರು ಆಟಗಾರರು ಬಂದ ನಂತರ, ಪ್ರಸ್ತುತ ತಂಡದಿಂದ ಇಬ್ಬರು ಆಟಗಾರರನ್ನು ಕೈಬಿಡಲಾಗುವುದು.

ಆಸ್ಟ್ರೇಲಿಯಾ ಎ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟ; ಶ್ರೇಯಸ್ ಅಯ್ಯರ್​ಗೆ ನಾಯಕತ್ವ

ಟೆಸ್ಟ್ ಸರಣಿಗೆ ಸಿದ್ಧತೆ

ರಾಹುಲ್ ಮತ್ತು ಸಿರಾಜ್ ಈ ಪಂದ್ಯದಲ್ಲಿ ಭಾಗವಹಿಸುವುದು ತುಂಬಾ ವಿಶೇಷವಾಗಿದೆ. ವಾಸ್ತವವಾಗಿ, ನಾಲ್ಕು ದಿನಗಳ ಕಾಲ ನಡೆಯುವ ಎರಡನೇ ಪಂದ್ಯವು ಸೆಪ್ಟೆಂಬರ್ 23 ರಿಂದ 26 ರವರೆಗೆ ಲಕ್ನೋದಲ್ಲಿ ನಡೆಯಲಿದೆ. ಆಗಸ್ಟ್ 4 ರಂದು ಇಂಗ್ಲೆಂಡ್ ಪ್ರವಾಸ ಕೊನೆಗೊಂಡಾಗಿನಿಂದ ವಿರಾಮದಲ್ಲಿದ್ದ ಇಬ್ಬರೂ ಕ್ರಿಕೆಟ್‌ಗೆ ಮರಳಲು ಈ ಪಂದ್ಯವು ಒಂದು ಅವಕಾಶವಾಗಲಿದೆ. ಈ ಪಂದ್ಯದ ಮೂಲಕ, ರಾಹುಲ್ ಮತ್ತು ಸಿರಾಜ್ ಅಕ್ಟೋಬರ್ 2 ರಿಂದ ಪ್ರಾರಂಭವಾಗುವ ಭಾರತ-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಗೆ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.

ಸರಣಿಗೆ ಭಾರತ-ಎ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಮನ್ಯು ಈಶ್ವರನ್, ನಾರಾಯಣ್ ಜಗದೀಸನ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಧ್ರುವ್ ಜುರೆಲ್ (ಉಪನಾಯಕ ಮತ್ತು ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ಹರ್ಷ್ ದುಬೆ, ಆಯುಷ್ ಬಡೋನಿ, ನಿತೀಶ್ ಕುಮಾರ್ ರೆಡ್ಡಿ, ತನುಷ್ ಕೋಟ್ಯಾನ್, ಕೆ. ಸುತಾರ್, ಯಶ್ ಠಾಕೂರ್. ಕೆಎಲ್ ರಾಹುಲ್, ಮೊಹಮ್ಮದ್ ಸಿರಾಜ್ (ಎರಡನೇ ಪಂದ್ಯಕ್ಕೆ ಮಾತ್ರ)

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