AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LSG vs PBKS Highlights IPL 2023: ಸಿಕಂದರ್ ಅರ್ಧಶತಕ; ರೋಚಕ ಪಂದ್ಯದಲ್ಲಿ ಸೋತ ಲಕ್ನೋ

Lucknow Super Giants vs Punjab Kings IPL 2023 Highlights in Kannada: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ತನ್ನ ನಾಯಕ ಶಿಖರ್ ಧವನ್ ಅನುಪಸ್ಥಿತಿಯಲ್ಲೂ ಬಲಿಷ್ಠ ಪ್ರದರ್ಶನ ನೀಡಿ 2 ವಿಕೆಟ್​ಗಳ ಜಯ ಸಾಧಿಸಿದೆ.

LSG vs PBKS Highlights IPL 2023: ಸಿಕಂದರ್ ಅರ್ಧಶತಕ; ರೋಚಕ ಪಂದ್ಯದಲ್ಲಿ ಸೋತ ಲಕ್ನೋ
ಲಕ್ನೋ- ಪಂಜಾಬ್ ಮುಖಾಮುಖಿ
ಪೃಥ್ವಿಶಂಕರ
|

Updated on:Apr 15, 2023 | 11:35 PM

Share

ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ನಡೆದ ಐಪಿಎಲ್​ನ 21ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸೋಲಿನ ಸರಣಿಯನ್ನು ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ತನ್ನ ನಾಯಕ ಶಿಖರ್ ಧವನ್ ಅನುಪಸ್ಥಿತಿಯಲ್ಲೂ ಬಲಿಷ್ಠ ಪ್ರದರ್ಶನ ನೀಡಿ 2 ವಿಕೆಟ್​ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ತಂಡ ನಾಯಕ ರಾಹುಲ್ ಅವರ ಅರ್ಧಶತಕದ ನೆರವಿನಿಂದ 159 ರನ್ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳಲಾರಂಭಿಸಿತ್ತಾದರೂ, ಕೆಳಕ್ರಮಾಂಕದಲ್ಲಿ ಬಂದ ಸಿಕಂದರ್ ರಜಾ ಸ್ಫೋಟಕ ಬ್ಯಾಟಿಂಗ್ ನಡೆಸಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ಶಾರುಖ್ ಖಾನ್ ಕೂಡ ಅಬ್ಬರದ ಇನ್ನಿಂಗ್ಸ್ ಆಡುವ ಮೂಲಕ ಪಂಜಾಬ್​ ತಂಡಕ್ಕೆ ಗೆಲುವು ತಂದಿತ್ತರು.

LIVE NEWS & UPDATES

The liveblog has ended.
  • 15 Apr 2023 11:29 PM (IST)

    ಪಂದ್ಯ ಮುಗಿಸಿದ ಶಾರುಖ್

    20ನೇ ಓವರ್​ನ ಮೊದಲ ಎರಡು ಎಸೆತಗಳಲ್ಲಿ ಎರಡು ಡಬಲ್ ಕದ್ದ ಶಾರುಖ್ 3ನೇ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಪಂಜಾಬ್​ ತಂಡಕ್ಕೆ ಗೆಲುವು ತಂದುಕೊಟ್ಟರು.

  • 15 Apr 2023 11:25 PM (IST)

    ಬ್ರಾರ್ ಬೌಂಡರಿ, ಔಟ್

    19ನೇ ಓವರ್​ನ 4ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಬ್ರಾರ್ 5ನೇ ಎಸೆತದಲ್ಲಿ ಕೀಪರ್​ಗೆ ಕ್ಯಾಚಿತ್ತು ಔಟಾದರು.

  • 15 Apr 2023 11:23 PM (IST)

    ಶಾರುಖ್ ಸಿಕ್ಸರ್

    ಮಾರ್ಕ್​ವುಡ್ ಅವರ 19ನೇ ಓವರ್​ನ 2ನೇ ಎಸೆತದಲ್ಲಿ ಶಾರುಖ್ ಕೀಪರ್ ತಲೆಯ ಮೇಲೆ ಸಿಕ್ಸರ್ ಬಾರಿಸಿದರು.

