Virat Kohli: ವಿರಾಟ್ ಕೊಹ್ಲಿಗೆ ನಾಯಕತ್ವ ಆಗಲ್ಲ, ಬಿಟ್ಟು ಬಿಡು ಎಂದಿದ್ದ ಕೋಚ್ ರವಿ ಶಾಸ್ತ್ರಿ

TV9 Digital Desk

| Edited By: Zahir Yusuf

Updated on: Sep 23, 2021 | 2:23 PM

Ravi Shastri-Virat Kohli: ಐಪಿಎಲ್​ನಲ್ಲೂ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ.

Virat Kohli: ವಿರಾಟ್ ಕೊಹ್ಲಿಗೆ ನಾಯಕತ್ವ ಆಗಲ್ಲ, ಬಿಟ್ಟು ಬಿಡು ಎಂದಿದ್ದ ಕೋಚ್ ರವಿ ಶಾಸ್ತ್ರಿ
Ravi Shastri-Virat Kohli
Follow us

ಮುಂಬರುವ ಟಿ20 ವಿಶ್ವಕಪ್ (T20 World Cup 2021) ನಂತರ ವಿರಾಟ್ ಕೊಹ್ಲಿ (Virat Kohli) ಟೀಮ್ ಇಂಡಿಯಾ (Team India) ಟಿ20 ತಂಡದ ನಾಯಕತ್ವವನ್ನು ತ್ಯಜಿಸುವುದಾಗಿ ಘೋಷಿಸಿದ್ದಾರೆ. ಮುಂದಿನ ದಿನಗಳಲ್ಲಿ ಬ್ಯಾಟಿಂಗ್​ನತ್ತ ಹೆಚ್ಚಿನ ಗಮನಹರಿಸಲು ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ ಎಂದು ಕೊಹ್ಲಿ ತಿಳಿಸಿದ್ದಾರೆ. ಕೊಹ್ಲಿಯ ಈ ನಿರ್ಧಾರ ಬೆನ್ನಲ್ಲೇ ಕಳೆದ 6 ತಿಂಗಳಿಂದ ನಾಯಕತ್ವದ ಚರ್ಚೆಗಳು ನಡೆಯುತ್ತಿತ್ತು ಎಂದು ಬಿಸಿಸಿಐ (BCCI) ಕಾರ್ಯದರ್ಶಿ ಜಯ್ ಶಾ ಬಹಿರಂಗಪಡಿಸಿದ್ದರು. ಇದೀಗ ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿಶಾಸ್ತ್ರಿ (Ravi Shastri) ಅವರು ಸಹ ಕೊಹ್ಲಿಗೆ ನಾಯಕತ್ವವನ್ನು ತ್ಯಜಿಸುವಂತೆ ಸೂಚಿಸಿದ್ದರು ಎಂಬ ವಿಚಾರವೊಂದು ಬಹಿರಂಗವಾಗಿದೆ.

ಆಸ್ಟ್ರೇಲಿಯಾ ಸರಣಿ ಬೆನ್ನಲ್ಲೇ ವಿರಾಟ್ ಕೊಹ್ಲಿಗೆ ಟಿ20 ಹಾಗೂ ಏಕದಿನ ತಂಡಗಳ ನಾಯಕತ್ವನ್ನು ತ್ಯಜಿಸುವಂತೆ ಕೋಚ್ ರವಿ ಶಾಸ್ತ್ರಿ ನಿರ್ದೇಶಿಸಿದ್ದರು. ಇದಾಗ್ಯೂ ಕೊಹ್ಲಿ ಮಹತ್ವ ನಿರ್ಧಾರ ತೆಗೆದುಕೊಂಡಿರಲಿಲ್ಲ. ನಾಯಕತ್ವದ ಹೊರೆಯನ್ನು ಕಡಿಮೆ ಮಾಡಿ ಬ್ಯಾಟಿಂಗ್​ನತ್ತ ಹೆಚ್ಚಿನ ಗಮನಹರಿಸುವಂತೆ ಶಾಸ್ತ್ರಿ ಅವರು ಕೊಹ್ಲಿಗೆ ಸೂಚಿಸಿದ್ದರು. ಅಲ್ಲದೆ ಕೇವಲ ಟೆಸ್ಟ್​ ತಂಡವನ್ನು ಮುನ್ನಡೆಸುವಂತೆ ಸಲಹೆ ನೀಡಿದ್ದರು. ಆದರೆ ವೈಟ್​ ಬಾಲ್​ ಕ್ರಿಕೆಟ್​ ನಾಯಕತ್ವವನ್ನು ಬಿಡಲು ಮನಸ್ಸು ಮಾಡಿರಲಿಲ್ಲ ಎಂದು ವರದಿಯಾಗಿದೆ.

