Mayank Agarwal: ಐಸಿಸಿ ತಿಂಗಳ ಆಟಗಾರರ ರೇಸ್​ನಲ್ಲಿ ಸ್ಥಾನ ಪಡೆದ ಕನ್ನಡಿಗ ಮಯಾಂಕ್ ಅಗರ್ವಾಲ್

ICC Player of the Month Award: ಮಯಾಂಕ್ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶತಕ ಗಳಿಸಿ ಮಿಂಚಿದ್ದರೆ ಅದೇ ಸರಣಿಯಲ್ಲಿ ಅಜಾಜ್ ಪಟೇಲ್ ಇನಿಂಗ್ಸ್​ನ ಎಲ್ಲಾ 10 ವಿಕೆಟ್ ಪಡೆದ ಐತಿಹಾಸಿಕ ಸಾಧನೆ ಮಾಡಿದ್ದರು.

Mayank Agarwal: ಐಸಿಸಿ ತಿಂಗಳ ಆಟಗಾರರ ರೇಸ್​ನಲ್ಲಿ ಸ್ಥಾನ ಪಡೆದ ಕನ್ನಡಿಗ ಮಯಾಂಕ್ ಅಗರ್ವಾಲ್
ICC Player of the Month Award
Follow us
TV9 Web
| Updated By: Vinay Bhat

Updated on:Jan 09, 2022 | 9:31 AM

ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ (ICC) ಪ್ರತೀ ತಿಂಗಳು ಕೊಡಮಾಡುವ ತಿಂಗಳ ಆಟಗಾರ ಪ್ರಶಸ್ತಿ ರೇಸ್​ನಲ್ಲಿ ಕನ್ನಡಿಗ, ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ (Indian Test Cricket Team) ಆರಂಭಿಕ ಮಯಾಂಕ್ ಅಗರ್ವಾಲ್ ‍(Mayank Agarwal) ಹೆಸರು ನಾಮನಿರ್ದೇಶನಗೊಂಡಿದೆ. ​ಅಗರವಾಲ್​ ಸೇರಿದಂತೆ ಮೂವರು ಪ್ಲೇಯರ್ಸ್​ ಡಿಸೆಂಬರ್​ ತಿಂಗಳ ಐಸಿಸಿ ಪುರುಷರ ಕ್ರಿಕೆಟ್​ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.  ಡಿಸೆಂಬರ್ ತಿಂಗಳ ಪ್ರದಶರ್ನ ಆಧರಿಸಿ ಮಯಾಂಕ್, ನ್ಯೂಜಿಲೆಂಡ್ ಬೌಲರ್ ಅಜಾಜ್ ಪಟೇಲ್ (Ajaz Patel), ಮಿಚೆಲ್ ಸ್ಟಾರ್ಕ್ (Mitchell Starc) ಹೆಸರು ನಾಮನಿರ್ದೇಶನಗೊಂಡಿದೆ.

ಮಯಾಂಕ್ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶತಕ ಗಳಿಸಿ ಮಿಂಚಿದ್ದರೆ ಅದೇ ಸರಣಿಯಲ್ಲಿ ಅಜಾಜ್ ಪಟೇಲ್ ಇನಿಂಗ್ಸ್​ನ ಎಲ್ಲಾ 10 ವಿಕೆಟ್ ಪಡೆದ ಐತಿಹಾಸಿಕ ಸಾಧನೆ ಮಾಡಿದ್ದರು. ಡಿಸೆಂಬರ್ ತಿಂಗಳಲ್ಲಿ ಆಡಿದ 2 ಟೆಸ್ಟ್ ಪಂದ್ಯಗಳಲ್ಲಿ ಮಯಾಂಕ್ 2 ಅರ್ಧಶತಕ ಮತ್ತು 1 ಶತಕ ಸಹಿತ 69.00ರ ಸರಾಸರಿಯಲ್ಲಿ 276 ರನ್ ಗಳಿಸಿದ್ದರು. ಈ ಪೈಕಿ ನ್ಯೂಜಿಲೆಂಡ್ ವಿರುದ್ಧ ಮುಂಬೈ ಟೆಸ್ಟ್‌ನಲ್ಲಿ 150 ಮತ್ತು 62 ರನ್ ಬಾರಿಸಿ ಗೆಲುವಿನ ರೂವಾರಿ ಎನಿಸಿದ್ದರು. ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಸೆಂಚುರಿಯನ್ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಜತೆಗೆ ಮೊದಲ ವಿಕೆಟ್‌ಗೆ ಅಮೂಲ್ಯ 117 ರನ್ ಜತೆಯಾಟವಾಡಿದ್ದರು ಮತ್ತು 60 ರನ್ ಬಾರಿಸಿದ್ದರು.

