LSG vs CSK Highlights, IPL 2025: ಕೊನೆಗೂ ಸತತ 5 ಪಂದ್ಯಗಳ ಸೋಲಿನ ಸರಣಿ ಮುರಿದ ಸಿಎಸ್​ಕೆ

Lucknow Super Giants vs Chennai Super Kings Highlights in Kannada: ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐಪಿಎಲ್ 2025 ರಲ್ಲಿ ತನ್ನ ಎರಡನೇ ಗೆಲುವು ದಾಖಲಿಸಿತು. ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಅವರ ತವರು ಮೈದಾನದಲ್ಲಿ 5 ವಿಕೆಟ್​ಗಳಿಂದ ಮಣಿಸಿದ ಸಿಎಸ್​ಕೆ ಸತತ ಐದು ಪಂದ್ಯಗಳ ಸೋಲಿನ ಸರಣಿಯನ್ನು ಮುರಿಯಿತು.

LSG vs CSK Highlights, IPL 2025: ಕೊನೆಗೂ ಸತತ 5 ಪಂದ್ಯಗಳ ಸೋಲಿನ ಸರಣಿ ಮುರಿದ ಸಿಎಸ್​ಕೆ
Dhoni

Updated on: Apr 14, 2025 | 11:39 PM

ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೊನೆಗೂ ತನ್ನ ಸೋಲಿನ ಸರಣಿಯನ್ನು ಮುರಿದಿದೆ. ಸತತ ಐದು ಪಂದ್ಯಗಳಲ್ಲಿ ಸೋತ ನಂತರ, ಚೆನ್ನೈ ತಂಡವು ಈ ಸೀಸನ್​ನಲ್ಲಿ ಎರಡನೇ ಗೆಲುವು ದಾಖಲಿಸಿತು. ಲಕ್ನೋ ನೀಡಿದ 167 ರನ್​​ಗಳ ಗುರಿ ಬೆನ್ನಟ್ಟಿದ ಸಿಎಸ್​ಕೆ ಕೊನೆಯ ಓವರ್‌ನಲ್ಲಿ ಗುರಿ ಸಾಧಿಸಿತು. ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನಲ್ಲಿ ಎಂಎಸ್ ಧೋನಿ ಅವರ ಪ್ರದರ್ಶನ ಅತ್ಯುತ್ತಮವಾಗಿತ್ತು. ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್​ಗೆ ಬಂದ ಧೋನಿ 11 ಎಸೆತಗಳಲ್ಲಿ ಅಜೇಯ 26 ರನ್ ಗಳಿಸಿದರು. ಅವರ ಬ್ಯಾಟ್‌ನಿಂದ 4 ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಯಿತು. ಅವರನ್ನು ಹೊರತುಪಡಿಸಿ, ಶಿವಂ ದುಬೆ 37 ಎಸೆತಗಳಲ್ಲಿ ಅಜೇಯ 43 ರನ್ ಗಳಿಸಿದರು. ರಚಿನ್ ರವೀಂದ್ರ 37 ರನ್ ಮತ್ತು ಶೇಖ್ ರಶೀದ್ 27 ರನ್​ಗಳ ಕಾಣಿಕೆ ನೀಡಿದರು.

LIVE NEWS & UPDATES

The liveblog has ended.
  • 14 Apr 2025 11:36 PM (IST)

    ಚೆನ್ನೈ ತಂಡಕ್ಕೆ ಗೆಲುವು

    ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈ ಸೀಸನ್​ನಲ್ಲಿ ತನ್ನ ಎರಡನೇ ಗೆಲುವು ಸಾಧಿಸಿದೆ. ಶಿವಂ ದುಬೆ ಬೌಂಡರಿ ಬಾರಿಸುವ ಮೂಲಕ ಚೆನ್ನೈ ತಂಡಕ್ಕೆ ಗೆಲುವು ತಂದುಕೊಟ್ಟರು. ಚೆನ್ನೈ ಐದು ವಿಕೆಟ್‌ಗಳಿಂದ ಗೆಲುವು ಸಾಧಿಸಿತು.

