Asia Cup 2025: ಏಷ್ಯಾಕಪ್ಗೆ ಟೀಂ ಇಂಡಿಯಾದ ನೂತನ ಜೆರ್ಸಿ ಹೇಗಿದೆ ನೋಡಿ
Team India's New Jersey for Asia Cup 2025: 2025ರ ಏಷ್ಯಾಕಪ್‌ಗಾಗಿ ಟೀಂ ಇಂಡಿಯಾ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಡ್ರೀಮ್ 11 ಜೊತೆಗಿನ ಪ್ರಾಯೋಜಕತ್ವ ಒಪ್ಪಂದ ರದ್ದಾದ ನಂತರ, ಈ ಜೆರ್ಸಿಯಲ್ಲಿ ಯಾವುದೇ ಪ್ರಾಯೋಜಕರ ಹೆಸರಿಲ್ಲ. ಜೆರ್ಸಿಯಲ್ಲಿ ಬಿಸಿಸಿಐ ಲೋಗೋ ಮತ್ತು "ಡಿಪಿ ವರ್ಲ್ಡ್ ಏಷ್ಯಾಕಪ್ 2025" ಎಂಬ ಶೀರ್ಷಿಕೆ ಇದೆ. ಏಷ್ಯಾಕಪ್ ಸೆಪ್ಟೆಂಬರ್ 9 ರಂದು ಆರಂಭವಾಗಲಿದ್ದು, ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 10 ರಂದು ಆಡಲಿದೆ.

2025 ರ ಏಷ್ಯಾಕಪ್‌ಗಾಗಿ (Asia Cup 2025) ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಂ ಇಂಡಿಯಾ (Team India) ಈಗಾಗಲೇ ದುಬೈನಲ್ಲಿ ಬೀಡುಬಿಟ್ಟಿದ್ದು, ಅಭ್ಯಾಸದಲ್ಲಿ ನಿರತವಾಗಿದೆ. ಸೆಪ್ಟೆಂಬರ್ 9 ರಿಂದ ಟೂರ್ನಿ ಆರಂಭವಾಗಲಿದ್ದು, ಟೀಂ ಇಂಡಿಯಾ ಸೆ.10 ರಂದು ತನ್ನ ಮೊದಲ ಪಂದ್ಯವನ್ನು ಆಡಲಿದೆ. ಆದರೆ ಈ ಪಂದ್ಯಕ್ಕೂ ಟೀಂ ಇಂಡಿಯಾದ ಹೊಸ ಜೆರ್ಸಿಯ ಫೋಟೋ ರಿವೀಲ್ ಆಗಿದೆ. ವಾಸ್ತವವಾಗಿ ಕೆಲವು ದಿನಗಳ ಹಿಂದೆ ಬಿಸಿಸಿಐ ಮತ್ತು ಡ್ರೀಮ್ 11 ನಡುವಿನ ಜೆರ್ಸಿ ಪ್ರಾಯೋಜಕತ್ವ ಒಪ್ಪಂದ ಕೊನೆಗೊಂಡಿತ್ತು. ಹೀಗಾಗಿ ಬಿಸಿಸಿಐ ಕೂಡ ಹೊಸ ಪ್ರಾಯೋಜಕತ್ವಕ್ಕಾಗಿ ಟೆಂಡರ್ ಕೂಡ ಕರೆದಿದೆ. ಆದರೆ ಏಷ್ಯಾಕಪ್ ವೇಳೆಗೆ ಯಾವ ಪ್ರಯೋಜಕರು ಸಿಗದ ಕಾರಣ ಟೀಂ ಇಂಡಿಯಾ ಯಾವುದೇ ಜೆರ್ಸಿ ಪ್ರಾಯೋಜಕತ್ವವಿಲ್ಲದೆ ಏಷ್ಯಾಕಪ್‌ನಲ್ಲಿ ಆಡಲಿದೆ.
ಟೀಂ ಇಂಡಿಯಾದ ಹೊಸ ಜೆರ್ಸಿ ಹೇಗಿದೆ?
