ಸೂಪರ್ ಸಂಡೆ ಡಬಲ್ ಹೆಡರ್ ದಿನದಂದು ನಡೆದ ಮೊದಲ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 5 ವಿಕೆಟ್ಗಳಿಂದ ಮಣಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ವೆಂಕಟೇಶ್ ಅಯ್ಯರ್ ಅವರ ಬಿರುಸಿನ ಶತಕದ ಹಿನ್ನಲೆಯಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ಗೆ 186 ರನ್ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಮುಂಬೈ ಕಿಶನ್ ಅವರ ಅರ್ಧಶತಕದ ನೆರವಿನಿಂದ 17.4 ಓವರ್ಗಳಲ್ಲಿ ಗುರಿ ಸಾಧಿಸಿತು.
18ನೇ ಓವರ್ನಲ್ಲಿ 5ನೇ ವಿಕೆಟ್ ಕಳೆದುಕೊಂಡ ಮುಂಬೈ ಇಂಡಿಯನ್ಸ್ 186 ರನ್ಗಳ ಗುರಿಯನ್ನು 17.4 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಸಾಧಿಸಿತು.
ನಾಯಕ ಸೂರ್ಯಕುಮಾರ್ 43 ರನ್ ಗಳಿಸಿ ಔಟಾದರು. ಮುಂಬೈ ಸ್ಕೋರ್ 16.3 ಓವರ್ಗಳಲ್ಲಿ 176/4
15ನೇ ಓವರ್ನಲ್ಲಿ ಸೂರ್ಯ ಫೋರ್ ಬಾರಿಸಿದರು. ಇದರೊಂದಿಗೆ ನಾಯಕ ಸೂರ್ಯಕುಮಾರ್ ಯಾದವ್ ಐವತ್ತರ ಸಮೀಪದಲ್ಲಿದ್ದಾರೆ. 15 ಓವರ್ಗಳ ನಂತರ ಮುಂಬೈ ಸ್ಕೋರ್ 171/3
ಮುಂಬೈ ಇಂಡಿಯನ್ಸ್ ತಂಡ ಗೆಲುವಿನ ಸನಿಹದಲ್ಲಿದೆ. ಈ ಓವರ್ನ ಕೊನೆಯ ಎಸೆತದಲ್ಲಿ ಟಿಮ್ ಡೇವಿಡ್ ಅದ್ಭುತ ಸಿಕ್ಸರ್ ಬಾರಿಸಿದರು. ಗೆಲುವಿಗೆ 30 ಎಸೆತಗಳಲ್ಲಿ 23 ರನ್ಗಳ ಅಗತ್ಯವಿದೆ
ಕೋಲ್ಕತ್ತಾದ ಯುವ ಬೌಲರ್ ಸುಯೆಶ್ ಅವರ ಓವರ್ನಲ್ಲಿ ತಿಲಕ್ 30 ರನ್ ಗಳಿಸಿ ಔಟಾದರು. ಮುಂಬೈ ತಂಡದ ಗೆಲುವಿಗೆ 37 ಎಸೆತಗಳಲ್ಲಿ 39 ರನ್ಗಳ ಅಗತ್ಯವಿದೆ. 14 ಓವರ್ಗಳಲ್ಲಿ ಮುಂಬೈ ಸ್ಕೋರ್ 148/3
13ನೇ ಓವರ್ನಲ್ಲೂ 1 ಸಿಕ್ಸರ್ ಮತ್ತು 2 ಬೌಂಡರಿ ಬಂದವು. ಈ ಮೂಲಕ ಸೂರ್ಯಕುಮಾರ್ ಮತ್ತು ತಿಲಕ್ ವರ್ಮಾ ನಡುವೆ 50 ರನ್ ಜೊತೆಯಾಟವಿದೆ
ಸೂರ್ಯಕುಮಾರ್ ಯಾದವ್ 11ನೇ ಓವರ್ನ ಕೊನೆಯ 2 ಎಸೆತಗಳಲ್ಲಿ ಸತತ 2 ಸಿಕ್ಸರ್ ಬಾರಿಸಿದರು. 11 ಓವರ್ಗಳ ನಂತರ ಮುಂಬೈ ಸ್ಕೋರ್ 123/2. ಗೆಲುವಿಗೆ 54 ಎಸೆತಗಳಲ್ಲಿ 62 ರನ್ಗಳ ಅಗತ್ಯವಿದೆ
ಈ ಓವರ್ನಲ್ಲಿ ತಿಲಕ್ ಶರ್ಮಾ ಅವರ ಬ್ಯಾಟ್ನಿಂದ ಅಮೋಘ ಸಿಕ್ಸರ್ ಕಾಣಿಸಿಕೊಂಡಿತು. 10 ಓವರ್ಗಳ ನಂತರ ಮುಂಬೈ ಸ್ಕೋರ್ 110/2.
