MI vs DC Highlights, IPL 2024: ಲೀಗ್ನಲ್ಲಿ ಮೊದಲ ಜಯ ದಾಖಲಿಸಿದ ಮುಂಬೈ
Mumbai Indians Vs Delhi Capitals Highlights in Kannada: ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024 ರ 20 ನೇ ಪಂದ್ಯದಲ್ಲಿ ಮುಂಬೈ 29 ರನ್‌ಗಳಿಂದ ಡೆಲ್ಲಿ ತಂಡವನ್ನು ಸೋಲಿಸಿ ಲೀಗ್ನಲ್ಲಿ ಮೊದಲ ಜಯ ದಾಖಲಿಸಿದೆ.

ಟಿ20 ಕ್ರಿಕೆಟ್‌ನಲ್ಲಿ ಒಂದು ಓವರ್ ಹೇಗೆ ದೊಡ್ಡ ವ್ಯತ್ಯಾಸ ಮಾಡುತ್ತದೆ ಎಂಬುದು ಮತ್ತೆ ಸಾಬೀತಾಗಿದೆ. ಇಂದು ನಡೆದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಮುಂಬೈ ತಂಡದ ಗೆಲುವಿನಲ್ಲಿ ಆ ಒಂದು ಓವರ್ ಪ್ರಮುಖ ಪಾತ್ರವಹಿಸಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2024 ರ 20 ನೇ ಪಂದ್ಯದಲ್ಲಿ ಮುಂಬೈ 29 ರನ್‌ಗಳಿಂದ ಡೆಲ್ಲಿ ತಂಡವನ್ನು ಸೋಲಿಸಿ ಲೀಗ್ನಲ್ಲಿ ಮೊದಲ ಜಯ ದಾಖಲಿಸಿದೆ. ಇದರೊಂದಿಗೆ ಸತತ 3 ಸೋಲಿನೊಂದಿಗೆ ಕಳಪೆ ಆರಂಭ ಮಾಡಿದ್ದ ಮುಂಬೈ, ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಸೀಸನ್ನ ಮೊದಲ ಜಯ ದಾಖಲಿಸಿದೆ. ವಾಸ್ತವವಾಗಿ ಮುಂಬೈ ಇನ್ನಿಂಗ್ಸ್ನ ಕೊನೆಯ ಓವರ್‌ನಲ್ಲಿ ಅಬ್ಬರಿಸಿದ ಮುಂಬೈನ ರೊಮಾರಿಯೊ ಶೆಫರ್ಡ್ ಒಂದೇ ಓವರ್‌ನಲ್ಲಿ 32 ರನ್ ಕಲೆಹಾಕಿ ತಂಡದ ಗೆಲುವಿನ ರೂವಾರಿ ಎನಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ 234 ರನ್ ಗಳಿಸಿತ್ತು. ತಂಡದ ಪರ ನಾಯಕ ರೋಹಿತ್ ಶರ್ಮಾ ಗರಿಷ್ಠ 49 ರನ್ ಗಳಿಸಿದರು. ದೊಡ್ಡ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೇವಲ 205 ರನ್ ಗಳಿಸಲಷ್ಟೇ ಶಕ್ತವಾಯಿತು.
LIVE NEWS & UPDATES
-
ಪೃಥ್ವಿ ಶಾ ಔಟ್
ಡೆಲ್ಲಿ ಎರಡನೇ ವಿಕೆಟ್ ಕಳೆದುಕೊಂಡಿದೆ. ಪೃಥ್ವಿ ಶಾ 40 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 66 ರನ್ ಗಳಿಸಿ ಔಟಾದರು. ಡೆಲ್ಲಿ ಗೆಲುವಿಗೆ 48 ಎಸೆತಗಳಲ್ಲಿ 124 ರನ್ ಅಗತ್ಯವಿದೆ. ಶಾ
-
ಶಾ ಅರ್ಧಶತಕ
ಪೃಥ್ವಿ ಶಾ 31 ಎಸೆತಗಳಲ್ಲಿ ಐಪಿಎಲ್ ವೃತ್ತಿಜೀವನದ 13ನೇ ಅರ್ಧಶತಕ ದಾಖಲಿಸಿದರು. ಒಂಬತ್ತು ಓವರ್‌ಗಳ ನಂತರ ಡೆಲ್ಲಿ ಸ್ಕೋರ್ ಒಂದು ವಿಕೆಟ್‌ಗೆ 84 ರನ್ ಆಗಿದೆ. ಡೆಲ್ಲಿಗೆ 66 ಎಸೆತಗಳಲ್ಲಿ 151 ರನ್‌ಗಳ ಅಗತ್ಯವಿದೆ.
