MPL 2025: ಪ್ರತಿಯೊಂದು ಡಾಲ್ ಬಾಲ್​ಗೆ ಒಂದೊಂದು ಗಿಡ; ಎಂಪಿಎಲ್​ನಲ್ಲಿ ಮಹತ್ವ ನಿರ್ಧಾರ

MPL 2025: ಮಧ್ಯಪ್ರದೇಶದ ಅತಿದೊಡ್ಡ ಕ್ರಿಕೆಟ್ ಲೀಗ್, MPL 2025, ಜೂನ್ 12 ರಿಂದ ಆರಂಭವಾಗಲಿದೆ. 7 ಪುರುಷರ ಮತ್ತು 3 ಮಹಿಳಾ ತಂಡಗಳು ಭಾಗವಹಿಸಲಿವೆ. ಪ್ರತಿ ಡಾಟ್ ಬಾಲ್‌ಗೆ ಒಂದು ಗಿಡ ನೆಡುವ ಪರಿಸರ ಸ್ನೇಹಿ ಉಪಕ್ರಮವನ್ನು ಪ್ರಾರಂಭಿಸಲಾಗಿದೆ. MPL ಕ್ರಿಕೆಟ್ ಗೇಮಿಂಗ್ ಆ್ಯಪ್ ಅನ್ನು ಬಿಡುಗಡೆ ಮಾಡಲಾಗಿದೆ. ಗ್ವಾಲಿಯರ್‌ನ ಮಾಧವ ರಾವ್ ಸಿಂಧಿಯಾ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.

MPL 2025: ಪ್ರತಿಯೊಂದು ಡಾಲ್ ಬಾಲ್​ಗೆ ಒಂದೊಂದು ಗಿಡ; ಎಂಪಿಎಲ್​ನಲ್ಲಿ ಮಹತ್ವ ನಿರ್ಧಾರ
Mpl

Updated on: May 31, 2025 | 5:38 PM

ಮಧ್ಯಪ್ರದೇಶದ ಅತಿದೊಡ್ಡ ಕ್ರಿಕೆಟ್ ಪಂದ್ಯಾವಳಿಯಾದ ಎಂಪಿಎಲ್ 2025, ಇದೇ ಜೂನ್ 12 ರಿಂದ ಪ್ರಾರಂಭವಾಗಲಿದೆ. ಈ ವರ್ಷ 7 ಪುರುಷರ ತಂಡಗಳು ಮತ್ತು 3 ಮಹಿಳಾ ತಂಡಗಳ ನಡುವೆ ಸ್ಪರ್ಧೆ ನಡೆಯಲಿದೆ. ಎಲ್ಲಾ ಪಂದ್ಯಗಳು ಗ್ವಾಲಿಯರ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಮಾಧವ ರಾವ್ ಸಿಂಧಿಯಾ ಕ್ರೀಡಾಂಗಣದಲ್ಲಿ ನಡೆಯಲಿವೆ. ಟೂರ್ನಿ ಆರಂಭಕ್ಕೂ ಮುನ್ನ ಇಂದೋರ್‌ನಲ್ಲಿ ಟೀಮ್ ರೇವಾ ಜಾಗ್ವಾರ್ಸ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಂಪಿಎಲ್ ಅಧ್ಯಕ್ಷ ಮಹಾನಾರ್ಯಮನ್ ಸಿಂಧಿಯಾ ಈ ಲೀಗ್​ನಲ್ಲಿ ಎಸೆಯಲಾಗುವ ಪ್ರತಿಯೊಂದು ಡಾಲ್ ಬಾಲ್​ಗಳಿಗೆ ಒಂದೊಂದು ಗಿಡಗಳನ್ನು ನೆಡುವುದಾಗಿ ಘೋಷಿಸಿದರು ಹಾಗೆಯೇ ಎಂಪಿಎಲ್ ಗೇಮಿಂಗ್ ಅಪ್ಲಿಕೇಶನ್ ಅನ್ನು ಸಹ ಬಿಡುಗಡೆ ಮಾಡಿದರು.

