IPL 2021: ಐಪಿಎಲ್ನಲ್ಲಿ ದಕ್ಷಿಣ ಆಫ್ರಿಕಾ ವೇಗದ ಅಸ್ತ್ರಗಳು: ಅನ್ರಿಕ್ ನೋಕಿಯಾ ನಂಬರ್ 1
Anrich Nortje: ಐಪಿಎಲ್ 2020ರಲ್ಲಿ 16 ಪಂದ್ಯಗಳನ್ನು ಆಡಿರುವ ಅನ್ರಿಕ್ ನೋಕಿಯಾ 22 ವಿಕೆಟ್ ಪಡೆದಿದ್ದಾರೆ. ಈ ಎಲ್ಲಾ ವಿಕೆಟ್ಗಳನ್ನು ಪಡೆದಿರುವುದು ಯುಎಇ ಪಿಚ್ನಲ್ಲಿ ಎಂಬುದು ವಿಶೇಷ.
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14ರ (IPL 2021) ದ್ವಿತಿಯಾರ್ಧ ಶುರುವಾಗಿದೆ. ಈಗಾಗಲೇ 4 ಪಂದ್ಯಗಳು ಮುಗಿದಿದ್ದು, ಹಲವು ದಾಖಲೆಗಳು ಕೂಡ ಮೂಡಿಬಂದಿವೆ. ಅದರಲ್ಲಿ ಎಲ್ಲರೂ ಗಮನ ಸೆಳೆದಿದ್ದು ಅನ್ರಿಕ್ ನೋಕಿಯಾ (Anrich Nortje) ಎಸೆದ ವೇಗದ ಬೌಲ್. ಹೌದು, ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ದದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (DC) ಪರ ಮೊದಲ ಓವರ್ ಎಸೆದ ಅನ್ರಿಕ್ ನೋಕಿಯಾ ಮೊದಲ ಮೊದಲ ಎರಡು ಓವರ್ ಗಳಲ್ಲಿ 145 ಕಿ.ಮೀ ಹೆಚ್ಚಿನ ವೇಗದಲ್ಲಿ ಎಲ್ಲಾ ಚೆಂಡುಗಳನ್ನು ಬೌಲ್ ಮಾಡಿದರು. ಮೊದಲ ಎರಡು ಓವರ್ಗಳಲ್ಲಿ 149, 146, 147, 151, 151 ಮತ್ತು 147 ಕಿ.ಮೀ ವೇಗದಲ್ಲಿ ಚೆಂಡೆಸೆಯುವ ಈ ಬಾರಿಯ ಐಪಿಎಲ್ನಲ್ಲಿ ಅತೀ ವೇಗದ ಚೆಂಡೆಸೆದ ದಾಖಲೆ ಬರೆದರು.
151.7 ಕಿಲೋಮೀಟರ್ ವೇಗದಲ್ಲಿ ಬೌಲ್ ಮಾಡಿದ ನೋಕಿಯಾ ಈ ಬಾರಿಯ ವೇಗದ ಚೆಂಡೆಸೆದ ಬೌಲರ್ ಎನಿಸಿಕೊಂಡರು. ಅಷ್ಟೇ ಅಲ್ಲದೆ ಈ ಸಲದ ಅತೀ ವೇಗದ ಎಸೆತಗಳಲ್ಲಿ ಅನ್ರಿಕ್ ನೋಕಿಯಾ ಮೊದಲ 8 ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಂದರೆ ಐಪಿಎಲ್ನ 2021ರ ಟಾಪ್ 10 ವೇಗದ ಎಸೆತಗಳಲ್ಲಿ ಅನ್ರಿಕ್ ನೋಕಿಯಾ ಅವರದ್ದೇ 8 ಸ್ಪೀಡ್ ಬಾಲ್ಗಳಿರುವುದು ವಿಶೇಷ.
ಐಪಿಎಲ್ ವೇಗದ ದಾಖಲೆ: ಇನ್ನು ಐಪಿಎಲ್ ಇತಿಹಾಸದ ಅತ್ಯಂತ ವೇಗದ ಬೌಲರ್ ದಾಖಲೆ ಕೂಡ ಅನ್ರಿಕ್ ನೋಕಿಯಾ ಹೆಸರಿನಲ್ಲಿದೆ. ಐಪಿಎಲ್ 2020 ರಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ನೋಕಿಯಾ 156.2 ಕಿಮೀ ವೇಗದಲ್ಲಿ ಬೌಲ್ ಮಾಡಿದ್ದರು. ಇನ್ನು ದ್ವಿತೀಯಾ ಹಾಗೂ ತೃತಿಯಾ ಸ್ಥಾನದಲ್ಲೂ ನೋಕಿಯಾ ಅವರೇ ಇರುವುದು ವಿಶೇಷ. ಹಾಗೆಯೇ ನಾಲ್ಕನೇ ಸ್ಥಾನದಲ್ಲಿ ಡೇಲ್ ಸ್ಟೇಯ್ನ್ (154.4 ಕಿ.ಮೀ) ಇದ್ದು, ಐದನೇ ಸ್ಥಾನದಲ್ಲಿ ಕಾಗಿಸೊ ರಬಾಡ (154.3 ಕಿಮೀ) ಇದ್ದಾರೆ. ಈ ಎಲ್ಲ ಬೌಲರ್‌ಗಳು ದಕ್ಷಿಣ ಆಫ್ರಿಕಾದವರು ಎಂಬುದು ವಿಶೇಷ.
ಅನ್ರಿಕ್ ನೋಕಿಯಾ ಉತ್ತಮ ಪ್ರದರ್ಶನ: ಐಪಿಎಲ್ 2020ರಲ್ಲಿ 16 ಪಂದ್ಯಗಳನ್ನು ಆಡಿರುವ ಅನ್ರಿಕ್ ನೋಕಿಯಾ 22 ವಿಕೆಟ್ ಪಡೆದಿದ್ದಾರೆ. ಈ ಎಲ್ಲಾ ವಿಕೆಟ್ಗಳನ್ನು ಪಡೆದಿರುವುದು ಯುಎಇ ಪಿಚ್ನಲ್ಲಿ ಎಂಬುದು ವಿಶೇಷ. ಹೀಗಾಗಿ ದ್ವಿತಿಯಾರ್ಧದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ನ ಪ್ರಮುಖ ವೇಗದ ಅಸ್ತ್ರವಾಗಲಿದ್ದಾರೆ ಅನ್ರಿಕ್ ನೋಕಿಯಾ.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಗೆ ನಾಯಕತ್ವ ಆಗಲ್ಲ, ಬಿಟ್ಟು ಬಿಡು ಎಂದಿದ್ದ ಕೋಚ್ ರವಿ ಶಾಸ್ತ್ರಿ
ಇದನ್ನೂ ಓದಿ: Virat Kohli: ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ
ಇದನ್ನೂ ಓದಿ: 90 ಕಿ.ಮೀ ಮೈಲೇಜ್ ನೀಡುವ ಕಡಿಮೆ ಬೆಲೆಯ ಬೈಕ್ಗಳ ಪಟ್ಟಿ ಇಲ್ಲಿದೆ
ಇದನ್ನೂ ಓದಿ: IPL 2021: ಪ್ಲೇ ಆಫ್ ಪ್ರವೇಶಿಸುವ 4 ತಂಡಗಳನ್ನು ಹೆಸರಿಸಿದ ಗೌತಮ್ ಗಂಭೀರ್
(Anrich Nortje dominates leaderboard for fastest balls in IPL 2021)