IPL 2026: ಪಾಕ್ ತಂಡದ ಮಾಜಿ ಕೋಚ್​ಗೆ ಬ್ಯಾಟಿಂಗ್‌ ಕೋಚ್ ಹುದ್ದೆ ನೀಡಿದ ಗುಜರಾತ್ ಟೈಟನ್ಸ್

IPL 2026: ಐಪಿಎಲ್ 2026 ಕ್ಕೆ ಗುಜರಾತ್ ಟೈಟಾನ್ಸ್ ಮಹತ್ವದ ಬದಲಾವಣೆ ಮಾಡಿದೆ. ಆಸ್ಟ್ರೇಲಿಯಾದ ದಂತಕಥೆ ಮ್ಯಾಥ್ಯೂ ಹೇಡನ್ ಅವರನ್ನು ತಮ್ಮ ಹೊಸ ಬ್ಯಾಟಿಂಗ್ ಕೋಚ್ ಆಗಿ ನೇಮಿಸಿದೆ. ಹೇಡನ್ ಅವರ ಅಂತಾರಾಷ್ಟ್ರೀಯ ಹಾಗೂ ಐಪಿಎಲ್ ಅನುಭವ ತಂಡಕ್ಕೆ ದೊಡ್ಡ ಶಕ್ತಿಯಾಗಲಿದೆ ಎಂದು ನಿರ್ದೇಶಕ ವಿಕ್ರಮ್ ಸೋಲಂಕಿ ಹೇಳಿದ್ದಾರೆ. ಪಾಕಿಸ್ತಾನದೊಂದಿಗೆ ಕೆಲಸ ಮಾಡಿದ ಅನುಭವ ಹೊಂದಿರುವ ಹೇಡನ್, GT ಬ್ಯಾಟಿಂಗ್ ಬಲಪಡಿಸಲು ಸಿದ್ಧರಾಗಿದ್ದಾರೆ.

IPL 2026: ಪಾಕ್ ತಂಡದ ಮಾಜಿ ಕೋಚ್​ಗೆ ಬ್ಯಾಟಿಂಗ್‌ ಕೋಚ್ ಹುದ್ದೆ ನೀಡಿದ ಗುಜರಾತ್ ಟೈಟನ್ಸ್
Matthew Hayden

Updated on: Mar 10, 2026 | 10:47 PM

2026 ರ ಐಪಿಎಲ್​ಗೆ (IPL 2026) ಕ್ಷಣಗಣನೆ ಆರಂಭವಾಗಿದೆ. ಲೀಗ್‌ನ 19 ನೇ ಆವೃತ್ತಿಯು ಮಾರ್ಚ್ 28 ರಂದು ಪ್ರಾರಂಭವಾಗಲಿದೆ. ಇದಕ್ಕಾಗಿ ಎಲ್ಲಾ ತಂಡಗಳು ತಮ್ಮ ತಯಾರಿಯನ್ನು ಆರಂಭಿಸಿವೆ. ಈಗಷ್ಟೇ ಟಿ20 ವಿಶ್ವಕಪ್ ಆಡಿ ಮುಗಿಸಿರುವ ಟೀಂ ಇಂಡಿಯಾ ಆಟಗಾರರು ಇನ್ನಷೇ ತಮ್ಮ ತಮ್ಮ ತಂಡಗಳನ್ನು ಕೂಡಿಕೊಳ್ಳಬೇಕಿದೆ. ಇದೆಲ್ಲದರ ನಡುವೆ ಗುಜರಾತ್ ಟೈಟನ್ಸ್ (Gujarat Titans) ತಮ್ಮ ಕೋಚಿಂಗ್ ಸಿಬ್ಬಂದಿಯಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದೆ. ಗುಜರಾತ್ ತಂಡವು ಹೊಸ ಬ್ಯಾಟಿಂಗ್ ಕೋಚ್ ಆಗಿ ಆಸ್ಟ್ರೇಲಿಯಾದ ಅನುಭವಿ ಆಟಗಾರ ಮ್ಯಾಥ್ಯೂ ಹೇಡನ್ (Matthew Hayden) ಅವರನ್ನು ಆಯ್ಕೆ ಮಾಡಿದೆ.

