ಎಂಎಸ್ ಧೋನಿ (MS Dhoni) ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿರಬಹುದು ಆದರೆ ಅಭಿಮಾನಿಗಳ ಅಭಿಮಾನ ಕಿಂಚಿತ್ತು ಕಡಿಮೆಯಾಗಿಲ್ಲ. ಇವತ್ತಿಗೂ ಧೋನಿಯ ಕ್ರೇಜ್ ಅವರು ಕ್ರಿಕೆಟ್ ಆಡುವ ದಿನಗಳಲ್ಲಿ ಇದ್ದಂತೆಯೇ ಇದೆ. ಎಂಎಸ್ ಧೋನಿ ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚು ಜನಪ್ರಿಯವಾಗಲು ಕಾರಣ ಅವರು ಭಾರತೀಯ ಕ್ರಿಕೆಟ್‌ಗಾಗಿ ಮಾಡಿದ ಕೆಲಸ. ವಿಶ್ವ ಕ್ರಿಕೆಟ್‌ನಲ್ಲಿ ಭಾರತಕ್ಕೆ ಧೋನಿ ತಂದಿರುವ ಹೆಸರು ಮತ್ತು ಗೌರವ . ಧೋನಿ ನಾಯಕತ್ವದಲ್ಲಿ ಭಾರತ ಟೆಸ್ಟ್‌ನಲ್ಲಿ ನಂಬರ್ ಒನ್ ಆಯಿತು. ಐಸಿಸಿಯ ಎಲ್ಲಾ ಮೂರು ದೊಡ್ಡ ಪ್ರಶಸ್ತಿಗಳನ್ನು ವಶಪಡಿಸಿಕೊಂಡಿತು. ತನ್ನ ನಾಯಕತ್ವದಲ್ಲಿ ಟೀಂ ಇಂಡಿಯಾವನ್ನು ವಿಶ್ವ ದರ್ಜೆಗೆ ಏರಿಸಿದ ಧೋನಿಗೆ ಭಾರತದಲ್ಲಿ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಧೋನಿ ಹೊರಗೆ ಕಾಣಿಸಿಕೊಂಡಾಗಲೆಲ್ಲ ಅಭಿಮಾನಿಗಳು ಆಟೋಗ್ರಾಫ್ಗಾಗಿ ಅವರ ಹಿಂದೆ ಬೀಳುತ್ತಾರೆ. ಈಗ ಅಂತಹದ್ದೇ ಘಟನೆ ನಡೆದಿದ್ದು, ಆಟೋಗ್ರಾಫ್ ಕೇಳಿದ ಅಭಿಮಾನಿಗೆ ಧೋನಿ ಆತನ ಬೆನ್ನಿನ ಮೇಲೆ ಆಟೋಗ್ರಾಫ್ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಧೋನಿ ನೀಡಿರುವ ಆಟೋಗ್ರಾಫ್ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಈ ವೀಡಿಯೊದಲ್ಲಿ ಧೋನಿ, ಆಟೋಗ್ರಾಫ್ ಕೇಳಿ ಬಂದ ಅಭಿಮಾನಿಯ ಬೆನ್ನಿನ ಮೇಲೆ ತನ್ನ ಸಹಿ ಹಾಕಿದ್ದಾರೆ. ತನ್ನ ಬಿಳಿ ಟೀ ಶರ್ಟ್ ಮೇಲೆ ಧೋನಿ ಆಟೋಗ್ರಾಫ್ ಪಡೆದ ಆ ಅಭಿಮಾನಿ ಸಂತಸದಿಂದ ಅಲ್ಲಿಂದ ತೆರಳಿದ್ದಾರೆ.
One Lucky fan gets autograph on shirt by MS Dhoni ??