  • 15 Apr 2023 11:18 PM (IST)

    ಸಿಕಂದರ್ ಔಟ್

    ಪಂಜಾಬ್ ಪರ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದ ಸಿಕಂದರ್ ರಜಾ ರವಿ ಬಿಷ್ಣೋಯಿ ಎಸೆತದಲ್ಲಿ ಕ್ಯಾಚಿತ್ತು ಔಟಾದರು.

  • 15 Apr 2023 11:09 PM (IST)

    ಶಾರುಖ್ ಸಿಕ್ಸ್

    ಜಿತೇಶ್ ಬಳಿಕ ಬಂದ ಶಾರುಖ್ ಖಾನ್ ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದರು.

  • 15 Apr 2023 11:01 PM (IST)

    ಜಿತೇಶ್ ಔಟ್

    ಒಂದೆಡೆ ಸಿಕಂದರ್ ಅಬ್ಬರದ ಬ್ಯಾಟಿಂಗ್ ಆಡುತ್ತಿದ್ದರೆ, ಇನ್ನೊಂದೆಡೆ ಪಂಜಾಬ್ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಿದೆ. ಕರನ್ ವಿಕೆಟ್ ಬಳಿಕ ಬಂದಿದ್ದ ಜಿತೇಶ್ ರಾಹುಲ್​​ಗೆ ಕ್ಯಾಚಿತ್ತು ಔಟಾಗಿದ್ದಾರೆ.

  • 15 Apr 2023 11:00 PM (IST)

    ಸಿಕಂದರ್ ಅರ್ಧಶತಕ

    ಮಾರ್ಕ್​ವುಡ್ ಎಸೆದ 16ನೇ ಓವರ್​ನ 3ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಸಿಕಂದರ್, ಮುಂದಿನ ಎಸೆತದಲ್ಲಿ ಸಿಂಗಲ್ ಕದ್ದು ತಮ್ಮ ಅರ್ಧಶತಕ ಪೂರೈಸಿದರು.

  • 15 Apr 2023 10:53 PM (IST)

    ಕರನ್ ಔಟ್

    ಬಿಷ್ಣೋಯಿ ಎಸೆದ 15ನೇ ಓವರ್​ನ 2ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಸ್ಯಾಮ್ ಕರನ್ ಅದರ ನಂತರದ ಎಸೆತದಲ್ಲೇ ಲಾಂಗ್​ ಆಫ್​ನಲ್ಲಿ ಕೃನಾಲ್​ಗೆ ಕ್ಯಾಚಿತ್ತು ಔಟಾದರು.

  • 15 Apr 2023 10:43 PM (IST)

    ಕೃನಾಲ್ ದುಬಾರಿ

    ಕೃನಾಲ್ ಎಸೆದ 13ನೇ ಓವರ್​ನ 2 ಮತ್ತು 3 ನೇ ಎಸೆತವನ್ನು ರಜಾ ಓವರ್ ಮಿಡ್ ವಿಕೆಟ್​ನಲ್ಲಿ ಸಿಕ್ಸರ್ ಬಾರಿಸಿದರೆ, 4ನೇ ಎಸೆತವನ್ನು ಓವರ್ ಮಿಡ್ ವಿಕೆಟ್​ನಲ್ಲಿ ಬೌಂಡರಿ ಬಾರಿಸಿದರು.

  • 15 Apr 2023 10:40 PM (IST)

    ರಜಾ ಸಿಕ್ಸರ್

    12ನೇ ಓವರ್ ಎಸೆದ ಗೌತಮ್ 1 ಸಿಕ್ಸರ್ ಬಿಟ್ಟುಕೊಟ್ಟರು. ರಜಾ ಲಾಂಗ್ ಆಫ್​ನಲ್ಲಿ ಸಿಕ್ಸರ್ ಬಾರಿಸಿದರು.