ವರದಿಯ ಪ್ರಕಾರ, ಕೊಹ್ಲಿಯನ್ನು ಪ್ರೇರೇಪಿಸಲು ಶಾಸ್ತ್ರಿ ಈ ಸಲಹೆಯನ್ನು ನೀಡಿದ್ದರು. ಇದರಿಂದ ವಿರಾಟ್ ಕೊಹ್ಲಿ ವಿಶ್ವದ ಅಗ್ರಮಾನ್ಯ ಬ್ಯಾಟ್ಸ್‌ಮನ್‌ ಆಗಿ ಉಳಿಯಬಹುದು ಎಂದು ಟೀಮ್ ಇಂಡಿಯಾ ಕೋಚ್ ಅರ್ಥ ಮಾಡಿಸಿದ್ದರು. ಆದರೆ ಅಂದು ಕೊಹ್ಲಿ ತಮ್ಮ ನಿರ್ಧಾರವನ್ನು ಬದಲಿಸಿರಲಿಲ್ಲ. ಇದೀಗ ಟೀಮ್ ಇಂಡಿಯಾ ಟಿ20 ನಾಯಕನ ಹುದ್ದೆಯನ್ನು ತ್ಯಜಿಸುವುದಾಗಿ ಕಿಂಗ್ ಕೊಹ್ಲಿ ಘೋಷಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಏಕದಿನ ನಾಯಕತ್ವದಿಂದಲೂ ಕೆಳಗಿಳಿಯಬಹುದು ಎನ್ನಲಾಗುತ್ತಿದೆ.

“ಆಸ್ಟ್ರೇಲಿಯಾದಲ್ಲಿ ಭಾರತ ತಂಡವು ಖಾಯಂ ನಾಯಕನಿಲ್ಲದೆ ಸರಣಿಯನ್ನು ಗೆದ್ದ ಬಳಿಕ ಕೊಹ್ಲಿಯ ನಾಯಕತ್ವದ ಬಗ್ಗೆ ಚರ್ಚೆಗಳು ಆರಂಭವಾಯಿತು. ಇದೀಗ ಅದರ ಮೊದಲ ಹೆಜ್ಜೆ ಎಂಬಂತೆ ಟಿ20 ತಂಡದ ನಾಯಕತ್ವಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಇನ್ನು 2023 ರ ಮೊದಲು ಏಕದಿನ ನಾಯಕತ್ವದಿಂದ ಕೆಳಗಿಳಿಯಬೇಕಾಗಬಹುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತ ಐಪಿಎಲ್​ನಲ್ಲೂ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೊಹ್ಲಿ ಟೀಮ್ ಇಂಡಿಯಾದಲ್ಲಿ ಕೇವಲ ಬ್ಯಾಟ್ಸ್​ಮನ್ ತಂಡಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: Virat Kohli: ನಮಗೆ ಸೋಲುಣಿಸಿದ ಆತನೇ ನಮ್ಮ ಪ್ರಮುಖ ಅಸ್ತ್ರ..!

ಇದನ್ನೂ ಓದಿ: Virat Kohli: ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ

ಇದನ್ನೂ ಓದಿ: 90 ಕಿ.ಮೀ ಮೈಲೇಜ್ ನೀಡುವ ಕಡಿಮೆ ಬೆಲೆಯ ಬೈಕ್​ಗಳ ಪಟ್ಟಿ ಇಲ್ಲಿದೆ

ಇದನ್ನೂ ಓದಿ: IPL 2021: ಪ್ಲೇ ಆಫ್​ ಪ್ರವೇಶಿಸುವ 4 ತಂಡಗಳನ್ನು ಹೆಸರಿಸಿದ ಗೌತಮ್ ಗಂಭೀರ್

(Ravi Shastri suggested Virat Kohli to give up ODI Captaincy)

ತಾಜಾ ಸುದ್ದಿ

Related Stories

Click on your DTH Provider to Add TV9 Kannada