Me when @msdhoni ??#MSDhoni pic.twitter.com/nIf9IPdY0Q
— DHONI Empire™ (@TheDhoniEmpire) December 11, 2022
ಧೋನಿ ಕ್ರಿಕೆಟ್ ಬದುಕು
ಧೋನಿ ಭಾರತ ಪರ 90 ಟೆಸ್ಟ್, 350 ODI ಮತ್ತು 98 T20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ ಅವರು 6 ಶತಕ ಮತ್ತು 33 ಅರ್ಧ ಶತಕಗಳ ಸಹಾಯದಿಂದ 4876 ರನ್ ಗಳಿಸಿದ್ದಾರೆ. 10 ಶತಕ ಮತ್ತು 73 ಅರ್ಧ ಶತಕಗಳ ನೆರವಿನೊಂದಿಗೆ ಏಕದಿನದಲ್ಲಿ ಒಟ್ಟು 10773 ರನ್ ಗಳಿಸಿದ್ದಾರೆ. ಆದರೆ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು 2 ಅರ್ಧಶತಕಗಳ ಸಹಾಯದಿಂದ 1617 ರನ್ ಗಳಿಸಿದ್ದಾರೆ.
ಬರೋಬ್ಬರಿ 50 ಟಿ20 ಪಂದ್ಯಗಳಲ್ಲಿ ಗೆಲುವು; ಧೋನಿ- ಕೊಹ್ಲಿಯನ್ನು ಮೀರಿಸಿದ ಹರ್ಮನ್‌ಪ್ರೀತ್ ಕೌರ್
ಧೊನಿಯ ಕೊನೆ ಐಪಿಎಲ್?
ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬೈ ಹೇಳಿರುವ ಧೋನಿ, ಐಪಿಎಲ್ನಲ್ಲಿ ಚೆನ್ನೈ ತಂಡವನ್ನು ಮುನ್ನಡೆಸುತ್ತಿದ್ದಾರೆ. ತನ್ನ ನಾಯಕತ್ವದಲ್ಲಿ ತಂಡವನ್ನು 4 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿರುವ ಮಹಿಗೆ ಇದು ಕೊನೆಯ ಐಪಿಎಲ್ ಅಂತಲೇ ಹೇಳಲಾಗುತ್ತಿದೆ. ಹೀಗಾಗಿ ತಂಡವನ್ನು ಹಲವು ವರ್ಷಗಳಿಂದ ಯಶಸ್ಸಿನ ಹಾದಿಯಲ್ಲಿ ನಡೆಸಿದ ಧೋನಿಗೆ ಫೈನಲ್ ಗೆಲುವಿನೊಂದಿಗೆ ವಿದಾಯ ಹೇಳಲು ಫ್ರಾಂಚೈಸಿ ಪ್ರಯತ್ನಿಸುತ್ತಿದೆ. ಹೀಗಾಗಿ ಟಿ.16 ರಂದು ನಡೆಯಲ್ಲಿರುವ ಮಿನಿ ಹರಾಜಿನಲ್ಲಿ ಏಕಾಂಗಿಯಾಗಿ ತಂಡಕ್ಕೆ ಗೆಲುವು ನೀಡಬಲ್ಲ ಆಟಗಾರರನ್ನು ಖರೀದಿಸಲು ಫ್ರಾಂಚೈಸಿ ಮುಂದಾಗಿದೆ. ಮಿನಿ ಹರಾಜಿಗೂ ಮುನ್ನ ಚೆನ್ನೈ ಹಲವು ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿತ್ತು. ಆ ಆಟಗಾರರು ಯಾರು ಎಂಬುದರ ಪಟ್ಟಿ ಇಂತಿದೆ.
ಚೆನ್ನೈ ಬಿಡುಗಡೆ ಮಾಡಿದ ಆಟಗಾರರು: ಡ್ವೇನ್ ಬ್ರಾವೋ, ರಾಬಿನ್ ಉಥಪ್ಪ, ಆಡಮ್ ಮಿಲ್ನೆ, ಹರಿ ನಿಶಾಂತ್, ಕ್ರಿಸ್ ಜೋರ್ಡಾನ್, ಭಗತ್ ವರ್ಮಾ, ಕೆಎಂ ಆಸಿಫ್, ನಾರಾಯಣ್ ಜಗದೀಸನ್
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:08 pm, Mon, 12 December 22