IPL 2025: ಧೋನಿ ನಿಂಗ್ ವಯಸ್ಸಾಯ್ತು ಎಂದವರಿಗೆ 0.12 ಸೆಕೆಂಡುಗಳಲ್ಲಿ ಉತ್ತರಿಸಿದ ಕ್ಯಾಪ್ಟನ್ ಕೂಲ್
MS Dhoni's Lightning Stumping: ಐಪಿಎಲ್ 2025 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಎಂ.ಎಸ್. ಧೋನಿ ಅವರು ಸೂರ್ಯಕುಮಾರ್ ಯಾದವ್ ಅವರನ್ನು ಮಿಂಚಿನ ವೇಗದ ಸ್ಟಂಪಿಂಗ್ ಮೂಲಕ ಔಟ್ ಮಾಡಿದ್ದಾರೆ. ವಯಸ್ಸಾದರೂ, ಧೋನಿ ಅವರ ಆಟದಲ್ಲಿ ಯಾವುದೇ ಕುಂದುಕೊರತೆ ಇಲ್ಲ ಎಂದು ಇದು ಸಾಬೀತುಪಡಿಸುತ್ತದೆ.
ಪ್ರತಿ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಕೇಳಿಬರುವ ಮಾತೆಂದರೆ ಅದು ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕೊನೆಯ ಸೀಸನ್ ಇದು ಎಂಬುದು. ಅದರೆ ವಯಸ್ಸಾದಂತೆ ತನ್ನ ಆಟದಲ್ಲಿ ಇನ್ನಷ್ಟು ಚುರುಕುತನ ತೋರಿಸುತ್ತಿರುವ ಧೋನಿ, ನನ್ನ ಆಟಕ್ಕೆ ಇನ್ನು ಕೊನೆ ಬಂದಿಲ್ಲ ಎಂಬುದನ್ನು ಪ್ರತಿಯೊಂದು ಪಂದ್ಯದಲ್ಲೂ ಸಾಭೀತುಪಡಿಸುತ್ತಿದ್ದಾರೆ. ಇದೀಗ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಮಿಂಚಿನ ವೇಗದಲ್ಲಿ ಸ್ಟಂಪ್ ಮಾಡಿರುವ ಧೋನಿ, ಎದುರಾಳಿ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಪೆವಿಲಿಯನ್ ಸೇರುವಂತೆ ಮಾಡಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಮುಂಬೈಗೆ ಆರಂಭಿಕ ಆಘಾತ ಎದುರಾಗಿತ್ತು. ಹೀಗಾಗಿ ನಾಯಕ ಸೂರ್ಯಕುಮಾರ್, ತಿಲಕ್ ವರ್ಮಾ ಜೊತೆಗೂಡಿ ತಾಳ್ಮೆಯ ಇನ್ನಿಂಗ್ಸ್ ಕಟ್ಟುತ್ತಿದ್ದರು. ಹೀಗಾಗಿ ಈ ಜೊತೆಯಾಟವನ್ನು ಮುರಿಯುವ ಸಲುವಾಗಿ ನಾಯಕ ರುತುರಾಜ್, ನೂರ್ ಅಹ್ಮದ್ಗೆ ಬೌಲಿಂಗ್ ಜವಬ್ದಾರಿ ನೀಡಿದರು. ಈ ಓವರ್ನಲ್ಲಿ ಮುಂದೆ ಬಂದು ಬಿಗ್ ಶಾಟ್ ಹೊಡೆಯಲು ಯತ್ನಿಸಿದ ಸೂರ್ಯನನ್ನು ಮಹೇಂದ್ರ ಸಿಂಗ್ ಧೋನಿ ಸ್ಟಂಪ್ ಔಟ್ ಮಾಡಿದರು. ಈ ಪಂದ್ಯದಲ್ಲಿ ಸೂರ್ಯ 26 ಎಸೆತಗಳಲ್ಲಿ 29 ರನ್ ಗಳಿಸಿ ಔಟಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