Krunal Pandya: ಆರ್‌ಸಿಬಿ ಗೆದ್ದ ಕೂಡಲೇ ಇನ್​ಸ್ಟಾದಲ್ಲಿ ಸ್ಟೇಟಸ್ ಹಾಕಿದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ

|

Updated on: Mar 23, 2025 | 9:38 AM

KKR vs RCB, IPL 2025: ಐಪಿಎಲ್ 2025 ರ ಮೊದಲ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದ ನಂತರ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ತುಂಬಾ ಸಂತೋಷದಿಂದ ಕಂಡರು. ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಖುಷಿ ವ್ಯಕ್ತ ಪಡಿಸಿದ್ದಾರೆ.

Krunal Pandya: ಆರ್‌ಸಿಬಿ ಗೆದ್ದ ಕೂಡಲೇ ಇನ್​ಸ್ಟಾದಲ್ಲಿ ಸ್ಟೇಟಸ್ ಹಾಕಿದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ
Rcb And Hardik Pandya
Follow us on

ಬೆಂಗಳೂರು (ಮಾ, 23): ಇಂಡಿಯನ್ ಪ್ರೀಮಿಯರ್ ಲೀಗ್‌ನ 18ನೇ ಸೀಸನ್ ಅಬ್ಬರದಿಂದ ಆರಂಭವಾಗಿದೆ. ಈ ಋತುವಿನ ಮೊದಲ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (KKR vs RCB) ನಡುವೆ ನಡೆಯಿತು. ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ಆರ್‌ಸಿಬಿ ಅದ್ಭುತ ಪ್ರದರ್ಶನ ನೀಡಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿ ಪಂದ್ಯಾವಳಿಯನ್ನು ಗೆಲುವಿನೊಂದಿಗೆ ಆರಂಭಿಸಿತು. ಟಾಸ್ ಗೆದ್ದ ಆರ್‌ಸಿಬಿ ಮೊದಲು ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿತು ಮತ್ತು ನಂತರ ಬ್ಯಾಟ್ಸ್‌ಮನ್‌ಗಳು ಪಂದ್ಯವನ್ನು ಏಕಪಕ್ಷೀಯವಾಗಿಸಿದರು. ಆರ್‌ಸಿಬಿ ಗೆಲುವಿನ ಬಳಿಕ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಸಂತೋಷ ವ್ಯಕ್ತಪಡಿಸಿದ್ದು, ಇನ್​ಸ್ಟಾದಲ್ಲಿ ಸ್ಟೇಟಸ್ ಹಂಚಿಕೊಂಡಿದ್ದಾರೆ.

ಆರ್‌ಸಿಬಿ ಗೆಲುವಿನಿಂದ ಹಾರ್ದಿಕ್ ಪಾಂಡ್ಯ ಸಂತೋಷಪಟ್ಟಿದ್ದೇಕೆ?:

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನದಿಂದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ತುಂಬಾ ಸಂತೋಷಗೊಂಡಂತೆ ಕಂಡಿತು. ಇದರ ಹಿಂದಿನ ದೊಡ್ಡ ಕಾರಣ ಅವರ ಅಣ್ಣ ಕೃನಾಲ್ ಪಾಂಡ್ಯ. ವಾಸ್ತವವಾಗಿ, ಕೃನಾಲ್ ಪಾಂಡ್ಯ ಈ ಬಾರಿ ಆರ್‌ಸಿಬಿ ತಂಡದ ಭಾಗವಾಗಿದ್ದಾರೆ ಮತ್ತು ಋತುವಿನ ಮೊದಲ ಪಂದ್ಯದಲ್ಲಿ ಅವರು ಅತಿದೊಡ್ಡ ಮ್ಯಾಚ್ ವಿನ್ನರ್ ಆದರು. ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ನಡುವಿನ ಸಂಬಂಧವು ಕ್ರಿಕೆಟ್ ಜಗತ್ತಿನಲ್ಲಿ ವಿಶೇಷವಾಗಿ ಇದೆ. ಇಬ್ಬರೂ ಸಹೋದರರು ಒಟ್ಟಿಗೆ ಮೈದಾನದಲ್ಲಿ ಅನೇಕ ಪಂದ್ಯಗಳಲ್ಲಿ ಗೆಲ್ಲುಸಿ ಕೊಟ್ಟಿದ್ದಾರೆ, ವಿಶೇಷವಾಗಿ ಅವರು ಮುಂಬೈ ಇಂಡಿಯನ್ಸ್ ಪರ ಆಡಿದಾಗ. ಆದರೆ ಕಳೆದ ಕೆಲವು ವರ್ಷಗಳಿಂದ, ಈ ಇಬ್ಬರೂ ಆಟಗಾರರು ಐಪಿಎಲ್‌ನಲ್ಲಿ ಬೇರೆ ಬೇರೆ ತಂಡಗಳಿಗಾಗಿ ಆಡುತ್ತಿದ್ದಾರೆ.

