New Zealand vs Bangladesh: 1 ಎಸೆತದಲ್ಲಿ 7 ರನ್ ಗಳಿಸಿದ ನ್ಯೂಜಿಲೆಂಡ್ ಬ್ಯಾಟರ್ ವಿಲ್ ಯಂಗ್: ಇದು ಹೇಗೆ ಸಾಧ್ಯ?

Will Young scores 7 runs in 1 ball: ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ನಡುವಣ ಎರಡನೇ ಟೆಸ್ಟ್ ಪಂದ್ಯ ಕ್ರಿಸ್ಟ್​​​ಚರ್ಚ್​ನ ಹೇಗ್ಲೆ ಓವಲ್ ಮೈದಾನದಲ್ಲಿ ನಡೆಯುತ್ತಿದೆ. ಇಲ್ಲಿ ನ್ಯೂಜಿಲೆಂಡ್ ಬ್ಯಾಟರ್ ವಿಲ್ ಯಂಗ್ ಒಂದೇ ಎಸೆತದಲ್ಲಿ ಸಿಕ್ಸ್ ಕೂಡ ಸಿಡಿಸದೆ ಏಳು ರನ್ ಕಲೆಹಾಕಿದ್ದಾರೆ. ಅದು ಹೇಗೆ..?.

New Zealand vs Bangladesh: 1 ಎಸೆತದಲ್ಲಿ 7 ರನ್ ಗಳಿಸಿದ ನ್ಯೂಜಿಲೆಂಡ್ ಬ್ಯಾಟರ್ ವಿಲ್ ಯಂಗ್: ಇದು ಹೇಗೆ ಸಾಧ್ಯ?
Will Young 1 ball 7 Runs
Follow us
TV9 Web
| Updated By: Vinay Bhat

Updated on:Jan 09, 2022 | 10:47 AM

ಜಂಟಲ್ ಮ್ಯಾನ್ ಗೇಮ್ ಕ್ರಿಕೆಟ್​ನಲ್ಲಿ (Cricket) ವಿಚಿತ್ರಘಟನೆಗಳು ನಡೆಯುತ್ತಲೇ ಇರುತ್ತದೆ. ಎರಡು ದಿನಗಳ ಹಿಂದೆಯಷ್ಟೆ ಆಸ್ಟ್ರೇಲಿಯಾದಲ್ಲಿ ಸಾಗುತ್ತಿರುವ ಆ್ಯಶಸ್ ಸರಣಿಯಲ್ಲಿ (Ashesh Series) ಇಂಗ್ಲೆಂಡ್ ಬ್ಯಾಟರ್ ಬೆನ್ ಸ್ಟೋಕ್ಸ್ ಅದೃಷ್ಟದಿಂದ ನಾಟೌಟ್ ಆದ ವಿಚತ್ರ ಘಟನೆ ನೋಡಿದಿತ್ತು. ಚೆಂಡು ವಿಕೆಟ್​ಗೆ ತಾಗಿದ್ದರೂ ಬೇಲ್ಸ್ ಬೀಳದ ಕಾರಣ ಅವರು ನಾಟೌಟ್ ಆದರು. ಇದರ ಬೆನ್ನಲ್ಲೆ ಇದೀಗ ಕ್ರಿಕೆಟ್ ಜಗತ್ತಿನಲ್ಲಿ ಮತ್ತೊಂದು ವಿಶೇಷ ಘಟನೆ ನಡೆದಿದೆ. ಇದು ಆಗಿರುವುದು ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ (New Zealand vs Bangladesh) ನಡುವಣ ಎರಡನೇ ಟೆಸ್ಟ್ ಪಂದ್ಯದಲ್ಲಿ. ಇಲ್ಲಿ ನ್ಯೂಜಿಲೆಂಡ್ ಬ್ಯಾಟರ್ ವಿಲ್ ಯಂಗ್ (Will Young) ಒಂದೇ ಎಸೆತದಲ್ಲಿ ಸಿಕ್ಸ್ ಕೂಡ ಸಿಡಿಸದೆ ಏಳು ರನ್ ಕಲೆಹಾಕಿದ್ದಾರೆ. ಅದು ಹೇಗೆ..?.

ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ನಡುವಣ ಎರಡನೇ ಟೆಸ್ಟ್ ಪಂದ್ಯ ಕ್ರಿಸ್ಟ್​​​ಚರ್ಚ್​ನ ಹೇಗ್ಲೆ ಓವಲ್ ಮೈದಾನದಲ್ಲಿ ನಡೆಯುತ್ತಿದೆ. ಇದರಲ್ಲಿ ಟಾಸ್ ಸೋತು ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುತ್ತಿರುವ ನ್ಯೂಜಿಲೆಂಡ್ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದೆ. ತಂಡದ ಮೊತ್ತ 300ರ ಗಡಿ ದಾಟಿದ್ದು ಕೇವಲ 1 ವಿಕೆಟ್​ ಅಷ್ಟೇ ಕಳೆದುಕೊಂಡಿದೆ. ನಾಯಕ ಟಾಮ್ ಲಾಥಮ್ ದ್ವಿಶತಕದ ಸಮೀಪದಲ್ಲಿದ್ದರೆ ಡೆವೊನ್ ಕಾನ್ವೇ ಶತಕದ ಆಸುಪಾಸಿನಲ್ಲಿದ್ದಾರೆ. ಇದರ ನಡುವೆ ಮತ್ತೊಬ್ಬ ಓಪನರ್ ವಿಲ್ ಯಂಗ್ 114 ಎಸೆತಗಳಲ್ಲಿ 54 ರನ್ ಗಳಿಸಿ ಔಟ್ ಆಗಿದ್ದಾರೆ.

