ಇರ್ಫಾನ್ ಪಠಾಣ್ ವಿರುದ್ಧ ಗಂಭೀರ ಆರೋಪ: ಐಪಿಎಲ್ ಕಾಮೆಂಟರಿ ಪ್ಯಾನೆಲ್‌ನಿಂದ ಔಟ್
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಇಂದಿನಿಂದ (ಮಾ.22) ಶುರುವಾಗಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದ ಮೂಲಕ ಐಪಿಎಲ್ನ ಹೊಸ ಆವೃತ್ತಿಗೆ ಚಾಲನೆ ದೊರೆಯಲಿದೆ.

ಟೀಮ್ ಇಂಡಿಯಾದ ಮಾಜಿ ಆಲ್ರೌಂಡರ್ ಇರ್ಫಾನ್ ಫಠಾಣ್ (Irfan Pathan) ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18ರ ಕಾಮೆಂಟರಿ ಪ್ಯಾನೆಲ್‌ನಿಂದ ಹೊರಬಿದ್ದಿದ್ದಾರೆ. ಈ ಹಿಂದೆ ಪ್ರತಿ ಸೀಸನ್ನಲ್ಲೂ ಕಾಮೆಂಟರಿ ತಂಡದ ಭಾಗವಾಗಿರುತ್ತಿದ್ದ ಇರ್ಫಾಣ್ ಅವರನ್ನು ಈ ಬಾರಿ ಕೈ ಬಿಡಲು ಮುಖ್ಯ ಕಾರಣ ಅವರ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪ.
ಕಾಮೆಂಟರಿ ವೇಳೆ ಇರ್ಫಾನ್ ಪಠಾಣ್ ಕೆಲ ಆಟಗಾರರನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಅವರ ಟೀಕಾತ್ಮಕ ಕಾಮೆಂಟ್‌ಗಳು ವೈಯಕ್ತಿಕ ಪ್ರೇರಿತವಾಗಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಹೀಗಾಗಿ ಅವರನ್ನು ಐಪಿಎಲ್ 2025ರ ಕಾಮೆಂಟ್ರಿ ಪ್ಯಾನೆಲ್‌ನಿಂದ ಕೈ ಬಿಡಲಾಗಿದೆ ಎಂದು ವರದಿಯಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಇರ್ಫಾನ್ ಪಠಾಣ್ ಕೆಲವು ಭಾರತೀಯ ಆಟಗಾರರ ವಿರುದ್ಧ ಮಾತನಾಡಿದ್ದರಿಂದ ಅವರನ್ನು ಕಾಮೆಂಟರಿ ಪ್ಯಾನೆಲ್‌ನಿಂದ ಹೊರಗಿಡಲಾಗಿದೆ. ಪಠಾಣ್ ಅವರ ವ್ಯಾಖ್ಯಾನದ ಬಗ್ಗೆ ಕೆಲವು ಆಟಗಾರರು ದೂರು ನೀಡಿದ್ದರು. ಈ ಆಟಗಾರರು ಇರ್ಫಾನ್ ತಮ್ಮ ಬಗ್ಗೆ ವೈಯಕ್ತಿಕ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದರಿಂದಾಗಿ ಬಿಸಿಸಿಐ ಅವರನ್ನು ಈ ಬಾರಿಯ ಐಪಿಎಲ್ ಕಾಮೆಂಟ್ರಿ ಪ್ಯಾನೆಲ್ಗೆ ಪರಿಗಣಿಸದಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ. ಇದಕ್ಕೂ ಮುನ್ನ ಸಂಜಯ್ ಮಂಜ್ರೇಕರ್ ವಿರುದ್ಧ ಕೂಡ ಇಂತಹದ್ದೇ ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ ಅವರನ್ನು ಕೆಲ ವರ್ಷಗಳ ಐಪಿಎಲ್ ಕಾಮೆಂಟರಿ ಪ್ಯಾನೆಲ್‌ನಿಂದ ಹೊರಗಿಡಲಾಗಿತ್ತು. ಇದೀಗ ಇರ್ಫಾನ್ ಪಠಾಣ್ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ಐಪಿಎಲ್ 2025ರ ಇಂಗ್ಲಿಷ್ ಕಾಮೆಂಟ್ರಿ ಪ್ಯಾನೆಲಿಸ್ಟ್:
ಹೆಸರು
|
ಹೆಸರು | ಹೆಸರು |
ಸುನಿಲ್ ಗವಾಸ್ಕರ್
|
ರವಿ ಶಾಸ್ತ್ರಿ
|
ಬ್ರಿಯಾನ್ ಲಾರಾ
|
ಮ್ಯಾಥ್ಯೂ ಹೇಡನ್
|
ಕೆವಿನ್ ಪೀಟರ್ಸನ್
|
ಮೈಕೆಲ್ ಕ್ಲಾರ್ಕ್
|
ಸಂಜಯ್ ಮಂಜ್ರೇಕರ್
|
ಆರೋನ್ ಫಿಂಚ್
|
ಇಯಾನ್ ಬಿಷಪ್
|
ನಿಕ್ ನೈಟ್
|
ಸೈಮನ್ ಕ್ಯಾಟಿಚ್
|
ಡ್ಯಾನಿ ಮಾರಿಸನ್
|
ಕ್ರಿಸ್ ಮೋರಿಸ್
|
ಸ್ಯಾಮ್ಯುಯೆಲ್ ಬದ್ರಿ
|
ಕೇಟೀ ಮಾರ್ಟಿನ್
|
ಗ್ರೇಮ್ ಸ್ವಾನ್
|
ದೀಪ್ ದಾಸ್‌ಗುಪ್ತಾ
|
ಹರ್ಷ ಭೋಗ್ಲೆ
|
ಎಂಪುಮೆಲೆಲೊ ಎಂಬಾಂಗ್ವಾ
|
ಅಂಜುಮ್ ಚೋಪ್ರಾ
|
ಮುರಳಿ ಕಾರ್ತಿಕ್
|
ಡಬ್ಲ್ಯೂ.ವಿ. ರಾಮನ್
|
ನಟಾಲಿ ಜರ್ಮನೋಸ್
|
ಡರೇನ್ ಗಂಗಾ
|
ಮಾರ್ಕ್ ಹೊವಾರ್ಡ್
|
ರೋಹನ್ ಗವಾಸ್ಕರ್
|
ಇದನ್ನೂ ಓದಿ: IPL 2025: ಬರೆದಿಟ್ಕೊಳ್ಳಿ, ಈ ಸಲ ಕಪ್ ಇವರದ್ದೆ… ಎಬಿಡಿ ಭವಿಷ್ಯ
ಐಪಿಎಲ್ 2025ರ ಹಿಂದಿ ಕಾಮೆಂಟ್ರಿ ಪ್ಯಾನೆಲಿಸ್ಟ್:
ಹೆಸರು
|
ಹೆಸರು
|
ಹೆಸರು
|
ಹರ್ಭಜನ್ ಸಿಂಗ್
|
ಸಬಾ ಕರೀಮ್ |
ಅಂಬಟಿ ರಾಯುಡು
|
ರವಿ ಶಾಸ್ತ್ರಿ
|
ಸುನಿಲ್ ಗವಾಸ್ಕರ್
|
ವರುಣ್ ಆರೋನ್
|
ಮಿಥಾಲಿ ರಾಜ್
|
ಮೊಹಮ್ಮದ್ ಕೈಫ್
|
ಸಂಜಯ್ ಮಂಜ್ರೇಕರ್
|
ಇಮ್ರಾನ್ ತಾಹಿರ್
|
ವಾಸಿಮ್ ಜಾಫರ್
|
ಗುರ್ಕೀರತ್ ಮಾನ್
|
ಉನ್ಮುಕ್ತ್ ಚಂದ್
|
ವಿವೇಕ್ ರಜ್ದಾನ್
|
ರಜತ್ ಭಾಟಿಯಾ
|
ದೀಪ್ ದಾಸ್‌ಗುಪ್ತಾ
|
ರಾಮನ್ ಭಾನೋಟ್
|
ಪದ್ಮಜೀತ್ ಸೆಹ್ರಾವತ್
|
ಜತಿನ್ ಸಪ್ರು
|
ಪ್ರಗ್ಯಾನ್ ಓಜಾ |
ಸುರೇಶ್ ರೈನಾ
|
ಪಾರ್ಥಿವ್ ಪಟೇಲ್
|
ಆರ್.ಪಿ. ಸಿಂಗ್
|
|
ಆಕಾಶ್ ಚೋಪ್ರಾ
|
ನಿಖಿಲ್ ಚೋಪ್ರಾ
|
|
ಅನಂತ್ ತ್ಯಾಗಿ
|
ರಿಧಿಮಾ ಪಾಠಕ್
|