IPL 2022: ಕನ್ನಡಿಗನಿಗೆ ಪಂಜಾಬ್ ನಾಯಕತ್ವ ಬಹುತೇಕ ಖಚಿತ; ಅಧಿಕೃತ ಘೋಷಣೆಯೊಂದೇ ಬಾಕಿ
Mayank Agarwal: ಭಾರತದ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಐಪಿಎಲ್ 2022 ರಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವವಹಿಸುವುದು ಬಹುತೇಕ ಖಚಿತವಾಗಿದೆ. IPL 2022 ಹರಾಜಿನ ಮೊದಲು ಈ ಫ್ರಾಂಚೈಸಿ ಅವರನ್ನು ಉಳಿಸಿಕೊಂಡಿದೆ.
ಭಾರತದ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ (Mayank Agarwal) ಐಪಿಎಲ್ 2022 ರಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತಂಡದ ನಾಯಕತ್ವವಹಿಸುವುದು ಬಹುತೇಕ ಖಚಿತವಾಗಿದೆ. IPL 2022 ಹರಾಜಿ (IPL 2022 auction)ನ ಮೊದಲು ಈ ಫ್ರಾಂಚೈಸಿ ಅವರನ್ನು ಉಳಿಸಿಕೊಂಡಿದೆ. ಮಯಾಂಕ್ ಅಗರ್ವಾಲ್ ಜೊತೆಗೆ ಪಂಜಾಬ್ ಕಿಂಗ್ಸ್ ಎಡಗೈ ಬೌಲರ್ ಅರ್ಷದೀಪ್ ಸಿಂಗ್ ಅವರನ್ನು ಸಹ ತಮ್ಮೊಂದಿಗೆ ಇಟ್ಟುಕೊಂಡಿದ್ದರು. ಮಯಾಂಕ್ ಅಗರ್ವಾಲ್‌ಗೆ ನಾಯಕತ್ವವನ್ನು ಹಸ್ತಾಂತರಿಸುವ ಬಗ್ಗೆ ಪಂಜಾಬ್ ಕಿಂಗ್ಸ್‌ನಿಂದ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬೀಳಲಿದೆ. ಕೆಎಲ್ ರಾಹುಲ್ ನಾಯಕರಾಗಿದ್ದಾಗ, ಕೆಲವು ಪಂದ್ಯಗಳಲ್ಲಿ ಮಯಾಂಕ್ ಅವರ ಅನುಪಸ್ಥಿತಿಯಲ್ಲಿ ಪಂಜಾಬ್‌ಗೆ ನಾಯಕರಾಗಿದ್ದರು. ಈ ನಿಟ್ಟಿನಲ್ಲಿ ಅವರಿಗೆ ಅನುಭವವಿದೆ.
ಮಯಾಂಕ್ ಅಗರ್ವಾಲ್ ಅವರನ್ನು ಪಂಜಾಬ್ ಕಿಂಗ್ಸ್ 2018 ರ ಮೆಗಾ ಹರಾಜಿನಲ್ಲಿ ಒಂದು ಕೋಟಿ ಮೊತ್ತಕ್ಕೆ ಖರೀದಿಸಿತು. ನಂತರ ಕೆಎಲ್ ರಾಹುಲ್ ನಂತರ ಮಾಯಂಕ್ ಈ ತಂಡದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಆಗಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಐಪಿಎಲ್ 2021 ರ ನಂತರ, ಮಯಾಂಕ್ ಅವರನ್ನು ಪಂಜಾಬ್ ಕಿಂಗ್ಸ್ 12 ಕೋಟಿ ರೂಪಾಯಿ ಪಾವತಿಸುವ ಮೂಲಕ ಉಳಿಸಿಕೊಂಡಿದೆ. ಐಪಿಎಲ್ ಮೂಲವನ್ನು ಉಲ್ಲೇಖಿಸಿ, ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದ್ದು, ಮಯಾಂಕ್ ಈ ತಂಡದ ನಾಯಕರಾಗುವ ಎಲ್ಲಾ ಸಾಧ್ಯತೆಗಳಿವೆ. ಈ ವಾರಾಂತ್ಯದಲ್ಲಿ ಘೋಷಣೆ ಮಾಡಲಾಗುವುದು.
ಧವನ್ಗಿಲ್ಲ ನಾಯಕತ್ವ?
