MCC: ಮಂಕಡಿಂಗ್ ಇನ್ನು ಮುಂದೆ ರನ್ ಔಟ್ ಎಂದು ಪರಿಗಣನೆ; ಎಂಸಿಸಿ ಸೂಚಿಸಿರುವ ಹೊಸ ನಿಯಮಗಳು ಇಲ್ಲಿವೆ

Mankading | Saliva Ban: ಎಂಸಿಸಿ ಹೊಸ ನಿಯಮಾವಳಿಗಳನ್ನು ಸೂಚಿಸಿದೆ. ಇದನ್ನು ಒಪ್ಪುವುದು ಐಸಿಸಿ ಅಥವಾ ರಾಷ್ಟ್ರೀಯ ಮಂಡಳಿಗಳಿಗೆ ಬಿಟ್ಟ ಆಯ್ಕೆ. ಹೊಸ ನಿಯಮಾವಳಿಗಳಲ್ಲಿ ಮಂಕಾಡಿಂಗ್ ಸೇರಿದಂತೆ ಹಲವು ಮುಖ್ಯ ಬದಲಾವಣೆ ತರಲಾಗಿದೆ.

MCC: ಮಂಕಡಿಂಗ್ ಇನ್ನು ಮುಂದೆ ರನ್ ಔಟ್ ಎಂದು ಪರಿಗಣನೆ; ಎಂಸಿಸಿ ಸೂಚಿಸಿರುವ ಹೊಸ ನಿಯಮಗಳು ಇಲ್ಲಿವೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on:Mar 09, 2022 | 12:07 PM

ಕ್ರಿಕೆಟ್ ನಿಯಮಾವಳಿಗಳಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದ್ದ ತೀರ್ಮಾನಗಳಲ್ಲಿ ಒಂದು ‘ಮಂಕಾಡಿಂಗ್’. ಇದನ್ನು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂದು ನಿಯಮಾವಳಿಗಳಲ್ಲಿ ಪರಿಗಣಿಸಲಾಗಿತ್ತು. ಆದ್ದರಿಂದ ಈ ಕುರಿತು ಚರ್ಚೆಗಳು ಎದ್ದಿದ್ದವು. ಇದೀಗ ಈ ವಿವಾದಗಳಿಗೆ ತೆರೆ ಎಳೆಯುವ ಸಂದರ್ಭ ಸನ್ನಿಹಿತವಾಗಿದೆ. ಕಾರಣ, ‘ದಿ ಮೆರಿಲ್​ಬೋನ್ ಕ್ರಿಕೆಟ್ ಕ್ಲಬ್’ (ಎಂಸಿಸಿ) ಹೊಸ ನಿಯಮಾವಳಿಗಳನ್ನು ಸೂಚಿಸಿದೆ. ಇದರ ಅನ್ವಯ ‘ಮಂಕಾಡಿಂಗ್’ (Mankading) ಅನ್ನು ಇನ್ನು ಮುಂದೆ ರನ್ ಔಟ್ ಎಂದು ಪರಿಗಣಿಸಲಾಗುತ್ತದೆ. ಇದಲ್ಲದೇ ‘ಸಲೈವಾ’ (Saliva) ಹಚ್ಚುವುದನ್ನು ಇನ್ನುಮುಂದೆ ಬ್ಯಾನ್ ಮಾಡಲಾಗಿದೆ. 2017ರಲ್ಲಿ ಮೊದಲ ಬಾರಿಗೆ ಕ್ರಿಕೆಟ್ ನಿಯಮಾವಳಿಗಳನ್ನು ಪರಿಚಯಿಸಿದ ನಂತರ ಹಲವು ಬಾರಿ ತಿದ್ದುಪಡಿಗಳನ್ನು ಮಾಡಲಾಗಿದೆ. ಪ್ರಸ್ತುತ ಹಲವು ಮಹತ್ತರ ಬದಲಾವಣೆಗಳನ್ನು ಸೂಚಿಸಲಾಗಿದ್ದು ಇವುಗಳನ್ನು ಇಸಿಬಿ ದಿ ಹಂಡ್ರೆಡ್ ಲೀಗ್​ನಲ್ಲಿ ಪ್ರಾಯೋಗಿಕವಾಗಿ ಪರೀಕ್ಷಿಸಿದೆ.