ಯುವ ಬೌಲರ್ ಸುಯಾಸ್ ಶರ್ಮಾ ಅವರ ಓವರ್ನಲ್ಲಿ 2 ಬೌಂಡರಿ ಬಂದವು. ತಿಲಕ್ ಮತ್ತು ಸೂರ್ಯಕುಮಾರ್ ಮುಂಬೈನ ಇನ್ನಿಂಗ್ಸ್ ನಿಭಾಯಿಸುತ್ತಿದ್ದಾರೆ. 9 ಓವರ್ಗಳ ನಂತರ ಮುಂಬೈ ಸ್ಕೋರ್ 99/2.
7ನೇ ಓವರ್5ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಕಿಶನ್ ತಮ್ಮ ಅರ್ಧಶತಕ ಪೂರೈಸಿದರು. ಆ ಬಳಿಕ 8ನೇ ಓವರ್ನ 2ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಕಿಶನ್ ನಂತರದ ಎಸೆತದಲ್ಲಿ ಔಟಾದರು.
ವರುಣ್ ಎಸೆದ 7ನೇ ಓವರ್ನಲ್ಲಿ ಸೂರ್ಯಕುಮಾರ್ ಯಾದವ್ ಬೌಂಡರಿ ಬಾರಿಸಿದರು. 7 ಓವರ್ಗಳ ನಂತರ ಮುಂಬೈ ಸ್ಕೋರ್ 72/1, ಮುಂಬೈ ಗೆಲುವಿಗೆ 84 ಎಸೆತಗಳಲ್ಲಿ 114 ರನ್ ಅಗತ್ಯವಿದೆ.
ಯುವ ಬೌಲರ್ ಸುಯೆಶ್ ಎಸೆತದಲ್ಲಿ ರೋಹಿತ್ ಶರ್ಮಾ 20 ರನ್ ಗಳಿಸಿ ಔಟಾದರು. ಉಮೇಶ್ ಯಾದವ್ ಅದ್ಭುತ ಕ್ಯಾಚ್ ಪಡೆದು ಕೋಲ್ಕತ್ತಾಗೆ ಮೊದಲ ಯಶಸ್ಸು ತಂದುಕೊಟ್ಟರು. 5 ಓವರ್ಗಳ ನಂತರ ಕೋಲ್ಕತ್ತಾ ಸ್ಕೋರ್ 65/1
ಮೂರನೇ ಓವರ್ನಲ್ಲೂ ಕಿಶನ್ ಒಂದು ಸಿಕ್ಸರ್ ಮತ್ತು 2 ಬೌಂಡರಿ ಬಾರಿಸಿದರು. 3 ಓವರ್ಗಳ ನಂತರ ಮುಂಬೈ ಸ್ಕೋರ್ 35/0. ಇಶಾನ್ ಕಿಶನ್ 26 ರನ್ ಹಾಗೂ ರೋಹಿತ್ ಶರ್ಮಾ 9 ರನ್ ಗಳಿಸಿ ಆಡುತ್ತಿದ್ದಾರೆ. ಗೆಲುವಿಗೆ 186 ರನ್ಗಳ ಗುರಿ ಅವರ ಮುಂದಿದೆ.
ಈ ಓವರ್ನಲ್ಲಿ ಇಶಾನ್ ಕಿಶ್ ಅವರ ಬ್ಯಾಟ್ನಿಂದ 1 ಸಿಕ್ಸರ್ ಮತ್ತು 1 ಬೌಂಡರಿ ಬಂತು. ರೋಹಿತ್ ಶರ್ಮಾ 2 ಹಾಗೂ ಇಶಾನ್ 16 ರನ್ ಗಳಿಸಿ ಆಡುತ್ತಿದ್ದಾರೆ. 2 ಓವರ್ಗಳ ನಂತರ ಮುಂಬೈ ಸ್ಕೋರ್ 18/0
ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಆರಂಭಿಸಿದೆ. ಮುಂಬೈ ಪರ ರೋಹಿತ್ ಮತ್ತು ಇಶಾನ್ ಓಪನಿಂಗ್ ಮಾಡಲು ಮೈದಾನಕ್ಕೆ ಇಳಿದಿದ್ದಾರೆ. 1 ಓವರ್ ನಂತರ ಮುಂಬೈ ಸ್ಕೋರ್ 2/0
ಕೊನೆಯ ಓವರ್ನಲ್ಲಿ ರಸೆಲ್ 2 ಬೌಂಡರಿ ಬಾರಿಸಿದರು. ಅಂತಿಮವಾಗಿ ಕೆಕೆಆರ್ ತಂಡ ವೆಂಕಟೇಶ್ ಅಯ್ಯರ್ ಶತಕದ ನೆರವಿನಿಂದ 7 ವಿಕೆಟ್ ಕಳೆದುಕೊಂಡು 185 ರನ್ ಕಲೆಹಾಕಿತು.