ಅಜಾಜ್ ಪಟೇಲ್ ಮುಂಬೈ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ ಎಲ್ಲ 10 ವಿಕೆಟ್ ಕಬಳಿಸುವ ಮೂಲಕ ಇತಿಹಾಸ ಬರೆದಿದ್ದರೆ, ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಇಂಗ್ಲೆಂಡ್​-ಆಸ್ಟ್ರೇಲಿಯಾ ನಡುವೆ ಆರಂಭಗೊಂಡಿರುವ ಆ್ಯಶಸ್​​ ಸರಣಿಯಲ್ಲಿ ​​ಮಾರಕ ಬೌಲಿಂಗ್​ ಪ್ರದರ್ಶನ ನೀಡಿ, ತಂಡ ಪ್ರಶಸ್ತಿ ಗೆಲ್ಲುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಸ್ಟಾರ್ಕ್ ಆಶಸ್ ಸರಣಿಯ ಮೊದಲ 3 ಟೆಸ್ಟ್‌ಗಳಲ್ಲಿ 19.64 ರ ಸರಾಸರಿಯಲ್ಲಿ 14 ವಿಕೆಟ್ ಕಬಳಿಸಿ ಮಿಂಚಿದ್ದರು. ಜತೆಗೆ ಬ್ಯಾಟಿಂಗ್‌ನಲ್ಲೂ 117 ರನ್ ಕೊಡುಗೆ ನೀಡಿದ್ದರು.

ಅತ್ಯುತ್ತಮ ಸಾಧನೆಗೈದವರನ್ನು ಆಯ್ಕೆ ಮಾಡಿ ಐಸಿಸಿ ಪ್ರಶಸ್ತಿ ನೀಡಲಿದೆ. ಟೀಮ್ ಇಂಡಿಯಾದ ರೋಹಿತ್​ ಶರ್ಮಾ, ಶುಭ್ಮನ್ ಗಿಲ್ ಹಾಗೂ ಮತ್ತೋರ್ವ ಕನ್ನಡಿಗ ಕೆ ಎಲ್​ ರಾಹುಲ್​​ ಕೆಲ ಪಂದ್ಯಗಳಿಂದ ಹೊರಗುಳಿದಿರುವ ಕಾರಣ ನಾಮನಿರ್ದೇಶನಗೊಳ್ಳುವುದರಿಂದ ಹಿಂದೆ ಬಿದ್ದಿದ್ದಾರೆ.

South Africa vs India: ಮೂರನೇ ಟೆಸ್ಟ್​ಗಾಗಿ ಕೇಪ್​ಟೌನ್​ಗೆ ಬಂದಿಳಿದ ಭಾರತಕ್ಕೆ ಶಾಕ್ ಕೊಟ್ಟ ಆಫ್ರಿಕಾನ್ನರು

Novak Djokovic: ಕೋವಿಡ್ ಪಾಸಿಟಿವ್ ಇತ್ತು, ಆದ್ರೂ ಲಸಿಕೆ ಹಾಕಲಿಲ್ಲ: ಜೊಕೊವಿಚ್ ಬಗ್ಗೆ ಮತ್ತೊಂದು ಮಾಹಿತಿ ಬಹಿರಂಗ

Published On - 9:17 am, Sun, 9 January 22

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್