  • 14 Apr 2025 11:18 PM (IST)

    ಠಾಕೂರ್ ಓವರ್​ನಲ್ಲಿ 13 ರನ್

    ಶಾರ್ದೂಲ್ ಠಾಕೂರ್ ಅವರ ಓವರ್‌ನಲ್ಲಿ 13 ರನ್ ಬಂದವು. ಕೊನೆಯ ಎಸೆತದಲ್ಲಿ ಧೋನಿಯ ಬ್ಯಾಟ್‌ನಿಂದ ಸಿಕ್ಸರ್ ಬಂತು. ಅದ್ಭುತವಾದ ಹೊಡೆತ. 18 ಎಸೆತಗಳಲ್ಲಿ 31 ರನ್ ಬೇಕಾಗಿವೆ.


  • 14 Apr 2025 11:17 PM (IST)

    ಧೋನಿ ಎರಡು ಬೌಂಡರಿ

    16ನೇ ಓವರ್- ಆವೇಶ್ ಖಾನ್ ಅವರ ಓವರ್‌ನಲ್ಲಿ ಧೋನಿ ಸತತ ಎರಡು ಬೌಂಡರಿಗಳನ್ನು ಬಾರಿಸಿದರು. ಆ ಓವರ್‌ನಲ್ಲಿ 14 ರನ್‌ಗಳು ಬಂದವು. 4 ಓವರ್‌ಗಳಲ್ಲಿ 44 ರನ್‌ಗಳು ಬೇಕಾಗಿವೆ.

  • 14 Apr 2025 11:04 PM (IST)

    ಚೆನ್ನೈ ಐದನೇ ವಿಕೆಟ್

    ವಿಜಯ್ ಶಂಕರ್ ಒಂಬತ್ತು ರನ್ ಗಳಿಸಿ ಔಟಾದರು. ಧೋನಿ ಈಗ ಕ್ರೀಸ್‌ನಲ್ಲಿದ್ದಾರೆ.

  • 14 Apr 2025 10:48 PM (IST)

    ಜಡೇಜಾ ಔಟ್

    ರವಿ ಬಿಷ್ಣೋಯ್ ರವೀಂದ್ರ ಜಡೇಜಾ ಅವರ ವಿಕೆಟ್ ಉರುಳಿಸಿದರು. ಜಡೇಜಾ ಕೇವಲ ಏಳು ರನ್ ಗಳಿಸಲು ಸಾಧ್ಯವಾಯಿತು. ವಿಜಯ್ ಶಂಕರ್ ಮತ್ತು ಶಿವಂ ದುಬೆ ಈಗ ಕ್ರೀಸ್‌ನಲ್ಲಿದ್ದಾರೆ.

  • 14 Apr 2025 10:29 PM (IST)

    ಚೆನ್ನೈ ಮೂರನೇ ವಿಕೆಟ್

    ರಾಹುಲ್ ತ್ರಿಪಾಠಿ ಒಂಬತ್ತು ರನ್ ಗಳಿಸಿ ಔಟಾದರು. ಈಗ ಶಿವಂ ದುಬೆ ಜಡೇಜಾಗೆ ಬೆಂಬಲ ನೀಡಲು ಬಂದಿದ್ದಾರೆ. ತಂಡ ಗೆಲ್ಲಲು 67 ಎಸೆತಗಳಲ್ಲಿ 91 ರನ್ ಗಳ ಅವಶ್ಯಕತೆಯಿದೆ.

  • 14 Apr 2025 10:28 PM (IST)

    ರಚಿನ್ ಔಟ್

    ಐಡೆನ್ ಮಾರ್ಕ್ರಾಮ್ ಚೆನ್ನೈ ತಂಡಕ್ಕೆ ಎರಡನೇ ಹೊಡೆತ ನೀಡಿದರು.ರಚಿನ್ ರವೀಂದ್ರ 37 ರನ್ ಗಳಿಸಿ ಔಟಾದರು. ಈಗ ರವೀಂದ್ರ ಜಡೇಜಾ ರಾಹುಲ್ ಬೆಂಬಲಕ್ಕೆ ಬಂದಿದ್ದಾರೆ.