  • 15 Apr 2023 10:39 PM (IST)

    4ನೇ ವಿಕೆಟ್ ಪತನ

    11ನೇ ಓವರ್​ ಬೌಲ್ ಮಾಡಿದ ಕೃನಾಲ್ ಪಾಂಡ್ಯ ಹರ್ಪ್ರೀತ್ ಸಿಂಗ್ ವಿಕೆಟ್ ಕಬಳಿಸಿದರು. 22 ಎಸೆತಗಳಲ್ಲಿ 22 ರನ್ ಬಾರಿಸಿದ್ದ ಸಿಂಗ್ ಡೀಪ್ ಬ್ಯಾಕ್ವರ್ಡ್​ ಸ್ಕ್ವೇರ್​ ಲೆಗ್​ನಲ್ಲಿ ಕ್ಯಾಚಿತ್ತು ನಿರ್ಗಮಿಸಿದರು.

  • 15 Apr 2023 10:30 PM (IST)

    9ನೇ ಓವರ್​ನಲ್ಲಿ ಬೌಂಡರಿ

    ಕೃನಾಲ್ ಎಸೆದ 9ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಹರ್ಪ್ರೀತ್ ಸಿಂಗ್ ಶಾರ್ಟ್​ ಥರ್ಡ್​ಮ್ಯಾನ್​ನಲ್ಲಿ ಬೌಂಡರಿ ಬಾರಿಸಿದರು.

  • 15 Apr 2023 10:23 PM (IST)

    ಬೌಂಡರಿಗಳಿಲ್ಲ

    ಶಾರ್ಟ್​ ವಿಕೆಟ್ ಪತನವಾದ ಬಳಿಕ ಪಂಜಾಬ್ ಬ್ಯಾಟಿಂಗ್ ನಿಧಾನಗತಿಯಲ್ಲಿ ಸಾಗುತ್ತಿದೆ. 2 ಓವರ್​ಗಳಿಂದ ಯಾವುದೇ ಬೌಂಡರಿ ಬಂದಿಲ್ಲ.

  • 15 Apr 2023 10:14 PM (IST)

    ಶಾರ್ಟ್​ ಔಟ್

    ಪವರ್ ಪ್ಲೇನ ಕೊನೆಯ ಓವರ್​ನ 5ನೇ ಎಸೆತವನ್ನು ಸಿಕ್ಸರ್​ಗಟ್ಟಿದ ಶಾರ್ಟ್​, ಕೊನೆಯ ಎಸೆತದಲ್ಲಿ ಮಿಡ್ ಆಫ್​ನಲ್ಲಿ ಕ್ಯಾಚಿತ್ತು ಔಟಾದರು. ಪಂಜಾಬ್ ಕಿಂಗ್ಸ್ 45 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿತು.

  • 15 Apr 2023 10:08 PM (IST)

    ಶಾರ್ಟ್​ ಬೌಂಡರಿ

    5ನೇ ಓವರ್ ಎಸೆದ ಯದ್ವೀರ್ ಕೊಂಚ ದುಬಾರಿಯಾದರು. ಈ ಓವರ್​ನಲ್ಲಿ ಶಾರ್ಟ್​ 2 ಬೌಂಡರಿ ಬಾರಿಸಿದರು.

  • 15 Apr 2023 09:55 PM (IST)

    ಯದ್ವೀರ್​ಗೆ 2ನೇ ವಿಕೆಟ್

    ಲಕ್ನೋ ಪರ ಮೊದಲ ಪಂದ್ಯವನ್ನಾಡುತ್ತಿರುವ ಯದ್ವೀರ್ ಮೊದಲ ಓವರ್​ನಲ್ಲಿ ಒಂದು ವಿಕೆಟ್ ಉರುಳಿಸಿದರೆ, 2ನೇ ಓವರ್​ನಲ್ಲಿ ಮತ್ತೊಂದು ವಿಕೆಟ್ ಉರುಳಿಸಿದರು. ಈ ಓವರ್​ನ 2ನೇ ಎಸೆತದಲ್ಲಿ ಪ್ರಬ್ಸಿಮ್ರನ್ ಔಟಾದರು.

  • 15 Apr 2023 09:50 PM (IST)

    ಶಾರ್ಟ್​ ಫೋರ್

    ಅವೇಶ್ ಖಾನ್ ಎಸೆದ 2ನೇ ಓವರ್​ನಲ್ಲಿ ಶಾರ್ಟ್​ 2 ಬೌಂಡರಿ ಬಾರಿಸಿದರು.