-
-
8 ಓವರ್ ಮುಕ್ತಾಯ
ಡೆಲ್ಲಿ ಎಂಟು ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 69 ರನ್ ಗಳಿಸಿದೆ. ಸದ್ಯ ಪೃಥ್ವಿ ಶಾ 29 ಓವರ್‌ಗಳಲ್ಲಿ 46 ರನ್ ಗಳಿಸಿ ಕ್ರೀಸ್‌ನಲ್ಲಿದ್ದರೆ, ಅಭಿಷೇಕ್ ಪೊರೆಲ್ 12 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಡೆಲ್ಲಿಗೆ 72 ಓವರ್‌ಗಳಲ್ಲಿ 166 ರನ್‌ಗಳ ಅಗತ್ಯವಿದೆ. ಶಾ ಮತ್ತು ಪೊರೆಲ್ ನಡುವೆ 26 ಇನ್ನಿಂಗ್ಸ್‌ಗಳಲ್ಲಿ 47 ರನ್‌ಗಳ ಜೊತೆಯಾಟವಿದೆ.
-
ಪವರ್ ಪ್ಲೇ ಅಂತ್ಯ
ಪವರ್‌ಪ್ಲೇಯಲ್ಲಿ ಡೆಲ್ಲಿ ಒಂದು ವಿಕೆಟ್ ಕಳೆದುಕೊಂಡು 46 ರನ್ ಗಳಿಸಿದೆ. ಪೃಥ್ವಿ ಶಾ 27 ರನ್ ಮತ್ತು ಅಭಿಷೇಕ್ ಪೊರೆಲ್ 8 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
-
ವಾರ್ನರ್ ಔಟ್
ಡೆಲ್ಲಿ ಮೊದಲ ವಿಕೆಟ್ ಕಳೆದುಕೊಂಡಿದೆ. ಡೇವಿಡ್ ವಾರ್ನರ್ ಎಂಟು ಎಸೆತಗಳಲ್ಲಿ 10 ರನ್ ಗಳಿಸಿ ಔಟಾದರು. ಸದ್ಯ ಪೃಥ್ವಿ ಶಾ ಮತ್ತು ಅಭಿಷೇಕ್ ಪೊರೆಲ್ ಕ್ರೀಸ್‌ನಲ್ಲಿದ್ದಾರೆ. ನಾಲ್ಕು ಓವರ್‌ಗಳ ನಂತರ ಡೆಲ್ಲಿ ಸ್ಕೋರ್ ಒಂದು ವಿಕೆಟ್‌ಗೆ 24 ರನ್ ಆಗಿದೆ.
-
-
ಡೆಲ್ಲಿ ಇನ್ನಿಂಗ್ಸ್ ಆರಂಭ
ಡೆಲ್ಲಿ ಇನ್ನಿಂಗ್ಸ್ ಆರಂಭವಾಗಿದೆ. ಎರಡು ಓವರ್‌ಗಳ ನಂತರ ಅವರ ಸ್ಕೋರ್ ಯಾವುದೇ ವಿಕೆಟ್ ಇಲ್ಲದೆ 11 ರನ್ ಆಗಿದೆ. ಸದ್ಯ ಪೃಥ್ವಿ ಶಾ ಮತ್ತು ಡೇವಿಡ್ ವಾರ್ನರ್ ಕ್ರೀಸ್‌ನಲ್ಲಿದ್ದಾರೆ.
