ಅಬುಧಾಬಿಯ ಶೇಖ್ ಝಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 34ನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ಗೆ ಕೊಲ್ಕತ್ತಾ ನೈಟ್ ರೈಡರ್ಸ್ ಸೋಲುಣಿಸಿದೆ. ಮುಂಬೈ ನೀಡಿದ 156 ರನ್ಗಳ ಟಾರ್ಗೆಟ್ ಅನ್ನು ಕೇವಲ 15.1 ಓವರ್ನಲ್ಲಿ ಚೇಸ್ ಮಾಡುವ ಮೂಲಕ ಕೆಕೆಆರ್ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಇದಕ್ಕೂ ಮುನ್ನ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಮುಂಬೈಗೆ ನಾಯಕ ರೋಹಿತ್ ಶರ್ಮಾ ಹಾಗೂ ಡಿಕಾಕ್ ಉತ್ತಮ ಆರಂಭ ಒದಗಿಸಿದರು. ಹಿಟ್ಮ್ಯಾನ್ ಜೊತೆಗೂಡಿ ಡಿಕಾಕ್ ಮೊದಲ ವಿಕೆಟ್ಗೆ 78 ರನ್ ಪೇರಿಸಿದರು. ಇದೇ ವೇಳೆ ರೋಹಿತ್ ಶರ್ಮಾ (33) ಸುನೀಲ್ ನರೈನ್ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಇದರ ಬೆನ್ನಲ್ಲೇ ಸೂರ್ಯಕುಮಾರ್ (5) ಕೂಡ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ 44 ಎಸೆತಗಳಲ್ಲಿ 55 ರನ್ ಬಾರಿಸಿದ ಡಿಕಾಕ್ ತಂಡಕ್ಕೆ ಆಸರೆಯಾದರು. ತಂಡದ ಮೊತ್ತ 106 ಆಗಿದ್ದ ವೇಳೆ ನರೈನ್ಗೆ ಕ್ಯಾಚ್ ನೀಡಿ ಡಿಕಾಕ್ ನಿರ್ಗಮಿಸಿದರು. ಇನ್ನು ಅಂತಿಮ ಹಂತದಲ್ಲಿ ಕೀರನ್ ಪೊಲಾರ್ಡ್ 21 ರನ್ ಕಲೆಹಾಕುವ ಮೂಲಕ ತಂಡದ ಮೊತ್ತವನ್ನು ನಿಗದಿತ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 155 ಕ್ಕೆ ತಂದು ನಿಲ್ಲಿಸಿದರು.
156 ರನ್ಗಳ ಗುರಿ ಪಡೆದ ಕೆಕೆಆರ್ಗೆ ವೆಂಕಟೇಶ್ ಅಯ್ಯರ್ ಹಾಗೂ ಶುಭ್ಮನ್ ಗಿಲ್ ಸ್ಪೋಟಕ ಆರಂಭ ಒದಗಿಸಿದ್ದರು. ಮೊದಲ 3 ಓವರ್ನಲ್ಲಿ ಈ ಜೋಡಿ 40 ರನ್ ಪೇರಿಸುವ ಮೂಲಕ ಚೇಸಿಂಗ್ಗೆ ಭದ್ರ ಬುನಾದಿ ಹಾಕಿಕೊಟ್ಟರು. ಇದೇ ವೇಳೆ ಶುಭ್ಮನ್ ಗಿಲ್ (13) ಬುಮ್ರಾ ಎಸೆತಕ್ಕೆ ಬೌಲ್ಡ್ ಆದರು. ಆ ಬಳಿಕ ಜೊತೆಗೂಡಿದ ರಾಹುಲ್ ತ್ರಿಪಾಠಿ-ವೆಂಕಟೇಶ್ ಅಯ್ಯರ್ ಮುಂಬೈ ಬೌಲರುಗಳ ಬೆಂಡೆತ್ತಿದರು.