ಎಂಸಿಸಿ ಸೂಚಿಸಿರುವ ಬದಲಾವಣೆಗಳನ್ನು ಒಪ್ಪುವುದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹಾಗೂ ರಾಷ್ಟ್ರೀಯ ಕ್ರಿಕೆಟ್ ಮಂಡಳಿಗಳಿಗೆ ಬಿಟ್ಟಿದ್ದು. ಸಾಮಾನ್ಯವಾಗಿ ಎಂಸಿಸಿ ಸೂಚಿಸಿದ ಬದಲಾವಣೆಗಳನ್ನು ಯಾವುದೇ ಚರ್ಚೆಯಿಲ್ಲದೇ ಒಪ್ಪಲಾಗುತ್ತದೆ. ಎಂಸಿಸಿ ಸೂಚಿಸಿರುವ ಬದಲಾವಣೆಗಳು ಇಲ್ಲಿವೆ:

ನಿಯಮ 27.4 ಮತ್ತು 28.6: ಫೀಲ್ಡಿಂಗ್ ತಂಡದ ಕ್ರೀಡಾಸ್ಫೂರ್ತಿಗೆ ವಿರುದ್ಧ ನಡೆ:

ಫೀಲ್ಡಿಂಗ್ ತಂಡದ ಆಟಗಾರರು ಎಸೆತ ಎಸೆಯುವಾಗ ಕ್ರೀಡಾ ಸ್ಫೂರ್ತಿಗೆ ವಿರುದ್ಧದ ನಡೆ ಎಸಗಿದರೆ ಅದನ್ನು ಡೆಡ್ ಬಾಲ್ ಎಂದು ಕರೆಯಲಾಗುತ್ತಿತ್ತು. ಆದರೆ ಈ ಎಸೆತದಲ್ಲಿ ಬ್ಯಾಟರ್ ರನ್ ಗಳಿಸಿದ್ದರೂ ಕೂಡ ಅದು ಲೆಕ್ಕಕ್ಕೆ ಬರುತ್ತಿರಲಿಲ್ಲ. ಇದನ್ನು ತಪ್ಪಿಸುವ ಸಲುವಾಗಿ ಫೀಲ್ಡಿಂಗ್ ತಂಡದ ಆಟಗಾರರು ಎಸೆತ ಎಸೆಯುವಾಗ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ವರ್ತಿಸಿದರೆ ಬ್ಯಾಟಿಂಗ್ ತಂಡಕ್ಕೆ 5 ಪೆನಾಲ್ಟಿ ರನ್​ಗಳನ್ನು ನೀಡಲಾಗುತ್ತದೆ.

ನಿಯಮ 38.3- ನಾನ್ ಸ್ಟ್ರೈಕರ್ ರನ್ ಔಟ್ (ಮಂಕಾಡಿಂಗ್)

ನಾನ್ ಸ್ಟ್ರೈಕರ್​ನಲ್ಲಿದ್ದ ಆಟಗಾರ ಎಸೆತ ಎಸೆಯುವ ಮುನ್ನ ಕ್ರೀಸ್ ಬಿಟ್ಟರೆ ಅವನನ್ನು ಔಟ್ ಮಾಡುವ ಅವಕಾಶವನ್ನು ನೀಡಲಾಗಿದೆ. ಮೊದಲು ಇದನ್ನು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂದು ಹೇಳಲಾಗುತ್ತಿತ್ತು. ಇದೀಗ ಇದನ್ನು ರನ್ ಔಟ್ ಎಂದೇ ಪರಿಗಣಿಸಲಾಗುತ್ತದೆ. ಈ ಮಾದರಿಯ ಔಟ್ ಮಂಕಾಡಿಂಗ್ ಎಂದು ಪ್ರಸಿದ್ಧವಾಗಿದೆ.