2025 ರ ಏಷ್ಯಾಕಪ್‌ಗೂ ಮೊದಲು ಟೀಂ ಇಂಡಿಯಾದ ಹೊಸ ಜೆರ್ಸಿಯ ಮೊದಲ ಫೋಟೋ ವೈರಲ್ ಆಗಿದೆ. ಹೊಸ ಜೆರ್ಸಿಯಲ್ಲಿ ಯಾವುದೇ ಪ್ರಾಯೋಜಕರ ಹೆಸರಿಲ್ಲದಿರುವುದನ್ನು ನಾವು ಕಾಣಬಹುದು. ಜೆರ್ಸಿಯ ಎಡಭಾಗದಲ್ಲಿ ಬಿಸಿಸಿಐ ಲೋಗೋ ಇದ್ದರೆ, ಬಲಭಾಗದಲ್ಲಿ ಡಿಪಿ ವರ್ಲ್ಡ್ ಏಷ್ಯಾಕಪ್ 2025 ಎಂದು ಬರೆಯಲಾಗಿದೆ. ಡಿಪಿ ವರ್ಲ್ಡ್ ಏಷ್ಯಾಕಪ್ನ ಪ್ರಾಯೋಜಕತ್ವ ಪಡೆದುಕೊಂಡಿದೆ. ಇದನ್ನು ಹೊರತುಪಡಿಸಿ ಜೆರ್ಸಿಯಲ್ಲಿ ಭಾರತದ ಹೆಸರನ್ನು ಮಾತ್ರ ಬರೆಯಲಾಗಿದೆ.
🚨 THE ASIA CUP JERSEY OF TEAM INDIA 🚨 🇮🇳 pic.twitter.com/UVuIHEu5C9
— Johns. (@CricCrazyJohns) September 6, 2025
ಡ್ರೀಮ್ 11 ಮತ್ತು ಬಿಸಿಸಿಐ ನಡುವಿನ ಒಪ್ಪಂದ ರದ್ದು
ವಾಸ್ತವವಾಗಿ ಡ್ರೀಮ್11 ಮತ್ತು ಬಿಸಿಸಿಐ ನಡುವೆ 2023 ರಲ್ಲಿ ಒಪ್ಪಂದ ನಡೆದಿತ್ತು. ಈ ಒಪ್ಪಂದದ ಪ್ರಕಾರ, 2026 ರವರೆಗೆ ಡ್ರೀಮ್11 ಬಿಸಿಸಿಐಗೆ 358 ಕೋಟಿ ರೂ.ಗಳನ್ನು ಪಾವತಿಸಬೇಕಾಗಿತ್ತು. ಆದರೆ ಈ ಒಪ್ಪಂದವನ್ನು ಮಧ್ಯದಲ್ಲಿಯೇ ಕಡಿದುಕೊಳ್ಳಲಾಗಿತ್ತು. ಏಕೆಂದರೆ ಕೇಂದ್ರ ಸರ್ಕಾರ ಆಗಸ್ಟ್‌ನಲ್ಲಿ ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತು. ಹೀಗಾಗಿ ಡ್ರೀಮ್ 11 ಜೊತೆಗಿನ ಒಪ್ಪಂದವನ್ನು ಮುರಿದುಕೊಳ್ಳಬೇಕಾಯಿತು. ಇದೀಗ ಬಿಸಿಸಿಐ ಹೊಸ ಜೆರ್ಸಿ ಪ್ರಾಯೋಜಕತ್ವವನ್ನು ಹುಡುಕಲು ಪ್ರಾರಂಭಿಸಿದೆ.
Asia Cup 2025 squads: ಏಷ್ಯಾಕಪ್ಗೆ ಕೊನೆಗೂ ತಂಡ ಪ್ರಕಟಿಸಿದ ಯುಎಇ; ಎಲ್ಲಾ 8 ತಂಡಗಳ ವಿವರ ಇಲ್ಲಿದೆ
ಸೆಪ್ಟೆಂಬರ್ 9 ರಿಂದ ಏಷ್ಯಾಕಪ್ ಪ್ರಾರಂಭ
ಏಷ್ಯಾ ಕಪ್ 2025 ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗಲಿದೆ. ಭಾರತ ತಂಡವು ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಬೇಕಾಗಿದೆ. ಇದರ ನಂತರ, ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವು ಸೆಪ್ಟೆಂಬರ್ 14 ರಂದು ನಡೆಯಲಿದೆ. ಆ ಬಳಿಕ ಸೆಪ್ಟೆಂಬರ್ 19 ರಂದು, ಟೀಂ ಇಂಡಿಯಾ ಒಮಾನ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
