South Africa vs India: ಮೂರನೇ ಟೆಸ್ಟ್ಗಾಗಿ ಕೇಪ್ಟೌನ್ಗೆ ಬಂದಿಳಿದ ಭಾರತಕ್ಕೆ ಶಾಕ್ ಕೊಟ್ಟ ಆಫ್ರಿಕಾನ್ನರು
Team India in Cape Town: ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಕೇಪ್ಟೌನ್ಗೆ ಬಂದಿಳಿದ ಭಾರತಕ್ಕೆ ಊಹಿಸಲಾಗದ ರೀತಿಯಲ್ಲಿ ಅಭೂತಪೂರ್ವ ಸ್ವಾಗತಿ ಸಿಕ್ಕಿತು. ಆಫ್ರಿಕಾದವರು ತಮ್ಮದೆ ಶೈಲಿಯ ಸಂಗೀತ, ನೃತ್ಯದ ಮೂಲಕ ಭಾರತೀಯ ಆಟಗಾರರನ್ನು ವೆಲ್ಕಮ್ ಮಾಡಿದರು.
ಭಾರತ ಹಾಗೂ ದಕ್ಷಿಣ ಆಫ್ರಿಕಾ (South Africa vs India) ನಡುವಣ ಟೆಸ್ಟ್ ಸರಣಿಯ ಅಂತಿಮ ನಿರ್ಣಾಯಕ ಕದನ ಮಂಗಳವಾರದಿಂದ ಕೇಪ್ಟೌನ್ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಶುರುವಾಗಲಿದೆ. ಸೆಂಚೂರಿಯನ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) 113 ರನ್ಗಳ ಜಯ ಸಾಧಿಸಿ ಐತಿಹಾಸಿಕ ಸಾಧನೆ ಮಾಡಿದರೆ, ಜೋಹಾನ್ಸ್ಬರ್ಗ್ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ 7 ವಿಕೆಟ್ಗಳ ಗೆಲುವು ಕಂಡಿತು. ಹೀಗಾಗಿ ಉಭಯ ತಂಡಗಳು ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿದೆ. ಸದ್ಯ ಮೂರನೇ ಟೆಸ್ಟ್ ಪಂದ್ಯದ (IND vs SA 3rd Test) ಮೇಲೆ ಸರಣಿ ಗೆಲುವಿನ ಲೆಕ್ಕಾಚಾರ ನಿಂತಿದೆ. ಅಂತಿಮ ನಿರ್ಣಾಯಕ ಕದನಕ್ಕಾಗಿ ವಿರಾಟ್ ಕೊಹ್ಲಿ (Virat Kohli) ಪಡೆ ಜೋಹಾನ್ಸ್ಬರ್ಗ್ನಿಂದ ಕೇಪ್ಟೌನ್ಗೆ ಬಂದಿಳಿದಿದೆ. ಇಲ್ಲಿ ತಲುಪಿದ ತಕ್ಷಣ ಆಫ್ರಿಕಾನ್ನರು ಟೀಮ್ ಇಂಡಿಯಾಕ್ಕೆ ಸರ್ಪ್ರೈಸ್ ನೀಡಿದರು.
ಹೌದು, ಕೇಪ್ಟೌನ್ಗೆ ಬಂದಿಳಿದ ಭಾರತಕ್ಕೆ ಊಹಿಸಲಾಗದ ರೀತಿಯಲ್ಲಿ ಅಭೂತಪೂರ್ವ ಸ್ವಾಗತಿ ಸಿಕ್ಕಿತು. ಆಫ್ರಿಕಾದವರು ತಮ್ಮದೆ ಶೈಲಿಯ ಸಂಗೀತ, ನೃತ್ಯದ ಮೂಲಕ ಭಾರತೀಯ ಆಟಗಾರರನ್ನು ವೆಲ್ಕಮ್ ಮಾಡಿದರು. ಅಲ್ಲದೆ ಕೇಪ್ಟೌನ್ಗೆ ಸ್ವಾಗತ ಎಂದು ಬರೆದಿರುವ ಕೇಕ್ ಕೂಡ ತಯಾರು ಮಾಡಿದ್ದರು. ಕೊಹ್ಲಿ ಪಡೆ ಇಂದಿನಿಂದ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಅಭ್ಯಾಸ ಶುರು ಮಾಡಲಿದೆ.
