13 ರನ್​ಗಳಿಗೆ 4 ವಿಕೆಟ್‌ ಉರುಳಿಸಿ ಮತ್ತೊಮ್ಮೆ ಬಿಸಿಸಿಐ ಕಿವಿ ಹಿಂಡಿದ ಮೊಹಮ್ಮದ್ ಶಮಿ

Mohammed Shami's Stunning Comeback: ಇಂಜುರಿಯಿಂದ ಚೇತರಿಸಿಕೊಂಡಿರುವ ಮೊಹಮ್ಮದ್ ಶಮಿ, ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಬಂಗಾಳ ಪರ ಆಡಿದ ಶಮಿ, ಸರ್ವಿಸಸ್‌ ವಿರುದ್ಧ 20 ಎಸೆತಗಳಲ್ಲಿ 13 ರನ್ ನೀಡಿ 4 ವಿಕೆಟ್‌ ಕಬಳಿಸಿ ತಂಡಕ್ಕೆ ಜಯ ತಂದುಕೊಟ್ಟರು. ಭಾರತ ಟೆಸ್ಟ್ ಮತ್ತು ಏಕದಿನ ತಂಡಗಳಿಗೆ ಮರಳುವ ಗುರಿ ಹೊಂದಿರುವ ಶಮಿ, ತಮ್ಮ ಮಾರಕ ಬೌಲಿಂಗ್ ಮೂಲಕ ಆಯ್ಕೆ ಸಮಿತಿಯ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.

13 ರನ್​ಗಳಿಗೆ 4 ವಿಕೆಟ್‌ ಉರುಳಿಸಿ ಮತ್ತೊಮ್ಮೆ ಬಿಸಿಸಿಐ ಕಿವಿ ಹಿಂಡಿದ ಮೊಹಮ್ಮದ್ ಶಮಿ
Mohammed Shami

Updated on: Dec 05, 2025 | 2:34 PM

ಟೀಂ ಇಂಡಿಯಾದ ಎಲ್ಲಾ ಬಾಗಿಲುಗಳು ಬಹುತೇಕ ಮುಚ್ಚಿರಬಹುದು. ಆದರೆ ಮೊಹಮ್ಮದ್ ಶಮಿ ( Mohammed Shami) ಮಾತ್ರ ಸೋಲನ್ನು ಸುಲಭವಾಗಿ ಸ್ವೀಕರಿಸಲು ಸಿದ್ಧರಿಲ್ಲ. ಮೊಹಮ್ಮದ್ ಶಮಿ ಭಾರತ ತಂಡದಲ್ಲಿ ಕಾಣಿಸಿಕೊಂಡು ಸುಮಾರು ತಿಂಗಳುಗಳೇ ಕಳೆದಿವೆ. ಇಂಜುರಿಯಿಂದ ಚೇತರಿಸಿಕೊಂಡಿರುವ ಶಮಿ ತನ್ನ ಫಿಟ್ನೆಸ್ ಸಾಭೀತಿಗಾಗಿ ದೇಶಿ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಅದರಂತೆ ಪ್ರಸ್ತುತ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ (Syed Mushtaq Ali Trophy) ಬಂಗಾಳ ಪರ ಆಡುತ್ತಿರುವ ಶಮಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಈ ಟೂರ್ನಿಯಲ್ಲಿ ನಡೆದ ಸರ್ವಿಸಸ್‌ ವಿರುದ್ಧದ ಪಂದ್ಯದಲ್ಲಿ ತಮ್ಮ ಮಾರಕ ದಾಳಿ ನಡೆಸಿದ ಶಮಿ ಕೇವಲ 20 ಎಸೆತಗಳಲ್ಲಿ 4 ವಿಕೆಟ್‌ಗಳನ್ನು ಕಬಳಿಸಿ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.

ಭಾರತದ ಟೆಸ್ಟ್ ಮತ್ತು ಏಕದಿನ ತಂಡಗಳಿಗೆ ಮರಳಲು ಕಾಯುತ್ತಿರುವ ಮೊಹಮ್ಮದ್ ಶಮಿ, ತಮ್ಮ ತೀಕ್ಷ್ಣ ಬೌಲಿಂಗ್ ಮೂಲಕ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮತ್ತು ಅವರ ಆಯ್ಕೆ ಸಮಿತಿಯ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಆ ಪ್ರಕಾರ ಹೈದರಾಬಾದ್‌ನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಪಂದ್ಯದಲ್ಲಿ ಶಮಿ ನೇತೃತ್ವದ ಬಂಗಾಳ ತಂಡವು ಸರ್ವಿಸಸ್ ತಂಡವನ್ನು ಎದುರಿಸಿತು. ಈ ಪಂದ್ಯದಲ್ಲಿ ಸರ್ವಿಸಸ್ ಮೊದಲು ಬ್ಯಾಟ್ ಮಾಡಿ 18.2 ಓವರ್‌ಗಳಲ್ಲಿ 165 ರನ್‌ಗಳಿಗೆ ಆಲೌಟ್ ಆಯಿತು. ಕಾಕತಾಳೀಯವಾಗಿ, ಶಮಿ ಇನ್ನಿಂಗ್ಸ್‌ನ ಮೊದಲ ಮತ್ತು ಕೊನೆಯ ವಿಕೆಟ್‌ಗಳನ್ನು ಪಡೆದರು.

