AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟಿ ಬೆಲೆಯ ಕಾರು ಖರೀದಿಸಿದ ಮೊಹಮ್ಮದ್ ಸಿರಾಜ್

Mohammed Siraj: ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಸದ್ಯ ಹೈದರಾಬಾದ್​ನಲ್ಲಿದ್ದಾರೆ. ಲಂಕಾ ವಿರುದ್ಧದ ಸರಣಿಯ ಬಳಿಕ ತವರಿಗೆ ಬಂದಿರುವ ಸಿರಾಜ್ ಮುಂದಿನ ತಿಂಗಳು ಬಾಂಗ್ಲಾದೇಶ್ ವಿರುದ್ದ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 2 ಟೆಸ್ಟ್ ಪಂದ್ಯಗಳನ್ನಾಡಲಿದೆ.

ಕೋಟಿ ಬೆಲೆಯ ಕಾರು ಖರೀದಿಸಿದ ಮೊಹಮ್ಮದ್ ಸಿರಾಜ್
Mohammed Siraj
ಝಾಹಿರ್ ಯೂಸುಫ್
|

Updated on: Aug 12, 2024 | 8:32 AM

Share

ಶ್ರೀಲಂಕಾ ವಿರುದ್ಧದ ಸೀಮಿತ ಓವರ್​ಗಳ ಸರಣಿ ಬಳಿಕ ಭಾರತಕ್ಕೆ ಹಿಂತಿರುಗಿರುವ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಇದೀಗ ಸಖತ್ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸುದ್ದಿಯಾಗಿರುವುದು ಆಟದಿಂದಲ್ಲ. ಬದಲಾಗಿ ಕೋಟಿ ಬೆಲೆಯ ಹೊಸ ಕಾರು ಖರೀದಿಸುವ ಮೂಲಕ ಎಂಬುದು ವಿಶೇಷ. ಹೌದು, ಮೊಹಮ್ಮದ್ ಸಿರಾಜ್ ತಮ್ಮ ಕುಟುಂಬಕ್ಕಾಗಿ ಅದ್ಭುತವಾದ ಐಷಾರಾಮಿ ಲ್ಯಾಂಡ್ ರೋವರ್ ಕಾರು ಖರೀದಿಸಿದ್ದಾರೆ. ಈ ಸಂತಸವನ್ನು ಟೀಮ್ ಇಂಡಿಯಾ ವೇಗಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕಪ್ಪು ಬಣ್ಣದ ಲ್ಯಾಂಡ್ ರೋವರ್‌ನೊಂದಿಗೆ ನಿಂತಿರುವ ಫೋಟೋವನ್ನು ಸಿರಾಜ್ ಸಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದೀಗ ಈ ಫೋಟೋ ವೈರಲ್ ಆಗುತ್ತಿದ್ದು, ಇದರ ಬೆನ್ನಲ್ಲೇ ಮೊಹಮ್ಮದ್ ಸಿರಾಜ್ ಅವರ ಕಾರಿನ ಬೆಲೆ ಕೂಡ ಚರ್ಚೆಗೀಡಾಗಿದೆ.

ಸಿರಾಜ್ ಖರೀದಿಸಿದ ಕಾರಿನ ಬೆಲೆ ಎಷ್ಟು?

ಮೊಹಮ್ಮದ್ ಸಿರಾಜ್ ನೂತನವಾಗಿ ಖರೀದಿಸಿರುವ ಐಷರಾಮಿ ಕಾರಿನ ಬೆಲೆ ಸುಮಾರು 2.39 ಕೋಟಿ ರೂ. ಎಂದು ತಿಳಿದು ಬಂದಿದೆ. ತಮ್ಮ ಬಹುದಿನದ ಕನಸನ್ನು ಈಡೇರಿಸಿಕೊಂಡಿರುವ ಖುಷಿಯನ್ನು ಸಿರಾಜ್ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಅಂದಹಾಗೆ ಮೊಹಮ್ಮದ್ ಸಿರಾಜ್ ಐಪಿಎಲ್​ ಸೀಸನ್​ನಲ್ಲಿ 7 ಕೋಟಿ ರೂ. ಪಡೆಯುತ್ತಿದ್ದಾರೆ. ಆರ್​ಸಿಬಿ ಫ್ರಾಂಚೈಸಿಯು ಸಿರಾಜ್ ಅವರಿಗೆ ಏಳು ಕೋಟಿ ರೂ. ಸಂಭಾವನೆ ನೀಡುತ್ತಿದ್ದು, ಈ ಬಾರಿ ಕೂಡ ಅವರನ್ನು ಬೃಹತ್ ಮೊತ್ತ ನೀಡಿ ತಂಡದಲ್ಲೇ ಉಳಿಸಿಕೊಳ್ಳುವ ನಿರೀಕ್ಷೆಯಿದೆ.

ಸಿರಾಜ್ ವೃತ್ತಿ ಜೀವನ:

ಮೊಹಮ್ಮದ್ ಸಿರಾಜ್ 27 ಟೆಸ್ಟ್, 44 ಏಕದಿನ ಮತ್ತು 16 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ವೇಳೆ ಟೆಸ್ಟ್ ಪಂದ್ಯಗಳಲ್ಲಿ 29.69 ಸರಾಸರಿಯಲ್ಲಿ 74 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದಾರೆ. ಏಕದಿನ ಸ್ವರೂಪದಲ್ಲಿ 24.06 ರ ಸರಾಸರಿಯೊಂದಿಗೆ 71 ವಿಕೆಟ್ ಕಬಳಿಸಿದ್ದಾರೆ. ಇದಲ್ಲದೇ ಮೊಹಮ್ಮದ್ ಸಿರಾಜ್ ಟಿ20 ಪಂದ್ಯಗಳಲ್ಲಿ 32.29 ಸರಾಸರಿಯಲ್ಲಿ 14 ವಿಕೆಟ್ ಪಡೆದಿದ್ದಾರೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More