T20 World Cup anthem: ಟಿ20 ವಿಶ್ವಕಪ್ ಗೀತೆ ಬಿಡುಗಡೆ: ಅನಿಮಿ ಅವತಾರದಲ್ಲಿ ಕೊಹ್ಲಿ,ಪೊಲಾರ್ಡ್
T20 World Cup anthem: ಟಿ20 ವಿಶ್ವಕಪ್ ಅಕ್ಟೋಬರ್ 17 ರಂದು ಶುರುವಾಗಲಿದ್ದು, ಮೊದಲ ಹಂತದಲ್ಲಿ ಅರ್ಹತಾ ಪಂದ್ಯಗಳು ನಡೆಯಲಿದೆ. ಹಾಗೆಯೇ ಸೂಪರ್ 12 ಪಂದ್ಯಗಳಿಗೆ ಅಕ್ಟೋಬರ್ 23ಕ್ಕೆ ಚಾಲನೆ ಸಿಗಲಿದೆ.
ಟಿ20 ವಿಶ್ವಕಪ್ (T20 World Cup 2021) ಆರಂಭಕ್ಕೆ ಇನ್ನು ತಿಂಗಳು ಮಾತ್ರ ಉಳಿದಿವೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಈ ಬಾರಿಯ ತನ್ನ ಅಧಿಕೃತ ಟಿ20 ವಿಶ್ವಕಪ್ ಗೀತೆಯನ್ನು (T20 World Cup anthem) ಬಿಡುಗಡೆ ಮಾಡಿದೆ. ಲೈವ್ ದಿ ಗೇಮ್ ಎಂಬ ಶೀರ್ಷಿಕೆಯ ಈ ಥೀಮ್ ಸಾಂಗ್ಗೆ ಭಾರತದ ಖ್ಯಾತ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ರಾಗ ಸಂಯೋಜಿಸಿದ್ದಾರೆ. ಇನ್ನು ಅನಿಮೇಷನ್ ಥೀಮ್ನಲ್ಲಿ ಮೂಡಿ ಬಂದಿರುವ ಈ ಇಂಗ್ಲಿಷ್ ಹಾಡಿನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli), ಅಫ್ಘಾನಿಸ್ತಾನದ ರಶೀದ್ ಖಾನ್ (Rashid Khan), ವೆಸ್ಟ್ ಇಂಡೀಸ್ ತಂಡದ ನಾಯಕ ಕೀರನ್ ಪೊಲ್ಲಾರ್ಡ್ ಮತ್ತು ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ ವೆಲ್ ಅವರ ಅನಿಮಿ ಅವತಾರಗಳನ್ನು ತೋರಿಸಿರುವುದು ವಿಶೇಷ.
ಐಸಿಸಿ ಬಿಡುಗಡೆ ಮಾಡಿರುವ ಥೀಮ್ ಸಾಂಗ್ 1 ನಿಮಿಷ 30 ಸೆಕೆಂಡ್ ಗಳಿದ್ದು, ಹಾಡಿನಲ್ಲಿ ಮುಂಬೈ, ಜಮೈಕಾ (ವೆಸ್ಟ್ ಇಂಡೀಸ್), ಕರಾಚಿ (ಪಾಕಿಸ್ತಾನ್), ಆಕ್ಲೆಂಡ್ (ನ್ಯೂಜಿಲೆಂಡ್)ನಲ್ಲಿ ಅಭಿಮಾನಿಗಳ ಪಂದ್ಯಕ್ಕಾಗಿ ಕಾಯುವಿಕೆಯನ್ನು ತೋರಿಸಲಾಗಿದೆ. ಇನ್ನು ಈ ಹಾಡಿಗಾಗಿ 3D ಮತ್ತು 2D ತಂತ್ರಜ್ಞಾನಗಳ ಅನಿಮೇಷನ್ ಬಳಸಲಾಗಿದ್ದು, ಇದಕ್ಕಾಗಿ ಡಿಸೈನರ್‌ಗಳು, ಮಾಡೆಲರ್‌ಗಳು, ಮ್ಯಾಟ್ ಪೇಂಟರ್‌ಗಳು, ಆನಿಮೇಟರ್‌ಗಳು, ಲೈಟರ್‌ಗಳು ಮತ್ತು ಕಂಪೋಸಿಟರ್‌ಗಳು ಸೇರಿದಂತೆ 40 ಕ್ಕೂ ಹೆಚ್ಚು ಜನರ ತಂಡವು ಈ ಗೀತೆಯ ಚಿತ್ರೀಕರಣಕ್ಕಾಗಿ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಿತ್ತು. ಇದೀಗ ಫೈನಲ್ ಔಟ್ ಪುಟ್ ಬಿಡುಗಡೆಯಾಗಿದ್ದು, ಲೈವ್ ದಿ ಗೇಮ್ ಥೀಮ್ ಸಾಂಗ್ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಟಿ20 ವಿಶ್ವಕಪ್ ಅಕ್ಟೋಬರ್ 17 ರಂದು ಶುರುವಾಗಲಿದ್ದು, ಮೊದಲ ಹಂತದಲ್ಲಿ ಅರ್ಹತಾ ಪಂದ್ಯಗಳು ನಡೆಯಲಿದೆ. ಹಾಗೆಯೇ ಸೂಪರ್ 12 ಪಂದ್ಯಗಳಿಗೆ ಅಕ್ಟೋಬರ್ 23ಕ್ಕೆ ಚಾಲನೆ ಸಿಗಲಿದೆ. ಸೂಪರ್ 12ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯಾ ಮುಖಾಮುಖಿಯಾಗಲಿದ್ದು, ಅಕ್ಟೋಬರ್ 24 ರಂದು ಪಾಕಿಸ್ತಾನ್ ವಿರುದ್ದದ ಪಂದ್ಯದೊಂದಿಗೆ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಇನ್ನು ಈ ಬಾರಿಯ ಟಿ20 ವಿಶ್ವಕಪ್ ಯುಎಇನ ಶಾರ್ಜಾ ಕ್ರಿಕೆಟ್ ಸ್ಟೇಡಿಯಂ, ಅಬುಧಾಬಿಯ ಶೇಖ್ ಝಾಯೆದ್ ಕ್ರಿಕೆಟ್ ಸ್ಟೇಡಿಯಂ ಹಾಗೂ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.
? Let the world know, This is your show ?
Come #LiveTheGame and groove to the #T20WorldCup anthem ?? pic.twitter.com/KKQTkxd3qw
— ICC (@ICC) September 23, 2021
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಗೆ ನಾಯಕತ್ವ ಆಗಲ್ಲ, ಬಿಟ್ಟು ಬಿಡು ಎಂದಿದ್ದ ಕೋಚ್ ರವಿ ಶಾಸ್ತ್ರಿ
ಇದನ್ನೂ ಓದಿ: Virat Kohli: ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ
ಇದನ್ನೂ ಓದಿ: ಇದು ಐಪಿಎಲ್…ಕ್ರಿಸ್ ಗೇಲ್ಗೆ ಸಿಕ್ಕಿದ್ದು 8 ಕೋಟಿ ರೂ, ಕೇದರ್ ಜಾಧವ್ ಪಡೆದಿದ್ದು 25 ಕೋಟಿ ರೂ..!
ಇದನ್ನೂ ಓದಿ: IPL 2021: ಪ್ಲೇ ಆಫ್ ಪ್ರವೇಶಿಸುವ 4 ತಂಡಗಳನ್ನು ಹೆಸರಿಸಿದ ಗೌತಮ್ ಗಂಭೀರ್
(T20 World Cup anthem: ICC launch theme song)