ಬಿರುಸಿನ ಇನಿಂಗ್ಸ್ ಆಡಿದ ವೆಂಕಟೇಶ್ ಅಯ್ಯರ್ 25 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಪೂರೈಸಿದರು. ಮತ್ತೊಂದೆಡೆ ಅಬ್ಬರಿಸಲಾರಂಭಿಸಿದ ರಾಹುಲ್ ತ್ರಿಪಾಠಿ ಮುಂಬೈ ಬೌಲರುಗಳನ್ನು ನಿರಾಯಾಸವಾಗಿ ಎದುರಿಸಿದರು. ಈ ನಡುವೆ ವೆಂಕಟೇಶ್ ಅಯ್ಯರ್ (53) ಅನ್ನು ಬೌಲ್ಡ್ ಮಾಡುವಲ್ಲಿ ಬುಮ್ರಾ ಯಶಸ್ವಿಯಾದರು. ಆದರೆ ಮತ್ತೊಂದೆಡೆ ಸಿಕ್ಸ್-ಫೋರ್ಗಳ ಸುರಿಮಳೆಗೈದ ರಾಹುಲ್ ತ್ರಿಪಾಠಿ 42 ಎಸೆತಗಳಲ್ಲಿ 3 ಸಿಕ್ಸರ್, 4 ಬೌಂಡರಿಗಳೊಂದಿಗೆ 74 ರನ್ ಸಿಡಿಸಿದರು. ಪರಿಣಾಮ 15.1 ಓವರ್ನಲ್ಲಿ 3 ವಿಕೆಟ್ ನಷ್ಟದೊಂದಿಗೆ ಕೆಕೆಆರ್ 159 ರನ್ ಬಾರಿಸಿ ಸುಲಭವಾಗಿ ಗುರಿಮುಟ್ಟಿತು. ಈ ಗೆಲುವಿನೊಂದಿಗೆ ಕೆಕೆಆರ್ ತಂಡವು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.
ಕ್ವಿಂಟನ್ ಡಿಕಾಕ್- 55
ಪೊಲಾರ್ಡ್-21
ಲೂಕಿ ಫರ್ಗುಸನ್- 27/2
ರಾಹುಲ್ ತ್ರಿಪಾಠಿ- 74
ವೆಂಕಟೇಶ್ ಅಯ್ಯರ್- 53
ಬುಮ್ರಾ-43/3
ಇನ್ನು ಉಭಯ ತಂಡಗಳು ಇದುವರೆಗೆ 29 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಅದರಲ್ಲಿ ಮುಂಬೈ ಇಂಡಿಯನ್ಸ್ 22 ಗೆಲುವು ದಾಖಲಿಸಿ ಮೇಲುಗೈ ಹೊಂದಿದೆ. ಇನ್ನುಳಿದ 7 ಪಂದ್ಯಗಳಲ್ಲಿ ಮಾತ್ರ ಕೆಕೆಆರ್ ಗೆಲುವಿನ ರುಚಿ ನೋಡುವಲ್ಲಿ ಯಶಸ್ವಿಯಾಗಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ ಇಲೆವೆನ್: ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯಾನ್ ಮೋರ್ಗನ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಆಂಡ್ರೆ ರಸೆಲ್, ಸುನಿಲ್ ನರೈನ್, ಲೂಕಿ ಫರ್ಗುಸನ್, ವರುಣ್ ಚಕ್ರವರ್ತಿ, ಪ್ರಸಿದ್ ಕೃಷ್ಣ
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಸೌರಭ್ ತಿವಾರಿ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಆಡಮ್ ಮಿಲ್ನ್, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್
Another all-round performance ?
Another incredible win for @KKRiders as they beat #MumbaiIndians by 7 wickets ?
Scorecard ? https://t.co/SVn8iKC4Hl#VIVOIPL #MIvKKR pic.twitter.com/kEgrkLi4KH
— IndianPremierLeague (@IPL) September 23, 2021
KORBO. LORBO. ?????? ??#MIvKKR #KKR #AmiKKR #KorboLorboJeetbo #আমিKKR #IPL2021 #CricketTwitter pic.twitter.com/bLA9PphF1i
— KolkataKnightRiders (@KKRiders) September 23, 2021
ಕ್ವಿಂಟನ್ ಡಿಕಾಕ್- 55
ಪೊಲಾರ್ಡ್-21
ರಾಹುಲ್ ತ್ರಿಪಾಠಿ- 74
ವೆಂಕಟೇಶ್ ಅಯ್ಯರ್- 53
ಮೂರನೇ ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ- ಮೋರ್ಗನ್ (7) ಔಟ್
ರಾಹುಲ್ ಚಹರ್ಗೆ ಭರ್ಜರಿ ಸಿಕ್ಸರ್ ಉತ್ತರ ನೀಡಿದ ರಾಹುಲ್ ತ್ರಿಪಾಠಿ
30 ಎಸೆತಗಳಲ್ಲಿ 53 ರನ್ ಬಾರಿಸಿದ ವೆಂಕಟೇಶ್ ಅಯ್ಯರ್. ತಮ್ಮ ಇನಿಂಗ್ಸ್ನಲ್ಲಿ 3 ಸಿಕ್ಸರ್ ಹಾಗೂ 4 ಬೌಂಡರಿ ಬಾರಿಸಿ ಅಬ್ಬರಿಸಿದ್ದ ಅಯ್ಯರ್. ಬುಮ್ರಾ ಎಸೆತದಲ್ಲಿ ಬೌಲ್ಡ್.