  • 15 Apr 2023 09:50 PM (IST)

    ಮೊದಲ ವಿಕೆಟ್ ಪತನ

    ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡದ ಮೊದಲ ವಿಕೆಟ್ ಪತನವಾಗಿದೆ. ಇಂದು ಮೊದಲ ಪಂದ್ಯವನ್ನಾಡಿದ ಯದ್ವೀರ್ ಸಿಂಗ್ ಯಾವುದೇ ರನ್ ಗಳಿಸದೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

  • 15 Apr 2023 09:26 PM (IST)

    160 ರನ್ ಟಾರ್ಗೆಟ್

    20ನೇ ಓವರ್​ನಲ್ಲಿ 2 ವಿಕೆಟ್ ಉರುಳಿಸಿದ ನಾಯಕ ಸ್ಯಾಮ್ ಕರನ್ ಕೇವಲ 7 ರನ್ ಬಿಟ್ಟುಕೊಟ್ಟರು. ಅಂತಿಮವಾಗಿ ಲಕ್ನೋ ತಂಡ ನಾಯಕ ರಾಹುಲ್ ಅವರ ಅರ್ಧಶತಕದ ನೆರವಿನಿಂದ 159 ರನ್ ಕಲೆಹಾಕಿದೆ.

  • 15 Apr 2023 09:16 PM (IST)

    ರಾಹುಲ್ ಔಟ್

    56 ಎಸೆತಗಳಲ್ಲಿ 74 ರನ್ ಬಾರಿಸಿದ್ದ ನಾಯಕ ರಾಹುಲ್ 19ನೇ ಓವರ್​ನ 5ನೇ ಎಸೆತದಲ್ಲಿ ಲಾಂಗ್​ ಆನ್​ನಲ್ಲಿ ಕ್ಯಾಚಿತ್ತು ಔಟಾದರು.

  • 15 Apr 2023 09:08 PM (IST)

    ಸ್ಟೋಯ್ನಿಸ್ ಔಟ್

    18ನೇ ಓವರ್​ನ 5ನೇ ಎಸೆತದಲ್ಲಿ ಸ್ಟೋಯ್ನಿಸ್ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು.

  • 15 Apr 2023 09:07 PM (IST)

    ರಾಹುಲ್ ಸಿಕ್ಸ್

    17ನೇ ಓವರ್​ನ 4ನೇ ಎಸೆತವನ್ನು ರಾಹುಲ್ ಡೀಪ್​ ಪಾಯಿಂಟ್​ನಲ್ಲಿ ಸಿಕ್ಸರ್​ಗಟ್ಟಿದರು. 17 ಓವರ್ ಅಂತ್ಯಕ್ಕೆ 138/4

  • 15 Apr 2023 09:06 PM (IST)

    ಸ್ಟೋಯ್ನಿಸ್ ಸಿಕ್ಸರ್

    16ನೇ ಓವರ್​ನಲ್ಲಿ ಸ್ಟೋಯ್ನಿಸ್ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾರಿಸಿದರು. ಮೊದಲ ಸಿಕ್ಸರ್ ಬೌಲರ್ ತಲೆಯ ಮೇಲೆ ಬಂದರೆ, 2ನೇ ಸಿಕ್ಸರ್ ಡೀಪ್ ಮಿಡ್ ವಿಕೆಟ್ ಮೇಲೆ ಬಂತು.

  • 15 Apr 2023 08:47 PM (IST)

    ಪಾಂಡ್ಯ, ಪೂರನ್ ಔಟ್

    ರಬಾಡ್ ಪಂಜಾಬ್ ತಂಡಕ್ಕೆ ಡಬಲ್ ಸಂತಸ ತಂದಿದ್ದಾರೆ. ಮೊದಲು ಪಾಂಡ್ಯ ವಿಕೆಟ್ ಪಡೆದ ರಬಾಡ, ಆ ಬಳಿಕ ಬಂದ ಡೇಂಜರಸ್ ಪೂರನ್ ವಿಕೆಟ್ ಉರುಳಿಸಿದರು. ಪೂರನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

  • 15 Apr 2023 08:37 PM (IST)

    ರಾಹುಲ್ ಅರ್ಧಶತಕ

    ರಾಹುಲ್ ಚಹರ್ ಎಸೆದ 14ನೇ ಓವರ್​ನ 2ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ರಾಹುಲ್ ತಮ್ಮ ಅರ್ಧಶತಕ ಪೂರೈಸಿದರು.