-
234 ರನ್ ಟಾರ್ಗೆಟ್
ಮುಂಬೈ ಇಂಡಿಯನ್ಸ್ ತಂಡ ಮೊದಲ 20 ಓವರ್‌ಗಳಲ್ಲಿ 234 ರನ್ ಗಳಿಸಿದೆ. ರೊಮಾರಿಯೊ ಶೆಫರ್ಡ್ ಕೊನೆಯ ಓವರ್‌ನಲ್ಲಿ 32 ರನ್ ಗಳಿಸಿದರೆ, ರೋಹಿತ್ ಶರ್ಮಾ 49 ರನ್, ಇಶಾನ್ ಕಿಶನ್ 42 ರನ್ ಮತ್ತು ಹಾರ್ದಿಕ್ ಪಾಂಡ್ಯ 39 ರನ್ ಗಳಿಸಿದರು.
-
ಮುಂಬೈ ಐದನೇ ವಿಕೆಟ್ ಪತನ
ಮುಂಬೈ ಇಂಡಿಯನ್ಸ್ 18 ನೇ ಓವರ್‌ನಲ್ಲಿ ಐದನೇ ವಿಕೆಟ್ ಕಳೆದುಕೊಂಡಿದೆ. ನಾಯಕ ಹಾರ್ದಿಕ್ ಪಾಂಡ್ಯ 33 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 39 ರನ್ ಗಳಿಸಿದರು. 18 ಓವರ್‌ಗಳ ನಂತರ ಮುಂಬೈ ಸ್ಕೋರ್ ಐದು ವಿಕೆಟ್‌ಗೆ 183 ರನ್ ಆಗಿದೆ. ಸದ್ಯ ಟಿಮ್ ಡೇವಿಡ್ ಮತ್ತು ರೊಮಾರಿಯೊ ಶೆಫರ್ಡ್ ಕ್ರೀಸ್‌ನಲ್ಲಿದ್ದಾರೆ.
-
ಕ್ರೀಸ್‌ನಲ್ಲಿ ಹಾರ್ದಿಕ್-ಡೇವಿಡ್
16 ಓವರ್‌ಗಳ ನಂತರ ಮುಂಬೈ ಸ್ಕೋರ್ ನಾಲ್ಕು ವಿಕೆಟ್‌ಗೆ 150 ರನ್ ಆಗಿದೆ. ಸದ್ಯ ಟಿಮ್ ಡೇವಿಡ್ 13 ರನ್ ಹಾಗೂ ಹಾರ್ದಿಕ್ ಪಾಂಡ್ಯ 32 ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದಾರೆ.
-
ತಿಲಕ್ ವರ್ಮಾ ಪೆವಿಲಿಯನ್‌ಗೆ
ಖಲೀಲ್ ಅಹ್ಮದ್ ಬೌಲಿಂಗ್ನಲ್ಲಿ ತಿಲಕ್ ವರ್ಮಾ ಇನ್ನಿಂಗ್ಸ್ ಮುಗಿದಿದೆ. ತಿಲಕ್ ವರ್ಮಾ ಕೇವಲ 6 ರನ್ ಗಳಿಸಲಷ್ಟೇ ಶಕ್ತರಾದರು.
-
12 ಓವರ್ ಮುಕ್ತಾಯ
12 ಓವರ್‌ಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ 3 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿದೆ. ಹಾರ್ದಿಕ್ ಪಾಂಡ್ಯ 15 ರನ್ ಹಾಗೂ ತಿಲಕ್ ವರ್ಮಾ 1 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
-
ಇಶಾನ್ ಕಿಶನ್ ಕೂಡ ಔಟ್
ಮುಂಬೈ ಇಂಡಿಯನ್ಸ್ ಮೂರನೇ ವಿಕೆಟ್ ಕಳೆದುಕೊಂಡಿದೆ. ಇಶಾನ್ ಕಿಶನ್ 23 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 42 ರನ್ ಗಳಿಸಿ ಔಟಾದರು.
-
ಶೂನ್ಯಕ್ಕೆ ಸೂರ್ಯ ಔಟ್
ಈ ಸೀಸನ್ನ ಮೊದಲ ಪಂದ್ಯವನ್ನಾಡಿದ ಸೂರ್ಯ 2 ಎಸೆತಗಳಲ್ಲಿ ಯಾವುದೇ ರನ್ ಗಳಿಸದೆ ವಿಕೆಟ್ ಒಪ್ಪಿಸಿದ್ದಾರೆ.
