ಭಾರತಕ್ಕೆ ಎರಡೆರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ‘ಪಂಜಾಬ್‌ ಕಾ ಪುತ್ತರ್‌’ ಯುವರಾಜನಿಗೆ 41ರ ಸಂಭ್ರಮ..!

Happy Birthday Yuvraj Singh: ಮಾರಕ ಕ್ಯಾನ್ಸರ್ ನಡುವೆಯೂ ದೇಶಕ್ಕಾಗಿ ವಿಶ್ವಕಪ್ ಗೆಲ್ಲುವಲ್ಲಿ ಏಕಾಂಗಿ ಹೋರಾಟ ನಡೆಸಿದ ಯುವಿಗೆ ಇಂದು 41 ವರ್ಷದ ಸಂಭ್ರಮ.

ಭಾರತಕ್ಕೆ ಎರಡೆರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ‘ಪಂಜಾಬ್‌ ಕಾ ಪುತ್ತರ್‌' ಯುವರಾಜನಿಗೆ 41ರ ಸಂಭ್ರಮ..!
yuvraj singh
Follow us
TV9 Web
| Updated By: ಪೃಥ್ವಿಶಂಕರ

Updated on:Dec 12, 2022 | 11:00 AM

ಯುವರಾಜ್ ಸಿಂಗ್ (Yuvraj Singh)… ಭಾರತ ಕ್ರಿಕೆಟ್​ನಲ್ಲಿ ಎಂದು ಮಾಸದ ಹೆಸರು. ತನ್ನ ಅದ್ಭುತ ಬ್ಯಾಟಿಂಗ್​ನಿಂದ ಅದೇಷ್ಟೋ ಪಂದ್ಯಗಳನ್ನು ಏಕಾಂಗಿ ಗೆಲ್ಲಿಸಿಕೊಟ್ಟಿರುವ ಯುವಿ ಆಟಕ್ಕೆ ಎರಡೆರಡು ವಿಶ್ವಕಪ್​ಗಳೇ ಸಾಕ್ಷಿ. 2007ರಲ್ಲಿ ಟೀಂ ಇಂಡಿಯಾ ಚೊಚ್ಚಲ ಟಿ20 ವಿಶ್ವಕಪ್​ ಗೆಲ್ಲುವಲ್ಲಿ ಯುವರಾಜ್​ ಸಿಂಗ್ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ 2011ರಲ್ಲಿ ಬರೋಬ್ಬರಿ 28 ವರ್ಷಗಳ ಬಳಿಕ ಭಾರತ ತಂಡ ಏಕದಿನ ವಿಶ್ವಕಪ್ ಗೆಲ್ಲುವಲ್ಲಿಯೂ ಇದೇ ಯುವಿ ತನ್ನ ಪರಾಕ್ರಮ ತೋರಿದ್ದರು. ಮಾರಕ ಕ್ಯಾನ್ಸರ್ ನಡುವೆಯೂ ದೇಶಕ್ಕಾಗಿ ವಿಶ್ವಕಪ್ ಗೆಲ್ಲುವಲ್ಲಿ ಏಕಾಂಗಿ ಹೋರಾಟ ನಡೆಸಿದ ಯುವಿಗೆ ಇಂದು 41 ವರ್ಷದ ಸಂಭ್ರಮ. ಈ ಎಡಗೈ ದಾಂಡಿಗ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿ ಬಹಳ ವರ್ಷಗಳಾಗಿದ್ದರೂ, ಇಂದಿಗೂ ಅವರ ಕೆಲವು ಇನ್ನಿಂಗ್ಸ್‌ಗಳು ಅಭಿಮಾನಿಗಳ ಮನಸ್ಸಲ್ಲಿ ಅಚ್ಚಳಿಯದ ಸ್ಥಾನ ಪಡೆದಿವೆ.

ಡಿಸೆಂಬರ್ 12, 1981 ರಂದು ಜನಿಸಿದ ಯುವಿ 2000 ರಲ್ಲಿ ಮೊದಲ ಬಾರಿಗೆ ಭಾರತದ ಪರ 19 ವರ್ಷದೊಳಗಿನ ವಿಶ್ವಕಪ್ ಆಡಿದರು.  ಅಲ್ಲದೆ ತಮ್ಮ ಆಲ್ರೌಂಡರ್ ಪ್ರದರ್ಶನದಿಂದಾಗಿ ಪಂದ್ಯಾವಳಿಯ ಆಟಗಾರರ ಪ್ರಶಸ್ತಿಗೂ ಭಾಜನರಾದರು. ಈ ಪ್ರಬಲ ಪ್ರದರ್ಶನದ ಆಧಾರದ ಮೇಲೆ ಯುವಿಯನ್ನು 2000ರ ಅಕ್ಟೋಬರ್​ನಲ್ಲಿ ರಾಷ್ಟ್ರೀಯ ತಂಡಕ್ಕೂ ಆಯ್ಕೆ ಮಾಡಲಾಯಿತು. ಟೀಂ ಇಂಡಿಯಾ ಪರ ಕೀನ್ಯಾ ವಿರುದ್ಧ ಚೊಚ್ಚಲ ಏಕದಿನ ಅಂತರರಾಷ್ಟ್ರೀಯ ಪಂದ್ಯವನ್ನಾಡಿದ ಯುವಿ ನಂತರ ಹಿಂತಿರುಗಿ ನೋಡಿದ್ದೇ ಇಲ್ಲ.