ಮ್ಯಾಥ್ಯೂ ಹೇಡನ್ ಬ್ಯಾಟಿಂಗ್ ಕೋಚ್

ಮೇಲೆ ಹೇಳಿದಂತೆ ಗುಜರಾತ್ ಟೈಟನ್ಸ್ ತಂಡ ಆಸ್ಟ್ರೇಲಿಯಾದ ಮಾಜಿ ಬ್ಯಾಟಿಂಗ್ ದಂತಕಥೆ ಮ್ಯಾಥ್ಯೂ ಹೇಡನ್ ಅವರನ್ನು ತಮ್ಮ ಬ್ಯಾಟಿಂಗ್ ಕೋಚ್ ಆಗಿ ನೇಮಿಸಿಕೊಂಡಿದೆ. ಆಸೀಸ್ ಪರ ಸ್ಮರಣೀಯ ವೃತ್ತಿಜೀವನವನ್ನು ಹೊಂದಿರುವ ಹೇಡನ್ ಆಸ್ಟ್ರೇಲಿಯಾ ಪರ ಆಡಿರುವ 273 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 15,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಹಾಗೆಯೇ ಐಪಿಎಲ್‌ನಲ್ಲಿಯೂ ಆಡಿರುವ ಅನುಭವ ಹೊಂದಿರುವ ಹೇಡನ್ 32 ಪಂದ್ಯಗಳನ್ನು ಆಡಿದ್ದಾರೆ. ಇದೀಗ, ಅವರು ಕೋಚ್ ಆಗಿ ಐಪಿಎಲ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ಮ್ಯಾಥ್ಯೂ ಹೇಡನ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡುವ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಗುಜರಾತ್ ಟೈಟಾನ್ಸ್ ಕ್ರಿಕೆಟ್ ನಿರ್ದೇಶಕ ವಿಕ್ರಮ್ ಸೋಲಂಕಿ, ‘ಮ್ಯಾಥ್ಯೂ ಹೇಡನ್ ಅವರ ನೇಮಕವು ನಮ್ಮ ಪ್ರಯಾಣಕ್ಕೆ ನಿರ್ಣಾಯಕವಾಗಿದೆ. ಫ್ರಾಂಚೈಸಿಯಾಗಿ, ನಾವು ನಮ್ಮ ಕ್ರಿಕೆಟ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುವತ್ತ ನಿರಂತರವಾಗಿ ಗಮನಹರಿಸುತ್ತೇವೆ. ಅವರ ಉನ್ನತ ಮಟ್ಟದ ಅನುಭವ ಮತ್ತು ಉದಯೋನ್ಮುಖ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವ ಅವರ ಸಾಮರ್ಥ್ಯವು ಮುಂಬರುವ ಆವೃತ್ತಿಯಲ್ಲಿ ನಮ್ಮ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ಸಹಾಯ ಮಾಡುತ್ತದೆ’ ಎಂದಿದ್ದಾರೆ.

IPL 2026: ಈ ದಿನದಿಂದ 19ನೇ ಆವೃತ್ತಿಯ ಐಪಿಎಲ್ ಆರಂಭ; ಬಿಸಿಸಿಐ ಅಧಿಕೃತ ಮಾಹಿತಿ

ಪಾಕ್ ತಂಡದೊಂದಿಗೆ ಕೆಲಸ

ಮ್ಯಾಥ್ಯೂ ಹೇಡನ್ ಅವರಿಗೆ ಹೆಚ್ಚಿನ ತರಬೇತಿಯ ಅನುಭವವಿಲ್ಲ. ಆದಾಗ್ಯೂ, ಅವರು ಈ ಹಿಂದೆ ಪಾಕಿಸ್ತಾನ ತಂಡಕ್ಕೆ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ. 2021 ರ ಟಿ20 ವಿಶ್ವಕಪ್‌ಗೆ ಮೊದಲು, ಪಾಕಿಸ್ತಾನ ಅವರನ್ನು ತಮ್ಮ ಬ್ಯಾಟಿಂಗ್ ಕೋಚ್ ಆಗಿ ನೇಮಿಸಿತು. ಆ ಪಂದ್ಯದಲ್ಲಿ ಪಾಕಿಸ್ತಾನ ಭಾರತವನ್ನು ಸೋಲಿಸಿತು. ಇದರ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) 2022 ರ ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾರ್ಗದರ್ಶಕರಾಗಿ ಹೇಡನ್ ಅವರನ್ನು ನೇಮಿಸಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us