  • 14 Apr 2025 10:09 PM (IST)

    ಶೇಖ್ ರಶೀದ್ ಔಟ್

    ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲ ವಿಕೆಟ್ ಕಳೆದುಕೊಂಡಿದೆ. ಶೇಖ್ ರಶೀದ್ 27 ರನ್ ಗಳಿಸಿ ಔಟಾದರು. ಅವೇಶ್ ಖಾನ್ ಬೌನ್ಸರ್ ನಲ್ಲಿ ಪೂರನ್ಗೆ​ ಸುಲಭ ಕ್ಯಾಚ್ ನೀಡಿದರು.

  • 14 Apr 2025 10:08 PM (IST)

    50 ರನ್ ಪೂರ್ಣ

    ರಚಿನ್ ಮತ್ತು ಶೇಖ್ ರಶೀದ್ ಕೇವಲ 4.2 ಓವರ್‌ಗಳಲ್ಲಿ ತಂಡದ ಸ್ಕೋರ್ ಅನ್ನು ಐವತ್ತರ ಗಡಿ ದಾಟಿಸಿದರು. ಈ ಸೀಸನ್​ನಲ್ಲಿ ಚೆನ್ನೈ ತಂಡದ ಅತ್ಯಂತ ವೇಗದ ಆರಂಭ ಇದಾಗಿದೆ.

  • 14 Apr 2025 10:07 PM (IST)

    ಮೂರನೇ ಓವರ್‌ನಲ್ಲಿ ಮತ್ತೆ 3 ಬೌಂಡರಿ

    ಶಾರ್ದೂಲ್ ಠಾಕೂರ್ ಅವರ ಓವರ್‌ನಲ್ಲಿ ಮೂರು ಬೌಂಡರಿಗಳು ಬಂದವು. ಶೇಖ್ ರಶೀದ್ ಎರಡು ಬೌಂಡರಿಗಳನ್ನು ಹೊಡೆದರು ಮತ್ತು ರಚಿನ್ ರವೀಂದ್ರ ಒಂದು ಬೌಂಡರಿಯನ್ನು ಹೊಡೆದರು. 3 ಓವರ್‌ಗಳ ನಂತರ ಚೆನ್ನೈ ತಂಡದ ಸ್ಕೋರ್ 37 ರನ್‌ಗಳು.

  • 14 Apr 2025 09:51 PM (IST)

    ಚೆನ್ನೈಗೆ ವೇಗದ ಆರಂಭ

    ಮೊದಲ ಓವರ್‌ನಲ್ಲಿ ಶೇಖ್ ರಶೀದ್ ಮತ್ತು ರಚಿನ್ ರವೀಂದ್ರ 10 ರನ್ ಗಳಿಸಿದರು. ರಚಿನ್ ರವೀಂದ್ರ ಎರಡು ಬೌಂಡರಿಗಳನ್ನು ಬಾರಿಸಿದರು ಮತ್ತು ಶೇಖ್ ರಶೀದ್ ಕೂಡ ತಮ್ಮ ಖಾತೆಯನ್ನು ತೆರೆದರು.

  • 14 Apr 2025 09:25 PM (IST)

    167 ರನ್‌ ಟಾರ್ಗೆಟ್

    ಲಕ್ನೋ ಸೂಪರ್‌ಜೈಂಟ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್​ಗೆ 167 ರನ್​ಗಳ ಗುರಿ ನೀಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ ರಿಷಭ್ ಪಂತ್ ಅವರ 63 ರನ್‌ಗಳ ಇನ್ನಿಂಗ್ಸ್‌ನಿಂದ 166 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

  • 14 Apr 2025 09:25 PM (IST)

    ಸತತ 2 ವಿಕೆಟ್

    ಕೊನೆಯ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಇಬ್ಬರು ಆಟಗಾರರು ಔಟಾದರು. ಎರಡೂ ಔಟ್‌ಗಳಲ್ಲಿ ಧೋನಿಯ ಕೈವಾಡವಿತ್ತು. ಮೊದಲು ಧೋನಿ ಅಬ್ದುಲ್ ಸಮದ್ ಅವರನ್ನು ರನ್ ಔಟ್ ಮಾಡಿದರು. ಪತಿರಾನ ಎಸೆದ ಮುಂದಿನ ಎಸೆತದಲ್ಲಿ ಧೋನಿ ಪಂತ್ ಕ್ಯಾಚ್ ಪಡೆದರು.

