MPL 2023: CSK ವಿರುದ್ಧ 7 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದ ರುತುರಾಜ್ ಪಡೆ..!

MPL 2023: ರುತುರಾಜ್ ಗಾಯಕ್ವಾಡ್ ನಾಯಕತ್ವದ ಪುಣೇರಿ ಬಪ್ಪಾ ತಂಡ ಛತ್ರಪತಿ ಸಂಭಾಜಿ ಕಿಂಗ್ಸ್ ವಿರುದ್ಧ 7 ವಿಕೆಟ್​ಗಳ ಜಯ ಸಾಧಿಸುವುದರೊಂದಿಗೆ ಲೀಗ್​ನಲ್ಲಿ ತಮ್ಮ ಸತತ ಎರಡನೇ ಜಯ ದಾಖಲಿಸಿತು.

MPL 2023: CSK ವಿರುದ್ಧ 7 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದ ರುತುರಾಜ್ ಪಡೆ..!
ರುತುರಾಜ್ ಗಾಯಕ್ವಾಡ್
Follow us
ಪೃಥ್ವಿಶಂಕರ
|

Updated on:Jun 19, 2023 | 9:33 AM

ಪ್ರಸ್ತುತ ಮಹಾರಾಷ್ಟ್ರದಲ್ಲಿ ಮಹಾರಾಷ್ಟ್ರ ಪ್ರೀಮಿಯರ್ ಲೀಗ್ (Maharashtra Premier League) ಸೀಸನ್ ನಡೆಯುತ್ತಿದೆ. ಐಪಿಎಲ್ (IPL) ಮಾದರಿಯಲ್ಲಿ ಮಹಾರಾಷ್ಟ್ರದಲ್ಲಿ ಕ್ರಿಕೆಟಿಗರಿಗೆ ಎಂಪಿಎಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈ ಬಾರಿಯ ಪಂದ್ಯಾವಳಿ ಗುರುವಾರದಿಂದ ಆರಂಭವಾಗಿದ್ದು, ಮಹಾರಾಷ್ಟ್ರದ ಸ್ಥಳೀಯ ಕ್ರಿಕೆಟಿಗರು ಈ ಟೂರ್ನಿಯ ಮೂಲಕ ತಮ್ಮ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಮಹಾರಾಷ್ಟ್ರ ಪ್ರೀಮಿಯರ್ ಲೀಗ್​ನ ಇನ್ನೊಂದು ವಿಶೇಷತೆ ಏನೆಂದರೆ, ಟೀಂ ಇಂಡಿಯಾ (Team India) ಪರ ಆಡಿದ ಮಹಾರಾಷ್ಟ್ರದ ದಿಗ್ಗಜ ಕ್ರಿಕೆಟಿಗರು ಈ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಹಾಗಾಗಿ ಈ ಸ್ಪರ್ಧೆಯ ರಂಗು ಇನ್ನಷ್ಟು ಹೆಚ್ಚಿದೆ. ಎಂಪಿಎಲ್ (MPL) ಆರು ತಂಡಗಳನ್ನು ಒಳಗೊಂಡಿದ್ದು, ಲೀಗ್ ಹಂತದಲ್ಲಿ 19 ಪಂದ್ಯಗಳು ನಡೆಯಲಿವೆ.

ಈ ಲೀಗ್​ನಲ್ಲಿ ಭಾನುವಾರ ಡಬಲ್ ಹೆಡರ್ ಪಂದ್ಯಗಳು ನಡೆದವು. ದಿನದ ಎರಡನೇ ಪಂದ್ಯ ಪುಣೇರಿ ಬಪ್ಪಾ ಮತ್ತು ಛತ್ರಪತಿ ಸಂಭಾಜಿ ಕಿಂಗ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ನಾಯಕತ್ವದ ಪುಣೇರಿ ಬಪ್ಪಾ ತಂಡ ಛತ್ರಪತಿ ಸಂಭಾಜಿ ಕಿಂಗ್ಸ್ ವಿರುದ್ಧ 7 ವಿಕೆಟ್​ಗಳ ಜಯ ಸಾಧಿಸುವುದರೊಂದಿಗೆ ಲೀಗ್​ನಲ್ಲಿ ತಮ್ಮ ಸತತ ಎರಡನೇ ಜಯ ದಾಖಲಿಸಿತು.