19ನೇ ಓವರ್ನ ಮೊದಲ ಎಸೆತವನ್ನು ರಸೆಲ್ ಸಿಕ್ಸರ್ಗಟ್ಟಿದರೆ, 2ನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ಇನ್ನು 5ನೇ ಎಸೆತದಲ್ಲಿ ರಿಂಕು ಸಿಂಗ್ ಲಾಂಗ್ ಆಫ್ನಲ್ಲಿ ಕ್ಯಾಚಿತ್ತು ಔಟಾದರು.
ಶತಕ ಸಿಡಿಸಿದ ಬಳಿಕ ಮೆರಿಡಿತ್ ಓವರ್ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ಅಯ್ಯರ್, ನಂತರದ ಎಸೆತದಲ್ಲಿ ಕ್ಯಾಚಿತ್ತು ಔಟಾದರು.
17ನೇ ಓವರ್ನಲ್ಲಿ ಸಿಂಗಲ್ ಕದ್ದ ವೆಂಕಟೇಶ್ ಅಯ್ಯರ್ ಈ ಆವೃತ್ತಿಯ ತಮ್ಮ ಚೊಚ್ಚಲ ಶತಕ ಸಿಡಿಸಿದ್ದಾರೆ. 49 ಎಸೆತಗಳಲ್ಲಿ ಅಯ್ಯರ್ ಶತಕ ಪೂರ್ಣಗೊಳಿಸಿದ್ದು, ಇದೇ ಓವರ್ನಲ್ಲಿ ಕೆಕೆಆರ್ನ 150ರನ್ ಕೂಡ ಪೂರ್ಣಗೊಂಡಿದೆ.
14ನೇ ಓವರ್ನಲ್ಲಿ ಡೀಪ್ ಸ್ಕ್ವೇರ್ ಲೆಗ್ನಲ್ಲಿ ಅದ್ಭುತ ಸಿಕ್ಸರ್ ಬಾರಿಸಿದ ಅಯ್ಯರ್ ಶತಕದಂಚಿಗೆ ತಲುಪಿದ್ದಾರೆ.
13ನೇ ಓವರ್ನ ಕೊನೆಯ ಎಸೆತದಲ್ಲಿ ಶಾರ್ದೂಲ್ ಠಾಕೂರ್ ಕ್ಯಾಚಿತ್ತು ಔಟಾದರು. ಹೃತಿಕ್ ಅದ್ಭುತ ಕ್ಯಾಚ್ ತೆಗೆದುಕೊಂಡರು.
12ನೇ ಓವರ್ನ 2ನೇ ಎಸೆತವನ್ನು ಡೀಪ್ ಸ್ಕ್ವೇರ್ ಲೆಗ್ನಲ್ಲಿ ಸಿಕ್ಸರ್ಗಟ್ಟಿದ ವೆಂಕಟೇಶ್ 4ನೇ ಎಸೆತವನ್ನು ಫೈನ್ ಲೆಗ್ನಲ್ಲಿ ಬೌಂಡರಿ ಬಾರಿಸಿದರು.
ಮೆರಿಡಿತ್ ಎಸೆದ 11ನೇ ಓವರ್ನ ಮೂರು ಮತ್ತು 4ನೇ ಎಸೆತವನ್ನು ಸಿಕ್ಸರ್ಗಟ್ಟಿದ ವೆಂಕಟೇಶ್ ಕೆಕೆಆರ್ ಸ್ಕೋರ್ ಅನ್ನು 100ರ ಗಡಿ ದಾಟಿಸಿದ್ದಾರೆ.
9ನೇ ಓವರ್ನ 4ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಅಯ್ಯರ್ ಇದರೊಂದಿಗೆ ತಮ್ಮ ಅರ್ಧಶತಕ ಪೂರ್ಣಗೊಳಿಸಿದರು. ಆ ನಂತರ 6ನೇ ಎಸೆತವನ್ನು ಸಿಕ್ಸರ್ಗಟ್ಟಿದರು.
8ನೇ ಓವರ್ನಲ್ಲಿ ಯಾವುದೇ ಬೌಂಡರಿ ಬರಲಿಲ್ಲ. ಹೀಗಾಗಿ 9ನೇ ಓವರ್ನ ಮೊದಲ ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ನಾಯಕ ರಾಣಾ ಕ್ಯಾಚಿತ್ತು ಔಟಾದರು.