  • 14 Apr 2025 09:23 PM (IST)

    ಖಲೀಲ್ ದುಬಾರಿ

    19ನೇ ಓವರ್‌ನಲ್ಲಿ ಖಲೀಲ್ ಅಹ್ಮದ್ 16 ರನ್ ನೀಡಿದರು. ಮೂರನೇ ಎಸೆತದಲ್ಲಿ ಪಂತ್ ಅದ್ಭುತ ಸಿಕ್ಸರ್ ಬಾರಿಸಿದರು. ಅಬ್ದುಲ್ ಸಮದ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿದರು.

  • 14 Apr 2025 09:09 PM (IST)

    ಪಂತ್ 42 ಎಸೆತಗಳಲ್ಲಿ ಅರ್ಧಶತಕ

    ರಿಷಭ್ ಪಂತ್ 42 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ. ಇದು ಪ್ರಸಕ್ತ ಸೀಸನ್​ನಲ್ಲಿ ಅವರ ಮೊದಲ ಅರ್ಧಶತಕವಾಗಿದೆ. 18 ಓವರ್‌ಗಳ ನಂತರ ಲಕ್ನೋ ಸ್ಕೋರ್ 139/4.

  • 14 Apr 2025 08:51 PM (IST)

    ಕೊನೆಗೂ ಬಡೋನಿ ಔಟ್

    ಕೊನೆಗೂ ಬಡೋನಿ ಔಟ್ ಆಗಿದ್ದಾರೆ. ಇದಕ್ಕೂ ಮುನ್ನ ಸಿಕ್ಕ ಜೀವದಾನವನ್ನು ಬಳಸಿಕೊಳ್ಳಲು ಬಡೋನಿಗೆ ಸಾಧ್ಯವಾಗಲಿಲ್ಲ. 22 ರನ್ ಗಳಿಸಿದ ನಂತರ ಬಡೋನಿ ಔಟಾದರು.

  • 14 Apr 2025 08:40 PM (IST)

    ಶಾನ್ ಮಾರ್ಷ್ ಬೌಲ್ಡ್

    ಜಡೇಜಾ ಎಸೆತದಲ್ಲಿ ಶಾನ್ ಮಾರ್ಷ್ ಬೌಲ್ಡ್ ಆದರು. 30 ರನ್ ಗಳಿಸಿ ಶಾನ್ ಮಾರ್ಷ್ ಔಟಾದರು.

  • 14 Apr 2025 08:20 PM (IST)

    ಧೋನಿಗೆ ಎಚ್ಚರಿಕೆ

    ನೂರ್ ಅಹ್ಮದ್ ಕೇವಲ 5 ರನ್‌ಗಳನ್ನು ನೀಡಿದರು. ಈ ಓವರ್‌ಗೆ ಮುನ್ನ ಧೋನಿ ಓವರ್‌ಗಳ ನಡುವೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿರುವುದರಿಂದ ಅವರಿಗೆ ಎಚ್ಚರಿಕೆ ನೀಡಲಾಗಿದೆ

  • 14 Apr 2025 08:20 PM (IST)

    ಜಡೇಜಾ ದುಬಾರಿ ಓವರ್

    ಜಡೇಜಾ ಅವರ ಎರಡನೇ ಎಸೆತದಲ್ಲಿ ಮಾರ್ಷ್ ಬೌಂಡರಿ ಬಾರಿಸಿದರು ಮತ್ತು ನಾಲ್ಕನೇ ಎಸೆತದಲ್ಲಿ ಪಂತ್ ಬೌಂಡರಿ ಬಾರಿಸಿದರು. ಆ ಓವರ್‌ನಲ್ಲಿ 10 ರನ್‌ಗಳು ಬಂದವು.

  • 14 Apr 2025 08:19 PM (IST)

    ಲಕ್ನೋ 50 ರನ್ ಪೂರ್ಣ

    ಲಕ್ನೋ ಸೂಪರ್‌ಜೈಂಟ್ಸ್ ಐವತ್ತು ರನ್‌ಗಳನ್ನು ಪೂರ್ಣಗೊಳಿಸಿದೆ. ಜೇಮೀ ಓವರ್ಟನ್ ಎಸೆತದಲ್ಲಿ ಪಂತ್ ಸಿಕ್ಸರ್ ಬಾರಿಸಿದರು.

