IPL 2025: ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವುದಕ್ಕೆ ಕಾರಣ ತಿಳಿಸಿದ ಸಿಎಸ್​ಕೆ ಕೋಚ್

MS Dhoni's Late Batting Order: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಐಪಿಎಲ್ 2025 ರ ಪ್ರದರ್ಶನ ನಿರಾಶಾದಾಯಕವಾಗಿದೆ. ಅದರಲ್ಲೂ ಮಾಜಿ ನಾಯಕ ಧೋನಿ ಕೆಳ ಕ್ರಮಾಂಕದ ಬ್ಯಾಟಿಂಗ್​ಗೆ ಬರುತ್ತಿರುವುದು ಅಭಿಮಾನಿಗಳು ಆಕ್ರೋಶಗೊಳ್ಳುವಂತೆ ಮಾಡಿದೆ. ಇದೀಗ ಆ ಬಗ್ಗೆ ಮಾತನಾಡಿರುವ ಕೋಚ್ ಫ್ಲೆಮಿಂಗ್ ಧೋನಿಯ ಆರೋಗ್ಯ ಸಮಸ್ಯೆಗಳನ್ನು ಕಾರಣವೆಂದು ನೀಡಿದ್ದಾರೆ.

IPL 2025: ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವುದಕ್ಕೆ ಕಾರಣ ತಿಳಿಸಿದ ಸಿಎಸ್​ಕೆ ಕೋಚ್
Ms Dhoni

Updated on: Mar 31, 2025 | 3:29 PM

ಐದು ಬಾರಿಯ ಐಪಿಎಲ್ (IPL) ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ 18ನೇ ಆವೃತ್ತಿಯ ಐಪಿಎಲ್ ಅಂದುಕೊಂಡಂತೆ ಸಾಗುತ್ತಿಲ್ಲ. ಮೊದಲ ಪಂದ್ಯದಲ್ಲೇ ಬಲಿಷ್ಠ ಮುಂಬೈ ತಂಡವನ್ನು ಮಣಿಸಿದ್ದ ಸಿಎಸ್​ಕೆ ತಂಡಕ್ಕೆ ಆ ಬಳಿಕ ಗೆಲುವೆಂಬುದು ಮರಿಚಿಕೆಯಾಗಿದೆ. ಆರ್​ಸಿಬಿ ವಿರುದ್ಧದ 2ನೇ ಪಂದ್ಯದಲ್ಲಿ 50 ರನ್​ಗಳಿಂದ ಸೋತ್ತಿದ್ದ ಎಲ್ಲೋ ಆರ್ಮಿ, ಇದೀಗ ರಾಜಸ್ಥಾನ್ ವಿರುದ್ಧವೂ 6 ರನ್​ಗಳ ಸೋಲನುಭವಿಸಿದೆ. ಒಂದೆಡೆ ತಂಡದ ಈ ಸೋಲಿಗೆ ಬ್ಯಾಟಿಂಗ್ ವೈಫಲ್ಯವೇ ಕಾರಣ ಎನ್ನುತ್ತಿದ್ದರೆ, ಇನ್ನೊಂದೆಡೆ ಸ್ವತಃ ಸಿಎಸ್​ಕೆ ಅಭಿಮಾನಿಗಳೇ ತಂಡದ ಸೋಲಿಗೆ ಧೋನಿಯನ್ನು (MS Dhoni) ಹೊಣೆ ಮಾಡುತ್ತಿದ್ದಾರೆ.

ವಾಸ್ತವವಾಗಿ ಅಭಿಮಾನಿಗಳು ಧೋನಿ ವಿರುದ್ಧ ಗರಂ ಆಗುವುದಕ್ಕೆ ಕಾರಣವೂ ಇದೆ. ಕಳೆದೆರಡು ಆವೃತ್ತಿಗಳಿಂದ ಧೋನಿ, ಕೇವಲ ವಿಕೆಟ್​ ಕೀಪಿಂಗ್​ಗೆ ಮಾತ್ರ ಸೀಮಿತರಾಗಿರುವಂತೆ ಕಾಣುತ್ತಿದೆ. ಅಚ್ಚುಕಟ್ಟಾಗಿ ವಿಕೆಟ್ ಕೀಪಿಂಗ್ ಮಾಡಿ ಮುಗಿಸುವ ಧೋನಿ, ಬ್ಯಾಟಿಂಗ್ ವಿಚಾರಕ್ಕೆ ಬಂದರೆ ಮಾತ್ರ ಹಿಂದೇಟು ಹಾಕುತ್ತಿದ್ದಾರೆ. ಈ ಆವೃತ್ತಿಯಲ್ಲಂತೂ ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬರುತ್ತಿರುವುದು ಅಭಿಮಾನಿಗಳನ್ನು ಕೆರಳಿಸಿದೆ. ಅಲ್ಲದೆ ತಂಡದ ಸೋಲಿಗೆ ಇದು ಒಂದು ಕಾರಣ ಎನ್ನಲಾಗುತ್ತಿದೆ. ಈ ನಡುವೆ ಧೋನಿ, ಏತಕ್ಕೆ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬರುತ್ತಿದ್ದಾರೆ ಎಂಬುದನ್ನು ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ವಿವರಿಸಿದ್ದಾರೆ.