ವೆಂಕಟೇಶ್ ಅಯ್ಯರ್ ಕ್ಲೀನ್ ಬೌಲ್ಡ್
29 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ರಾಹುಲ್ ತ್ರಿಪಾಠಿ.
Maiden #VIVOIPL half-century for Venkatesh Iyer ? ?
What a knock he has been playing! ? ?@KKRiders zoom past hundred in the chase. ? ?
Follow the match ? https://t.co/SVn8iKC4Hl#VIVOIPL #MIvKKR pic.twitter.com/N3eBJrInIX
— IndianPremierLeague (@IPL) September 23, 2021
ಎಕ್ಸ್ಟ್ರಾ ಬೌನ್ಸರ್ ಎಸೆದ ಬುಮ್ರಾ
ಕೀಪರ್ ಮೇಲಿಂದ ಚೆಂಡು ಬೌಂಡರಿಗೆ…ಹೆಚ್ಚುವರಿ 4 ರನ್ಗಳು
ರಾಹುಲ್ ತ್ರಿಪಾಠಿ ಭರ್ಜರಿ ಬ್ಯಾಟಿಂಗ್
ಬುಮ್ರಾ ಎಸೆತದಲ್ಲಿ ಕವರ್ಸ್ನತ್ತ ಸೂಪರ್ ಶಾಟ್- ಫೋರ್
ರಾಹುಲ್ ತ್ರಿಪಾಠಿ-ವೆಂಕಟೇಶ್ ಅಯ್ಯರ್ ಭರ್ಜರಿ ಜೊತೆಯಾಟ
37 ಎಸೆತಗಳಲ್ಲಿ 57 ರನ್ ಪಾಟರ್ನರ್ಶಿಪ್
ಅಬ್ಬರಿಸಲಾರಂಭಿಸಿದ ರಾಹುಲ್ ತ್ರಿಪಾಠಿ
ಕೃನಾಲ್ ಪಾಂಡ್ಯ ಎಸೆತದಲ್ಲಿ ಆನ್ ಆಫ್ನತ್ತ ಭರ್ಜರಿ ಬೌಂಡರಿ
ಕೃನಾಲ್ ಪಾಂಡ್ಯ ಎಸೆತದಲ್ಲಿ ಭರ್ಜರಿ ಹೊಡೆತ
ರಾಹುಲ್ ತ್ರಿಪಾಠಿ ಬ್ಯಾಟ್ನಿಂದ ಸೂಪರ್ ಸಿಕ್ಸ್.
ರಾಹುಲ್ ಚಹರ್ ಎಸೆತದಲ್ಲಿ ಬಿಗ್ ಸಿಕ್ಸ್ ಸಿಡಿಸಿದ ವೆಂಕಟೇಶ್ ಅಯ್ಯರ್. ಭರ್ಜರಿಯಾಗಿ ಬ್ಯಾಟ್ ಬೀಸುತ್ತಿರುವ ಯುವ ಆಟಗಾರ. 17 ಎಸೆತಗಳಲ್ಲಿ 40 ಬಾರಿಸಿ ಕ್ರೀಸ್ನಲ್ಲಿ ಬ್ಯಾಟಿಂಗ್.
? Art ?️ ?? Artist ?
More of this, boys! ?#OneFamily #MumbaiIndians #IPL2021 #MIvKKR @Jaspritbumrah93 pic.twitter.com/X0wGhRNXBf
— Mumbai Indians (@mipaltan) September 23, 2021
ಕ್ರೀಸ್ನಲ್ಲಿ ವೆಂಕಟೇಶ್ ಅಯ್ಯರ್ (33) ಹಾಗೂ ರಾಹುಲ್ ತ್ರಿಪಾಠಿ (16) ಬ್ಯಾಟಿಂಗ್.