  • 14 Apr 2025 08:18 PM (IST)

    ಪವರ್‌ಪ್ಲೇನಲ್ಲಿ ಕೇವಲ 42 ರನ್‌

    ಅನ್ಶುಲ್ ಕಾಂಬೋಜ್ ಅವರಿಂದ ಮತ್ತೊಂದು ಅದ್ಭುತ ಓವರ್. ಕೇವಲ 8 ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟರು. ಪವರ್ ಪ್ಲೇನಲ್ಲಿ ಲಕ್ನೋ ತಂಡ ಕೇವಲ 42 ರನ್ ಗಳಿಸಲು ಶಕ್ತವಾಯಿತು. ಮಾರ್ಕ್ರಾಮ್ ಮತ್ತು ಪೂರನ್ ಔಟ್ ಆಗಿದ್ದಾರೆ.

  • 14 Apr 2025 07:59 PM (IST)

    ಪೂರನ್ ಔಟ್

    ನಾಲ್ಕನೇ ಓವರ್​ನಲ್ಲಿ ನಿಕೋಲಸ್ ಪೂರನ್ ಔಟಾದರು. ಅನ್ಶುಲ್ ಕಾಂಬೋಜ್ ಪೂರನ್ ಅವರನ್ನು ಎಲ್ ಬಿಡಬ್ಲ್ಯು ಔಟ್ ಮಾಡಿದರು. ಪೂರನ್ ಕೇವಲ 8 ರನ್ ಗಳಿಸಿ ಔಟಾದರು.

  • 14 Apr 2025 07:40 PM (IST)

    ಲಕ್ನೋ ಮೊದಲ ವಿಕೆಟ್

    ಖಲೀಲ್ ಅಹ್ಮದ್ ಲಕ್ನೋಗೆ ಮೊದಲ ಹೊಡೆತ ನೀಡಿದರು. ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿಯೇ ಅವರು ಐಡೆನ್ ಮಾರ್ಕ್ರಾಮ್ ಅವರ ವಿಕೆಟ್ ಪಡೆದರು. ನಿಕೋಲಸ್ ಪೂರನ್ ಈಗ ಬ್ಯಾಟಿಂಗ್‌ಗೆ ಬರುತ್ತಿದ್ದಾರೆ.

  • 14 Apr 2025 07:16 PM (IST)

    ಚೆನ್ನೈ ಸೂಪರ್ ಕಿಂಗ್ಸ್

    ಶೇಖ್ ರಶೀದ್, ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ವಿಜಯ್ ಶಂಕರ್, ರವೀಂದ್ರ ಜಡೇಜಾ, ಜೇಮಿ ಓವರ್ಟನ್, ಎಂಎಸ್ ಧೋನಿ, ಅನ್ಶುಲ್ ಕಾಂಬೋಜ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಮತಿಶಾ ಪತಿರಾನ.

  • 14 Apr 2025 07:15 PM (IST)

    ಲಕ್ನೋ ಸೂಪರ್ ಜೈಂಟ್ಸ್

    ಏಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ರಿಷಭ್ ಪಂತ್ (ವಿಕೆಟ್ ಕೀಪರ್/ನಾಯಕ), ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್, ಶಾರ್ದೂಲ್ ಠಾಕೂರ್, ಅವೇಶ್ ಖಾನ್, ಆಕಾಶ್ ದೀಪ್, ದಿಗ್ವೇಶ್ ಸಿಂಗ್ ರಾಠಿ.

  • 14 Apr 2025 07:02 PM (IST)

    ಟಾಸ್ ಗೆದ್ದ ಸಿಎಸ್​ಕೆ ಬೌಲಿಂಗ್ ಆಯ್ಕೆ

    ಟಾಸ್ ಗೆದ್ದ ಸಿಎಸ್​ಕೆ ನಾಯಕ ಎಂಎಸ್ ಧೋನಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

  • Published On - 7:01 pm, Mon, 14 April 25