ಲೈವ್ ಮ್ಯಾಚ್ನಲ್ಲೇ ಪಠಾಣ್- ಜಾನ್ಸನ್ ನಡುವೆ ಕಿತ್ತಾಟ; ಪರಸ್ಪರ ತಳ್ಳಾಡಿಕೊಂಡ ಲೆಜೆಂಡ್ಸ್..! ವಿಡಿಯೋ ನೋಡಿ
Legends League Cricket: ಜಾನ್ಸನ್ ಈ ವರ್ತನೆಯನ್ನು ಗಮನಿಸಿದ ಯೂಸುಫ್ ಕೂಡ ಕೋಪಗೊಂಡು, ಏನನ್ನೋ ಮಾತನಾಡುತ್ತಾ ಜಾನ್ಸನ್ ಬಳಿಗೆ ಬಂದರು. ಬಳಿಕ ಹತ್ತಿರ ಬಂದ ಯೂಸುಫ್ ಅವರನ್ನು ಜಾನ್ಸನ್ ತಳ್ಳಿದರು.
ಕ್ರಿಕೆಟ್‌ನಲ್ಲಿ ಅನೇಕ ಬಾರಿ ಆಟಗಾರರು ಮೈದಾನದಲ್ಲೇ ಪರಸ್ಪರ ಜಗಳಕ್ಕಿಳಿಯುವುದನ್ನು ನಾವು ನೋಡಿದ್ದೇವೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಐಸಿಸಿ ಕೂಡ ಹಲವು ಕ್ರಮಗಳನ್ನು ಕೈಗೊಳ್ಳುತ್ತದೆ. ಈ ಘಟನೆಯಲ್ಲಿ ದೋಷಿಯೆಂದು ಸಾಭೀತಾದ ಆಟಗಾರನಿಗೆ ಒಮ್ಮೊಮ್ಮೆ ಪಂದ್ಯದ ಶುಲ್ಕದಲ್ಲಿ ದಂಡ ವಿದಿಸಿದರೆ, ಒಮ್ಮೊಮ್ಮೆ ಒಂದು ಪಂದ್ಯಕ್ಕೆ ನಿಷೇಧ ಕೂಡ ಹೆರಲಾಗುತ್ತದೆ. ಈಗ ಇಂತಹದ್ದೆ ಘಟನೆಯೊಂದು ನಡೆದಿದ್ದು, ವಿಶ್ವ ಕ್ರಿಕೆಟ್‌ನ ಇಬ್ಬರು ದಿಗ್ಗಜರು ಮೈದಾನದಲ್ಲಿ ಜಗಳಕ್ಕಿಳಿದಿದ್ದನ್ನು ಕಂಡು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ವಾಸ್ತವವಾಗಿ ಭಾನುವಾರ ಜೋಧ್‌ಪುರದ ಬರ್ಕತುಲ್ಲಾ ಖಾನ್ ಸ್ಟೇಡಿಯಂನಲ್ಲಿ ನಡೆದ ಭಿಲ್ವಾರಾ ಕಿಂಗ್ಸ್ ಮತ್ತು ಇಂಡಿಯಾ ಕ್ಯಾಪಿಟಲ್ಸ್ ನಡುವಿನ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಕ್ವಾಲಿಫೈಯರ್ ಪಂದ್ಯದ ವೇಳೆ ಮಿಚೆಲ್ ಜಾನ್ಸನ್ ಮತ್ತು ಯೂಸುಫ್ ಪಠಾಣ್ ತೀವ್ರ ಮಾತಿನ ಚಕಮಕಿ ನಡೆಸಿದರು. ಭಿಲ್ವಾರಾ ಕಿಂಗ್ಸ್ ಇನ್ನಿಂಗ್ಸ್‌ನ 19 ನೇ ಓವರ್‌ನ ಕೊನೆಯ ಎಸೆತದಲ್ಲಿ ಜಾನ್ಸನ್, ಯೂಸುಫ್ ಅವರನ್ನು ಔಟ್ ಮಾಡಿದರು. ವಿಕೆಟ್ ಬಳಿಕ ಪಠಾಣ್ ಮೇಲೆ ಜಾನ್ಸನ್ ತಮ್ಮ ಆಕ್ರೋಶ ಹೊರಹಾಕಿರು. ಅವರ ಆಕ್ರೋಶಕ್ಕೆ ಯೂಸುಫ್ ಪಠಾಣ್ ಅವರ ಅಬ್ಬರದ ಬ್ಯಾಟಿಂಗ್ ಕೂಡ ಕಾರಣವಾಗಿತ್ತು. ಜಾನ್ಸನ್ ಎಸೆದ ಓವರ್ನಲ್ಲಿ ಯೂಸುಫ್ ಮೊದಲ ಮೂರು ಎಸೆತಗಳಲ್ಲಿ 6, 4 ಮತ್ತು 6 ಬಾರಿಸಿದ್ದರು. ಇದರಿಂದ ಕೋಪಗೊಂಡಿದ್ದ ಜಾನ್ಸನ್, ಪಠಾಣ್ ವಿಕೆಟ್ ಪಡೆದ ಬಳಿಕ ಏನನ್ನೋ ಗೊಣಗಲು ಆರಂಭಿಸಿದರು.
ಜಾನ್ಸನ್ ಈ ವರ್ತನೆಯನ್ನು ಗಮನಿಸಿದ ಯೂಸುಫ್ ಕೂಡ ಕೋಪಗೊಂಡು, ಏನನ್ನೋ ಮಾತನಾಡುತ್ತಾ ಜಾನ್ಸನ್ ಬಳಿಗೆ ಬಂದರು. ಬಳಿಕ ಹತ್ತಿರ ಬಂದ ಯೂಸುಫ್ ಅವರನ್ನು ಜಾನ್ಸನ್ ತಳ್ಳಿದರು. ಇದರಿಂದ ಇನ್ನಷ್ಟು ಕೋಪಗೊಂಡ ಯೂಸುಫ್, ಜಾನ್ಸನ್ ಮೇಲೆ ಜಗಳಕ್ಕೆ ಸಿದ್ದರಾದರು. ಅಷ್ಟರಲ್ಲಾಗಲೇ ಈ ಇಬ್ಬರ ಜಗಳ ಕಂಡ ಆನ್-ಫೀಲ್ಡ್ ಅಂಪೈರ್‌ಗಳು ಮಧ್ಯಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿದರು.
ಜಾನ್ಸನ್ಗೆ ಒಂದು ಪಂದ್ಯದಿಂದ ನಿಷೇಧ?
ಕೇವಲ 2 ಓವರ್ ಬೌಲ್ ಮಾಡಿ ಬರೋಬ್ಬರಿ 51 ರನ್ ಬಿಟ್ಟುಕೊಟ್ಟ ಜಾನ್ಸನ್ ಅಂತಿಮವಾಗಿ ನಗುತ್ತಾ ಹೊರ ನಡೆದರು. ಐಸಿಸಿ ನಿಯಮಗಳ ಪ್ರಕಾರ ಪಠಾಣ್ ವಿರುದ್ಧ ಈ ವರ್ತನೆ ತೋರಿದ ಜಾನ್ಸನ್ ಅವರನ್ನು ಒಂದು ಪಂದ್ಯಕ್ಕೆ ನಿಷೇಧಿಸಲು ಸಂಘಟಕರು ಯೋಜಿಸುತ್ತಿದ್ದಾರೆ. ಇದು ಸಂಭವಿಸಿದಲ್ಲಿ ಜಾನ್ಸನ್ ಫೈನಲ್ ಆಡಲು ಸಾಧ್ಯವಾಗುವುದಿಲ್ಲ.
