IPL 2025: ಸುನಿಲ್ ನರೈನ್ ಹಿಟ್ ವಿಕೆಟ್ ಆದರೂ ಅಂಪೈರ್ ಔಟ್ ನೀಡಿಲ್ಲವೇಕೆ? ಇಲ್ಲಿದೆ ಕಾರಣ
IPL 2025 KKR vs RCB: ಐಪಿಎಲ್ ಸೀಸನ್-18ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು ನಿಗದಿತ 20 ಓವರ್ಗಳಲ್ಲಿ 174 ರನ್ ಕಲೆಹಾಕಿದರೆ, ಈ ಗುರಿಯನ್ನು ಆರ್ಸಿಬಿ ಪಡೆ ಕೇವಲ 16.2 ಓವರ್ಗಳಲ್ಲಿ ಚೇಸ್ ಮಾಡಿ 7 ವಿಕೆಟ್ಗಳ ಗೆಲುವು ದಾಖಲಿಸಿದೆ.

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಐಪಿಎಲ್ (IPL 2025) ಸೀಸನ್-18ರ ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಆರ್ಸಿಬಿ ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ಪರ ಸುನಿಲ್ ನರೈನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಪಂದ್ಯದ ಏಳನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಎಡಗೈ ಬ್ಯಾಟ್ಸ್‌ಮನ್ ಸುನಿಲ್ ನರೈನ್ ಶಾರ್ಟ್ ಬಾಲ್ ಆಡಲು ಪ್ರಯತ್ನಿಸಿ ವಿಫಲರಾದರು.
ಇದರ ಬೆನ್ನಲ್ಲೇ ಅವರ ಬ್ಯಾಟ್ ಸ್ಟಂಪ್ಗೆ ತಗುಲಿರುವುದು ಕಂಡುಬಂದಿದೆ. ಇದನ್ನು ಗಮನಿಸಿದ ಟಿಮ್ ಡೇವಿಡ್ ಹಿಟ್ ವಿಕೆಟ್ಗೆ ಮನವಿ ಮಾಡುವಂತೆ ಸೂಚಿಸಿದ್ದರು. ಅತ್ತ ರಜತ್ ಪಾಟಿದಾರ್ ಕೂಡ ಹಿಟ್ ವಿಕೆಟ್ ಮನವಿಗಾಗಿ ಆಸಕ್ತಿ ತೋರಿದ್ದರು. ಆದರೆ ವಿರಾಟ್ ಕೊಹ್ಲಿ ಹಾಗೂ ಜಿತೇಶ್ ಶರ್ಮಾ ಔಟ್ ಅಲ್ಲವೆಂದು ಸೂಚಿಸಿದರು. ಇದಕ್ಕೆ ಕಾರಣ ಹಿಟ್ ವಿಕೆಟ್ ನಿಯಮ.
ಹಿಟ್ ವಿಕೆಟ್ಗೆ ಮನವಿ ಮಾಡಬೇಕಿದ್ದರೆ ಚೆಂಡು ಚಾಲ್ತಿಯಲ್ಲಿರಬೇಕು. ಆದರೆ ಸುನಿಲ್ ನರೈನ್ ವಿಷಯದಲ್ಲಿ ಅದಾಗಲೇ ಬಾಲ್ ಡೆಡ್ ಆಗಿತ್ತು. ಅಂದರೆ ಚೆಂಡು ವಿಕೆಟ್ ಕೀಪರ್ ಕೈ ಸೇರಿದ ಮೇಲೆ, ಅಂಪೈರ್ ವೈಡ್ ತೀರ್ಪು ನೀಡಿದ ಬಳಿಕವಷ್ಟೇ ಸುನಿಲ್ ನರೈನ್ ಅವರ ಬ್ಯಾಟ್ ವಿಕೆಟ್ಗೆ ತಗುಲಿತ್ತು.
ಅಂದರೆ ಬಾಲ್ ಡೆಡ್ ಆದ ಬಳಿಕವಷ್ಟೇ ಅವರು ಹಿಟ್ ವಿಕೆಟ್ ಆಗಿದ್ದಾರೆ. ಹೀಗಾಗಿ ಅದು ನಾಟೌಟ್, ಇದೇ ಕಾರಣದಿಂದಾಗಿ ಕೊಹ್ಲಿ ಸೇರಿದಂತೆ ಕೆಲ ಆಟಗಾರರು ರಜತ್ ಪಾಟಿದಾರ್ ಅವರಿಗೆ ಮೂರನೇ ಅಂಪೈರ್ಗೆ ಮನವಿ ಸಲ್ಲಿಸುವ ಅವಶ್ಯಕತೆಯಿಲ್ಲ ಎಂದು ಸೂಚಿಸಿದ್ದರು.
ಸುನಿಲ್ ನರೈನ್ ಹಿಟ್ ವಿಕೆಟ್ ವಿಡಿಯೋ:
— kuchnahi123@12345678 (@kuchnahi1269083) March 22, 2025
ಒಂದು ವೇಳೆ ಚೆಂಡು ಚಾಲ್ತಿಯಲ್ಲಿದಿದ್ದರೆ ಅಂಪೈರ್ ಎಂದು ತೀರ್ಪು ನೀಡುತ್ತಿದ್ದರು. ಅಂದರೆ ಸುನಿಲ್ ನರೈನ್ ಬ್ಯಾಟ್ ತಾಗಿದ ಬಳಿಕ ಚೆಂಡು ಮೈದಾನದಲ್ಲಿ ಇದ್ದಿದ್ದರೆ ಅಥವಾ ಚೆಂಡು ವಿಕೆಟ್ ಕೀಪರ್ ಜಿತೇಶ್ ಶರ್ಮಾ ಅವರ ಕೈ ತಪ್ಪಿದ ಬಳಿಕ ಸುನಿಲ್ ನರೈನ್ ಅವರ ಬ್ಯಾಟ್ ವಿಕೆಟ್ಗೆ ತಗುಲಿದ್ದರೆ ಹಿಟ್ ವಿಕೆಟ್ಗೆ ಮನವಿ ಮಾಡುವ ಅವಕಾಶವಿತ್ತು.
ಇದನ್ನೂ ಓದಿ: IPL 2025: RCB ತಂಡಕ್ಕೆ ಬಿಗ್ ಶಾಕ್: ಪ್ರಮುಖ ಆಟಗಾರ ಗಾಯಾಳು
ಆದರೆ ಸುನಿಲ್ ನರೈನ್ ಅವರು ಹಿಟ್ ವಿಕೆಟ್ ಆಗಿದ್ದು, ಅಂಪೈರ್ ಚೆಂಡು ಡೆಡ್ ಆದ ಬಳಿಕ ವೈಡ್ ಎಂದು ತೀರ್ಪು ನೀಡಿದ ಬಳಿಕವಷ್ಟೇ. ಹೀಗಾಗಿ ಈ ಬಗ್ಗೆ ಅಪೀಲ್ ಮಾಡಿದ್ದರೂ ಮೂರನೇ ಅಂಪೈರ್ ನಾಟೌಟ್ ಎಂದು ತೀರ್ಪು ನೀಡುತ್ತಿದ್ದರು.