ಐಪಿಎಲ್ 2022 ರ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಹೆಚ್ಚು ಹಣವನ್ನು ಉಳಿಸಿಕೊಂಡಿತ್ತು. ಹೀಗಾಗಿ ಅವರು ಶಿಖರ್ ಧವನ್, ಜಾನಿ ಬೈರ್‌ಸ್ಟೋವ್, ಲಿಯಾಮ್ ಲಿವಿಂಗ್‌ಸ್ಟನ್, ಕಗಿಸೊ ರಬಾಡ, ಶಾರುಖ್ ಖಾನ್ ಮತ್ತು ಹರ್‌ಪ್ರೀತ್ ಬ್ರಾರ್ ಅವರ ರೂಪದಲ್ಲಿ ಅನೇಕ ಶ್ರೇಷ್ಠ ಆಟಗಾರರನ್ನು ಖರೀದಿಸಿದ್ದಾರೆ. ನಾಯಕನಾಗಿ ಧವನ್ ಹೆಸರು ಚಾಲ್ತಿಯಲ್ಲಿತ್ತು ಆದರೆ ತಂಡದ ಆಡಳಿತ ಮಂಡಳಿ ಮಯಾಂಕ್ ಅವರನ್ನು ನಾಯಕನನ್ನಾಗಿ ಮಾಡಲು ಬಯಸಿದೆ. ಇದು ಹರಾಜಿಗೂ ಮುನ್ನವೇ ಯೋಜನೆಯಾಗಿತ್ತು ಎನ್ನಲಾಗಿದೆ. ಧವನ್ ತಂಡಕ್ಕೆ ಎಂಟ್ರಿ ಕೊಟ್ಟಿರುವುದು ಉತ್ತಮ ನಡೆ. ಧವನ್ ಒಬ್ಬ ಚಾಂಪಿಯನ್ ಆಟಗಾರ ಆದರೆ ಕೆಎಲ್ ರಾಹುಲ್ ತಂಡವನ್ನು ತೊರೆದ ನಂತರ ಪಂಜಾಬ್ ಮಯಾಂಕ್ ಅವರನ್ನು ನಾಯಕನನ್ನಾಗಿ ಮಾಡಲು ತಯಾರಿ ನಡೆಸುತ್ತಿದೆಯಂತೆ.
2011ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಮಯಾಂಕ್
ಕಳೆದ ಎರಡು ವರ್ಷಗಳಲ್ಲಿ, ಮಯಾಂಕ್ ಮತ್ತು ರಾಹುಲ್ ಐಪಿಎಲ್‌ನಲ್ಲಿ ಉತ್ತಮ ಆರಂಭಿಕ ಜೋಡಿಯಾಗಿದ್ದಾರೆ. ರಾಹುಲ್ ಈಗ ಲಕ್ನೋ ಸೂಪರ್ ಜೈಂಟ್ಸ್‌ನ ಭಾಗವಾಗಿದ್ದಾರೆ. KL ರಾಹುಲ್ ಗಾಯಗೊಂಡಾಗ IPL 2021 ರಲ್ಲಿ ಕೆಲವು ಪಂದ್ಯಗಳಲ್ಲಿ ಮಯಾಂಕ್ ನಾಯಕರಾಗಿದ್ದರು. ಕಳೆದ ಎರಡು ಋತುಗಳಲ್ಲಿ ಅವರು 400ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಮಯಾಂಕ್ 2011ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಅವರು ಇಲ್ಲಿಯವರೆಗೆ 100 ಪಂದ್ಯಗಳನ್ನು ಆಡಿದ್ದಾರೆ. 31 ವರ್ಷದ ಮಯಾಂಕ್ ಭಾರತ ಪರ 19 ಟೆಸ್ಟ್ ಮತ್ತು ಐದು ಏಕದಿನ ಪಂದ್ಯಗಳನ್ನು ಆಡಿದ್ದಾರೆ.
ಪಂಜಾಬ್ ಕಿಂಗ್ಸ್ ಇನ್ನೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. ಈ ಬಾರಿ ಅವರು ಅತ್ಯಂತ ಬಲಿಷ್ಠ ತಂಡವನ್ನು ನಿರ್ಮಿಸಿದ್ದಾರೆ. 2014ರಲ್ಲಿ ಫೈನಲ್‌ಗೆ ತಲುಪಿದ್ದು ಅವರ ಈವರೆಗಿನ ಅತ್ಯುತ್ತಮ ಪ್ರದರ್ಶನವಾಗಿತ್ತು. ಕಳೆದ ಮೂರು ಋತುಗಳಲ್ಲಿ ಪಂಜಾಬ್ ಕಿಂಗ್ಸ್ ಆರನೇ ಸ್ಥಾನದಲ್ಲಿತ್ತು.
ಇದನ್ನೂ ಓದಿ:PBKS, IPL 2022 Auction: ಪಂಜಾಬ್ ಕಿಂಗ್ಸ್ ಖರೀದಿಸಿದ ಆಟಗಾರರ ಸಂಪೂರ್ಣ ಪಟ್ಟಿ ಮತ್ತು ಅವರ ಸಂಭಾವನೆ