ದೇಹ ಆಟಕ್ಕೆ ಸ್ಪಂಧಿಸುತ್ತಿಲ್ಲ

ಧೋನಿ ಟಾಪ್ ಆರ್ಡರ್​ನಲ್ಲಿ ಬ್ಯಾಟಿಂಗ್ ಮಾಡದಿರುವ ಬಗ್ಗೆ ಮಾತನಾಡಿರುವ ಕೋಚ್ ಫ್ಲೆಮಿಂಗ್, ‘ಧೋಣಿ ಅವರ ದೇಹ ಮೊದಲಿನಂತೆ ಆಟಕ್ಕೆ ಸ್ಪಂಧಿಸುತ್ತಿಲ್ಲ. ಅಲ್ಲದೆ ಅವರಿಗೆ ಮೊಣಕಾಲಿನ ಸಮಸ್ಯೆ ಇದೆ. ಧೋನಿ ಸಧ್ಯಕ್ಕೆ ಯಾವುದೇ ತೊಂದರೆ ಇಲ್ಲದೆ ಚೆನ್ನಾಗಿ ನಡೆಯುತ್ತಿದ್ದಾರೆ, ಆದರೆ ಅದರಲ್ಲಿ ಇನ್ನೂ ಒಂದು ಕೊರತೆಯಿದೆ. ಅವರು ಪೂರ್ಣ 10 ಓವರ್‌ಗಳವರೆಗೆ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಅವರು ಪಂದ್ಯದ ದಿನದಂದು ನಮಗೆ ಏನು ನೀಡಬಹುದು ಎಂಬುದನ್ನು ನಿರ್ಣಯಿಸುತ್ತಾರೆ. ಇಂದಿನಂತೆ ಆಟ ಸಮತೋಲನದಲ್ಲಿದ್ದರೆ, ಅವರು ಸ್ವಲ್ಪ ಮುಂಚಿತವಾಗಿ ಬ್ಯಾಟಿಂಗ್​ಗೆ ಬರುತ್ತಾರೆ. ಇಲ್ಲದಿದ್ದರೆ ಸಂದರ್ಭಕ್ಕನುಸಾರವಾಗಿ ಇತರ ಆಟಗಾರರಿಗೆ ಆಡಲು ಅವಕಾಶ ನೀಡುತ್ತಾರೆ. ಧೋನಿ ನಮಗೆ ತುಂಬಾ ಅಮೂಲ್ಯರು ಎಂದು ಕಳೆದ ವರ್ಷವೂ ನಾನು ಹೇಳಿದ್ದೆ. ಹೀಗಾಗಿ ಅವರನ್ನು 9, 10 ಓವರ್‌ ಆಡಿಸುವಂತೆ ಮಾಡುವುದು ಕಷ್ಟ ಎಂದಿದ್ದಾರೆ.

ಇದನ್ನೂ ಓದಿ
ಏಯ್ ನಿನ್ನ..: ಔಟಾದಾಗ ಧೋನಿಗೆ ಬೈದ ಲೇಡಿ CSK ಫ್ಯಾನ್, ವಿಡಿಯೋ ವೈರಲ್
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
43ನೇ ವಯಸ್ಸಿನಲ್ಲೂ ಧೋನಿಯ ಮಿಂಚಿನ ಸ್ಟಂಪಿಂಗ್; ಪೆವಿಲಿಯನ್ ಸೇರಿದ ಸೂರ್ಯ

IPL 2025: ಜೈಪುರದಲ್ಲಿ ಧೋನಿಗೆ ವಿಶೇಷ ಗೌರವ ಸಲ್ಲಿಸಿದ ಬಿಸಿಸಿಐ; ವಿಡಿಯೋ

ಆರ್‌ಸಿಬಿ ವಿರುದ್ಧ 9ನೇ ಕ್ರಮಾಂಕ

ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ತನ್ನ ಎರಡನೇ ಪಂದ್ಯವನ್ನು ಆಡಿತು, ಈ ಪಂದ್ಯದಲ್ಲೂ ಸಿಎಸ್‌ಕೆ ಸೋಲನ್ನು ಎದುರಿಸಬೇಕಾಯಿತು. ಆರ್‌ಸಿಬಿ ವಿರುದ್ಧ ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದು 16 ಎಸೆತಗಳಲ್ಲಿ 30 ರನ್ ಕಲೆಹಾಕಿದ್ದರು. ಆದರೆ ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದಿದನ್ನು ನೋಡಿ ಅಭಿಮಾನಿಗಳು ಅಸಮಾಧಾನಗೊಂಡಿದ್ದರು.

ಅಲ್ಲದೆ ಕೆಲವು ಮಾಜಿ ಕ್ರಿಕೆಟಿಗರು ಕೂಡ ಧೋನಿ ನಡೆಯನ್ನು ಟೀಕಿಸಿದ್ದರು. ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಧೋನಿಗಿಂತ ಮೊದಲು ಆರ್. ಅಶ್ವಿನ್ ಬ್ಯಾಟಿಂಗ್​ಗೆ ಬಂದರು. ಒಂದು ವೇಳೆ ಧೋನಿ ಸ್ವಲ್ಪ ಬೇಗ ಬ್ಯಾಟಿಂಗ್​ಗೆ ಬಂದಿದ್ದರೆ, ಬಹುಶಃ ಸಿಎಸ್‌ಕೆ ಆ ಪಂದ್ಯವನ್ನು ಗೆಲ್ಲಬಹುದಿತ್ತು ಎಂದಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