  • 15 Apr 2023 08:27 PM (IST)

    ರಜಾ ನೋ ಬಾಲ್

    11ನೇ ಓವರ್​ ಬೌಲ್ ಮಾಡಿದ ರಜಾ ನೋ ಬಾಲ್ ಎಸೆದರು. ಈ ಬಾಲ್​ನಲ್ಲಿ ಬೌಂಡರಿ ಕೂಡ ಬಂತು. ನಂತರ ಫ್ರೀ ಹಿಟ್​ ಬಾಲ್​ನಲ್ಲಿ ಪಾಂಡ್ಯ ಪಾಯಿಂಟ್​ನಲ್ಲಿ ಬೌಂಡರಿ ಬಾರಿಸಿದರು.

  • 15 Apr 2023 08:19 PM (IST)

    ಕರನ್​ಗೆ 2 ಬೌಂಡರಿ

    10ನೇ ಓವರ್​ ಎಸೆದ ಕರನ್ 2 ಬೌಂಡರಿ ಹೊಡೆಸಿಕೊಂಡರು. ರಾಹುಲ್ ಶಾರ್ಟ್​ ಥರ್ಡ್​ಮ್ಯಾನ್​ನಲ್ಲಿ ಬೌಂಡರಿ ಬಾರಿಸಿದರೆ, ಕೃನಾಲ್ ಡೀಪ್ ಮಿಡ್ ವಿಕೆಟ್ನಲ್ಲಿ ಬೌಂಡರಿ ಹೊಡೆದರು.

  • 15 Apr 2023 08:11 PM (IST)

    ಹೂಡಾ ಔಟ್

    9ನೇ ಓವರ್ ಬೌಲ್ ಮಾಡಿದ ರಜಾ 2ನೇ ಎಸೆತದಲ್ಲಿ ಬೌಂಡರಿ ತಿಂದರೆ, ಅದೇ ಓವರ್​ನ 4ನೇ ಎಸೆತದಲ್ಲಿ ಹೂಡಾ ವಿಕೆಟ್ ಪಡೆದರು.

  • 15 Apr 2023 08:03 PM (IST)

    ಮೇಯರ್ಸ್​ ಔಟ್

    8ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಹಪ್ರೀತ್ ಬ್ರಾರ್ ಡೆಂಜರಸ್ ಮೇಯರ್ಸ್​ ವಿಕೆಟ್ ಉರುಳಿಸಿದ್ದಾರೆ.

  • 15 Apr 2023 08:03 PM (IST)

    ಪವರ್ ಪ್ಲೇ ಅಂತ್ಯ, 49/0

    ಲಕ್ನೋ ಪಾಳಯದ 6 ಓವರ್ ಮುಗಿದಿದ್ದು, 6ನೇ ಓವರ್​ನ ಮೊದಲ ಎಸೆತವನ್ನು ರಾಹುಲ್ ವೈಡ್ ಕವರ್ಸ್​ನಲ್ಲಿ ಬೌಂಡರಿ ಬಾರಿಸಿದರು.

  • 15 Apr 2023 07:54 PM (IST)

    ಮೇಯರ್ಸ್​ ಸಿಕ್ಸರ್

    4ನೇ ಓವರ್​ನ 5ನೇ ಎಸೆತವನ್ನು ಮೇಯರ್ಸ್​ ಡೀಪ್ ಸ್ಕ್ವೇರ್​ ಲೆಗ್​ನಲ್ಲಿ ಸಿಕ್ಸರ್ ಬಾರಿಸಿದರು.

  • 15 Apr 2023 07:48 PM (IST)

    2 ಬೌಂಡರಿ

    ರಬಾಡ ಬೌಲ್ ಮಾಡಿದ 3ನೇ ಓವರ್​ನಲ್ಲಿ 2 ಬೌಂಡರಿಗಳು ಬಂದವು. ಮೊದಲನೇ ಬೌಂಡರಿ ಮೇಯರ್ಸ್​ ಬಾರಿಸಿದರೆ, 2ನೇ ಬೌಂಡರಿಯನ್ನು ರಾಹುಲ್ ಬಾರಿಸಿದರು.