INDW vs AUSW: ಸೂಪರ್ ಓವರ್​ನಲ್ಲಿ ಗೆದ್ದ ಬಳಿಕ ತ್ರಿವರ್ಣ ಧ್ವಜ ಹಿಡಿದು ಮೈದಾನದಲ್ಲಿ ಸಂಭ್ರಮಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ

12 ಎಸೆತಗಳಲ್ಲಿ ದಾಖಲೆ ಅರ್ಧಶತಕ

2007 ರಲ್ಲಿ, ಭಾರತವು ಎಂಎಸ್ ಧೋನಿ ನಾಯಕತ್ವದಲ್ಲಿ ಮೊದಲ ಟಿ20 ವಿಶ್ವಕಪ್ ಗೆದ್ದುಕೊಂಡಿತು. ಈ ವಿಜಯದಲ್ಲೂ ಯುವಿ ದೊಡ್ಡ ಕೊಡುಗೆಯನ್ನು ನೀಡಿದ್ದರು. ಅದೇ ಪಂದ್ಯಾವಳಿಯಲ್ಲಿ, ಅವರು ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಸತತ 6 ಸಿಕ್ಸರ್‌ಗಳನ್ನು ಹೊಡೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. ಅಲ್ಲದೆ ಕೇವಲ 12 ಎಸೆತಗಳಲ್ಲಿ ಅತಿ ವೇಗದ ಅಂತರರಾಷ್ಟ್ರೀಯ ಟಿ20 ಅರ್ಧ ಶತಕ ಸಿಡಿಸಿದ ದಾಖಲೆಯೂ ಯುವಿ ಪಾಲಾಗಿತ್ತು.

ಯುವಿ ಆಟದಿಂದ ಭಾರತಕ್ಕೆ ಏಕದಿನ ವಿಶ್ವಕಪ್

2011 ರಲ್ಲಿ ಭಾರತ ಏಕದಿನ ವಿಶ್ವಕಪ್ ಗೆಲ್ಲುವದಕ್ಕೆ ಯುವರಾಜ್ ಸಿಂಗ್ ಅವರ ಆಲ್​ರೌಂಡರ್ ಆಟವೇ ಪ್ರಮುಖ ಕಾರಣವಾಗಿತ್ತು. ತನ್ನ ಶ್ರೇಷ್ಠ ಪ್ರದರ್ಶನದ ಆಧಾರದ ಮೇಲೆ ಯುವರಾಜ್ ಪಂದ್ಯಾವಳಿಯ ಆಟಗಾರ ಪ್ರಶಸ್ತಿಯನ್ನು ಪಡೆದುಕೊಂಡರು. ಇಡೀ ಟೂರ್ನಿಯಲ್ಲಿ 362 ರನ್ ಗಳಿಸುವುದರ ಜೊತೆಗೆ, ಬೌಲಿಂಗ್​ನಲ್ಲೂ ಮಿಂಚಿನ ಪ್ರದರ್ಶನ ನೀಡಿದ ಯುವಿ 15 ವಿಕೆಟ್ ಕಬಳಿಸಿದ್ದರು.

ಕ್ಯಾನ್ಸರ್ ಗೆದ್ದ ಸಿಕ್ಸರ್ ಸಿಂಗ್

ವಾಸ್ತವವಾಗಿ 2011 ರ ವಿಶ್ವಕಪ್ ನಡುವೆ ಯುವಿಗೆ ಕ್ಯಾನ್ಸರ್ ತಗುಲಿತ್ತು. ಆದರೆ ಮಾರಕ ರೋಗದ ಅಗಾದ ನೋವಿನ ನಡುವೆಯೂ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಡುವಲ್ಲಿ ಯುವರಾಜ್ ಯಶಸ್ವಿಯಾಗಿದ್ದರು. ನಂತರ ಅಮೇರಿಕಾದಲ್ಲಿ ಈ ಮಹಾಮಾರಿಗೆ ಚಿಕಿತ್ಸೆ ಪಡೆದಿದ್ದ ಯುವಿ ಕ್ಯಾನ್ಸರ್ ಅನ್ನು ಸೋಲಿಸುವಲ್ಲಿ ಯಶಸ್ವಿಯಾದರು. ಇದರ ನಂತರ ಮೈದಾನಕ್ಕೆ ಮರಳಿದ ಅವರು 2017 ರವರೆಗೆ ತಂಡದ ಭಾಗವಾಗಿದ್ದರು. ಆದರೆ ನಂತರ ಲಯವನ್ನು ಕಳೆದುಕೊಂಡ ಯುವಿಗೆ ತಂಡದಲ್ಲಿ ಅವಕಾಶಗಳುನ ಕಡಿಮೆಯಾದವು. ಬಳಿಕ 2019 ರಲ್ಲಿ ವಿಶ್ವದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಯುವಿ ಕ್ರಿಕೆಟ್​ ಬದುಕಿಗೆ ನಿವೃತ್ತಿ ಘೋಷಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:57 am, Mon, 12 December 22

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