ಶಮಿ ಅದ್ಭುತ ಪ್ರದರ್ಶನ

ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಮೊಹಮ್ಮದ್ ಶಮಿ ಸರ್ವಿಸಸ್‌ ತಂಡದ ಆರಂಭಿಕ ಆಟಗಾರ ಗೌರವ್ ಕೊಚ್ಚರ್ ಅವರನ್ನು ಡಕ್ ಔಟ್ ಮಾಡಿದರು. ಆದರೆ, ರವಿ ಚೌಹಾಣ್ ಎರಡನೇ ಓವರ್‌ನಲ್ಲಿ ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸಿದರು. ಅವರು ಹೆಚ್ಚು ಅಪಾಯಕಾರಿಯಾಗುವ ಮೊದಲೇ, ಶಮಿ ಮೂರನೇ ಓವರ್‌ನಲ್ಲಿ ಈ ಬ್ಯಾಟ್ಸ್‌ಮನ್ ಅನ್ನು ಔಟ್ ಮಾಡಿ ತಂಡಕ್ಕೆ ಉತ್ತಮ ಆರಂಭ ನೀಡಿದರು.

ನಂತರ ಪುಟಿದೇದ್ದ ಸರ್ವಿಸಸ್ ತಂಡದ ರನ್ ವೇಗ ಹೆಚ್ಚಿಸಿತು. ಆದರೆ 17 ನೇ ಓವರ್‌ನಲ್ಲಿ ಮತ್ತೆ ದಾಳಿಗಿಳಿದ ಶಮಿ, 19 ನೇ ಓವರ್‌ನ ಎರಡನೇ ಎಸೆತದಲ್ಲಿ ತಮ್ಮ ಮೂರನೇ ವಿಕೆಟ್ ಮತ್ತು ನಂತರ ಇನ್ನಿಂಗ್ಸ್‌ನ ನಾಲ್ಕನೇ ವಿಕೆಟ್ ಪಡೆದರು. ಒಟ್ಟಾರೆಯಾಗಿ, ಶಮಿ 3.2 ಓವರ್‌ಗಳ 20 ಎಸೆತಗಳಲ್ಲಿ ಕೇವಲ 13 ರನ್‌ಗಳನ್ನು ಬಿಟ್ಟುಕೊಟ್ಟು 4 ವಿಕೆಟ್ ಕಬಳಿಸಿದರು.

ವೃತ್ತಿಜೀವನಕ್ಕೆ ಕಂಟಕವಾಯ್ತಾ ಮೊಹಮ್ಮದ್ ಶಮಿಯ ಸ್ವಯಂಕೃತ ಅಪರಾಧ?

ಬಂಗಾಳಕ್ಕೆ ಸುಲಭ ಗೆಲುವು

ಸರ್ವಿಸಸ್ ಪರ ಯಾವುದೇ ಬ್ಯಾಟ್ಸ್‌ಮನ್ ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ. ಆದಾಗ್ಯೂ ತಂಡದ ನಾಯಕ ಮೋಹಿತ್ ಅಹ್ಲಾವತ್ 38 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇತ್ತ ಈ ಗುರಿ ಬೆನ್ನಟ್ಟಿದ ಬಂಗಾಳ ತಂಡವು ಕೇವಲ 15.1 ಓವರ್‌ಗಳಲ್ಲಿ 167 ರನ್ ಗಳಿಸುವ ಮೂಲಕ ಗೆಲುವಿನ ದಡ ಮುಟ್ಟಿತು. ಆರಂಭಿಕ ಅಭಿಷೇಕ್ ಪೊರೆಲ್ 56 ರನ್ ಗಳಿಸಿದರೆ, ನಾಯಕ ಅಭಿಮನ್ಯು ಈಶ್ವರನ್ 58 ರನ್ ಗಳಿಸಿದರು. ಈ ಮಧ್ಯೆ, ಯುವರಾಜ್ ಕೇಶ್ವಾನಿ ಕೇವಲ 19 ಎಸೆತಗಳಲ್ಲಿ ಅಜೇಯ 36 ರನ್ ಗಳಿಸಿ ತಂಡವನ್ನು ಗುರಿಯತ್ತ ಕೊಂಡೊಯ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:32 pm, Fri, 5 December 25