ಆ್ಯಡಂ ಮಿಲ್ನ್ ಎಸೆತದಲ್ಲಿ ಫೈನ್ ಲೆಗ್ನತ್ತ ಬೌಂಡರಿ ಬಾರಿಸಿದ ರಾಹುಲ್ ತ್ರಿಪಾಠಿ
ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಸ್ಕ್ವೇರ್ ಮೂಲಕ ಬೌಂಡರಿ ಬಾರಿಸಿದ ರಾಹುಲ್ ತ್ರಿಪಾಠಿ
ಕೆಕೆಆರ್ ಮೊದಲ ವಿಕೆಟ್ ಪತನ- ಶುಭ್ಮನ್ ಗಿಲ್ ಔಟ್
ಕ್ರೀಸ್ನಲ್ಲಿ ವೆಂಕಟೇಶ್ ಅಯ್ಯರ್-ರಾಹುಲ್ ತ್ರಿಪಾಠಿ
ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ಶುಭ್ಮನ್ ಗಿಲ್ (13) ಬೌಲ್ಡ್. ಮುಂಬೈ ಇಂಡಿಯನ್ಸ್ಗೆ ಮೊದಲ ಯಶಸ್ಸು
9 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿ
KKR 40/0 (2.5)
An exciting second-half awaits! ?#MIvKKR #KKR #AmiKKR #KorboLorboJeetbo #আমিKKR #IPL2021 #CricketTwitter pic.twitter.com/YqfFHLJVT1
— KolkataKnightRiders (@KKRiders) September 23, 2021
1️⃣5️⃣6️⃣ to defend! ?
Time for our bowlers to work their magic ✨#OneFamily #MumbaiIndians #IPL2021 #MIvKKR pic.twitter.com/oJ3cXyju2V
— Mumbai Indians (@mipaltan) September 23, 2021
ಕೊನೆಯ ಓವರ್ನಲ್ಲಿ ಕೇವಲ 6 ರನ್ ನೀಡಿದ ಲೂಕಿ ಫರ್ಗುಸನ್
ಪೊಲಾರ್ಡ್ ಬೆನ್ನಲ್ಲೇ ಕ್ಯಾಚ್ ನೀಡಿ ನಿರ್ಗಮಿಸಿದ ಕೃನಾಲ್ ಪಾಂಡ್ಯ (12)
ಕೊನೆಯ ಓವರ್ನಲ್ಲಿ ಫರ್ಗುಸನ್ ಉತ್ತಮ ಬೌಲಿಂಗ್
ರನ್ ಕದಿಯುವ ಯತ್ನ ಫರ್ಗುಸಲ್ ಎಸೆತಕ್ಕೆ ಕೀರನ್ ಪೊಲಾರ್ಡ್ ರನೌಟ್
ಆಂಡ್ರೆ ರಸೆಲ್ ಎಸೆತದಲ್ಲಿ ಸೂಪರ್ ಸಿಕ್ಸರ್ ಸಿಡಿಸಿದ ಕೃನಾಲ್ ಪಾಂಡ್ಯ.
ಲಾಂಗ್ ಆಫ್ನತ್ತ ಭರ್ಜರಿ ಸಿಕ್ಸ್…
ಪ್ರಸಿದ್ದ್ ಕೃಷ್ಣ ಎಸೆದ 18ನೇ ಓವರ್ನಲ್ಲಿ 18 ರನ್ ಕಲೆಹಾಕಿದ ಮುಂಬೈ ಇಂಡಿಯನ್ಸ್ ಬ್ಯಾಟರುಗಳು.
ಕ್ರೀಸ್ನಲ್ಲಿ ಕೀರನ್ ಪೊಲಾರ್ಡ್ ಹಾಗೂ ಕೃನಾಲ್ ಪಾಂಡ್ಯ ಬ್ಯಾಟಿಂಗ್
MI 139/4 (18)
ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಕೃನಾಲ್ ಪಾಂಡ್ಯ ಬ್ಯಾಟ್ ತುದಿ ತಾಗಿ ಚೆಂಡು ಕೀಪರ್ನತ್ತ- ಕ್ಯಾಚ್ ಕೈಚೆಲ್ಲಿದ ದಿನೇಶ್ ಕಾರ್ತಿಕ್
ಪ್ರಸಿದ್ಧ್ ಕೃಷ್ಣ ಎಸೆತಕ್ಕೆ ಭರ್ಜರಿ ಬೌಂಡರಿ ಉತ್ತರ ನೀಡಿದ ಪೊಲಾರ್ಡ್
ಲೂಕಿ ಫರ್ಗುಸನ್ ಎಸೆತದಲ್ಲಿ ರಸೆಲ್ಗೆ ಕ್ಯಾಚ್ ನೀಡಿ ಹೊರನಡೆದ ಇಶಾನ್ ಕಿಶನ್ (14)
ಆಂಡ್ರೆ ರಸೆಲ್ ಎಸೆತದಲ್ಲಿ ಬೌಂಡರಿ ಬಾರಿಸಿ ರನ್ ಖಾತೆ ತೆರೆದ ಕೀರನ್ ಪೊಲಾರ್ಡ್.