#ICYMI: Things got really heated in @llct20 between Yusuf Pathan and Mitchell Johnson. ? pic.twitter.com/4EnwxlOg5P
— Nikhil ? (@CricCrazyNIKS) October 2, 2022
ಆದರೂ ಈ ಪಂದ್ಯದಲ್ಲಿ ಇಂಡಿಯಾ ಕ್ಯಾಪಿಟಲ್ಸ್ ತಂಡ ಭಿಲ್ವಾರಾ ಕಿಂಗ್ಸ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೇರಿತು. ಸೋಲುಂಡ ಕಿಂಗ್ಸ್‌ಗೆ ಮತ್ತೊಂದು ಅವಕಾಶವಿದ್ದು, ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಸೆಣಸಿ ಮತ್ತೆ ಫೈನಲ್‌ಗೇರುವ ಅವಕಾಶ ಭಿಲ್ವಾರಾ ಕಿಂಗ್ಸ್ ತಂಡಕ್ಕಿದೆ.
ಪಂದ್ಯ ಹೀಗಿತ್ತು
ಡೆತ್ ಓವರ್‌ಗಳಲ್ಲಿ ಇನ್‌ಫಾರ್ಮ್‌ನಲ್ಲಿರುವ ಯೂಸುಫ್ (28 ಎಸೆತಗಳಲ್ಲಿ 48) ಮತ್ತು ರಾಜೇಶ್ ಬಿಷ್ಣೋಯ್ (11 ಎಸೆತಗಳಲ್ಲಿ ಔಟಾಗದೆ 36) ದಾಳಿಯಿಂದ ಕಿಂಗ್ಸ್ ಕೊನೆಯ ಮೂರು ಓವರ್‌ಗಳಲ್ಲಿ 56 ರನ್ ಸೇರಿಸಿ ಸವಾಲಿನ ಮೊತ್ತವನ್ನು ದಾಖಲಿಸಿದರು. ಇವರ ಜೊತೆಗೆ ಶೇನ್ ವ್ಯಾಟ್ಸನ್ ಕೂಡ ಅಬ್ಬರದ ಇನ್ನಿಂಗ್ಸ್ ಆಡಿ 39 ಎಸೆತಗಳಲ್ಲಿ 10 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಿತ 65 ರನ್ ಗಳಿಸಿದರು. ಮತ್ತೊಂದೆಡೆ ವಿಲಿಯಂ ಪೋರ್ಟರ್‌ಫೀಲ್ಡ್ ತಮ್ಮ 37 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳಿಂದ 59 ರನ್ ಗಳಿಸಿದರು. ಈ ನಾಲ್ವರ ಸ್ಫೋಟಕ ಇನ್ನಿಂಗ್ಸ್ನಿಂದಾಗಿ ಕಿಂಗ್ಸ್ ತಂಡ 226 ರನ್ ಟಾರ್ಗೆಟ್ ನೀಡಿತು.
ಈ ಗುರಿ ಬೆನ್ನಟ್ಟಿದ ಇಂಡಿಯಾ ಕ್ಯಾಪಿಟಲ್ಸ್ ತಂಡದ ಆರಂಭ ಉತ್ತಮವಾಗಿಲ್ಲದಿದ್ದರೂ ಮಧ್ಯಮ ಕ್ರಮಾಂಕದಲ್ಲಿ ರಾಸ್ ಟೇಲರ್ 9 ಫೋರ್, 5 ಸಿಕ್ಸರ್‌ಗಳ ಸಹಿತ 84 ರನ್ ಗಳಿಸಿದರು. ಜೊತೆಗೆ ನರ್ಸೆ ಕೂಡ ಅಂತಮ ಹಂತದಲ್ಲಿ ಕೇವಲ 28 ಎಸೆತಗಳಲ್ಲಿ ಅಜೇಯ 60 ರನ್ಗಳಿಸಿ ತಂಡಕ್ಕೆ ಅಮೋಘ ಜಯ ತಂದುಕೊಟ್ಟರು.
Published On - 4:50 pm, Mon, 3 October 22