ಇದನ್ನೂ ಓದಿ
ನನ್ನ ಫ್ಯಾನ್, ಏನೂ ಮಾಡ್ಬೇಡಿ... ಅಭಿಮಾನಿಯ ಬೆಂಬಲಕ್ಕೆ ನಿಂತ ಕೊಹ್ಲಿ
IPL 2025: ಅವರೊಬ್ಬರು ಇದ್ದರೆ ಸಾಕು, ಚಿಂತೆಯೇ ಇಲ್ಲ: ರಜತ್ ಪಾಟಿದಾರ್
ನರೈನ್ ಹಿಟ್ ವಿಕೆಟ್ ಆದರೂ ಅಂಪೈರ್ ಔಟ್ ನೀಡಿಲ್ಲವೇಕೆ? ಇಲ್ಲಿದೆ ಕಾರಣ
ಮೂವರ ಸ್ಫೋಟಕ ಅರ್ಧಶತಕ: ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿದ್ದು ಬೌಲರ್​ಗೆ..!

ಕೃನಾಲ್ ಪಾಂಡ್ಯ ಅವರ ಪ್ರದರ್ಶನದಿಂದ ಹಾರ್ದಿಕ್ ತುಂಬಾ ಸಂತೋಷಗೊಂಡು, ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಂದ್ಯದ ನಂತರ, ಪಾಂಡ್ಯ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಆರ್​ಸಿಬಿ-ಕೆಕೆಆರ್ ಪಂದ್ಯದ ನಡುವಿನ ಕೃನಾಲ್ ಪಾಂಡ್ಯ ಅವರ ಫೋಟೋವನ್ನು ಹಂಚಿಕೊಂಡು ಯೂ ಬ್ಯೂಟಿ ಮೈ ಬ್ರೋ ಎಂದು ಬರೆದು ಹಾರ್ಟ್ ಎಮೋಜೆ ಹಾಕಿದ್ದಾರೆ. ಮುಂಬೈ ಇಂಡಿಯನ್ಸ್ ಈ ಋತುವಿನಲ್ಲಿ ಮಾರ್ಚ್ 23 ರಂದು ತಮ್ಮ ಮೊದಲ ಪಂದ್ಯವನ್ನು ಆಡಲಿದೆ.

 

ಕೃನಾಲ್ ಪಾಂಡ್ಯ ಉತ್ತಮ ಆಟ ಪ್ರದರ್ಶನ:

ಆರ್‌ಸಿಬಿ ಪರ ತಮ್ಮ ಚೊಚ್ಚಲ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ತುಂಬಾ ಮಿತವ್ಯಯದಿಂದ ಬೌಲಿಂಗ್ ಮಾಡಿದರು. ಅವರು ತಮ್ಮ 4 ಓವರ್‌ಗಳ ಅವಧಿಯಲ್ಲಿ ಕೇವಲ 29 ರನ್‌ಗಳನ್ನು ಬಿಟ್ಟುಕೊಟ್ಟು ಮತ್ತು 3 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ಕೃನಾಲ್ ಪಾಂಡ್ಯ ಅಜಿಂಕ್ಯಾ ರಹಾನೆ, ವೆಂಕಟೇಶ್ ಅಯ್ಯರ್ ಮತ್ತು ರಿಂಕು ಸಿಂಗ್ ಅವರಂತಹ ದೊಡ್ಡ ಬ್ಯಾಟ್ಸ್‌ಮನ್‌ಗಳ ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಆರ್‌ಸಿಬಿ ತಂಡವು ಕೆಕೆಆರ್ ಅನ್ನು ಸಣ್ಣ ಸ್ಕೋರ್‌ಗೆ ತಡೆಯುವಲ್ಲಿ ಯಶಸ್ವಿಯಾಯಿತು. ಅದೇ ಸಮಯದಲ್ಲಿ, ಈ ಪ್ರದರ್ಶನಕ್ಕಾಗಿ ಕೃನಾಲ್ ಪಾಂಡ್ಯ ಅವರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಗೂ ಆಯ್ಕೆ ಮಾಡಲಾಯಿತು.

Bhuvneshwar Kumar: ಕೆಕೆಆರ್ ವಿರುದ್ಧ ಭುವನೇಶ್ವರ್ ಕುಮಾರ್ ಆಡದಿರಲು ಕಾರಣ ಬಹಿರಂಗ: ಇಲ್ಲಿದೆ ಮಾಹಿತಿ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 174 ರನ್ ಕಲೆಹಾಕಿತು. ನಾಯಕ ಅಜಿಂಕ್ಯಾ ರಹಾನೆ 56 ರನ್ ಬಾರಿಸಿದರು. ಟಾರ್ಗೆಟ್ ಬೆನ್ನಟ್ಟಿದ ಆರ್​​ಸಿಬಿ ಕೇವಲ 16.2 ಓವರ್​ಗಳಲ್ಲೇ 3 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿ ಜಯ ಸಾಧಿಸಿತು. ವಿರಾಟ್ ಕೊಹ್ಲಿ ಅಜೇಯ 59 ರನ್ ಸಿಡಿಸಿದರೆ ಪಿಲಿಪ್ ಸಾಲ್ಟ್ 56 ರನ್ ಚಚ್ಚಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:31 am, Sun, 23 March 25