ಆರ್‌ಸಿಬಿ ತೊರೆದ ಬಳಿಕ ಪಾಕಿಸ್ತಾನ್ ಸೂಪರ್ ಲೀಗ್‌ನತ್ತ ಮುಖಮಾಡಿದ ಮೈಕ್ ಹೇಸನ್
Mike Hesson: ಇತ್ತೀಚೆಗಷ್ಟೇ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದ ನ್ಯೂಜಿಲೆಂಡ್ ತಂಡದ ಮಾಜಿ ಮುಖ್ಯ ಕೋಚ್ ಮೈಕ್ ಹೇಸನ್ ಇದೀಗ ಪಾಕಿಸ್ತಾನ್ ಸೂಪರ್ ಲೀಗ್‌ನತ್ತ ಮುಖಮಾಡಿದ್ದಾರೆ. ಹೇಸನ್ ಅವರನ್ನು ಇಸ್ಲಾಮಾಬಾದ್ ಯುನೈಟೆಡ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ
ಇತ್ತೀಚೆಗಷ್ಟೇ ಐಪಿಎಲ್ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದ ನ್ಯೂಜಿಲೆಂಡ್ ತಂಡದ ಮಾಜಿ ಮುಖ್ಯ ಕೋಚ್ ಮೈಕ್ ಹೇಸನ್ (Mike Hesson) ಇದೀಗ ಪಾಕಿಸ್ತಾನ್ ಸೂಪರ್ ಲೀಗ್‌ನತ್ತ (PSL) ಮುಖಮಾಡಿದ್ದಾರೆ. ಹೇಸನ್ ಅವರನ್ನು ಇಸ್ಲಾಮಾಬಾದ್ ಯುನೈಟೆಡ್ (Islamabad United) ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಐಪಿಎಲ್ 2024 ರ ಸೀಸನ್ ಆರಂಭಕ್ಕೂ ಮುನ್ನ ಆರ್‌ಸಿಬಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿರುವುದು ಗೊತ್ತೇ ಇದೆ. ಇದರ ಭಾಗವಾಗಿ ಕ್ರಿಕೆಟ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಮೈಕ್ ಹೇಸನ್ ಅವರನ್ನು ಫ್ರಾಂಚೈಸ್ ವಜಾಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹೇಸನ್ ಭಾರದ ಮನಸಿನಲ್ಲಿ ಆರ್‌ಸಿಬಿ ತಂಡವನ್ನು ತೊರೆದಿದ್ದರು.
ಹೀಗಾಗಿ ಐಪಿಎಲ್ನಿಂದ ಸಂಪೂರ್ಣ ಹೊರಗುಳಿದಿದ್ದ ಈ ನ್ಯೂಜಿಲೆಂಡ್ ಸ್ಟಾರ್ ಇದೀಗ ಪಾಕಿಸ್ತಾನ್ ಸೂಪರ್ ಲೀಗ್ಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಎರಡು ಬಾರಿ ಪ್ರಶಸ್ತಿ ಗೆದ್ದಿರುವ ಇಸ್ಲಾಮಾಬಾದ್ ಯುನೈಟೆಡ್ ತಂಡದ ಮುಖ್ಯ ಕೋಚ್ ಆಗಿ ಹೇಸನ್ ಕಾರ್ಯನಿರ್ವಹಿಸಲಿದ್ದಾರೆ. ಕಳೆದ ಐದು ಆವೃತ್ತಿಗಳಲ್ಲಿ ಇಸ್ಲಾಮಾಬಾದ್ ತಂಡವು ನಾಲ್ಕು ಬಾರಿ ನಾಕೌಟ್ ಹಂತವನ್ನು ತಲುಪಿದೆ. ಆದರೆ ಒಮ್ಮೆ ಕೂಡ ಫೈನಲ್ ತಲುಪಲು ವಿಫಲವಾಯಿತು. ಈ ಹಿನ್ನಲೆಯಲ್ಲಿ ಆಡಳಿತ ಮಂಡಳಿ ಕೋಚ್ ಅಜರ್ ಮಹಮೂದ್ ಅವರನ್ನು ವಜಾಗೊಳಿಸಿ ಆ ಸ್ಥಾನಕ್ಕೆ ಮೈಕ್ ಹೇಸನ್ ಅವರನ್ನು ಆಯ್ಕೆ ಮಾಡಿದೆ.
RCB: ‘ನಿರಾಸೆ ತಂದಿದೆ’; ಆರ್ಸಿಬಿಯಿಂದ ಹೊರಬಿದ್ದ ಕೂಡಲೇ ಮೌನ ಮುರಿದ ಮೈಕ್ ಹೆಸ್ಸನ್
ಸಂತಸ ವ್ಯಕ್ತಪಡಿಸಿದ ಹೇಸನ್
ಇಸ್ಲಾಮಾಬಾದ್ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಮೈಕ್ ಹೇಸನ್, ‘ಇಸ್ಲಾಮಾಬಾದ್ ಯುನೈಟೆಡ್ ತಂಡದ ಭಾಗವಾಗಿರುವುದಕ್ಕೆ ನನಗೆ ಸಂತೋಷವಾಗಿದೆ. ಉತ್ಕೃಷ್ಟತೆ (Excellence), ಸಬಲೀಕರಣ (Empowerment), ಶಿಕ್ಷಣ (Education), ಪರಿಸರ(Environment) ಎಂಬ ನಾಲ್ಕು ಇ ಗಳನ್ನು ಪ್ರಮುಖ ಗುಣಲಕ್ಷಣಗಳಾಗಿ ಇಟ್ಟುಕೊಂಡು ಮುನ್ನಡೆಯುತ್ತಿರುವ ತಂಡವನ್ನು ಸೇರಿಕೊಳ್ಳುವುದು ಉತ್ತಮ ವಿಷಯವಾಗಿದೆ. ಅನೇಕ ಪ್ರತಿಭಾವಂತ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಹೊಂದಿರುವ ಈ ತಂಡದೊಂದಿಗಿನ ಪ್ರಯಾಣಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.
5 ವರ್ಷಗಳ ಕಾಲ ಆರ್ಸಿಬಿಯಲ್ಲಿದ್ದ ಹೇಸನ್
ಆರ್‌ಸಿಬಿ ತಂಡವನನು ಸೇರಿಕೊಳ್ಳುವುದಕ್ಕೂ ಮುನ್ನ ನ್ಯೂಜಿಲೆಂಡ್, ಅರ್ಜೆಂಟೀನಾ ಮತ್ತು ಕೀನ್ಯಾ ತಂಡಗಳಿಗೆ ತರಬೇತುದಾರರಾಗಿದ್ದ ಹೇಸನ್ ಅವರು 2019 ರಿಂದ 2023 ರವರೆಗೆ ಆರ್‌ಸಿಬಿ ತಂಡದ ನಿರ್ದೇಶಕರಾಗಿದ್ದರು. ಅವರ ಮಾರ್ಗದರ್ಶನದಲ್ಲಿ, ಆರ್‌ಸಿಬಿ 2020 ರಿಂ 2022 ರಿಂದ ಸತತವಾಗಿ ಮೂರು ಬಾರಿ ಪ್ಲೇ-ಆಫ್ ತಲುಪಿತು. ಆದರೆ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