-
49 ರನ್ಗಳಿಗೆ ರೋಹಿತ್ ಔಟ್
ಏಳನೇ ಓವರ್‌ನಲ್ಲಿ ಮುಂಬೈ ಮೊದಲ ವಿಕೆಟ್ ಕಳೆದುಕೊಂಡಿದೆ. ಅಕ್ಷರ್ ಪಟೇಲ್ ರೋಹಿತ್ ಶರ್ಮಾ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. 27 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 49 ರನ್ ಗಳಿಸಿ ರೋಹಿತ್ ಔಟಾದರು. ಸದ್ಯ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಕ್ರೀಸ್‌ನಲ್ಲಿದ್ದಾರೆ.
-
ಮುಂಬೈಗೆ ವೇಗದ ಆರಂಭ
ನಾಲ್ಕು ಓವರ್‌ಗಳ ನಂತರ ಮುಂಬೈ ಯಾವುದೇ ವಿಕೆಟ್ ನಷ್ಟವಿಲ್ಲದೆ 46 ರನ್ ಗಳಿಸಿದೆ. ಸದ್ಯ ಇಶಾನ್ ಕಿಶನ್ 10 ಎಸೆತಗಳಲ್ಲಿ 17 ರನ್ ಹಾಗೂ ರೋಹಿತ್ ಶರ್ಮಾ 14 ಎಸೆತಗಳಲ್ಲಿ 23 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ರೋಹಿತ್ ಮತ್ತು ಇಶಾನ್ ತಂಡಕ್ಕೆ ಉತ್ತಮ ಆರಂಭ ನೀಡಿದ್ದಾರೆ.
-
ಮುಂಬೈ ಇನ್ನಿಂಗ್ಸ್ ಆರಂಭ
ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್ ಆರಂಭವಾಗಿದೆ. ಆರಂಭಿಕರಾಗಿ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಕ್ರೀಸ್‌ನಲ್ಲಿದ್ದಾರೆ. ಖಲೀಲ್ ಅಹ್ಮದ್ ಡೆಲ್ಲಿ ಪರ ಮೊದಲ ಓವರ್ ಬೌಲಿಂಗ್ ಮಾಡುತ್ತಿದ್ದಾರೆ.
-
ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಮೊಹಮ್ಮದ್ ನಬಿ, ರೊಮಾರಿಯೋ ಶೆಫರ್ಡ್, ಪಿಯೂಷ್ ಚಾವ್ಲಾ, ಜೆರಾಲ್ಡ್ ಕೋಟ್ಜಿ, ಜಸ್ಪ್ರೀತ್ ಬುಮ್ರಾ.
-
ಡೆಲ್ಲಿ ಕ್ಯಾಪಿಟಲ್ಸ್
ಡೇವಿಡ್ ವಾರ್ನರ್, ಪೃಥ್ವಿ ಶಾ, ಅಭಿಷೇಕ್ ಪೊರೆಲ್, ರಿಷಭ್ ಪಂತ್ (ವಿಕೆಟ್ ಕೀಪರ್/ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಲಲಿತ್ ಯಾದವ್, ಜ್ಯೆ ರಿಚರ್ಡ್ಸನ್, ಅನ್ರಿಚ್ ನೋಕಿಯಾ, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.
-
ಟಾಸ್ ಗೆದ್ದ ಡೆಲ್ಲಿ
ಮುಂಬೈ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಡೆಲ್ಲಿ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ರಸಿಖ್ ದಾರ್ ಸಲಾಮ್ ಬದಲಿಗೆ ಲಲಿತ್ ಯಾದವ್ ಮತ್ತು ಗಾಯಾಳು ಮಿಚೆಲ್ ಮಾರ್ಷ್ ಬದಲಿಗೆ ಜೇ ರಿಚರ್ಡ್ಸನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Published On - Apr 07,2024 3:04 PM