ಇವರು ಔಟ್ ಆಗುವುದಕ್ಕೂ ಮುನ್ನ ವಿಶೇಷ ಘಟನೆಯೊಂದು ನಡೆಯಿತು. ಬಾಂಗ್ಲಾ ತಂಡದ ಎಬ್ಡಾಟ್ ಹುಸೈನ್ ಸ್ವಿಂಗ್ ಶಾರ್ಟ್ ಬೌಲಿಂಗ್ ಅನ್ನು ಅರಿಯುವಲ್ಲಿ ವಿಲ್ ಯಂಗ್ ವಿಫಲರಾದರು. ಚೆಂಡು ಬ್ಯಾಟ್​ನ ತುದಿಗೆ ಟಚ್ ಆಗಿ ಆಫ್ ಸ್ಟಂಪ್ ಸ್ಲಿಪ್ ಕಡೆ ಹೋಯಿತು. ಆದರೆ, ಇದನ್ನು ಕ್ಯಾಚ್ ಆಗಿ ಪರಿವರ್ತಿಸುವಲ್ಲಿ ಸ್ಲಿಪ್​ನಲ್ಲಿದ್ದ ಫೀಲ್ಡರ್ ಯಶಸ್ವಿಯಾಗಲಿಲ್ಲ.

ಇಲ್ಲಿ ಫೀಲ್ಡರ್​ನ ಬೆರಳಿಗೆ ಚೆಂಡು ತಾಗಿ ಫೈನ್​ ಕಡೆ ಹೋಯಿತು. ಇದನ್ನರಿತ ವಿಲ್ ಯಂಗ್ ಮತ್ತು ಟಾಮ್ ಲ್ಯಾಥಮ್ ಓಡಿ ಮೂರು ರನ್ ಗಳಿಸಿದರು. ಫೈನ್ ಲೆಗ್ ಕಡೆ ಹೋದ ಚೆಂಡನ್ನು ಬಾಂಗ್ಲಾ ಫೀಲ್ಡರ್ ಹಿಡಿದು ನೇರವಾಗಿ ಕೀಪರ್ ಕೈಗೆ ಎಸೆದರು. ಕೀಪರ್ ಆ ಚೆಂಡನ್ನು ವೇಗವಾಗಿ ಬೌಲರ್​ಗೆಂದು ಥ್ರೋ ಮಾಡಿದರು. ಆದರೆ, ಬೌಲರ್ ಹುಸೈನ್ ಚೆಂಡನ್ನು ಹಿಡಿಯಲು ಸಾಧ್ಯವಾಗಲಿಲ್ಲ. ನೇರವಾಗಿ ಚೆಂಡು ಯಾರೂ ಫೀಲ್ಡರ್ ಎಲ್ಲದ ಕಡೆ ಹೋಗಿ ಬೌಂಡರಿ ಗೆರೆ ತಲುಪಿತು. ಹೀಗೆ ಓವರ್ ಥ್ರೋ ಆಗಿ ವಿಲ್ ಯಂಗ್ ಒಂದೇ ಎಸೆತದಲ್ಲಿ 7 ರನ್​ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡರು.

ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಬಾಂಗ್ಲಾದೇಶ ಮೊದಲ ಪಂದ್ಯವನ್ನು 8 ವಿಕೆಟ್​ಗಳಿಂದ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಇದರೊಂದಿಗೆ 2017ರ ಮಾರ್ಚ್‌ ಬಳಿಕ ನ್ಯೂಜಿಲೆಂಡ್‌ ನೆಲದಲ್ಲಿ ಕಿವೀಸ್‌ ವಿರುದ್ಧ ಟೆಸ್ಟ್‌ ಪಂದ್ಯ ಗೆದ್ದ ಮೊದಲ ತಂಡ ಎಂಬ ಕೀರ್ತಿಗೆ ಬಾಂಗ್ಲಾದೇಶ ಪಾತ್ರವಾಯಿತು. ಅಷ್ಟೇ ಅಲ್ಲದೆ ಕಿವೀಸ್‌ ವಿರುದ್ಧ ಬಾಂಗ್ಲಾದೇಶ ತಂಡಕ್ಕೆ ಮೊದಲ ಟೆಸ್ಟ್‌ ಗೆಲುವು ಕೂಡ ಇದಾಯಿತು. ಹೀಗಾಗಿ ಸದ್ಯ ಸಾಗುತ್ತಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.

Mayank Agarwal: ಐಸಿಸಿ ತಿಂಗಳ ಆಟಗಾರರ ರೇಸ್​ನಲ್ಲಿ ಸ್ಥಾನ ಪಡೆದ ಕನ್ನಡಿಗ ಮಯಾಂಕ್ ಅಗರ್ವಾಲ್

South Africa vs India: ಮೂರನೇ ಟೆಸ್ಟ್​ಗಾಗಿ ಕೇಪ್​ಟೌನ್​ಗೆ ಬಂದಿಳಿದ ಭಾರತಕ್ಕೆ ಶಾಕ್ ಕೊಟ್ಟ ಆಫ್ರಿಕಾನ್ನರು

Published On - 10:45 am, Sun, 9 January 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