ಮುಂಬೈ ಇಂಡಿಯನ್ಸ್ 3 ವಿಕೆಟ್ ಪತನ:-
ಔಟ್ ಆಗಿರುವ ಬ್ಯಾಟ್ಸ್ಮನ್
ರೋಹಿತ್ ಶರ್ಮಾ (33)
ಸೂರ್ಯ ಕುಮಾರ್ ಯಾದವ್ (5)
ಕ್ವಿಂಟನ್ ಡಿಕಾಕ್ (55)
ಕ್ರೀಸ್ನಲ್ಲಿ ಕೀರನ್ ಪೊಲಾರ್ಡ್ ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್
ಆಂಡ್ರೆ ರಸೆಲ್ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿದ ಇಶಾನ್ ಕಿಶನ್
ಶಾರ್ಟ್ ಎಸೆತವನ್ನು ಓವರ್ ಫೈನ್ ಲೆಗ್ನತ್ತ ಬಾರಿಸಿದ ಪಾಕೆಟ್ ಡೈನಾಮೊ
A wicket & only 4 runs ?
Skiddy’s over just gave us the momentum we needed! ?#MIvKKR #KKR #AmiKKR #KorboLorboJeetbo #আমিKKR #IPL2021 #CricketTwitter pic.twitter.com/LFyEKSsvEC
— KolkataKnightRiders (@KKRiders) September 23, 2021
ಸಿಂಪಲ್ ಸ್ಟ್ರೈಟ್ ಫಾರ್ವಡ್ ಕ್ಯಾಚ್ ನೀಡಿ ಹೊರ ನಡೆದ ಕ್ವಿಂಟನ್ ಡಿಕಾಕ್ (55). ಪ್ರಸಿದ್ಧ್ ಕೃಷ್ಣ ಖಾತೆಗೆ ಮತ್ತೊಂದು ವಿಕೆಟ್.
MI 106/3 (14.5)
15ನೇ ಓವರ್ನ 4ನೇ ಎಸೆತದಲ್ಲಿ ಲೈನ್-ನೋಬಾಲ್ ಎಸೆದ ಪ್ರಸಿದ್ಧ್ ಕೃಷ್ಣ
ಫ್ರೀ ಹಿಟ್ ಎಸೆತವನ್ನು ಬಳಸಿಕೊಳ್ಳುವಲ್ಲಿ ಕ್ವಿಂಟನ್ ಡಿಕಾಕ್ ವಿಫಲ.
5⃣0⃣ up for @QuinnyDeKock69 ? ?
1⃣0⃣0⃣ up for @mipaltan ? ?
Follow the match ? https://t.co/SVn8iKC4Hl#VIVOIPL #MIvKKR pic.twitter.com/GiLqXwc3UU
— IndianPremierLeague (@IPL) September 23, 2021
ಮಿಡ್ ವಿಕೆಟ್ ಫೀಲ್ಡಿಂಗ್ನತ್ತ ಭರ್ಜರಿ ಬೌಂಡರಿ ಬಾರಿಸಿ ತಂಡದ ಮೊತ್ತವನ್ನು ನೂರರ ಗಡಿದಾಟಿಸಿದ ಡಿಕಾಕ್
37 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 3 ಫೋರ್ಗಳೊಂದಿಗೆ ಅರ್ಧಶತಕ ಪೂರೈಸಿದ ಕ್ವಿಂಟನ್ ಡಿಕಾಕ್.
Breakthrough for @KKRiders! ??#MumbaiIndians lose their captain Rohit Sharma for 33.
Sunil Narine strikes as Shubman Gill takes the catch near the ropes. ? ? #VIVOIPL #MIvKKR
Follow the match ? https://t.co/SVn8iKC4Hl pic.twitter.com/mdhTiFzgRQ
— IndianPremierLeague (@IPL) September 23, 2021
ಕನ್ನಡಿಗ ಪ್ರಸಿದ್ಧ್ ಕೃಷ್ಣ ಸೂರ್ಯಕುಮಾರ್ ಯಾದವ್ ವಿಕೆಟ್ ಪಡೆಯುವ ಮೂಲಕ ಮೊದಲ ಯಶಸ್ಸು ಪಡೆದಿದ್ದಾರೆ. 13ನೇ ಓವರ್ನ ಮೊದಲ ಎಸೆತದಲ್ಲಿ ಫ್ಲಿಕ್ ಶಾಟ್ಗೆ ಮುಂದಾದ ಸೂರ್ಯ (5) ಕೀಪರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಸೂರ್ಯಕುಮಾರ್ ಯಾದವ್ ಔಟ್
ಕ್ರೀಸ್ನಲ್ಲಿ ಡಿಕಾಕ್ ಹಾಗೂ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್
ಸುನೀಲ್ ನರೈನ್ ಎಸೆತದಲ್ಲಿ ರೋಹಿತ್ ಶರ್ಮಾ ಔಟ್.
ಭರ್ಜರಿ ಹೊಡೆತಕ್ಕೆ ಮುಂದಾಗಿ ಶುಭ್ಮನ್ ಗಿಲ್ಗೆ ಕ್ಯಾಚ್ ನೀಡಿದ ಹಿಟ್ಮ್ಯಾನ್
30 ಎಸೆತಗಳಲ್ಲಿ 33 ರನ್ ಬಾರಿಸಿದ ಹೊರನಡೆದ ರೋಹಿತ್ ಶರ್ಮಾ
ಡಿಕಾಕ್ ಅಬ್ಬರ ಶುರು…ರಸೆಲ್ ಅವರ 2ನೇ ಎಸೆತದಲ್ಲಿ ಸ್ಟ್ರೈಟ್ ಹಿಟ್ ಮೂಲಕ ಬೌಂಡರಿ ಸಿಡಿಸಿದ ಡಿಕಾಕ್
9ನೇ ಓವರ್ ಎಸೆಯಲು ಬಂದ ಆಂಡ್ರೆ ರಸೆಲ್ರನ್ನು ಸೂಪರ್ ಬೌಂಡರಿ ಮೂಲಕ ವೆಲ್ಕಂ ಮಾಡಿದ ಕ್ವಿಂಟನ್ ಡಿಕಾಕ್
ಡಿಕಾಕ್-ರೋಹಿತ್ ಶರ್ಮಾ ಜುಗಲ್ಬಂದಿ
ದಾಳಿಗಿಳಿದ ಸುನೀಲ್ ನರೈನ್
MI 57/0 (6.1)
ಪವರ್ ಪ್ಲೇ ಮುಕ್ತಾಯ: ಮುಂಬೈ ಭರ್ಜರಿ ಆರಂಭ
ರೋಹಿತ್ ಶರ್ಮಾ (27)
ಕ್ವಿಂಟನ್ ಡಿಕಾಕ್ (27)
MI 56/0 (6)
ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಮತ್ತೊಂದು ಭರ್ಜರಿ ಸಿಕ್ಸ್ ಸಿಡಿಸಿದ ಡಿಕಾಕ್
ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಸೂಪರ್ ಶಾಟ್…ಸ್ಟ್ರೈಟ್ ಹಿಟ್ ಮೂಲಕ ಚೆಂಡನ್ನು ಸ್ಟೇಡಿಯಂಗೆ ತಲುಪಿಸಿದ ಕ್ವಿಂಟನ್ ಡಿಕಾಕ್- ಸಿಕ್ಸ್
ಲೂಕಿ ಫರ್ಗುಸನ್ ಎಸೆತದಲ್ಲಿ ಓವರ್ ಫೈನ್ ಲೆಗ್ನತ್ತ ಭರ್ಜರಿ ಹೊಡೆತ
ಕ್ವಿಂಟನ್ ಡಿಕಾಕ್ ಬ್ಯಾಟ್ನಿಂದ ಮುಂಬೈ ತಂಡದ ಮೊದಲ ಸಿಕ್ಸರ್
ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ದ 1000 ರನ್ ಪೂರೈಸಿದ ರೋಹಿತ್ ಶರ್ಮಾ
ನಾಲ್ಕು ಓವರ್ ಮುಕ್ತಾಯ
ಮುಂಬೈ ಇಂಡಿಯನ್ಸ್ ಉತ್ತಮ ಆರಂಭ
ಯಾವುದೇ ವಿಕೆಟ್ ನಷ್ಟವಿಲ್ಲದೆ 29 ರನ್ ಕಲೆಹಾಕಿದ ಆರಂಭಿಕರು
MI 29/0 (4)
ವರುಣ್ ಚಕ್ರವರ್ತಿ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಸಿಡಿಸಿದ ಹಿಟ್ಮ್ಯಾನ್
ಬ್ಯಾಕ್ವರ್ಡ್ ಸ್ಕ್ವೇರ್ ಲೆಗ್ ಮೂಲಕ ತಂಡಕ್ಕೆ ನಾಲ್ಕು ರನ್ ತಂದುಕೊಟ್ಟ ಮುಂಬೈ ನಾಯಕ.