7ನೇ ಓವರ್ನ ಮೊದಲ ಎಸೆತವನ್ನು ಫೈನ್ ಲೆಗ್ ಮೇಲೆ ಬೌಂಡರಿ ಬಾರಿಸಿದ ಅಯ್ಯರ್, ಕೊನೆಯ ಎಸೆತವನ್ನು ಡೀಪ್ ಸ್ಕ್ವೈರ್ ಲೆಗ್ನಲ್ಲಿ ಬೌಂಡರಿಗಟ್ಟಿದರು.
ಪವರ್ ಪ್ಲೇನ ಕೊನೆಯ ಓವರ್ ಎಸೆಯಲು ಬಂದ ಪಿಯೂಷ್ ಚಾವ್ಲಾ, ಆರಂಭಿಕ ಗುರ್ಭಜ್ ವಿಕೆಟ್ ಉರುಳಿಸಿದರು. ಶಾರ್ಟ್ ಥರ್ಡ್ಮ್ಯಾನ್ನಲ್ಲಿ ಯಾನ್ಸೆನ್ ಅದ್ಭುತ ಕ್ಯಾಚ್ ತೆಗೆದುಕೊಂಡರು.
5ನೇ ಓವರ್ ಎಸೆದ ಯಾನ್ಸೆನ್ ಕೊಂಚ ದುಬಾರಿಯಾದರು. ಈ ಓವರ್ನಲ್ಲಿ ಅಯ್ಯರ್ ಲಾಂಗ್ ಆನ್ನಲ್ಲಿ ಸಿಕ್ಸರ್ ಬಾರಿಸಿದರೆ, ಕೊನೆಯ ಎಸೆತವನ್ನು ಲಾಂಗ್ ಆಫ್ನಲ್ಲಿ ಸಿಕ್ಸರ್ಗಟ್ಟಿದರು.
ಗ್ರೀನ್ ಎಸೆದ 4ನೇ ಓವರ್ನ 2ನೇ ಎಸೆತದಲ್ಲಿ ಅಯ್ಯರ್ ಥರ್ಡ್ಮ್ಯಾನ್ನಲ್ಲಿ ಸಿಕ್ಸರ್ ಬಾರಿಸಿದರು.
3ನೇ ಓವರ್ ಎಸೆದ ಅರ್ಜುನ್ ತೆಂಡೂಲ್ಕರ್ಗೆ 5ನೇ ಎಸೆತದಲ್ಲಿ ಅಯ್ಯರ್ ಬೌಂಡರಿ ಬಾರಿಸಿದರು. ಆ ನಂತರ 6ನೇ ಎಸೆತವನ್ನು ಸಿಕ್ಸರ್ಗಟ್ಟಿದರು.
2ನೇ ಓವರ್ನಲ್ಲಿ ಗ್ರೀನ್ ವೈಡ್ ಮೂಲಕ ಬೌಂಡರಿ ನೀಡಿದರು. ಆ ಬಳಿಕ ಓವರ್ನ 5ನೇ ಎಸೆತದಲ್ಲಿ ಜಗದೀಸನ್ ವಿಕೆಟ್ ಉರುಳಿಸಿದರು.
ಕೆಕೆಆರ್ ಬ್ಯಾಟಿಂಗ್ ಆರಂಭಿಸಿದೆ. ಮುಂಬೈ ಪರ ಅರ್ಜುನ್ ತೆಂಡೂಲ್ಕರ್ ಬೌಲಿಂಗ್ ಆರಂಭಿಸಿದ್ದಾರೆ. ಅರ್ಜುನ್ಗೆ ಇದು ಮೊದಲ ಐಪಿಎಲ್ ಪಂದ್ಯವಾಗಿದೆ.
ಇಶಾನ್ ಕಿಶನ್, ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ನೆಹಾಲ್ ವಧೇರಾ, ಟಿಮ್ ಡೇವಿಡ್, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕಿನ್, ಪಿಯೂಷ್ ಚಾವ್ಲಾ, ರಿಲೆ ಮೆರೆಡಿತ್, ಡ್ವೇನ್ ಜಾನ್ಸನ್
ರಹಮಾನುಲ್ಲಾ ಗುರ್ಬಾಜ್, ನಾರಾಯಣ ಜಗದೀಸನ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಲಾಕಿ ಫರ್ಗುಸನ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್.
ಟಾಸ್ ಗೆದ್ದ ಮುಂಬೈ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಹೀಗಾಗಿ ಕೋಲ್ಕತ್ತಾ ಮೊದಲು ಬ್ಯಾಟಿಂಗ್ ಮಾಡಲಿದೆ.
Published On - 3:02 pm, Sun, 16 April 23