ಇದು ಐಪಿಎಲ್​…ಕ್ರಿಸ್ ಗೇಲ್​ಗೆ ಸಿಕ್ಕಿದ್ದು 8 ಕೋಟಿ ರೂ, ಕೇದರ್ ಜಾಧವ್ ಪಡೆದಿದ್ದು 25 ಕೋಟಿ ರೂ..!

Chris Gayle and Kedar Jadhav: ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಐಪಿಎಲ್​ನಲ್ಲಿ ಐದು ಫ್ರಾಂಚೈಸಿಗಳ ಪರ ಆಡಿರುವ ಕೇದರ್ ಜಾಧವ್ ಅವರ ಪ್ರದರ್ಶನ.

ಇದು ಐಪಿಎಲ್​...ಕ್ರಿಸ್ ಗೇಲ್​ಗೆ ಸಿಕ್ಕಿದ್ದು 8 ಕೋಟಿ ರೂ, ಕೇದರ್ ಜಾಧವ್ ಪಡೆದಿದ್ದು 25 ಕೋಟಿ ರೂ..!
Chris Gayle and Kedar Jadhav
Follow us
TV9 Web
| Updated By: ಝಾಹಿರ್ ಯೂಸುಫ್

Updated on:Sep 23, 2021 | 4:32 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಮೂಲಕ ಅಂತಾರಾಷ್ಟ್ರೀಯ ತಂಡಗಳಲ್ಲಿ ಸ್ಥಾನ ಪಡೆದ ಅನೇಕ ಆಟಗಾರರಿದ್ದಾರೆ. ಹೀಗೆ ಸ್ಥಾನ ಸಿಗಲು ಮುಖ್ಯ ಕಾರಣ ವಿಶ್ವದ ನಂಬರ್ ಲೀಗ್​ ಐಪಿಎಲ್​ನಲ್ಲಿನ ಶ್ರೇಷ್ಠ ಪ್ರದರ್ಶನ. ಸಾಮಾನ್ಯವಾಗಿ ಎಲ್ಲರೂ ಐಪಿಎಲ್​ನ ಅತ್ಯುತ್ತಮ ಪ್ರದರ್ಶನಗಳ ಮೇಲೆ ಕಣ್ಣಾಡಿಸುತ್ತಾರೆ. ಅಂತಹ ಆಟಗಾರರು ಹರಾಜಿನಲ್ಲಿ ಬೃಹತ್ ಮೊತ್ತಕ್ಕೆ ಬಿಕರಿಯಾಗುತ್ತಾರೆ. ಆದರೆ ಇನ್ನೂ ಕೆಲವರಿರುತ್ತಾರೆ. ಅತ್ಯಂತ ಹೀನಾಯ ಪ್ರದರ್ಶನ ನೀಡಿದರೂ ಬೃಹತ್ ಮೊತ್ತಕ್ಕೆ ಹರಾಜಾಗಿ ತಂಡಗಳಲ್ಲಿ ಸ್ಥಾನ ಪಡೆದಿರುತ್ತಾರೆ. ಹೀಗೆ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿರುವ ಆಟಗಾರರ ಪಟ್ಟಿಯನ್ನು ತೆಗೆದುಕೊಂಡರೆ ಅಗ್ರಸ್ಥಾನದಲ್ಲಿ ಕಂಡು ಬರುವ ಹೆಸರು ಕೇದರ್ ಜಾಧವ್ ಅವರದ್ದು.

ಕೇದರ್ ಜಾಧವ್ 2009 ರಿಂದ ಐಪಿಎಲ್ ಟೂರ್ನಿ ಆಡುತ್ತಿದ್ದಾರೆ. ಆರ್​ಸಿಬಿ ಪರ ಚೊಚ್ಚಲ ಬಾರಿ ಆಡಿದ್ದ ಜಾಧವ್ ಆ ಬಳಿಕ ಡೆಲ್ಲಿ ಡೇರ್​ ಡೆವಿಲ್ಸ್​ ತಂಡದ ಪಾಲಾಗಿದ್ದರು. ಇನ್ನು 2011 ರಲ್ಲಿ ಕೊಚ್ಚಿ ಟಸ್ಕರ್ಸ್​ ತಂಡದ ಕಣಕ್ಕಿಳಿದಿದ್ದರು. ಇದಾದ ಬಳಿಕ ಮತ್ತೆ ಡೆಲ್ಲಿ ಡೇರ್ ಡೆವಿಲ್ಸ್ ತಂಡದಲ್ಲಿ ಮೂರು ಸೀಸನ್ ಆಡಿದ್ದರು. 2016 ಮತ್ತು 2017 ರಲ್ಲಿ ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕಾಣಿಸಿಕೊಂಡಿದ್ದ ಜಾಧವ್, 2018 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಪಾಲಾಗಿದ್ದರು. ಮೂರು ವರ್ಷಗಳ ಕಾಲ ಸಿಎಸ್​ಕೆ ತಂಡದಲ್ಲಿದ್ದ ಕೇದರ್ 2021 ರಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡದಲ್ಲಿ ಸ್ಥಾನ ಪಡೆದಿದ್ದರು.

ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಐಪಿಎಲ್​ನಲ್ಲಿ ಐದು ಫ್ರಾಂಚೈಸಿಗಳ ಪರ ಆಡಿರುವ ಕೇದರ್ ಜಾಧವ್ ಅವರ ಪ್ರದರ್ಶನ. ಐದು ತಂಡಗಳ ಪರ ಒಟ್ಟು 92 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಜಾಧವ್ ಕಲೆಹಾಕಿರುವುದು 1184 ರನ್ ಮಾತ್ರ. ಹಾಗೆಯೇ ಕಳೆದ ನಾಲ್ಕು ಸೀಸನ್​ಗಳಲ್ಲಿ ಜಾಧವ್ ಒಟ್ಟು 28 ಪಂದ್ಯಗಳನ್ನಾಡಿದ್ದಾರೆ. ಇದರಲ್ಲಿ ಮೂಡಿ ಬಂದಿರುವುದು ಕೇವಲ 291 ರನ್ ಮಾತ್ರ. ಅಂದರೆ 297 ಎಸೆತಗಳನ್ನು ಎದುರಿಸಿ ಜಾಧವ್ ಕಲೆಹಾಕಿರುವುದು ಕೇವಲ 291 ರನ್​ ಮಾತ್ರ. ಇಂತಹ ಕಳಪೆ ಪ್ರದರ್ಶನದ ಹೊರತಾಗಿಯೂ ಈ ಬಾರಿ 2 ಕೋಟಿ ರೂ.ಗೆ ಸನ್​ರೈಸರ್ಸ್​ ಹೈದರಾಬಾದ್ ಜಾಧವ್ ಅವರನ್ನು ಖರೀದಿಸಿತ್ತು. ಇದೀಗ ಎಸ್​ಆರ್​ಹೆಚ್​ ಪರ ಐದು ಇನಿಂಗ್ಸ್​ಗಳಿಂದ ಕಲೆಹಾಕಿದ್ದು 43 ರನ್​ ಮಾತ್ರ. ಅಂದರೆ ಎಲ್ಲಾ ರೀತಿಯಲ್ಲೂ ಕೇದರ್ ಜಾಧವ್ ಕಳೆದ ನಾಲ್ಕು ಸೀಸನ್​ನಲ್ಲಿ ಐಪಿಎಲ್​ನಲ್ಲಿ ಅತ್ಯಂತ ಫ್ಲಾಪ್ ಆಟಗಾರ ಎನ್ನಬಹುದು.

ಇದಾಗ್ಯೂ ಕಳೆದ ನಾಲ್ಕು ಸೀಸನ್​ಗಳಿಂದ ಕೇದರ್ ಜಾಧವ್ ಐಪಿಎಲ್ ಫ್ರಾಂಚೈಸಿಗಳಿಂದ ಪಡೆದಿರುವ ಮೊತ್ತ ಬರೋಬ್ಬರಿ 25 ಕೋಟಿ 40 ಲಕ್ಷ ರೂ. ಎಂದರೆ ನಂಬಲೇಬೇಕು. ಅತ್ತ ಚುಟುಕು ಕ್ರಿಕೆಟ್​ನ ಯುನಿವರ್ಸ್ ಬಾಸ್ ಎಂದು ಕರೆಸಿಕೊಳ್ಳುವ ಕ್ರಿಸ್ ಗೇಲ್ ಕಳೆದ ನಾಲ್ಕು ಸೀಸನ್​ಗಳಿಂದ ಗಳಿಸಿರುವುದು ಕೇವಲ 8 ಕೋಟಿ ರೂ. ಮಾತ್ರ. ಅಂದರೆ ಗೇಲ್​ಗಿಂತ ಮೂರು ಪಟ್ಟು ಹೆಚ್ಚು​ ಮೊತ್ತವನ್ನು ಕೇದರ್ ಜಾಧವ್ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪಂಜಾಬ್ ಕಿಂಗ್ಸ್​ ತಂಡದಲ್ಲಿ ಪ್ರಸ್ತುತ ಗೇಲ್ ಸಂಭಾವನೆ 2 ಕೋಟಿ ರೂ. ಅದೇ ಮೊತ್ತವನ್ನು ಕೇದರ್ ಜಾಧವ್ ಸನ್​ರೈಸರ್ಸ್​ ಹೈದರಾಬಾದ್ ಫ್ರಾಂಚೈಸಿಯಿಂದ ಪಡೆಯುತ್ತಿದ್ದಾರೆ ಎಂಬುದೇ ಅಚ್ಚರಿ.

ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಗೆ ನಾಯಕತ್ವ ಆಗಲ್ಲ, ಬಿಟ್ಟು ಬಿಡು ಎಂದಿದ್ದ ಕೋಚ್ ರವಿ ಶಾಸ್ತ್ರಿ

ಇದನ್ನೂ ಓದಿ: Virat Kohli: ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ

ಇದನ್ನೂ ಓದಿ: 90 ಕಿ.ಮೀ ಮೈಲೇಜ್ ನೀಡುವ ಕಡಿಮೆ ಬೆಲೆಯ ಬೈಕ್​ಗಳ ಪಟ್ಟಿ ಇಲ್ಲಿದೆ

ಇದನ್ನೂ ಓದಿ: IPL 2021: ಪ್ಲೇ ಆಫ್​ ಪ್ರವೇಶಿಸುವ 4 ತಂಡಗಳನ್ನು ಹೆಸರಿಸಿದ ಗೌತಮ್ ಗಂಭೀರ್

(Kedar Jadhav’s poor showing with the bat for SRH)

Published On - 4:15 pm, Thu, 23 September 21

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?