Ruturaj Gaikwad: 27 ಎಸೆತಗಳಲ್ಲಿ 64 ರನ್! ಮಡದಿಗಾಗಿ ಸ್ಮರಣೀಯ ಇನ್ನಿಂಗ್ಸ್ ಆಡಿದ ರುತುರಾಜ್

146 ರನ್ ಕಲೆಹಾಕಿದೆ ಸಿಎಸ್​ಕೆ

ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಛತ್ರಪತಿ ಸಂಭಾಜಿ ಕಿಂಗ್ಸ್ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಕಲೆ ಹಾಕಿತು. ಛತ್ರಪತಿ ಸಂಭಾಜಿ ಕಿಂಗ್ಸ್ ತಂಡದ ಪರ ಓಂ ಭೋಸ್ಲೆ 33 ಎಸೆತಗಳಲ್ಲಿ 46 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಓಂ ಭೋಸ್ಲೆ ಅವರ ಇನ್ನಿಂಗ್ಸ್​ನಲ್ಲಿ 5 ಬೌಂಡರಿ, 1 ಸಿಕ್ಸರ್‌ ಕೂಡ ಸೇರಿತ್ತು. ಇವರನ್ನು ಹೊರತುಪಡಿಸಿ ಆರಂಭಿಕ ಆಟಗಾರ ಸೌರಭ್ ನವಲೆ ಕೂಡ 23 ಎಸೆತಗಳಲ್ಲಿ 31 ರನ್ ಸಿಡಿಸಿದರು. ಇವರಿಬ್ಬರನ್ನು ಬಿಟ್ಟರೆ ತಂಡದ ಇತರ ಬ್ಯಾಟ್ಸ್​ಮನ್​ಗಳು ಮಿಂಚಲು ಸಾಧ್ಯವಾಗಲಿಲ್ಲ.

ಪವನ್ ಶಾ ಅರ್ಧಶತಕ

ಛತ್ರಪತಿ ಸಂಭಾಜಿ ಕಿಂಗ್ಸ್ ನೀಡಿದ 146 ರನ್​ಗಳ ಗುರಿಯನ್ನು ಪುಣೇರಿ ಬಪ್ಪಾ ತಂಡ ಸುಲಭವಾಗಿ ಬೆನ್ನಟ್ಟಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ರುತುರಾಜ್ ಗಾಯಕ್ವಾಡ್ ಹಾಗೂ ಪವನ್ ಶಾ ತಂಡಕ್ಕೆ ಅದ್ಭುತ ಆರಂಭ ತಂದುಕೊಟ್ಟರು. ಇದರಲ್ಲಿ ಪವನ್ 32 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್‌ ಸಹಿತ 54 ರನ್ ಬಾರಿಸಿದರು. ಹಾಗೆಯೇ ರುತುರಾಜ್ ಗಾಯಕ್ವಾಡ್ 18 ಎಸೆತಗಳಲ್ಲಿ ಅಜೇಯ 29 ರನ್ ಸಿಡಿಸಿದರು. ರುತುರಾಜ್ ಅವರ ಇನ್ನಿಂಗ್ಸ್​ನಲ್ಲಿ 1 ಬೌಂಡರಿ, 2 ಸಿಕ್ಸರ್‌ ಸೇರಿದ್ದವು. ಹೀಗಾಗಿ ಪುಣೇರಿ ಬಪ್ಪಾ ತಂಡ 147 ರನ್‌ಗಳ ಗುರಿಯನ್ನು 16.2 ಓವರ್‌ಗಳಲ್ಲಿ ತಲುಪಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:31 am, Mon, 19 June 23

ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