ವರುಣ್ ಚಕ್ರವರ್ತಿ ಎಸೆದ 4ನೇ ಓವರ್ನ ಮೊದಲ ಎಸೆತದಲ್ಲೇ ಬೌಂಡರಿ.
ಮಿಡ್ ಆಫ್ ಮೂಲಕ ಚೆಂಡು ಬೌಂಡರಿಗೆ…ಫೋರ್ ರನ್
3ನೇ ಓವರ್ನ ಅಂತಿಮ ಎಸೆತದಲ್ಲಿ ರಿವರ್ಸ್ ಸ್ವೀಪ್ ಮೂಲಕ ಬೌಂಡರಿ ಬಾರಿಸಿದ ಡಿಕಾಕ್ .
MI 20/0
ಸುನಿಲ್ ನರೈನ್ ಸ್ಪಿನ್ಗೆ ಮಿಡ್ ವಿಕೆಟ್ ಮೂಲಕ ಬೌಂಡರಿ ಉತ್ತರ ನೀಡಿದ ರೋಹಿತ್ ಶರ್ಮಾ.
ಮೂರನೇ ಓವರ್ ಕೂಡ ಸ್ಪಿನ್ನರ್
ಸುನಿಲ್ ನರೈನ್ ಕೈಗೆ ಚೆಂಡು ನೀಡಿದ ಇಯಾನ್ ಮೋರ್ಗನ್.
ಮೊದಲ ಮೂರು ಓವರ್ ಸ್ಪಿನ್ನರ್ಗಳನ್ನೇ ಬಳಸಿದ ಕೆಕೆಆರ್
MI 9/0 (2)
ರೋಹಿತ್ ಶರ್ಮಾ (7), ಡಿಕಾಕ್ (1)
ವರುಣ್ ಚಕ್ರವರ್ತಿ ಕೈಗೆ ಚೆಂಡು ನೀಡಿದ ಇಯಾನ್ ಮೋರ್ಗನ್
ಮೊದಲ ಎರಡು ಓವರ್ ಸ್ಪಿನ್ನರ್ಗೆ ನೀಡಿದ ಕೆಕೆಆರ್ ನಾಯಕ
ನಿತೀಶ್ ರಾಣಾ ಅವರ ಮೊದಲ ಓವರ್ನಲ್ಲಿ 5 ರನ್ ಕಲೆಹಾಕಿದ ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮಾ (5)
ಕ್ವಿಂಟನ್ ಡಿ ಕಾಕ್ (0)
ಮೊದಲ ಎಸೆತದಲ್ಲೇ ಕವರ್ಸ್ನತ್ತ ಬೌಂಡರಿ ಬಾರಿಸಿದ ರೋಹಿತ್ ಶರ್ಮಾ
ಸ್ಪಿನ್ನರ್ ನಿತೀಶ್ ರಾಣಾ ಕೈಗೆ ಮೊದಲ ಓವರ್ ನೀಡಿದ ಇಯಾನ್ ಮೋರ್ಗನ್
ಮುಂಬೈ ಇಂಡಿಯನ್ಸ್ ಆರಂಭಿಕರು
ರೋಹಿತ್ ಶರ್ಮಾ (ಬಲಗೈ ಬ್ಯಾಟರ್)
ಕ್ವಿಂಟನ್ ಡಿ ಕಾಕ್ (ಎಡಗೈ ಬ್ಯಾಟರ್)
Warm ups ✅
Time to hit the ground running ?
Who will set the stage on fire ? tonight in Abu Dhabi?? #VIVOIPL #MIvKKR
Let us know in the comments below ? pic.twitter.com/NJI6tBe9Xb
— IndianPremierLeague (@IPL) September 23, 2021
Team News!