  • 15 Apr 2023 07:39 PM (IST)

    ರಾಹುಲ್ ಬೌಂಡರಿ

    ಅರ್ಷದೀಪ್ ಸಿಂಗ್ ಎಸೆದ 2ನೇ ಓವರ್​ನ 4ನೇ ಎಸೆತದಲ್ಲಿ ರಾಹುಲ್ ಫೈನ್​ ಲೆಗ್​ ಮೇಲೆ ಬೌಂಡರಿ ಬಾರಿಸಿದರು.

  • 15 Apr 2023 07:38 PM (IST)

    ಲಕ್ನೋ ಬ್ಯಾಟಿಂಗ್ ಆರಂಭ

    ಲಕ್ನೋ ಬ್ಯಾಟಿಂಗ್ ಆರಂಭಿಸಿದೆ. ತಂಡದ ಪರ ಮೇಯರ್ಸ್​ ಹಾಗೂ ರಾಹುಲ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮೊದಲ ಓವರ್​ನಲ್ಲಿ ಮೇಯರ್ಸ್​ ಭರ್ಜರಿ ಸಿಕ್ಸರ್ ಬಾರಿಸಿದರು.

  • 15 Apr 2023 07:18 PM (IST)

    ಪಂಜಾಬ್ ಕಿಂಗ್ಸ್

    ಸ್ಯಾಮ್ ಕರನ್ (ನಾಯಕ), ಅಥರ್ವ್​ ತಿಡೆ, ಮ್ಯಾಥ್ಯೂ ಶಾರ್ಟ್, ಹರ್‌ಪ್ರೀತ್ ಸಿಂಗ್ ಭಾಟಿಯಾ, ಸಿಕಂದರ್ ರಜಾ, ಜಿತೇಶ್ ಶರ್ಮಾ, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್.

  • 15 Apr 2023 07:18 PM (IST)

    ಲಕ್ನೋ ಸೂಪರ್ ಜೈಂಟ್ಸ್

    ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಆಯುಷ್ ಬಧೋನಿ, ಅವೇಶ್ ಖಾನ್, ಮಾರ್ಕ್ ವುಡ್, ರವಿ ಬಿಷ್ಣೋಯ್.

  • 15 Apr 2023 07:10 PM (IST)

    ಆರ್​ಸಿಬಿಗೆ 2ನೇ ಜಯ

    ಬ್ಯಾಟಿಂಗ್​ನಲ್ಲಿ ಕಿಂಗ್ ಕೊಹ್ಲಿ ಅರ್ಧಶತಕ ಸಿಡಿಸಿ ಮಿಂಚಿದರೆ, ಬೌಲಿಂಗ್​ನಲ್ಲಿ ಕಮಾಲ್ ಮಾಡಿದ ಕನ್ನಡಿಗ ವೈಶಾಕ್ ಪ್ರಮುಖ 3 ವಿಕೆಟ್ ಉರುಳಿಸಿ ಆರ್​ಸಿಬಿ ತಂಡದ ಗೆಲುವಿನ ಹೀರೋಗಳೆನಿಸಿಕೊಂಡರು. ಆರ್​ಸಿಬಿ ನೀಡಿದ 174 ರನ್ಗಗಳ ಗುರಿ ಬೆನ್ನಟ್ಟಿದ ಡೆಲ್ಲಿ 9 ವಿಕೆಟ್ ಕಳೆದುಕೊಂಡು 152 ರನ್ ಗಳಿಸಲಷ್ಟೇ ಶಕ್ತವಾಯಿತು.

  • 15 Apr 2023 07:04 PM (IST)

    ಟಾಸ್ ಗೆದ್ದ ಪಂಜಾಬ್

    ಟಾಸ್ ಗೆದ್ದ ಪಂಜಾಬ್ ನಾಯಕ ಸ್ಯಾಮ್ ಕರನ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

Published On - Apr 15,2023 7:02 PM

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?