ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ದೂರವಾದ ಬಳಿಕ ಅನೇಕ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಬಿಟ್ಟರೆ ಧೋನಿ ಇತರೆ ಯಾವುದೇ ಪಂದ್ಯದಲ್ಲಿ ಆಡುತ್ತಿಲ್ಲ. ಬದಲಾಗಿ ತನ್ನದೇ ಒಂದು ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ್ದು ಇದಕ್ಕೆ ಧೋನಿ ಎಂಟರ್ಟೇನ್ಮೆಂಟ್ (Dhoni Entertainment) ಎಂದು ಹೆಸರಿಡಲಾಗಿದೆ. ಕಳೆದ ತಿಂಗಳು ಜನವರಿ 27 ರಂದು ಧೋನಿ ಎಂಟರ್ಟೇನ್ಮೆಂಟ್ ಕಡೆಯಿಂದ ಚೊಚ್ಚಲ ಸಿನಿಮಾ ಕೂಡ ಘೋಷಣೆ ಆಗಿತ್ತು. ಅವರ ಮೊದಲ ಚಿತ್ರಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ (Lets Get Married) ಎಂದು ಶೀರ್ಷಿಕೆ ಇಡಲಾಗಿದೆ.
ಇದೀಗ ಈ ಚಿತ್ರದ ನಾಯಕ ಯೋಗಿ ಬಾಬು ಅವರಿಗೆ ಧೋನಿ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಎಂಎಸ್ಡಿ ಅವರು ತನ್ನ ಅಟೋಗ್ರಾಫ್ ಇರುವ ಬ್ಯಾಟ್ವೊಂದನ್ನು ಯೋಗಿ ಅವರಿಗೆ ಗಿಫ್ಟ್ ಆಗಿ ನೀಡಿದ್ದಾರೆ. ಈ ಫೋಟೋವನ್ನು ಯೋಗಿ ಬಾಬು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಸಖತ್ ವೈರಲ್ ಆಗುತ್ತಿದೆ. ಲೆಟ್ಸ್ ಗೆಟ್ ಮ್ಯಾರೀಡ್ ‘ಎಲ್ಜಿಎಂ’ ಎಂಬುದು ಸಿನಿಮಾ ಟೈಟಲ್ನ ಶಾರ್ಟ್ಫಾರ್ಮ್. ರಮೇಶ್ ತಮಿಳ್ಮಣಿ ಅವರು ಚಿತ್ರವನ್ನು ನಿರ್ದೇಶನ ಮಾಡಿದರೆ, ಸಾಕ್ಷಿ ಸಿಂಗ್ ಧೋನಿ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
— Yogi Babu (@iYogiBabu) February 15, 2023
ICC Womens T20 World Cup 2023: ವೆಸ್ಟ್ ಇಂಡೀಸ್ ತಂಡಕ್ಕೆ ಸೋಲುಣಿಸಿದ ಟೀಮ್ ಇಂಡಿಯಾ
ಈ ಸಿನಿಮಾದಲ್ಲಿ ಯೋಗಿ ಬಾಬು ಜೊತೆಗೆ ಹರೀಶ್ ಕಲ್ಯಾಣ್, ಇವಾನ, ನದಿಯಾ ಸೇರಿದಂತೆ ದೊಡ್ಡ ತಾರಾಗಣ ಇರಲಿದೆ. ಇದೊಂದು ಫ್ಯಾಮಿಲಿ ಎಂಟರ್ಟೇನ್ಮೆಂಟ್ ಸಿನಿಮಾ. ಧೋನಿಗೂ ತಮಿಳುನಾಡಿಗೂ ಉತ್ತಮ ನಂಟಿದೆ. ಇದಕ್ಕೆ ಕಾರಣ ಐಪಿಎಲ್. ಧೋನಿ ಅವರು ಈ ಮೊದಲಿನಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ, ತಮಿಳುನಾಡಿನಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಈ ಕಾರಣಕ್ಕೆ ಮೊದಲ ಚಿತ್ರವನ್ನು ತಮಿಳಿನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
Direct from #MSDhoni hands which he played in nets . Thankyou @msdhoni sir for the bat …. Always cherished with the – your cricket memory as well as cinematic memory #dhonientertainmentprod1 #sakshidhoni . pic.twitter.com/2iDv2e5aBZ
— Yogi Babu (@iYogiBabu) February 15, 2023
ಕೇವಲ ತಮಿಳು ಸಿನಿಮಾ ಮಾತ್ರವಲ್ಲದೆ ಇನ್ನೂ ಹಲವು ನಿರ್ದೇಶಕರ ಜತೆ ಧೋನಿ ಮಾತುಕತೆಯಲ್ಲಿ ಇದ್ದಾರೆ. ಧೋನಿಗೆ ಈ ಮೊದಲಿನಿಂದಲೂ ಸಿನಿಮಾ ಬಗ್ಗೆ ಆಸಕ್ತಿ ಇದೆ. ಕ್ರಿಕೆಟ್ನಿಂದ ನಿವೃತ್ತಿ ಪಡೆದ ಬಳಿಕ ಅವರು ಈ ಬಗ್ಗೆ ಗಮನಹರಿಸುತ್ತಿದ್ದಾರೆ. ಮೂಲಗಳ ಪ್ರಕಾರ ವೆಬ್ ಸೀರಿಸ್ಗಳನ್ನು ನಿರ್ಮಾಣ ಮಾಡುವತ್ತವೂ ಧೋನಿ ಗಮನ ಹರಿಸುತ್ತಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:43 am, Thu, 16 February 23