ಡಾಲ್ ಬಾಲ್​ಗೆ 1 ಗಿಡ

ಐಪಿಎಲ್ ಮಾದರಿಯಲ್ಲಿ, ಈಗ ಎಂಪಿಎಲ್​ನಲ್ಲಿಯೂ ಪ್ರತಿ ಡಾಟ್ ಬಾಲ್​ಗೆ ಒಂದು ಗಿಡವನ್ನು ನೆಡಲಾಗುತ್ತದೆ. ದೇಶದ ಪ್ರತಿಯೊಂದು ರಾಜ್ಯದಲ್ಲೂ ಹಸಿರು ಕ್ರಾಂತಿಯ ಅವಶ್ಯಕತೆಯಿದೆ ಮತ್ತು ಗೌರವಾನ್ವಿತ ಪ್ರಧಾನ ಮಂತ್ರಿಗಳ ಕಾರ್ಯಕ್ರಮವಾದ ಏಕ್ ಪೆಡ್ ಮಾ ಕೆ ನಾಮ್ ಕಾರ್ಯಕ್ರಮವು ಭಾರತದಾದ್ಯಂತ ನಡೆಯುತ್ತಿದೆ. ಎಂಪಿಎಲ್ ಕೂಡ ತನ್ನ ಜವಾಬ್ದಾರಿಯನ್ನು ಅರ್ಥಮಾಡಿಕೊಂಡಿದೆ. ಆದ್ದರಿಂದ, ಎಂಪಿಎಲ್‌ನ ಎರಡನೇ ಆವೃತ್ತಿಯಲ್ಲಿ, ಮಧ್ಯಪ್ರದೇಶದ ಪರಿಸರವನ್ನು ಇನ್ನಷ್ಟು ಸುಧಾರಿಸಲು ನಾವು ಪ್ರತಿ ಡಾಟ್ ಬಾಲ್‌ಗೆ ಒಂದು ಗಿಡವನ್ನು ನೆಡುತ್ತೇವೆ ಎಂದು ಮಹಾನಾರ್ಯಮನ್ ಸಿಂಧಿಯಾ ಹೇಳಿದರು. ಹಾಗೆಯೇ ಕಾರ್ಯಕ್ರಮದಲ್ಲಿ ಎಂಪಿಎಲ್‌ನ ಕ್ರಿಕೆಟ್ ಗೇಮಿಂಗ್ ಅಪ್ಲಿಕೇಶನ್ ಅನ್ನು ಸಹ ಬಿಡುಗಡೆ ಮಾಡಲಾಯಿತು. ಎಂಪಿಎಲ್ ಕ್ರಿಕೆಟ್ ಗೇಮಿಂಗ್ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್ ಮತ್ತು ಐಫೋನ್ ಆಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಬಹುದಾಗಿದೆ.

ಜ್ಯೋತಿರಾದಿತ್ಯ ಸಿಂಧಿಯಾ ಸಂದೇಶ

ಎಂಪಿಎಲ್‌ನ ಗ್ರೀನ್ ಇನಿಶಿಯೇಟಿವ್ ಮತ್ತು ಕ್ರಿಕೆಟ್ ಗೇಮಿಂಗ್ ಅಪ್ಲಿಕೇಶನ್ ಬಿಡುಗಡೆ ಕಾರ್ಯಕ್ರಮದಲ್ಲಿ ವೀಡಿಯೊ ಮೂಲಕ ಸಂದೇಶ ನೀಡಿದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಎಂಪಿಎಲ್‌ನ ನಿರಂತರ ಯಶಸ್ಸಿಗೆ ಕೇಂದ್ರ ಸಚಿವರು ಎಲ್ಲಾ ತಂಡದ ಮಾಲೀಕರು ಮತ್ತು ಆಟಗಾರರನ್ನು ಶ್ಲಾಘಿಸಿದರು ಮತ್ತು ಈ ವರ್ಷದ ಯಶಸ್ಸಿಗೆ ಶುಭ ಹಾರೈಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:34 pm, Sat, 31 May 25