ನಿಯಮ 41.3- ಸಲೈವಾ ಬ್ಯಾನ್

ಕೊವಿಡ್ ನಂತರ ಸಲೈವಾ ಹಚ್ಚುವುದನ್ನು ಬ್ಯಾನ್ ಮಾಡಲಾಗಿತ್ತು. ಇದೀಗ ಸಲೈವಾ ಬ್ಯಾನ್ ಅನ್ನು ಮುಂದುವರೆಸಲಾಗಿದೆ. ಜತೆಗೆ ಒಂದು ವೇಳೆ ಉದ್ದೇಶಪೂರ್ವಕವಾಗಿ ಸಲೈವಾ ಹಚ್ಚಿದರೂ ಅದನ್ನು ಚೆಂಡನ್ನು ವಿರೂಪಗೊಳಿಸುವ ಯತ್ನ ಎಂದೇ ಕರೆಯಲಾಗುತ್ತದೆ.

ನಿಯಮ 18: ಕ್ಯಾಚ್ ಔಟ್ ಆದರೆ ನಂತರ ಬರುವ ಬ್ಯಾಟರ್ ಕ್ರೀಸ್​ಗೆ

ಬ್ಯಾಟರ್ ಕ್ಯಾಚ್ ನೀಡಿ ಔಟ್ ಆದರೆ ನಂತರ ಬರುವ ಬ್ಯಾಟರ್ ಸ್ಟ್ರೈಕರ್​ ಎಂಡ್​​ ಪಡೆಯುತ್ತಾನೆ. (ಓವರ್ ನಂತರದ ಬದಲಾವಣೆ ಹೊರತುಪಡಿಸಿ). ಈ ಮೊದಲು ಅರ್ಧ ಪಿಚ್ ಕ್ರಾಸ್ ಮಾಡಿದ್ದರೆ ಸ್ಟ್ರೈಕರ್ ಬದಲಾಗುತ್ತಿತ್ತು. ಹೊಸ ನಿಯಮದಲ್ಲಿ ಹಾಗಿಲ್ಲ. ಇದನ್ನು 100 ಲೀಗ್​ನಲ್ಲಿ ಪರೀಕ್ಷಿಸಲಾಗಿದೆ.

ನಿಯಮ 20.4.2.12- ಡೆಡ್ ಬಾಲ್:

ಪಂದ್ಯಾವಳಿ ನಡೆಯುವಾಗ ಎಸೆತ ಎಸೆಯುವ ವೇಳೆ ಮೂರನೇ ವ್ಯಕ್ತಿಯಿಂದ, ಪ್ರಾಣಿಯಿಂದ, ಅಥವಾ ವಸ್ತುಗಳಿಂದ ಅಡಚಣೆಯಾದರೆ ಅದನ್ನು ಡೆಡ್ ಬಾಲ್ ಎಂದು ಕರೆಯಲಾಗುತ್ತದೆ.

ನಿಯಮ 1ರ ಆಟಗಾರರ ಬದಲಾವಣೆಯಲ್ಲೂ ನಿಯಮವನ್ನು ಬದಲಾಯಿಸಲಾಗಿದೆ. ಇವುಗಳೊಂದಿಗೆ ಇನ್ನೂ ಕೆಲವು ಬದಲಾವಣೆಗಳನ್ನು ಎಂಸಿಸಿ ಸೂಚಿಸಿದೆ.

ಇದನ್ನೂ ಓದಿ:

IPL 2022: ಸಿಎಸ್​ಕೆ ಸೇರಿದಂತೆ 7 ಐಪಿಎಲ್ ತಂಡಗಳಿಗೆ ಶುಭ ಸುದ್ದಿ ನೀಡಿದ ಕಿವೀಸ್ ಕ್ರಿಕೆಟ್ ಮಂಡಳಿ; ಏನದು?

T20 World Cup: ಇದೇನಾ ಕ್ರೀಡಾ ಮನೋಭಾವ! ಡೆಡ್ ಬಾಲ್​ಗೆ ಸಿಕ್ಸರ್ ಬಾರಿಸಿದ ವಾರ್ನರ್​ಗೆ ಗಂಭೀರ್ ಕ್ಲಾಸ್

Published On - 11:49 am, Wed, 9 March 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್