1⃣ change for @mipaltan as @ImRo45 returns to captain the side. @KKRiders remain unchanged. #VIVOIPL #MIvKKR
Follow the match ? https://t.co/SVn8iKC4Hl
Here are the Playing XIs ? pic.twitter.com/jlROlVxe57
— IndianPremierLeague (@IPL) September 23, 2021
ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ ಇಲೆವೆನ್: ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯಾನ್ ಮೋರ್ಗನ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಆಂಡ್ರೆ ರಸೆಲ್, ಸುನಿಲ್ ನರೈನ್, ಲೂಕಿ ಫರ್ಗುಸನ್, ವರುಣ್ ಚಕ್ರವರ್ತಿ, ಪ್ರಸಿದ್ ಕೃಷ್ಣ
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಸೌರಭ್ ತಿವಾರಿ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಆಡಮ್ ಮಿಲ್ನ್, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್
? Toss Update ?@Eoin16 wins the toss & @KKRiders have elected to bowl against @mipaltan. #VIVOIPL #MIvKKR
Follow the match ? https://t.co/SVn8iKC4Hl pic.twitter.com/IEHDhhXS0u
— IndianPremierLeague (@IPL) September 23, 2021
ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ ಇಲೆವೆನ್: ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯಾನ್ ಮೋರ್ಗನ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಆಂಡ್ರೆ ರಸೆಲ್, ಸುನಿಲ್ ನರೈನ್, ಲೂಕಿ ಫರ್ಗುಸನ್, ವರುಣ್ ಚಕ್ರವರ್ತಿ, ಪ್ರಸಿದ್ ಕೃಷ್ಣ
We go with the winning combination from our last game! ??#MIvKKR #KKR #AmiKKR #KorboLorboJeetbo #আমিKKR #IPL2021 #CricketTwitter @PlayMPL pic.twitter.com/HzOrihJqf8
— KolkataKnightRiders (@KKRiders) September 23, 2021
ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ ಇಲೆವೆನ್: ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯಾನ್ ಮೋರ್ಗನ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಆಂಡ್ರೆ ರಸೆಲ್, ಸುನಿಲ್ ನರೈನ್, ಲೂಕಿ ಫರ್ಗುಸನ್, ವರುಣ್ ಚಕ್ರವರ್ತಿ, ಪ್ರಸಿದ್ ಕೃಷ್ಣ
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಸೌರಭ್ ತಿವಾರಿ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಆಡಮ್ ಮಿಲ್ನ್, ರಾಹುಲ್ ಚಹರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್
ಟಾಸ್ ಗೆದ್ದ ಕೆಕೆಆರ್ ನಾಯಕ ಇಯಾನ್ ಮೋರ್ಗನ್, ಬೌಲಿಂಗ್ ಆಯ್ಕೆ.
ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಕಣಕ್ಕೆ.
Mighty MAXIMUMS on the cards ?#VIVOIPL #MIvKKR pic.twitter.com/AkcEMOyfkh
— IndianPremierLeague (@IPL) September 23, 2021
ಈ ಪಿಚ್ ಬ್ಯಾಟಿಂಗ್ ಹಾಗೂ ಬೌಲಿಂಗ್ಗೆ ಸಹಕಾರಿ. ಆದರೂ 2ನೇ ಇನಿಂಗ್ಸ್ ವೇಳೆ ಇಬ್ಬನಿ ಇದ್ದರೆ ಬೌಲಿಂಗ್ ಮಾಡುವುದು ತುಸು ಕಷ್ಟ. ಅದರ ಸಂಪೂರ್ಣ ಲಾಭ ಬ್ಯಾಟ್ಸ್ಮನ್ಗಳಿಗೆ ಸಿಗುತ್ತೆ.
The ???????????? for tonight! ?️#MIvKKR #KKR #AmiKKR #KorboLorboJeetbo #আমিKKR #IPL2021 #CricketTwitter pic.twitter.com/MQBxxjtTmx
— KolkataKnightRiders (@KKRiders) September 23, 2021
Acing the ?️ game! ? ?
How many wickets will @rdchahar1 scalp against #KKR tonight? ? ?#VIVOIPL #MIvKKR pic.twitter.com/uDgwspGQmJ
— IndianPremierLeague (@IPL) September 23, 2021
https://t.co/vL8lFRMdNO pic.twitter.com/z4pYt1UDAi
— Mumbai Indians (@mipaltan) September 23, 2021
????#OneFamily #MumbaiIndians #IPL2021 #MIvKKR @sachin_rt pic.twitter.com/KGkejpglpy
— Mumbai Indians (@mipaltan) September 23, 2021
Hello & welcome from Abu Dhabi for Match 3⃣4⃣ of the #VIVOIPL. ?
A cracking contest is on the cards as @mipaltan take on @KKRiders. ? ?
Which team are you rooting for tonight❓ ? ? #MIvKKR pic.twitter.com/X3cBFQuyyX
— IndianPremierLeague (@IPL) September 23, 2021
Published On - 6:06 pm, Thu, 23 September 21