Touchdown Cape Town ???#TeamIndia #SAvIND pic.twitter.com/TpMtyPK9FG
— BCCI (@BCCI) January 8, 2022
3ನೇ ಟೆಸ್ಟ್ ಪಂದ್ಯ ನಡೆಯಲಿರುವ ಕೇಪ್ ಟೌನ್ ಭಾರತಕ್ಕೆ ಇದುವರೆಗೆ ಅದೃಷ್ಟವಾಗಿ ಪರಿಣಮಿಸಿಲ್ಲ. ಈ ಗ್ರೌಂಡ್ ನಲ್ಲಿ ಟೀಮ್ ಇಂಡಿಯಾ ಒಟ್ಟು ಐದು ಟೆಸ್ಟ್ ಪಂದ್ಯಗಳನ್ನು ಆಡಿದ್ದು ಮೂರರಲ್ಲಿ ಸೋಲು ಕಂಡಿದೆ. ಉಳಿದ ಎರಡು ಟೆಸ್ಟ್ ಮ್ಯಾಚ್ ಡ್ರಾನಲ್ಲಿ ಅಂತ್ಯಕಂಡಿದೆ. ಹೌದು, ಕೇಪ್ ಟೌನ್ನ ನ್ಯೂಲ್ಯಾಂಡ್ಸ್ ಮೈದಾನಲ್ಲಿ ಭಾರತ ತಂಡ ಇದುವರೆಗೆ ಒಂದೇ ಒಂದು ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿಲ್ಲ. ಆಡಿದ ಎಲ್ಲ ಪಂದ್ಯ ಡ್ರಾ ಮತ್ತು ಸೋಲು ಕಂಡಿದೆ. ಹೀಗಾಗಿ ಮೂರನೇ ಟೆಸ್ಟ್ನಲ್ಲಿ ಭಾರತಕ್ಕೆ ಕಮ್ಬ್ಯಾಕ್ ಮಾಡಲು ತುಂಬಾನೆ ಕಷ್ಟವಿದೆ.
ಕೊನೇ ಟೆಸ್ಟ್ಗೆ ವಿರಾಟ್ ಕೊಹ್ಲಿ ಲಭ್ಯರಿರುತ್ತಾರೆ ಎಂದು ಕೆಎಲ್ ರಾಹುಲ್ ಎರಡನೇ ಟೆಸ್ಟ್ ಪಂದ್ಯದ ಬಳಿಕ ತಿಳಿಸಿದ್ದಾರೆ. ಇಂಜುರಿಗೆ ತುತ್ತಾಗಿದ್ದ ಕೊಹ್ಲಿ ಈಗಾಗಲೇ ಅಭ್ಯಾಸ ಶುರು ಮಾಡಿದ್ದಾರಂತೆ. ಈ ಬಗ್ಗೆ ಕೋಚ್ ದ್ರಾವಿಡ್ ಕೂಡ ಸ್ಪಷ್ಟ ಪಡಿಸಿದ್ದಾರೆ. ಈ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 1:30ಕ್ಕೆ ಪಂದ್ಯ ಆರಂಭವಾಗಲಿದೆ. ಭಾರತದಲ್ಲಿ ಈ ಪಂದ್ಯದ ನೇರಪ್ರಸಾರದ ಹಕ್ಕು ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್ ಹೊಂದಿದ್ದು ಸ್ಟಾರ್‌ಸ್ಪೋರ್ಟ್ಸ್ ವಾಹಿನಿಯಲ್ಲಿ ಪಂದ್ಯ ನೇರಪ್ರಸಾರವಾಗಲಿದೆ. ಅಲ್ಲದೆ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರರು ಕೂಡ ಪಂದ್ಯವನ್ನು ವೀಕ್ಷಿಸುವ ಅವಕಾಶವನ್ನು ನೀಡಲಾಗಿದೆ.
Novak Djokovic: ಕೋವಿಡ್ ಪಾಸಿಟಿವ್ ಇತ್ತು, ಆದ್ರೂ ಲಸಿಕೆ ಹಾಕಲಿಲ್ಲ: ಜೊಕೊವಿಚ್ ಬಗ್ಗೆ ಮತ್ತೊಂದು ಮಾಹಿತಿ ಬಹಿರಂಗ